Breaking News

BigTv News

ಲೋಕಾಯುಕ್ತ ದಾಳಿ: ಬಿಡಿಎ ಅರಣ್ಯಾಧಿಕಾರಿ ಬಳಿ ₹3.08 ಕೋಟಿ ಅಕ್ರಮ ಆಸ್ತಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಲಯ ಅರಣ್ಯಾಧಿಕಾರಿ ದಾಳೇಶ್‌ ಎ.ಎಲ್‌. ಅವರ ಮನೆಯ ಮೇಲೆ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹3.08 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಸಂಬಂಧ ಬಂದಿದ್ದ ದೂರಿನ ಆಧಾರದಲ್ಲಿ ಬೆಂಗಳೂರು ನಗರ-1 ವಿಭಾಗದ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಳೇಶ್‌ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು ಮತ್ತು ಅಧಿಕಾರಿಗಳು, ದಾಳೇಶ್ ಮತ್ತು ಅವರ ಆಪ್ತರಿಗೆ …

Read More »

ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ: ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಯುವಕನ ಕೊಲೆ

ಬೆಂಗಳೂರು: ದೊಣ್ಣೆಯಿಂದ ಹೊಡೆದು, ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಯುವಕನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಗೊಲ್ಲಹಳ್ಳಿಗುಟ್ಟೆ ಮೈದಾನದ ಬಳಿ ನಡೆದಿದೆ.ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 23 ವರ್ಷದ ಯುವಕನನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಲೆಯ ಮೇಲೆ ಇಟ್ಟಿಗೆ ಎತ್ತಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಯುವಕನ ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …

Read More »

ಆನೇಕಲ್: ಸ್ಪ್ರೇ ಹೊಡೆದು ಯುವಕನ ಅಪಹರಣ

ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಪೂರು ಬಳಿ ಭಾನುವಾರ ಕಾರನ್ನು ಅಡ್ಡಗಟ್ಟಿ ಯುವಕನೊಬ್ಬನನ್ನು ಅಪಹರಣ ಮಾಡಲಾಗಿದೆ. ಹೊನ್ನಕಳಶಾಪುರ ಗೋಪಾಲ್ ಅಪಹರಣ ಆದವರು. ಗೋಪಾಲ್ ಮತ್ತು ಅವರ ಸ್ನೇಹಿತ ಸತೀಶ್ ಅತ್ತಿಬೆಲೆಯಿಂದ ಆನೇಕಲ್‌ನತ್ತ ಬರುವಾಗ ಕರ್ಪೂರ ಬಳಿ ಕಾರಿಗೆ ದುಷ್ಕರ್ಮಿಗಳು ತಮ್ಮ ವಾಹನದಿಂದ ಡಿಕ್ಕಿ ಹೊಡೆದು ಗೋಪಾಲ್ ಮುಖಕ್ಕೆ ಸ್ಪ್ರೇ ಹಾಕಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗೋಪಾಲ್ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದ್ದು, …

Read More »

ಯುವಕನನ್ನು ಅಪಹರಿಸಿ ಹಲ್ಲೆ

ಕಾಸರಗೋಡು: ಕಾಂಞಂಗಾಡ್‌ ಕೊಳವಯಲ್‌ ಟಿ.ಕೆ.ಹೌಸ್‌ನ ಟಿ.ಎ.ಸಹದಿ(37) ಅವರನ್ನು ಕಾರಿನಲ್ಲಿ ಅಪಹರಿಸಿ ಕಾಳುಮೆಣಸು ಸ್ಪ್ರೆ ಮಾಡಿದ ಬಳಿಕ ಹಲ್ಲೆಗೈದು ನಗ್ನ ಫೋಟೋ ತೆಗೆದು ಸೋಶ್ಯಲ್‌ ಮೀಡಿಯಾದಲ್ಲಿ ಪ್ರಚಾರಪಡಿಸುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೊಳವಯಲ್‌ ನಿವಾಸಿ ಅಫ್ಸಲ್‌ ಹಾಗೂ ಗುರುತು ಹಚ್ಚಬಹುದಾದ ಇತರ ನಾಲ್ವರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ರಾತ್ರಿ ಇಕ್ಬಾಲ್‌ ಜಂಕ್ಷನ್‌ನಿಂದ ಅಪಹರಿಸಿ ಉಪ್ಪಳಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ. ಘಟನೆ ನಡೆದಿರುವುದು ಮಂಜೇಶ್ವರ …

Read More »

ಮಟ್ಕಾ ಬುಕಿಂಗ್‌: ಪ್ರಕರಣ ದಾಖಲು

ಯಾದಗಿರಿ: ಸಾರ್ವಜನಿಕರಿಂದ ಮಟ್ಕಾ ಬುಕಿಂಗ್‌ ಮಾಡಿಕೊಳ್ಳುವ ವೇಳೆ ದಾಳಿ ನಡೆಸಿದ ಪೊಲೀಸ್‌ ₹350 ನಗದು, ಬುಕಿಂಗ್‌ ಚೀಟಿ ವಶಕ್ಕೆ ಪಡೆದು ಬುಕಿ ವಿರುದ್ಧ ಶುಕ್ರವಾರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಜಿಲ್ಲೆಯ ಶಹಪುರ ತಾಲ್ಲೂಕಿನ ಹಳಿಸಗರ ನಿವಾಸಿ ಸುಮಿತ್ರಪ್ಪ ನಾಗಪ್ಪ ಕುರುಕುಂದಿ ಎಂದು ಗುರುತಿಸಲಾಗಿದೆ. ನಗರದ ಹೊಸಳ್ಳಿ ಕ್ರಾಸ್‌ ಹತ್ತಿರ ವ್ಯಕ್ತಿಯೊಬ್ಬ ಮಟ್ಕಾ ನಂಬರ್‌ ಬರೆದುಕೊಳ್ಳುತ್ತಿರುವ ಖಚಿತ ಮಾಹಿತಿಯಂತೆ ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜನಗೌಡ ದಾಳಿ …

Read More »

ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಕ್ಕೆ ತಲ್ವಾರ್ ನಿಂದ ಕೊಲೆ ಯತ್ನ

ಉಡುಪಿ: ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಕ್ಕೆ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಲಾಗಿದೆ. ಕಾರ್ಕಳ ನೀರೆ ಗ್ರಾಮದ ಬೈಲೂರು ಪಂಚಾಯಿತಿ ಕಟ್ಟಡದ ಎದುರು ಮಾರ್ಚ್ 6ರಂದು ರಾತ್ರಿ ಘಟನೆ ನಡೆದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಎಂಬುವರು ಸಾಕ್ಷ್ಯ ಹೇಳಿದ್ದರು. ಈ ಕಾರಣಕ್ಕೆ ಪ್ರಕರಣದ ಆರೋಪಿ ಗಣೇಶ ಪೂಜಾರಿ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ …

Read More »

ಹಾರೋಹಳ್ಳಿ | ಮನೆಗಳ್ಳನ ಬಂಧನ: 30 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ

ಡಿಸೆಂಬರ್‌ನಲ್ಲಿ ಚಿಕ್ಕೆರೆದೊಡ್ಡಿ ಆದಿಶಕ್ತಿ ಬಡಾವಣೆಯ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ಹಾರೋಹಳ್ಳಿ ಪೊಲೀಸರು ಆತನಿಂದ ₹4 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ. 2025ರ ಡಿ.13ರಂದು ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನ ನಡೆದಿತ್ತು. ಮನೆಯ ಬೀಗ ಒಡೆದು ಕಳ್ಳತನ ಮಾಡಲಾಗಿತ್ತು. ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Read More »

ಅಧಿಕಾರಿಗೆ ನಿಂದಿಸಿದ ಪಾನಮತ್ತನ ವಿರುದ್ಧ ದೂರು

ಕೊಳ್ಳೇಗಾಲ:ಪಾನಮತ್ತನಾಗಿ ಕರ್ತವ್ಯದಲ್ಲಿದ್ದ ಅಧಿಕಾರಿಯನ್ನು ನಿಂದಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದ್ದಾನೆ ಎಂದು ಆ ರೋಪಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವ್ಯಕ್ತಿಯೊಬ್ಬನ ವಿರುದ್ಧ ಶುಕ್ರವಾರ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ತಾಲೂಕಿನ ಮುಳ್ಳೂರು ಗ್ರಾಮದ ನಿವಾಸಿ ಮಂಟೇಲಿಂಗಶೆಟ್ಟಿ ವಿರುದ್ಧ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ದೂರು ನೀಡಿದ್ದಾರೆ. ತಾಲೂಕು ಪಂಚಾಯಿತಿ ಕಚೇರಿಗೆ ಮದ್ಯಪಾನ ಮಾಡಿಕೊಂಡು ಬಂದು ಕಾರ್ಯನಿರ್ವಹಣಾಧಿಕಾರಿ ಕೊಠಡಿಗೆ ಏಕಾಏಕಿ ಒಳಪ್ರವೇಶಿಸಿ ಏಕವಚನದಲ್ಲಿ ನಿಂದಿಸಿ ಕಚೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. …

Read More »

ಶೂ ಹಾಕದೆ ಬಂದ ವಿದ್ಯಾರ್ಥಿಗಳಿಗೆ ಚಪ್ಪಲಿ ಹಾರ: ಆಂಧ್ರದ ಖಾಸಗಿ ಶಾಲೆ ವಿರುದ್ಧ ಆಕ್ರೋಶ

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉಯ್ಯೂರು ಪಟ್ಟಣದಲ್ಲಿ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಶೂ ಧರಿಸಿ ಬಾರದ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿಗಳ ಕುತ್ತಿಗೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ವಿಜಯಸಾಯಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಾರ್ಚ್ 6ರಂದು ನಡೆದಿದ್ದು, ಆ ದಿನ 10ನೇ ತರಗತಿಯ ಸುಮಾರು 15 ವಿದ್ಯಾರ್ಥಿಗಳು ಶೂ ಧರಿಸದೆ ಶಾಲೆಗೆ ಬಂದಿದ್ದರು. ಇದರಿಂದ ಕೋಪಗೊಂಡ ಪ್ರಾಂಶುಪಾಲರು …

Read More »

ಹೋಲಿ ಲ್ಯಾಂಡ್ ಪ್ರವಾಸ ವಂಚನೆ: ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್!

ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನಗರದ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸುರೇಶ್ ಚಂದ್ರ (42) ಅವರನ್ನು ಬಂಧಿಸಿದ್ದಾರೆ. ಆರೋಪಿ ಕಳೆದ ನಾಲ್ಕು ವರ್ಷಗಳಿಂದ ಸರಿಯಾದ ವಿಳಾಸ ಮರೆಮಾಡಿ ತಲೆಮರೆಸಿಕೊಂಡಿದ್ದನಾದರೂ, ಪೊಲೀಸರು NBW ಮೂಲಕ ಬಂಧನೆ ಸಾಧಿಸಿದ್ದಾರೆ. ಹುಡುಕಾಟದ ವೇಳೆ ಪತ್ತೆಯಾಗಿರುವಂತೆ, ಸುರೇಶ್ ಚಂದ್ರ ಹೋಲಿ ಲ್ಯಾಂಡ್ ಪ್ರವಾಸದ ಹೆಸರಲ್ಲಿ ಇಸ್ರೇಲ್, ಪ್ಯಾಲೇಸ್ತೀನ್, ಜೋರ್ಡಾನ್, ಈಜಿಪ್ಟ್ ದೇಶಗಳಿಗೆ ಪ್ರವಾಸ ನೀಡುವುದಾಗಿ ಭರವಸೆ ನೀಡಿ ಜನರಿಂದ ಹಣ ವಂಚಿಸಿದ್ದಾನೆ. ಈ ಪ್ರಕರಣದಲ್ಲಿ …

Read More »