ಮೈಸೂರು: ಆನ್ಲೈನ್ ವಂಚನೆಯಿಂದ ವೃದ್ಧರೊಬ್ಬರು 19.65 ಲಕ್ಷ ರೂ.ಕಳೆದು ಕೊಂಡಿದ್ದಾರೆ. ಯಾದವಗಿರಿ ನಿವಾಸಿ ವಂಚನೆಗೆ ಒಳಗಾದವರು. ಗೂಗಲ್ನಲ್ಲಿ ಹೂಡಿಕೆ ಜಾಹೀರಾತು ನೋಡಿ ಅರ್ಜಿ ಭರ್ತಿ ಮಾಡಿದ ಬಳಿಕ ಜಸ್ಪ್ರೀತ್ ಎಂಬ ವ್ಯಕ್ತಿ ಕರೆ ಮಾಡಿ ಹಣ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ. ಆತನ ಮಾತನ್ನು ನಂಬಿ ಆತ ಹೇಳಿದ ನಾನಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು, ಲಾಭದ ಹಣವನ್ನು ಕೇಳಿದ ಮೇಲೆ ಮತ್ತಷ್ಟು ಹೂಡಿಕೆ ಮಾಡಬೇಕು ಎಂದು ಹೇಳಿದ್ದಾರೆ. …
Read More »ಸಾವಿನಲ್ಲಿ ಅಂತ್ಯವಾದ ತಾಯಿ-ಮಗನ ನಡುವಿನ ಜಗಳ..
ಮಂಡ್ಯ: ತಾಯಿ-ಮಗನ ನಡುವೆ ಜಗಳ ನಡೆದು, ಸಾವಿನಲ್ಲಿ ಅಂತ್ಯವಾದ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮಹದೇವಮ್ಮ(75), ಸುಭಾಷ್ (42) ಸಾವಿನಪ್ಪಿದ ತಾಯಿ ಮಗ.ನಡೆದಿದ್ದೇನು ಎಂದು ನೋಡೋದಾದ್ರೆ, ಪುತ್ರ ಸುಭಾಷ್ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ ಮಾದೇವಮ್ಮ ಮನನೊಂದು15 ದಿನಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದಳು. ತಾಯಿ ನಾಪತ್ತೆಯಿಂದ ಭಯಗೊಂಡು ಮಂಗಳವಾರ …
Read More »ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆಸಿ ಕುಟುಂಬದವರ ಮೇಲೆ ಹಲ್ಲೆ
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲಾಟೆ ಸಂಭವಿಸಿದೆ. ಬೇವಿನಹಳ್ಳಿಯ ತೀರ್ಥೇಶ್ವರ ನಾಯ್ಕ್ ತಮ್ಮ ಅತ್ತೆ ಮಗಳು ಭಾವನಾ ಜೊತೆ ಫೆಬ್ರವರಿ 8ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಭಾವನಾ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ, ತೀರ್ಥೇಶ್ವರ ವಿರುದ್ಧ ಮತಾಂತರ ಆರೋಪ ಮಾಡಿದ್ದಾರೆ. ನಿನ್ನೆ ರಾಜಿ ಸಂಧಾನಕ್ಕೆ ಕರೆದು ಗಲಾಟೆ ನಡೆದಿದ್ದು, ಯುವತಿಯ ದೊಡ್ಡಪ್ಪ ಮಲ್ಲೇಶ್ ನಾಯ್ಕ್ ಸೇರಿದಂತೆ ಮೂವರಿಗೆ ಗಾಯಗಳಾಗುವೆ. ಗಾಯಾಳುಗಳನ್ನು …
Read More »ದೆಹಲಿಯಲ್ಲಿ ಮಸೀದಿ ಶೆಡ್ ಮೇಲೆ ಹತ್ತಿ ಕೇಸರಿ ಧ್ವಜ ಹಾರಿಸಿದ ಇಬ್ಬರ ಬಂಧನ
ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಬುಧವಾರ ಶೋಭಾ ಯಾತ್ರೆಯ ಸಂದರ್ಭ ಇಬ್ಬರು ವ್ಯಕ್ತಿಗಳು ಮಸೀದಿಯ ತಗಡಿನ ಶೆಡ್ ಮೇಲೆ ಹತ್ತಿ ಕೇಸರಿ ಧ್ವಜ ಹಾರಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸ್ ಕಚೇರಿಯೊಂದು ತಿಳಿಸಿದೆ. ಮಧ್ಯಾಹ್ನ 1:30 ರ ಸುಮಾರಿಗೆ ಈ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆ ಹಾದುಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಸೀದಿಯ ಶುದ್ಧೀಕರಣ ಪ್ರದೇಶದ ತಗಡಿನ …
Read More »ಅಕ್ರಮವಾಗಿ ಎಮ್ಮೆ ಸಾಗಾಟ; ಮೂರು ಪ್ರಕರಣ ದಾಖಲು
ಮುದಗಲ್: ಅಕ್ರಮವಾಗಿ 14 ಎಮ್ಮೆಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಮುದಗಲ್ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಪಿಎಂಸಿ ನಿಯಮಗಳನ್ನು ಅನುಮತಿ ಇಲ್ಲದೇ ಅಕ್ರಮವಾಗಿ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಪಡೆದ ಪಿಎಸ್ಐ ವೆಂಕಟೇಶ ಮಾಡಗೇರಿ ದಾಳಿ ಮಾಡಿ ತಾಳಿಕೋಟೆ ಮೂಲದ ಮೈಬೂಬಸಾಬ್, ಇಮಾಮ್, ಜಾಕೀರ್ ಹುಸೇನ್, ಹಸನ್ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 14 ಎಮ್ಮೆಗಳನ್ನು ಸಂರಕ್ಷಿಸಿ ಗೋಶಾಲೆಗೆ ಬಿಟ್ಟಿದ್ದಾರೆ. ವಾಹನದಲ್ಲಿ ಅಕ್ರಮವಾಗಿ ಸಾಗಾಟ …
Read More »ಕಡಬ: ಅಮಾನುಷವಾಗಿ ಅಕ್ರಮ ಜಾನುವಾರು ಸಾಗಾಟ 18 ಜಾನುವಾರುಗಳು ವಶಕ್ಕೆ, ಓರ್ವನ ಬಂಧನ
ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು ಸುಮಾರು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನ ಒಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವಾಹನವನ್ನು ತಡೆದು ನಿಲ್ಲಿಸಿದ ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸರ ತಂಡ ಓರ್ವನನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಾಗಿದ್ದಾನೆ. ಕಂಟೇನರ್ ನಲ್ಲಿ …
Read More »ಕುರಿ ಮೇಯಿಸುತ್ತಿದ್ದಾಗ ಚಿನ್ನಾಭರಣ ಕಸಿದುಕೊಂಡು ಪರಾರಿಯಾದ ಬೈಕ್ ಸವಾರ
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕುರುಬೂರು ಕೆರೆಯ ಬಳಿ ಕುರಿಗಳನ್ನು ಮೇಯಿಸಿಕೊಂಡು ಮರದ ಕೆಳಗೆ ಕುಳಿತ್ತಿದ್ದ ಮಹಿಳೆಗೆ ಚಾಕು ತೋರಿಸಿ ಕಿವಿಯಲ್ಲಿದ್ದ ಚಿನ್ನದ ಓಲೆ ಮತ್ತು ಕತ್ತಿನಲ್ಲಿದ್ದ ತಾಳಿ ಬೊಟ್ಟು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಗ್ರಾಮದ ಮಹಿಳೆ ಪದ್ಮಾ(48) ಚಿನ್ನಾಭರಣ ಕಳೆದುಕೊಂಡವರು. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕುರಿಗಳನ್ನು ಮೇಯಿಸಲು ಗಂಡ ಸದಾಶಿವರೊಂದಿಗೆ ಹೋಗಿದ್ದು ಇದರ ನಡುವೆ ಮೈಯಲ್ಲಿ ಹುಷಾರಿಲ್ಲದ ಕಾರಣ ಪತಿ ಮನೆಗೆ ವಾಪಸ್ಸಾಗಿದ್ದಾರೆ. ಇದರ …
Read More »ಜಾರ್ಖಂಡ್: ಪುತ್ರನ ಆರೋಗ್ಯಕ್ಕೆ ಪುತ್ರಿ ನರಬಲಿ, ತಾಯಿ ಸೇರಿ ಮೂವರ ಬಂಧನ
ರಾಂಚಿ: ಅನಾರೋಗ್ಯದಿಂದ ಬಳಲುತ್ತಿರುವ ಪುತ್ರನು ಗುಣಮುಖಕ್ಕಾಗಿ, ತಾಯಿಯೇ ತನ್ನ 13 ವರ್ಷದ ಮಗಳನ್ನು ನರಬಲಿ ನೀಡಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದಿದೆ. ಆರೋಪಿಯನ್ನು ರೇಶ್ಮಿ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಜತೆಗೆ ಕೃತ್ಯಕ್ಕೆ ಸಹಕರಿಸಿದ ಓರ್ವ ಗ್ರಾಮಸ್ಥ ಮತ್ತು ಮಾಟಗಾತಿಯೊಬ್ಬರನ್ನು ಬಂಧಿಸಲಾಗಿದೆ. ‘ನಿನ್ನ ಮಗನ ಕಾಯಿಲೆ ಗುಣಪಡಿಸಲು ಕನ್ಯೆಯನ್ನು ಬಲಿ ನೀಡಬೇಕು’ ಎಂದು ಮಾಟಗಾತಿ ಸೂಚಿಸಿದ್ದಳು. ಅವಳ ಮಾತನ್ನು ನಂಬಿ ಪುತ್ರಿಯನ್ನೇ ಕತ್ತು ಹಿಸುಕಿ ಕೊಲ್ಲಲಾಗಿದೆ. ಜತೆಗೆ ಕ್ಷುದ್ರ ಆಚರಣೆ …
Read More »ಖಾತಾ ಬದಲಾವಣೆಗೆ ₹3 ಲಕ್ಷ ಲಂಚ: ಬೆಂಗಳೂರಿನ ಆರ್ಐ, ಟಿಐ ಬಂಧನ
ಬೆಂಗಳೂರು: ವಸತಿ ಕಟ್ಟಡವೊಂದರ ಖಾತಾ ಬದಲಾವಣೆ ಮಾಡಿಕೊಡಲು ₹3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಯ ತಣಿಸಂದ್ರ ವಾರ್ಡ್ನ ಕಂದಾಯ ನಿರೀಕ್ಷಕ (ಆರ್ಐ) ವೆಂಕಟೇಶ್ ಮತ್ತು ತೆರಿಗೆ ನಿರೀಕ್ಷಕ (ಟಿಐ) ಶ್ರೀನಿವಾಸ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರ ನಿವಾಸಿ ನಯಾಮತ್ ಉಲ್ಲಾ ಖಾನ್ ಅವರು ತಣಿಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ಹೊಂದಿದ್ದಾರೆ. ಆ ಕಟ್ಟಡದ ಖಾತಾ ಬದಲಾವಣೆಗೆ ಅವರು ಅರ್ಜಿ ಸಲ್ಲಿಸಿದ್ದರು. …
Read More »ಗಂಗಾ ಕಲ್ಯಾಣ ಯೋಜನೆಗೆ ಲಂಚ: ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು
ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಲು ಫಲಾನುಭವಿಯಿಂದ ₹ 10,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಇಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಅವರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 40,000 ದಂಡ ವಿಧಿಸಿ ಗುರುವಾರ ಆದೇಶಿಸಿದೆ. ಸಾಗರ ತಾಲ್ಲೂಕಿನ ಹೊಸಗುಂದ ಗ್ರಾಮದ ಎಚ್.ಎಸ್. ಜನಾರ್ದನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





