Breaking News

BigTv News

ಅಜ್ಜಿಯನ್ನು ಕೊಲೆಗೈದು ಸಿಲಿಂಡರ್ ಸ್ಫೋಟದಲ್ಲಿ ಸಾವು ಎಂದು ಕಥೆ ಕಟ್ಟಿದ ಮೊಮ್ಮಗ

ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಜ್ಜಿ ಮೃತಪಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಇದು ಸಿಲಿಂಡರ್ ಸ್ಫೋಟವಲ್ಲ ಕೊಲೆ ಎಂಬುದು ಬಯಲಾಗಿದೆ. ಬಳ್ಳಾರಿಯ ಪಿ.ಡಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೆಕಲ್ಲು ಗ್ರಾಮದಲ್ಲಿ ಮಾರ್ಚ್ 21ರಂದು ಈರಮ್ಮ (58) ಸಾವನ್ನಪ್ಪಿದ್ದರು. ಮೊದಲಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವೇಳೆ ಇದು ಕೊಲೆ ಎಂಬುದು ದೃಢಪಟ್ಟಿದೆ. ಮಹಿಳೆಯನ್ನು ಮೊದಲು ಹರಿತವಾದ ಆಯುಧಗಳಿಂದ …

Read More »

ಬೆಂಗಳೂರು: ಕಾರು ಕದ್ದ ಆರೋಪಿ ರಾಜಸ್ಥಾನದಲ್ಲಿ ಸೆರೆ

ಬೆಂಗಳೂರು: ಮನೆಯ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಕಾರನ್ನು ಕಳ್ಳತನ ಮಾಡಿ ರಾಜಸ್ಥಾನಕ್ಕೆ ಕೊಂಡೊಯ್ದಿದ್ದ ಆರೋಪಿಯನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಹರಿಭಜನ್‌ (24) ಬಂಧಿತ. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು, ಪೂರ್ವ ತಾಲ್ಲೂಕು ಮಿಟ್ಟಿಗಾನಹಳ್ಳಿಯ ಬಾಡಿಗೆ ಮನೆಯಲ್ಲಿ ಆರೋಪಿ ನೆಲಸಿದ್ದ ಎಂದು ಪೊಲೀಸರು ಹೇಳಿದರು. ದೂರುದಾರ ಬಾಲಾಜಿ ಅವರು ಮನೆಯ ಪಕ್ಕದಲ್ಲಿದ್ದ ಖಾಲಿ ಪ್ರದೇಶದಲ್ಲಿ ಕಾರು ನಿಲುಗಡೆ ಮಾಡಿದ್ದರು. ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಕಾರು …

Read More »

ಸಂದೇಶ್ ಪಿಜಿ ವಿರುದ್ಧದ ಪ್ರಕರಣ ; ಸಿ.ಐ.ಡಿ ತನಿಖೆಗೆ

ಬೆಳ್ತಂಗಡಿ; ಅಮಾನತುಗೊಂಡ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮುಂದಿನ ತನಿಖೆಯನ್ನು ಸಿ.ಐ.ಡಿ ನಡೆಸುವಂತೆ ಅದೇಶವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟನೆ ತಿಳಿಸಿದೆ.ಸಂದೇಶ್ ಪಿಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದರು. ಮಹಿಳೆ ದೂರಿನ ಹಿನ್ನೆಲೆ ಸಂದೇಶ್ ಪಿ.ಜಿ ಹಾಗೂ ಆತನ ಮೂವರು ಸಹಚರರಾದ ಖಾಸಗಿ ಕಾರು ಚಾಲಕ ಅಕ್ಬರ್, ಜತೆಗೆ ಆತನ ಪರಿಚಯದ …

Read More »

ಎರಡು ತಂಡಗಳ ಹೊಡೆದಾಟ: ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಸಜೀಪಪಡು ಗ್ರಾಮದ ತಲೆಮೊಗರು ಮಸೀದಿಯ ಬಳಿ ಮಾ. 22ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಇದೀಗ ಎರಡು ತಂಡಗಳು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ತಂಡದಿಂದ ಶೌಕತ್ ಆಲಿ ಅವರು ದಾವೂದ್, ಜುಬೈರ್, ಸೈದುದ್ದಿನ್, ನವಾಜ್, ಗಫೂರ್, ಶರೀಪ್, ಆಶಿಕ್, ಹೈದರ್, ಆಸೀಪ್, ಆಶ್ರಫ್ ಎಸ್.ಕೆ. , ಇರ್ಫಾನ್ ಎಸ್.ಕೆ. ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದು ತಂಡದಿಂದ …

Read More »

ಚೆನ್ನೈ- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಗಾಂಜಾ ಪತ್ತೆ

ಮಂಗಳೂರು: ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ರೈಲಿನಲ್ಲಿ ಸುಮಾರು 5,06,450 ರೂ. ಮೌಲ್ಯದ 10 ಕೆ.ಜಿ.129 ಗ್ರಾಂ. ಒಣ ಗಾಂಜಾ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ 11.56ರ ಸುಮಾರಿಗೆ ಇಲ್ಲಿನ ನಿಲ್ದಾಣದ ಒಂದನೇ ಫ್ಲಾಟ್ ಫಾರಂಗೆ ಆಗಮಿಸಿದ ರೈಲಿನ ಜನರಲ್ ಬೋಗಿಯಲ್ಲಿ ವಾರಸುದಾರರು ಇಲ್ಲದ ಬಾಕ್ಸ್ ನಲ್ಲಿ ಗಾಂಜಾ ಪತ್ತೆಯಾಯಿತು. ಆರ್ ಪಿಎಫ್ ನ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಅವರು ತಂಡದೊಂದಿಗೆ ಪರಿಶೀಲನೆ ನಡೆಸಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮುಂದಿನ …

Read More »

ರಾಜ್ಯದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿ : ರಾಯಚೂರಲ್ಲಿ ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಸಾವು!

ರಾಯಚೂರು : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ರೀಲ್ಸ್ ಹುಚ್ಚಾಟಕ್ಕೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ರಾಯಚೂರಿನಲ್ಲಿ ಮತ್ತೊಂದು ಘಟನೆ ನಡೆದಿದ್ದು ರಿಲ್ಸ್ ಹುಚ್ಚಾಟಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಈಜು ಬಾರದೆ ರಿಲೀಸ್ ಮಾಡಲು ಹೋಗಿ ತುಂಗಭದ್ರಾ ನದಿಯಲ್ಲಿ ಮುಳುಗಿ 22 ವರ್ಷದ ಅಮನ್ ಖಾನ್ ಎಂಬ ಯುವಕ ಮೃತಪಟ್ಟಿದ್ದಾನೆ. ಸಿಂಧನೂರು ಪಟ್ಟಣದ ಗಂಗಾ ನಗರ ನಿವಾಸಿಯಾಗಿದ್ದ ಅಮನ್ ಖಾನ್ ಗೆಳೆಯರ ಜೊತೆಗೆ ತುಂಗಭದ್ರನದಲ್ಲಿ ಸ್ನಾನಕ್ಕೆ …

Read More »

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಯಿಂದ ಹಿಂದೆ ಸರಿಯಬಾರದು; ಎನ್‌ಎಫ್‌ಐಡಬ್ಲ್ಯು

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಉತ್ತರ ನೀಡಲು ನಿರ್ದೇಶನ ನೀಡಿರುವುದನ್ನು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯು) ರಾಜ್ಯ ಸಮಿತಿ ಸ್ವಾಗತಿಸಿದೆ. ಬಾಲಕಿ ಸೌಜನ್ಯ ಪ್ರಕರಣದ ಮರುತನಿಖೆಗೆ ಕೋರಿ ಆಕೆಯ ತಾಯಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ನಿರ್ದೇಶನ ನೀಡಿರುವುದು ಕಗ್ಗತ್ತಲಲ್ಲಿರುವ ನಮಗೆ ಕೊಂಚ …

Read More »

ಹುಬ್ಬಳ್ಳಿ ಗೋಕುಲ್ ರಸ್ತೆಯ ಬಳಿ ಭೀಕರ ಅಪಘಾತ; ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು!

ಹುಬ್ಬಳ್ಳಿ ನಗರದ ಗೋಕುಲ್ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಮೇಲೆ ಕೆಬಲ್ ವೈರ್ ಹರಿದು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದ್ದು, ಕಳೆದ ರಾತ್ರಿ ನಡೆದ ಈ ದುರ್ಘಟನೆಯು ಪ್ರದೇಶದಲ್ಲಿ ಆಘಾತ ಮೂಡಿಸಿದೆ. ಮೃತರನ್ನು ತಾಜ್ ನಗರ ನಿವಾಸಿಗಳಾದ ಫಯಾಜ್ (25) ಮತ್ತು ಮೋಹಿದ್ (27) ಎಂದು ಗುರುತಿಸಲಾಗಿದೆ. ರಸ್ತೆ ಮೇಲೆ ಕೇಬಲ್ ವೈರ್ ಹರಿದು …

Read More »

15 ವರ್ಷ ಹಳೆಯ ಆರೋಪಿಯ ಬಂಧನ

ಮಲ್ಪೆ: ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪಡುತೋನ್ಸೆ ಕೋಡಿಬೆಂಗ್ರೆಯ ಜುಬೇರ್‌ (42)ಎಂಬಾತನನ್ನು ಮಲ್ಪೆ ಪೊಲೀಸರು ಮಾ. 22ರಂದು ಬೆಂಗಳೂರಿನ ಶಿವಾಜಿ ನಗರದಲ್ಲಿ ಬಂಧಿಸಿದ್ದಾರೆ. 2011ರಲ್ಲಿ ಕಲ್ಯಾಣಪುರ ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕಿಗೆ ವಂಚಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈತ ದೀರ್ಘ ಕಾಲ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಉಡುಪಿ ಪೊಲೀಸ್‌ ಉಪಾಧೀಕ್ಷಕರು ಹಾಗೂ ಮಲ್ಪೆ …

Read More »

ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಮಿಳುನಾಡಿನ ಜೀವನ್ ವಾಸುದೇವ್ (31) ಬಂಧಿತ. ಆರೋಪಿ ಜೀವನ್, ನಗರದ ಹೊಸರೋಡ್‌ನಲ್ಲಿ ‘ಜಾಮ್’ ಎಂಬ ಡಾನ್ಸ್ ಸ್ಟುಡಿಯೊ ನಡೆಸುತ್ತಿದ್ದ. 2025ರ ಜೂನ್‌ನಲ್ಲಿ ದೂರುದಾರೆಗೆ ಪರಿಚಯವಾಗಿದ್ದ ಆರೋಪಿ, ಮದುವೆ ಆಗುವುದಾಗಿ ನಂಬಿಸಿದ್ದ. ಬಳಿಕ, ಎಇಸಿಎಸ್ ಲೇಔಟ್‌ನ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದ. ಬಳಿಕ ದೊಡ್ಡನಾಗಮಂಗಲ ರಸ್ತೆಯಲ್ಲಿ ಇರುವ ಹೋಟೆಲ್‌ವೊಂದಕ್ಕೆ …

Read More »