Breaking News

BigTv News

ಬೀಜಾಡಿ: ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ; ಮಗನ ಕಣ್ಣೆದುರೇ ತಾಯಿ ದಾರುಣ ಸಾವು

ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಬೀಜಾಡಿ ಡಿವೈಡರ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಡ್ಡರ್ಸೆ ನೀರುಕೊಡ್ಲು ನಿವಾಸಿ ಶಾರದಾ (55) ಮೃತ ದುರ್ದೈವಿ. ಶಾರದಾ ಅವರು ತಮ್ಮ ಮಗನೊಂದಿಗೆ ಸ್ಕೂಟರ್‌ನಲ್ಲಿ ಕೋಟೇಶ್ವರದ ಅಂಕದಕಟ್ಟೆಯಲ್ಲಿರುವ ತಂಗಿಯ ಮನೆಗೆ ತೆರಳುತ್ತಿದ್ದರು. ಬೀಜಾಡಿ ಡಿವೈಡರ್ ಸಮೀಪ ಸಾಗುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತಿದ್ದ ಶಾರದಾ ಅವರು …

Read More »

ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲೂ ‘ಲವ್ ಜಿಹಾದ್’ ಆರೋಪ: ನಗ್ನ ಚಿತ್ರ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ ಅರೆಸ್ಟ್.!

ಕೊಪ್ಪಳ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ‘ಲವ್ ಜಿಹಾದ್’ ಪ್ರಕರಣಗಳ ಸರಣಿ ಮುಂದುವರಿದಿದ್ದು, ಹುಬ್ಬಳ್ಳಿಯ ಘಟನೆಗಳ ಬೆನ್ನಲ್ಲೇ ಇದೀಗ ಕೊಪ್ಪಳ ಜಿಲ್ಲೆಯಲ್ಲೂ ಇಂತಹುದೇ ಒಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ನಂಬಿಸಿ, ಆಕೆಯ ಅಶ್ಲೀಲ ಚಿತ್ರಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಾಫ್ ಎಂಬ ಯುವಕ ಕುಷ್ಟಗಿ ತಾಲೂಕಿನ ಗ್ರಾಮವೊಂದರ ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ …

Read More »

ಕೊಲೆ ಪ್ರಕರಣ: 18 ಆರೋಪಿಗಳ ಸೆರೆ

ಮದ್ದೂರು: ನಗರದ ಹೊಳೆಆಂಜನೇಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದ್ದ ಯುವಕನ ಕೊಲೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಸೇರಿದಂತೆ ಅದೇ ಘಟನೆಯಲ್ಲಿ ಕೊಲೆಗೆ ಯತ್ನ ನಡೆಸಿದ್ದ 9 ಮಂದಿ ಯುವಕರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಸಿಗರೇಟ್ ವಿಷಯಕ್ಕೆ ಎರಡು ಯುವಕರ ಗುಂಪುಗಳ ನಡುವೆ ನಡೆದಿದ್ದ ಮಾರಾಮಾರಿಯಲ್ಲಿ ನಗರದ ಸೋಮೇಗೌಡರ ಬೀದಿ ನಿವಾಸಿ ಯಶವಂತ್ ಆಲಿಯಾಸ್ ಕಜ್ಜಿ ಎಂಬ ಯುವಕ ಕೊಲೆಯಾಗಿದ್ದ. ಅದೇ ಘಟನೆಯಲ್ಲಿ …

Read More »

ಮದ್ಯ ಅಕ್ರಮ ಮಾರಾಟ: ವ್ಯಕ್ತಿ ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲದಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಅಗ್ರಹಾರ ಬೀದಿಯ ಉಮೇಶ್ ಬಂಧಿತ ಆರೋಪಿ. ಈತನಿಂದ 90 ಎಂಎಲ್‌ನ 15 ಪೌಚ್ ವಶಪಡಿಸಿಕೊಂಡಿದ್ದಾರೆ. ಈತ ಅಗ್ರಹಾರದ ಬೀದಿಯ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ.

Read More »

ಹೊಲದಲ್ಲಿ ಗಾಂಜಾ; ಒಬ್ಬ ಬಂಧನ

ಯಾದಗಿರಿ: ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ನಗನೂರು ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯೊಬ್ಬರನ್ನು ಬಂಧಿಸಲಾಗಿದೆ. ನಗನೂರು ಗ್ರಾಮದ ನಿವಾಸಿ ಬಸವರಾಜ ಭೀಮಣ್ಣ ಬೆಳ್ಳಿ ಬಂಧಿತ ಆರೋಪಿ. ಪರಸನಹಳ್ಳಿ ಗ್ರಾಮದ ಸರ್ವೆನಂ 296ರ ಜಮೀನಿನ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ, 4 ಕೆ.ಜಿ.900 ಗ್ರಾಂ ಇರುವ 30 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ತಿಳಿಸಿದ್ದಾರೆ. …

Read More »

ಬೆಳಗಾವಿಯ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ!

ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ನಗರದ ಕ್ಲಬ್ ರಸ್ತೆಯಲ್ಲಿರುವ ಪ್ರತಿಷ್ಠಿತ ಈಫಾ ಹೋಟೆಲ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್ ಒಳಭಾಗದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಸಿಬ್ಬಂದಿಗಳು ಗಾಬರಿಗೊಂಡು ತಕ್ಷಣವೇ ಅಗ್ನಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿ ಅವಘಡದ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದಾಗ, ವಿಡಿಯೋ ಮಾಡದಂತೆ ಹೋಟೆಲ್ ಸಿಬ್ಬಂದಿಗಳು ಕೂಗಿ ತಡೆಯಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಅಗ್ನಿ ಅವಘಡದ ನಿಖರ ಕಾರಣ …

Read More »

ಟೆಂಪೋ ಟ್ರಾವಲರ್ ಗೆ ಇನೋವಾ ಡಿಕ್ಕಿ; ಓರ್ವ ಸಾವು

ಶಿಗ್ಗಾಂವಿ: ಟೆಂಪೋ ಟ್ರಾವಲರ್ಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಓರ್ವ ಮೃತಪಟ್ಟ ಘಟನೆ ತಾಲೂಕಿನ ಗಾಯತ್ರಿ ತಪೋಭೂಮಿ ಬಳಿ ರಾಷ್ಟ್ರೀಯ ಹೆದ್ಧಾರಿ-48ರಲ್ಲಿ ನಡೆದಿದೆ. ದಾವಣಗೆರೆ ನಗರದ ಅಲಿಮಾಹೀಮ್ ಮಹ್ಮದರಫೀಕ್ (20) ಮೃತ ಯುವಕ. ಇವರು ಟೆಂಪೋ ಟ್ರಾವಲರ್ ವಾಹನದಲ್ಲಿ ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಟೆಂಪೋ ಟ್ರಾವರಲ್ ಚಾಲಕ ಯಾವುದೆ ಸಿಗ್ನಲ್ ನೀಡದೆ ವಾಹನವನ್ನು ನಿಲ್ಲಿಸಿದ್ದಾನೆ. ಆಗ ಹಿಂದೆಯಿಂದ ಬಂದ ಇನೋವಾ ಡಿಕ್ಕಿ ಹೊಡೆದಿದೆ. …

Read More »

ನಾಮಕರಣಕ್ಕೆ ಹೋಗುತ್ತಿದ್ದ ವೇಳೆ ಅಪಘಾತ, ಇಬ್ಬರು ಬಲಿ ಪಡೆದ ಲಾರಿ

ಚಿಕ್ಕಬಳ್ಳಾಪುರ: ಟಿಪ್ಪರ್ ಲಾರಿ-ಇನ್ನೋವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಚಿಂತಾಮಣಿ-ಚೇಳೂರು ರಸ್ತೆಯಲ್ಲಿ ಸಂಭವಿಸಿದೆ. ಬಾಗೇಪಲ್ಲಿಯ ನಾಗರಾಜ್‌ರೆಡ್ಡಿ (25), ಅನಿತಾ (24) ಮೃತರು. ಅರವಿಂದ್ (17) ಮತ್ತು ಪ್ರಗತಿ (14) ಗಾಯಾಳುಗಳು. ಇನ್ನೋವಾ ಕಾರು ಬಾಗೇಪಲ್ಲಿಯಿಂದ ಚಿಂತಾಮಣಿಗೆ ಬರುತ್ತಿತ್ತು. ಇದೇ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಚಿಂತಾಮಣಿಯಲ್ಲಿನ ಸಂಬಂಧಿಕರೊಬ್ಬರ ಮನೆಯಲ್ಲಿ ಆಯೋಜಿಸುತ್ತಿದ್ದ ನಾಮಕರಣಕ್ಕೆ ಬರುತ್ತಿದ್ದರು. ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ …

Read More »

ಬೆಂಗಳೂರಲ್ಲಿ ಭೀಕರ ಅಪಘಾತ : ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಈ ಒಂದು ಅಪಘಾತ ಸಮವಿಸಿದೆ. ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದು ಬೈಕ್ ಅಡಿಕೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬೈಕ್ ಸವಾರ ರವಿಕುಮಾರ್ ಸಾವನಪ್ಪಿದ್ದಾನೆ. ಮೃತ ರವಿಕುಮಾರ್ ಕೆ ಪಿ ಅಗ್ರಹಾರ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ …

Read More »

ಕೋಳಾಲದಲ್ಲಿ ಕಿಡಿಗೇಡಿ ಹಚ್ಚಿದ ಬೆಂಕಿಗೆ ಕಾರು, ಬೈಕುಗಳು ಭಸ್ಮ

ಕೊರಟಗೆರೆ: ಮನೆಯ ಮುಂದಿನ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ 1 ಕಾರು ಮತ್ತು 2 ಬೈಕ್‌ಗಳಿಗೆ ಕಿಡಿಗೇಡಿಯೋರ್ವ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಎ.11ರ ಶನಿವಾರ ನಡೆದಿದೆ. ಕೊರಟಗೆರೆ ತಾಲೂಕಿನ ಕೋಳಾಲ ಕೆ.ಸಿ.ಎನ್.ಭಾರತ್ ಗ್ಯಾಸ್ ಏಜೆನ್ಸಿ ಮಾಲಕ ವಿರೂಪಾಕ್ಷಯ್ಯ ಅವರಿಗೆ ಸೇರಿದ ಮಹೇಂದ್ರ ಕಂಪನಿಯ ಕಾರು, ರಾಯಲ್ ಎನ್ ಫೀಲ್ಡ್ ಬೈಕ್, ಓಲಾ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿದೆ. ಬೈಕ್‌ನ್ನು ಎಂದಿನಂತೆ ತಮ್ಮ ಮನೆಯ ಕಾಂಪೌಂಡ್ …

Read More »