Breaking News

3 ಲಕ್ಷ ರೂ. ಲಂಚ ಪಡೆದ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ

ಬೆಂಗಳೂರು: ಕಟ್ಟಡದ ಖಾತಾ ಮಾಡಿಕೊಡಲು 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಥಣಿಸಂದ್ರ ವಾರ್ಡ್‌ನ ಜಿಬಿಎ ರೆವೆನ್ಯೂ ಇನ್‌ಸ್ಪೆಕ್ಟರ್‌ ಹಾಗೂ ತೆರಿಗೆ ನಿರೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಥಣಿಸಂದ್ರ ವಾರ್ಡ್‌ನ ಜಿಬಿಎ ಆರ್‌ಐ ವೆಂಕಟೇಶ್‌, ಇದೇ ವಾರ್ಡನ ಜಿಬಿಎ ನಿರೀಕ್ಷಕ ಶ್ರೀನಿವಾಸ್‌ ಲೋಕಾಯುಕ್ತ ಬಲೆಗೆ ಬಿದ್ದವರು. ಹೆಗಡೆ ನಗರದ ನ್ಯಾಮತುಲ್ಲಾ ಖಾನ್‌ ಎಂಬುವವರು ದೂರುದಾರರು. ನ್ಯಾಮತುಲ್ಲಾ ಖಾನ್‌ ಅವರಿಗೆ ಸೇರಿದ ಕಟ್ಟಡದ ಖಾತಾ ಕೆಲಸ ಮಾಡಿಕೊಡುವ ಸಂಬಂಧ ಆರೋಪಿಗಳು 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ದೂರುದಾರರಿಂದ ಆರೋಪಿಗಳು ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *