ಹಾವೇರಿ: ಇಲ್ಲಿಯ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತ ಬಳಿಯ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬಾಲಕನೊಬ್ಬ ಚಾಕು ತೋರಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಗುರುವಾರ ಘಟನೆ ನಡೆದಿದ್ದು, ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್.ಪಿ.ಯಶೋಧಾ ವಂಟಗೋಡಿ ತಿಳಿಸಿದ್ದಾರೆ. ‘ಶಾಲೆ ಆವರಣದಲ್ಲಿ ಬಾಲಕರು ಸೇರಿದ್ದರು. ಸ್ಥಳಕ್ಕೆ ಬಂದಿದ್ದ 15 ವರ್ಷದ ಬಾಲಕ, ತನ್ನ ಬಳಿಯ ಚಾಕು ಹೊರಗೆ ತೆಗೆದಿದ್ದ. ‘ಇಲ್ಲಿ ಆಟ …
Read More »ಎಂಡಿಎಂಎ ಮಾರಾಟ; ಬೋಳಿಯಾರ್ ನಿವಾಸಿ ಬಂಧನ
ಉಳ್ಳಾಲ: ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೋಳಿಯಾರ್ ನಿವಾಸಿ ಮಹಮ್ಮದ್ ಆರೀಫ್ ಎಂಬಾತನನ್ನು ದೇರಳಕಟ್ಟೆ ಬಳಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಎದುರುಗಡೆ ಮೈದಾನದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡುವ ಖಚಿತ ಮಾಹಿತಿ ಪಡೆದುಕೊಂಡ ಕೊಣಾಜೆ ಎಸ್ ಐ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಮಾದಕ ವಸ್ತು ಆರೋಪಿ ಸೆರೆ
ಕುಂಬಳೆ: ಮಾದಕ ವಸ್ತು ದಾಸ್ತಾನು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಸಾದಿಕ್ ಕೆ. (34) ಎಂಬವನನ್ನು ಮುಂಜಾಗ್ರತಾ ಕ್ರಮವಾಗಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಡಿ. 6 ರಂದು ಉಪ್ಪಳ ಸೋಂಕಾಲ್ ಸಮೀಪ ನಡೆಸಿದ ಕಾರ್ಯಾಚರಣೆ ಯಲ್ಲಿ 43.77 ಗ್ರಾಂ ಎಂಡಿಎಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸಾದಿಕ್ ಕೆ. ಸಹಿತ ಮೂವರನ್ನು ಬಂಧಿಸಿದ್ದರು. ನಂತರ ಸಾದಿಕ್ ಜಾಮೀನು ಮೇಲೆ ಬಿಡುಗಡೆಯಾಗಿದ್ದನು. ಬಳಿಕವೂ ಆತ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ …
Read More »ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ: ಉದ್ಯಮಿ ಅರೆಸ್ಟ್
ಬೆಂಗಳೂರು: ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉದ್ಯಮಿಯನ್ನು ಪುಲಕೇಶಿನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕಸ್ಟಮ್ಸ್ ಮಹಿಳಾ ಅಧೀಕ್ಷಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಉದ್ಯಮಿ ಕೃಷ್ಣಾನಿ ಅವರನ್ನು ಬಂಧಿಸಲಾಗಿದೆ. 45 ವರ್ಷದ ಮಹಿಳಾ ಅಧಿಕಾರಿ ನೀಡಿದ ದೂರಿನ ಅನ್ವಯ ಆರೋಪಿ ಎಂ. ಕೃಷ್ಣಾನಿ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.ಆರೋಪಿಯ ವಿಚಾರಣೆ ಮುಂದುವರೆದಿದೆ. ಉದ್ಯಮಿ ಕೃಷ್ಣಾನಿ ನನ್ನ …
Read More »ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ
ಕೋಟ: ಮಣೂರು ಗ್ರಾಮದ ಬಾಳೆಬೆಟ್ಟು ಬಸ್ಸು ನಿಲ್ದಾಣದ ಬಳಿ ಎ.2ರಂದು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೇಳೂರು ಗ್ರಾಮದ ಆದಿತ್ಯ ಶೆಟ್ಟಿ(28) ಎಂದು ಗುರುತಿಸಲಾಗಿದೆ. ಇನ್ನೋರ್ವ ಸಂದೀಪ ಗಾಣಿಗ ನೂಜಿ ಎಂಬಾತ ಪರಾರಿ ಯಾಗಿ ತಲೆಮರೆಸಿಕೊಂಡಿದ್ದಾನೆ. ಐಪಿಎಲ್ ಕ್ರಿಕೆಟ್ ಪಂದ್ಯಾಟ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಬೆಟ್ಟಿಂಗ್ ಅಕ್ರಮ ದಂಧೆ ಯಲ್ಲಿ ತೊಡಗಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ …
Read More »3 ಲಕ್ಷ ರೂ. ಲಂಚ ಪಡೆದ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ
ಬೆಂಗಳೂರು: ಕಟ್ಟಡದ ಖಾತಾ ಮಾಡಿಕೊಡಲು 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಥಣಿಸಂದ್ರ ವಾರ್ಡ್ನ ಜಿಬಿಎ ರೆವೆನ್ಯೂ ಇನ್ಸ್ಪೆಕ್ಟರ್ ಹಾಗೂ ತೆರಿಗೆ ನಿರೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಥಣಿಸಂದ್ರ ವಾರ್ಡ್ನ ಜಿಬಿಎ ಆರ್ಐ ವೆಂಕಟೇಶ್, ಇದೇ ವಾರ್ಡನ ಜಿಬಿಎ ನಿರೀಕ್ಷಕ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದವರು. ಹೆಗಡೆ ನಗರದ ನ್ಯಾಮತುಲ್ಲಾ ಖಾನ್ ಎಂಬುವವರು ದೂರುದಾರರು. ನ್ಯಾಮತುಲ್ಲಾ ಖಾನ್ ಅವರಿಗೆ ಸೇರಿದ ಕಟ್ಟಡದ ಖಾತಾ ಕೆಲಸ ಮಾಡಿಕೊಡುವ ಸಂಬಂಧ ಆರೋಪಿಗಳು …
Read More »ಮನೆಯಲ್ಲಿ ಚಿನ್ನಾಭರಣ ಕಳವು
ಚಿಂತಾಮಣಿ: ನಗರದ ಕನ್ನಂಪಲ್ಲಿ ಚೌಡೇಶ್ವರ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿದ ಖದೀಮರು, 231 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಮತ್ತು 25 ಸಾವಿರ ರೂ.ಕಳವು ಮಾಡಿದ್ದಾರೆ. ಸಂಬಂಧಿಕರೊಬ್ಬರ ನಾಮಕರಣದ ಬಟ್ಟೆಗಳ ಖರೀದಿಗಾಗಿ ಬೆಂಗಳೂರಿಗೆ ಮಾ.28ರಂದು ರಾತ್ರಿ ಪತ್ನಿಯೊಂದಿಗೆ ಹೋಗಿದ್ದು, 30ರಂದು ಬಾಗಿಲು ತೆಗೆದು ನೋಡಿದಾಗ ಬೀರು, ಕಬೋರ್ಡ್ಗಳಲ್ಲಿದ್ದ ಬಂಗಾರ, ಬೆಳ್ಳಿ ವಸ್ತುಗಳು ಮತ್ತು 25ಸಾವಿರ ರೂ.ನಗದು ದೋಚಿರುವುದು ಗೊತ್ತಾಯಿತು ಎಂದು ಮನೆ ಮಾಲೀಕ, ಯಗವಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ …
Read More »ಚಾಕು ತೋರಿಸಿ ಚಿನ್ನಾಭರಣ ಕಳವು
ಚಿಂತಾಮಣಿ: ಕುರುಬೂರು ಕೆರೆ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆಗೆ ಚಾಕು ತೋರಿಸಿದ ದುಷ್ಕರ್ಮಿ ಚಿನ್ನದ ಓಲೆ ಮತ್ತು ತಾಳಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕುರುಬೂರು ಪದ್ಮಾ (48) ಚಿನ್ನಾಭರಣ ಕಳೆದುಕೊಂಡವರು. ಮಂಗಳವಾರ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಬೈಕ್ ಸವಾರ ನನ್ನ ಬಳಿ ಬಂದು ಚಾಕು ತೋರಿಸಿ ಬೆದರಿಸಿ ಒಡವೆ ಕೊಡು, ಇಲ್ಲವೇ ಕುರಿಗಳನ್ನು ಕೊಡು ಎಂದು ಬೆದರಿಸಿದ್ದಾನೆ. ಪ್ರತಿರೋಧ ಮಾಡಿದಾಗ ಓಲೆ, ತಾಳಿ ಕಿತ್ತುಕೊಂಡಿದ್ದಾನೆ. ಓಲೆಗಳನ್ನು ಕಿತ್ತುಕೊಂಡಾಗ ಎರಡೂ ಕಿವಿಗಳಿಗೆ ಗಾಯವಾಗಿದ್ದು, …
Read More »KSRTC ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಉತ್ತರ ಕನ್ನಡ: ಜಿಲ್ಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಿಂದಾಗಿ 40 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕೊಳಗಿಬೀಸ್ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಭಟ್ಕಳದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಶಿರಸಿಯಿಂದ …
Read More »ಮದ್ದು ಬರೋ ಜ್ಯೂಸ್ ಕೊಟ್ಟು ರೇಪ್ ಮಾಡಿದ್ದಾನೆ : ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಟ್ವಿಸ್ಟ್ ಕೊಟ್ಟ ಯುವತಿ!
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಯುವತಿ ಆರೋಪಿ ಸಮೀರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ಸಮೀರ್ ತನ್ನ ಮನೆಗೆ ಕರೆಸಿ ಮತ್ತು ಬರೋ ಜ್ಯೂಸ್ ಕೊಟ್ಟು ರೇಪ್ ಮಾಡಿದ್ದಾನೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಯುವತಿ ಸಮೀರ್ ಸಹೋದರಿ ತೈಸಿಮ್ ಮುಲ್ಲಾ ನನ್ನ ಸ್ನೇಹಿತೆ ಆಕೆಯಿಂದ ನನಗೆ ಸಮೀರ್ ಪರಿಚಯ ಆಗಿತ್ತು. ಆತ ಚೆನ್ನಾಗಿ ಜಿಮ್ ಮಾಡಿಸ್ತಾನೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





