ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಘಟಕವೊಂದರಲ್ಲಿ ಶನಿವಾರ ಮುಂಜಾನೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೌರಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.ಭಿವಂಡಿ ಪಟ್ಟಣದ ಕಲ್ಯಾಣ್ ನಾಕಾ ಸಮೀಪವಿರುವ ‘ಖೋಕಾ ಕಾಂಪೌಂಡ್’ ಆವರಣದಲ್ಲಿ ಮಧ್ಯರಾತ್ರಿ ಕಳೆದ ‘ನಂತರ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ನಾಗರಿಕ ವಿಪತ್ತು ನಿರ್ವಹಣ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಮಾಹಿತಿ ನೀಡಿದ್ದಾರೆ. ಬೆಂಕಿಯ ಕೆನ್ನಾಲಿಗೆಯನ್ನು ನಿಯಂತ್ರಿಸಲು …
Read More »ಹೊಸನಗರ | ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್
ಹೊಸನಗರ: ತಾಲ್ಲೂಕಿನ ಹುಲಿಕಲ್ ಘಾಟಿಯ ಮುಖ್ಯ ರಸ್ತೆಯ ಬಾಳೇಬರೆ ಫಾಲ್ಸ್ ಬಳಿ ಶನಿವಾರ ಮಧ್ಯಾಹ್ನ ದುರ್ಗಾಂಬ ಬಸ್ ಏಕಾಏಕಿಯಾಗಿ ಬೆಂಕಿಗಾಹುತಿಯಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಕುಂದಾಪುರ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ ಶನಿವಾರ ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿದೆ. ಮಾರ್ಗ ಮಧ್ಯೆ ಹುಲಿಕಲ್ ಘಾಟಿಯಲ್ಲಿ ಬಸ್‌ನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್ ನಿಲ್ಲಿಸಲಾಗಿದ್ದು, ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕ್ಷಣಾರ್ಧದಲ್ಲಿಯೇ ಬೆಂಕಿ …
Read More »ಏಕಾಏಕಿ ಫ್ರಿಜ್ ಬ್ಲಾಸ್ಟ್!- ಇಡೀ ಮನೆ ಸುಟ್ಟು ಭಸ್ಮ
ರಾಯಚೂರು: ಮನೆಯಲ್ಲಿದ್ದ ಫ್ರಿಜ್ ಒಂದು ಏಕಾಏಕಿ ಸ್ಫೋಟಗೊಂಡಿದ್ದು ಇಡೀ ಮನೆ ಹೊತ್ತಿ ಉರಿದ ಶಾಕಿಂಗ್ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ಕ್ ಎಂಬುವರ ಮನೆಯಲ್ಲಿ ಫ್ರಿಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಜನಾಯ್ಕ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಫ್ರಿಜ್ ಏಕಾಏಕಿ ಸ್ಪೋಟಗೊಂಡಿದೆ. ಇದರಿಂದಾಗಿ ಮನೆಯ ಗೋಡೆ …
Read More »ಅರೆಕಾಲಿಕ ಉದ್ಯೋಗ ಹೆಸರಲ್ಲಿ ವಂಚನೆ: ಕಂಪೆನಿ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಅರೆಕಾಲಿಕ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ವೆಕ್ಸಾನ್ ಕಂಪೆನಿ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವೆಕ್ಸಾನ್ ಕಂಪೆನಿಯ ಸಂಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೆವಾಲೆ, ಸುನಿಲ್ ಸಾವಂತ್, ಅನನ್ ಅಹೈರ್, ಮಂಗಳೂರಿನ ಶಾಖೆಯ ನೌಕರರಾದ ಪಲ್ಲವಿ, ಅಂಜಲಿ, ನವ್ಯ, ನಿವಿಶ್, ಜಯಶ್ರೀ, ಜುನೈದ್ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರೆಯನ್ನು ಜನವರಿಯಲ್ಲಿ ನವ್ಯಾ ಎಂಬಾಕೆ ಸಂಪರ್ಕಿಸಿ, ತಾನು …
Read More »ಅಕ್ರಮ ಮದ್ಯ ಮಾರಾಟ: ಮನೆಗೆ ದಾಳಿ
ಸುಳ್ಯ: ಕಲ್ಮಡ್ಕ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮನೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದಾರೆ. ಈ ವೇಳೆ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆ ತಪ್ಪಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಮತ್ತೋರ್ವ ಮಹಿಳೆಯನ್ನು ವಿಚಾರಿಸಿದಾಗ, ತನ್ನ ತಂಗಿ ಸುಲೋಚನಾ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ವಿಷಯ ತಿಳಿಸಿದರು. ಮನೆಯ ಕೊಟ್ಟಿಗೆಯಲ್ಲಿ ಅಂದಾಜು 3,350 ರೂ. ಮೌಲ್ಯದ 6.030 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದ್ದು, ಅದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬೆಳ್ಳಾರೆ …
Read More »ಅಕ್ರಮ ಮರಳು ಸಹಿತ ಟಿಪ್ಪರ್ ವಶ; ಚಾಲಕ ಪರಾರಿ
ಮಂಗಳೂರು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೇರಳ ನೋಂದಣಿಯ ಟಿಪ್ಪರನ್ನು ಕಂಕನಾಡಿ ನಗರ ಪೊಲೀಸರು ಬೆನ್ನಟ್ಟಿದ್ದು, ನೇತ್ರಾವತಿ ಸೇತುವೆಯ ಬಳಿಯ ಆಡಂ ಕುದ್ರು ಎಂಬಲ್ಲಿ ಚಾಲಕ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಿದ್ದು, ಅಂದಾಜು 5 ಸಾವಿರ ರೂ.ಮೌಲ್ಯದ ಮರಳು ಮತ್ತು ಸುಮಾರು 3 ಲಕ್ಷ ರೂ. ಮೌಲ್ಯದ ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ …
Read More »ಅಕ್ರಮ ಜಿಂಕೆ ಮಾಂಸ ಮಾರಾಟ; ಆರೋಪಿಗಳು ಪರಾರಿ, ವಸ್ತುಗಳು ವಶ
ಹುಣಸೂರು: ಇನೊವಾ ಕಾರಿನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿರುವುದು ನಾಗರಹೊಳೆ ಉದ್ಯಾನದಂಚಿನಲ್ಲಿ ಅಕ್ಕಮಾಳ ರಸ್ತೆಯಲ್ಲಿ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಕಾಡು ತೂಸುಗಳು, ಟಾಚ್೯, 1 ಮೊಬೈಲ್ ಪತ್ತೆಯಾಗಿದೆ. ನಾಗರಹೊಳೆ ಬಫರ್ ಜೋನ್ ನಲ್ಲಿ ಫೆ.26 ರಂದು ಮುಂಜಾನೆ ಸಿಬ್ಬಂದಿಗಳು ಗಸ್ತಿನಲ್ಲಿದ್ದ ವೇಳೆ ಮಾವುಕಲ್ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಸಿಂಗನೂರು ಗಸ್ತಿನ ದೇವಮಚ್ಚಿ ಅಂಗನವಾಡಿ ಕಡೆ ಇನೋವಾ ಕಾರು ಗಸ್ತು ಸಿಬ್ಬಂದಿಗಳನ್ನು ಕಂಡು ವೇಗವಾಗಿ ಹೋಗಿದೆ. ಹಿರಿಯ …
Read More »₹40 ಸಾವಿರ ಲಂಚ; ಎಂಜಿನಿಯರ್ ಬಂಧನ
ಹಾವೇರಿ: ‘ಕಾಮಗಾರಿ ಪೂರ್ಣಗೊಂಡ ಬಗ್ಗೆ ಪರಿಶೀಲನಾ ವರದಿ ನೀಡಲು ₹ 40 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಹೆಸ್ಕಾಂ ಸಹಾಯಕ ಎಂಜಿನಿಯರ್ ಬಿ.ಮಿಥುನಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ‘ಎಲೆಕ್ಟ್ರಿಕ್ ಗುತ್ತಿಗೆದಾರ ವಿನೋದಕುಮಾರ ನೀಡಿದ್ದರು. ದೂರು ಆಧರಿಸಿ ದಾಳಿ ನಡೆಸಿದ್ದು, ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಲಂಚ ಪಡೆಯುವಾಗಪುರಾವೆ ಸಹಿತ ಬಂಧಿಸಲಾಯಿತು’ ಎಂದು ಲೋಕಾಯುಕ್ತ ಡಿವೈಎಸ್ಪಿ ಸಿ. ಮಧುಸೂದನ್ ತಿಳಿಸಿದರು.
Read More »ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು
12 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ತಾಂಡಾದ ಉಮೇಶ ರತ್ನಪ್ಪ ಲಮಾಣಿ (30) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 60,500 ದಂಡವನ್ನು ನಗರದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ಪೊಕ್ಸೊ ಕೋರ್ಟ್ ವಿಧಿಸಿದೆ. ನ್ಯಾಯಾಧೀಶ ರಾಜಕುಮಾರ ಸಿ. ಅವರು ಆದೇಶ ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೊಕ್ಸೊ) ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣ …
Read More »ಬೆಂಗಳೂರಲ್ಲಿ ಘೋರ ದುರಂತ: ನೀರಿನ ಸಂಪು ಸ್ವಚ್ಛಗೊಳಿಸಲು ಇಳಿದ ಮೂವರು ಉಸಿರುಗಟ್ಟಿ ಸಾವು
ನಗರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ನೀರಿನ ಸಂಪು ಸ್ವಚ್ಥಗೊಳಿಸೋದಕ್ಕೆ ಇಳಿದಂತ ಸಂದರ್ಭದಲ್ಲಿ ಮೂವರು ಉಸಿರುಗಟ್ಟಿ ಅಸ್ವಸ್ಥಗೊಂಡು, ಆ ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿರುವಂತ ಘಟನೆ ವೈಟ್ ಫೀಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೀರಿನ ಸಂಪು ಸ್ವಚ್ಛಗೊಳಿಸೋದಕ್ಕೆ ಮಾಲೀಕರಾದಂತ ಮುನಿಶಾಮಪ್ಪ(67) ಎಂಬವರು ಇಳಿದಿದ್ದರು. ಅವರು ಸ್ವಚ್ಛಗೊಳಿಸಲು ತಂದಂತ ಕೆಲವು ರಾಸಾಯನಿಕದಿಂದ ಉಸಿರುಗಟ್ಟಿ ಸಂಪಿನೊಳಗೆ ಮೂರ್ಛೆ ಬಿದ್ದಿದ್ದರು. ಇದನ್ನು ಗಮನಿಸಿದಂತ ರುದ್ರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





