Breaking News

BigTv News

ಕನಕಗಿರಿ | ಅಪ್ರಾಪ್ತೆಯ ಅತ್ಯಾಚಾರ ಆರೋಪ; ಯುವಕನ ಬಂಧನ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸಮೀಪದ ಬಸರಿಹಾಳ ಗ್ರಾಮದ ಯುವಕ ಕುಮಾರಸ್ವಾಮಿ(22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಸರಿಹಾಳ ಗ್ರಾಮದ ಬಾಲಕಿಯನ್ನು ಆರೋಪಿ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡಿ ಪರಿಸರಕ್ಕೆ ಕರೆದುಕೊಂಡು‌ ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಿಐ ವಿ.‌ನಾರಾಯಣ ತಿಳಿಸಿದ್ದಾರೆ.

Read More »

ಸಂತೆಕಟ್ಟೆಯಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

ಉಡುಪಿ: ಸಂತೆಕಟ್ಟೆಯಲ್ಲಿ ಬುಧವಾರ ಸರಣಿ ಅಪಘಾತ ನಡೆದು ಹಲವರು ಗಾಯಗೊಂಡಿದ್ದಾರೆ. ಕುಂದಾಪುರದಿಂದ ಉಡುಪಿ ಕಡೆಗೆ ಬಲೆನೊ ಹಾಗೂ ಇಟಿಯೋಸ್ ಕಾರು ಬರುತ್ತಿತ್ತು. ಈ ವೇಳೆ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಬಲೆನೊ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಉಡುಪಿಯಿಂದ ಕುಂದಾಪುರ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಲೆನೊ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಜಗದೀಶ್ ತೋಳಾರ್ ಗಾಯಗೊಂಡಿದ್ದಾರೆ. ಇಟಿಯೋಸ್ ಕಾರಿನಲ್ಲಿದ್ದ …

Read More »

ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಜಾತ್ರೆಗೆ ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ!

ದಕ್ಷಿಣಕನ್ನಡ : ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಇದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಒಂದು ಘಟನೆ ನಡೆದಿದೆ. ಜನಾರ್ಧನ ಸ್ವಾಮಿ ದೇಗುಲದ ಬ್ರಹ್ಮ ಕಳಶೋತ್ಸವ ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಮುಸ್ಲಿಂ ಬಾಲಕನ ದೂರಿನ ಮೇರೆಗೆ ಇದೀಗ ಕೇಸ್ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ …

Read More »

ಪ್ರೀತಿ ನಾಟಕವಾಡಿ ಯುವತಿಯ ಸಂಬಳಕ್ಕೆ ಕೈ ಹಾಕಿದ ಭೂಪ

ಹಾವೇರಿ: ಪ್ರೀತಿಸಿದ ಯುವತಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ವಿರುದ್ಧ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ಮಂಜುನಾಥ ಮಲ್ಲಪ್ಪ ಜಂಗ್ಲಿ ಎಂಬುವನ ವಿರುದ್ಧ ದೂರು ದಾಖಲಾಗಿರುವುದು. ಯುವತಿಯು ಬಿ.ಎಡ್. ಓದುವಾಗ ಆಕೆಯನ್ನು ಪರಿಚಯ ಮಾಡಿಕೊಂಡ ಆರೋಪಿ ಮಂಜುನಾಥ ನನ್ನನ್ನು ಪ್ರೀತಿ ಮಾಡಬೇಕು. ಇಲ್ಲವಾದರೆ ನಾನು ಜೀವಂತ ಇರುವುದಿಲ್ಲ ಎಂದು ಹೆದರಿಸಿ ಪ್ರೀತಿ ಮಾಡುವಂತೆ ಮಾಡಿದ್ದ. ನಂತರ ಯುವತಿಯು …

Read More »

ಅಕ್ರಮ ಗೋಮಾಂಸ ಸಂಗ್ರಹ ಪತ್ತೆ; ಪೊಲೀಸರಿಂದ ವಶ

ಸಾಗರ: ಇಲ್ಲಿನ ನೆಹರು ನಗರದ ನವಾಯತ್ ಕಾಲೋನಿಯ ಮನೆಯೊಂದರಲ್ಲಿ ಸುಮಾರು 24 ಕೆಜಿ ಗೋಮಾಂಸ ಪತ್ತೆಯಾಗಿದೆ. ಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೀಳ್ಯದೆಲೆ ಮಾರಾಟ ಮಾಡುವ ಎಲೆ ಫಾರೂಕ್ ಎಂಬುವವರ ಮನೆಯಲ್ಲಿ ದನದ ಮಾಂಸ ಸಿಕ್ಕಿದೆ. ನೆಹರು ನಗರದ ಅವರ ಮನೆಯಲ್ಲಿ ಭದ್ರಾವತಿಯಿಂದ ಅಥವಾ ಶಿವಮೊಗ್ಗದ ತುಂಗಾ ನಗರದಿಂದ 80 ಕೆಜಿ ದನದ ಮಾಂಸ ತರಿಸಿ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ …

Read More »

ಮದುವೆಯಾಗಿ 15 ದಿನಕ್ಕೆ ಚಿನ್ನಾಭರಣ ದೋಚಿ ಹೆಂಡತಿ ಎಸ್ಕೇಪ್‌.. ಬ್ರೋಕರ್‌ ನಂಬಿ ಹರಕೆ ಕುರಿಯಾದ ಗಂಡ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ಮದುವೆಯಾಗಿ 15 ದಿನಕ್ಕೆ ಹೆಂಡತಿಯು ಮನೆಯಲ್ಲಿದ್ದ ಒಡವೆ ಎತ್ತಿಕೊಂಡು ಗಂಡನ ಮನೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ನೇತ್ರ ಗಂಡನಿಗೆ ಕೈಕೊಟ್ಟು ಪರಾರಿಯಾದ ಪತ್ನಿ. ಆಂದ್ರದ ಮದನಪಲ್ಲಿ ಬಾಸ್ಕರ್ ಆಕೆಯ ಪತಿ. ಬ್ರೋಕರ್‌ಗಳನ್ನು ನಂಬಿ ಒಂದೇ ದಿನ ನೋಡಿ ವಿವಾಹವಾಗಿದ್ದ ಭಾಸ್ಕರ್‌, ಅರಿವಿಲ್ಲದೆ ವಿವಾಹಿತ ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ಜೋಡಿಗಳು ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಮಾವ ವೆಂಕಟರವಣರೆಡ್ಡಿ …

Read More »

ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ: 10 ಕೆ.ಜಿ ಬೆಳ್ಳಿಯ ಸಾಮಗ್ರಿ ಜಪ್ತಿ

ಬೆಂಗಳೂರು: ಹಲಸೂರು ಗೇಟ್‌ ಠಾಣಾ ವ್ಯಾಪ್ತಿಯ ಸಿಟಿ ಸ್ಟ್ರೀಟ್‌ ಕ್ರಾಸ್‌ನ ಬೆಟ್ಟಪ್ಪ ಲೇಔಟ್‌ನ ಚಿನ್ನಾಭರಣ ಅಂಗಡಿಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ನರೇಂದ್ರ (19) ಹಾಗೂ ಕುಲದೀಪ್‌ (23) ಬಂಧಿತರು. ನಗರ್ತಪೇಟೆಯ ಕುಂಬಾರಪೇಟೆ ಮುಖ್ಯರಸ್ತೆಯ ಕಿಶನ್‌ ಬಿಷ್ಣೋಯಿ ನೀಡಿದ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹35 ಲಕ್ಷ ಮೌಲ್ಯದ 10 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. …

Read More »

ಮಂಗಳೂರು| ಗ್ಯಾಸ್ ಅಕ್ರಮ ಮರುಪೂರಣ; ಇಬ್ಬರು ಆರೋಪಿಗಳ ಬಂಧನ

ನಗರದ ಕುದ್ರೋಳಿ ಕಂಡತ್‌ಪಳ್ಳಿ ಎಂಬಲ್ಲಿ ಗ್ಯಾಸ್ ಹಂಡೆಯಿಂದ ಇನ್ನೊಂದು ಗ್ಯಾಸ್ ಹಂಡೆಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಸಾಲಿಯಾನ್ ಮತ್ತು ಸುನೀಲ್ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಾ.17ರಂದು ಮಧ್ಯಾಹ್ನ 1:30ಕ್ಕೆ ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿ ಲಕ್ಷ್ಮೀನಾರಾಯಣ ಟೆಂಪಲ್ ಕಡೆಯಿಂದ ಕಂಡತ್‌ಪಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ನಿಹಾ ಗ್ಯಾಸ್ ಪಾಯಿಂಟ್ ಹೆಸರಿನ ಅಂಗಡಿಯ ಪಕ್ಕದಲ್ಲಿರುವ ಗೋದಾಮಿನಲ್ಲಿ ಈ ಇಬ್ಬರು ಆರೋಪಿಗಳು …

Read More »

ಶ್ರೀರಾಮ ಕ್ರೆಡಿಟ್ ಕೊಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ: ತನಿಖೆ ಆರಂಭಿಸಿದ CID

ಬೆಳ್ತಂಗಡಿ: ಇಲ್ಲಿನ ಶ್ರೀರಾಮ ಕ್ರೆಡಿಟ್ ಕೊಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು ₹ 40 ಕೋಟಿಯನ್ನು ವಾಪಾಸ್ ನೀಡದೆ ವಂಚನೆ ‌ಮಾಡಿರುವ ಪ್ರಕರಣ ಸಂಬಂಧ ಸೊಸೈಟಿಗೆ ಬೆಂಗಳೂರಿನಿಂದ ಸಿಐಡಿ ತನಿಖಾ ತಂಡ ಮಂಗಳವಾರ ಬಂದಿದ್ದು, ತನಿಖೆ ಆರಂಭಿಸಿದೆ. ನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿದ್ದ ಈ ಸೊಸೈಟಿ 25 ವರ್ಷಗಳಿಂದ ಏಕೈಕ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ಸೊಸೈಟಿಯಲ್ಲಿ ಗ್ರಾಹಕರು ಇಟ್ಟಿದ್ದ ಸುಮಾರು ₹40 ಕೋಟಿಯನ್ನು ಗ್ರಾಹಕರಿಗೆ ನೀಡದೆ ಸೊಸೈಟಿಯ …

Read More »

ಇಟ್ಟಿಗೆ ಟ್ರ್ಯಾಕ್ಟರ್ ದುರಂತ: ಟ್ರೇಲರ್ ನಡುವೆ ಸಿಲುಕಿ 26 ವರ್ಷದ ಚಾಲಕ ದುರ್ಮರಣ

ಹಾವೇರಿ: ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಚಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ಹಾವೇರಿ ಜಿಲ್ಲೆಯ ಮರೋಳ ಗ್ರಾಮದಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಗುತ್ತಲ ತಾಂಡಾ ನಿವಾಸಿ ದೇವರಾಜ್ ಲಮಾಣಿ (26) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ದೇವರಾಜ್ ಬೆಳಿಗ್ಗೆ ಸುಮಾರು ಎರಡೂವರೆ ಸಾವಿರ ಇಟ್ಟಿಗೆಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಮರೋಳ ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆ, ಏಕಾಏಕಿ ಟ್ರ್ಯಾಕ್ಟರ್ ಎಂಜಿನ್ ಮೇಲೆ ಎದ್ದು ಟ್ರೇಲರ್ ಮತ್ತು ವಾಹನದ ಮಧ್ಯೆ ಸಿಲುಕಿಕೊಂಡಿದ್ದಾನೆ. ಪರಿಣಾಮವಾಗಿ ಗಂಭೀರವಾಗಿ …

Read More »