ಮುಂಬೈ: ಅಪ್ಪನ ಮೇಲಿನ ವೈಮನಸ್ಸಿಗೆ 4 ವರ್ಷದ ಬಾಲಕನ ಮೇಲೆ ಅಮಾನವೀಯ ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸಂದೀಪ್ ಪವಾರ್ ಎಂಬ ಆರೋಪಿ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿಯ ಪ್ರಕಾರ, ಆರೋಪಿ ಬಾಲಕನ ತಂದೆಯೊಂದಿಗೆ ಜಗಳವಾಡುತ್ತಿದ್ದನು. ಈ ವೇಳೆ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಾ ಆಟೋದಲ್ಲಿ ಕುಳಿತಿದ್ದ. ತಂದೆಯ ಮೇಲಿನ ಸಿಟ್ಟಿನಿಂದ ಆರೋಪಿ ಆಟೋ ಬಳಿ ಹೋಗಿ ಮಗುವಿನ …
Read More »ಹಾವೇರಿಯಲ್ಲಿ ಭೀಕರ ದುರಂತ: ನಿಲ್ದಾಣದಲ್ಲಿದ್ದ ಜನರ ಮೇಲೆ ನುಗ್ಗಿದ ಬಸ್, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ
ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಇಂದು (ಏಪ್ರಿಲ್ 1) ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ. ಘಟನೆಯಲ್ಲಿ 2 ವರ್ಷದ ಪುಟ್ಟ …
Read More »ಶಿವಮೊಗ್ಗದಲ್ಲಿ ಘೋರ ಘಟನೆ : ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!
ನಗರದ ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಸಮೀಪ ಮಾರ್ಚ್ 31ರ ಮಧ್ಯಾಹ್ನ ಒಂದೂವರೆ ವರ್ಷದ ಪುಟ್ಟ ಮಗು ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ. ಮಗು ಶಾಲೆಯಿಂದ ಬಂದ ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 18 ತಿಂಗಳ ಮಗು ಆರ್ಯನ್, ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಸ್ಥಳಕ್ಕೆ ಬಂದಿದ್ದ. ಖಾಸಗಿ ಶಾಲಾ ಬಸ್ನಲ್ಲಿ ಅಣ್ಣನ ಬರುವಿಕೆಗೆ ಕುಟುಂಬದೊಂದಿಗೆ ಆರ್ಯನ್ ಕೂಡ ಕಾಯುತ್ತಿದ್ದ. ಈ …
Read More »ಬೆಂಗಳೂರು: ರ್ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರ್ಯಾಪಿಡೋ ಚಾಲಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೋರ್ವಳು ಬಿಟಿಎಂ ಲೇಔಟ್ನಿಂದ ಇಂದಿರಾನಗರಕ್ಕೆ ಬೈಕ್ ಬುಕ್ ಮಾಡಿದ್ದಳು. ಬಳಿಕ ಬೈಕ್ನಲ್ಲಿ ಬರುವಾಗ ಚಾಲಕ ಮೊಹಮ್ಮದ್ ಖಾಜಾ, ದಾರಿಯುದ್ದಕ್ಕೂ ಮೈಮುಟ್ಟಿ ಅಸಭ್ಯ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಯುವತಿ ದೂರು ನೀಡಿದ್ದಾಳೆ. ಇದರ ಮೇರೆಗೆ ಇದೀಗ ಇಂದಿರಾನಗರ ಠಾಣೆ ಪೊಲೀಸರು ರ್ಯಾಪಿಡೋ ಚಾಲಕ ಮೊಹಮ್ಮದ್ ಖಾಜಾ ಎನ್ನುವಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Read More »ಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ಕಳ್ಳತನ
ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಬಾಲಾಜಿ ಕ್ಯಾಶ್ಯು ಇಂಡಸ್ಟ್ರೀಸ್ ಕಚೇರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆ. ಕಚೇರಿಯ ಹಿಂಬಾಗಿಲನ್ನು ಕಳ್ಳರು ಮುರಿದು ಒಳನುಗ್ಗಿ, ಸಂಸ್ಥೆಯ ದಾಖಲೆಗಳು ಸೇರಿದಂತೆ 9 ಕಂಪ್ಯೂಟರ್ಗಳು, 8 ಸಿಸಿಟಿವಿ ಕೆಮರಾಗಳು, ಒಂದು ಡಿವಿಆರ್ ಹಾಗೂ 3 ಟೆಲಿವಿಷನ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ವಾಮದಪದವು ನಿವಾಸಿ ಟಿ. ವರದರಾಜ್ ಪೈ (46) ಅವರು ಘಟನೆಗೆ ಸಂಬಂಧಿಸಿ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!
ದೊಡ್ಡಬಳ್ಳಾಪುರ: ಹೋಟೆಲ್ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದಲ್ಲಿ ನಡೆದಿದೆ. ಹೋಟೆಲ್ ಮಾಲೀಕ ಸೈಯದ್ ಆಪ್ರೂಜ್ ಮೇಲೆ ಆರೋಪಿಗಳು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದು,ಅವರಿಗೆ ಹಾಗೂ ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆ ಬಿಲ್ ಕೇಳಿದ್ದಕ್ಕೆ ಕೋಪಗೊಂಡ ಆರೋಪಿಗಳು ಮರುದಿನ ಬಂದು ಜಗಳವಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ …
Read More »ಮಸಬಿನಾಳ ಬಳಿ ಭೀಕರ ಅಪಘಾತ: ಎರಡು ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು
ಬಸವನಬಾಗೇವಾಡಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಬಳಿ ನಡೆದಿದೆ. ಮೃತರನ್ನು ಇಂಗಳೇಶ್ವರ ತಾಂಡಾದ ನಿವಾಸಿ ಸಂತೋಷ ಲಾಲು ಚವಾಣ್ (32) ಹಾಗೂ ದೇಗಿನಾಳ ಗ್ರಾಮದ ಭೀಮನಗೌಡ ಪಾಟೀಲ (45) ಎಂದು ಗುರುತಿಸಲಾಗಿದೆ. ಇನ್ನೂ ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು …
Read More »ಬಂಟ್ವಾಳದಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ- ಒಬ್ಬ ವಶಕ್ಕೆ
ಬಂಟ್ವಾಳ: ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ಮಾದಕ ವಸ್ತುವನ್ನು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿ ಬಂಟ್ವಾಳ ಸಜಿಪ ಮೂಡ ನಿವಾಸಿ ಶಾಕೀರ್ (28 ) ಎಂದು ಗುರುತಿಸಲಾಗಿದೆ.ಮಾರ್ಚ್ 30 ರಂದು ಸಂಜೆ, ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಕಾ&ಸು ಸಂದೀಪ್ ಕುಮಾರ್ ಶೆಟ್ಟಿರವರಿಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂ ನಗರ ಎಂಬಲ್ಲಿ ಕೆಲವು ವ್ಯಕ್ತಿಗಳು …
Read More »ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಘಟನೆ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ …
Read More »ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ
ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 19 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ.ಎಂ. ಮಠಪತಿ, ಪಿಎಸ್ಐ ಎಲ್.ಬಿ. ಮಾಳಿ, ಎಎಸ್ಐ ಬಿ.ಕೆ. ರಂಗಣ್ಣವರ ಹಾಗೂ ಸಿಬ್ಬಂದಿಗಳಾದ ವಿಠ್ಠಲ ಭಾಂಗಿ, ಎಂ.ಬಿ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





