ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಚಿಕ್ಕಪೇಟೆಯ ಕುಂಬಾರಪೇಟೆಯಲ್ಲಿ ಬುಧವಾರ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡ ದಟ್ಟ ಹೊಗೆಯಿಂದ ಆವೃತವಾಗಿತ್ತು. ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಹಾರ್ಡ್ವೇರ್ ಗೋಡೌನ್ ಹಾಗೂ ಅಂಗಡಿ ಮಳಿಗೆಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಜ್ವಾಲೆ ವ್ಯಾಪಿಸಿದೆ. ಇಂದು ಬೆಳಗ್ಗೆ 7 :30 ರ ಸುಮಾರಿಗೆ ವೇಳೆ ಘಟನೆ ನಡೆದಿದೆ. ಕಟ್ಟಡದಲ್ಲಿದ್ದ ಹಲವು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ. …
Read More »ಪರಿಶಿಷ್ಟ ಜಾತಿ ಮಹಿಳೆಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಪ್ರಕರಣ ದಾಖಲು
ಬೆಂಗಳೂರು ಮಾಗಡಿ ರಸ್ತೆಯ ಅಂದ್ರಳ್ಳಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ರೋಜಾ ಅವರು ತಾಲ್ಲೂಕಿನ ಯಡಿಯೂರು ಹೋಬಳಿ ತಿಗಳರಪಾಳ್ಯ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಮಾರಮ್ಮ ದೇವಿ ಹಬ್ಬಕ್ಕೆಂದು ಬಂದಿದ್ದರು. ಸೋಮವಾರ ರಾತ್ರಿ ಗ್ರಾಮದಲ್ಲಿರುವ ವೆಂಕಟರಮಣ ಮೂಡಲಗಿರಿ ದೇವಾಲಯಕ್ಕೆ ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಹೋಗಿದ್ದಾರೆ. ದೇವಸ್ಥಾನದ ಒಳಗಡೆ ಹೋದಾಗ ಅರ್ಚಕ ಹನುಮಯ್ಯ, ಗ್ರಾಮದ ಮಹಿಳೆ ಜಯಲಕ್ಷ್ಮಮ್ಮ, ಶ್ರೀನಿವಾಸ್ ಹಾಗೂ ಹದಿನಾರು ಮಂದಿ ಸೇರಿಕೊಂಡು, …
Read More »ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನ : ಏಳು ಮಂದಿ ದುರ್ಮರಣ
ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಪೈಲೆಟ್ ಸೇರಿದಂತೆ ಏಳು ಮಂದಿ ದುರ್ಮರಣಕ್ಕೀಡಾದ ಘಟನೆಯು ಛತ್ರ ಜಿಲ್ಲೆಯ ಸಿಮಾರಿಯ ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಾಡಾರ್ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ. ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7:10ರ ಸುಮಾರಿಗೆ ಟೇಕಾಫ್ ಆದ ಆಂಬುಲೆನ್ಸ್ 20 ನಿಮಿಷಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ವಿಮಾನದಲ್ಲಿ ರೋಗಿ, ವೈದ್ಯರು, ನರ್ಸ್ ಹಾಗೂ …
Read More »ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ವಸತಿ ಶಾಲೆಯಲ್ಲೇ `PUC ವಿದ್ಯಾರ್ಥಿನಿ’ ಗರ್ಭಿಣಿ !
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಶಾಲೆಯಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಫೆಬ್ರವರಿ 19 ರಂದು ವಿದ್ಯಾರ್ಥಿನಿಗೆ ಹಠಾತ್ ರಕ್ತಸ್ರಾವ ಉಂಟಾಗಿತ್ತು. ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿದೆ. ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕುಗೊಳಿಸಿದ …
Read More »ನಾವ್ ಯಾರ್ ಗೊತ್ತಾ? ನಿನ್ನ ತಲೆ ಒಡಿತಿವಿ.. ಯುತ್ ಕಾಂಗ್ರೆಸ್ ಉಪಾಧ್ಯಕ್ಷೆ ಮೇಲೆ ಲಾಂಗ್ ನಿಂದ ಹಲ್ಲೆಗೆ ಯತ್ನ!
ಬೆಂಗಳೂರು: ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯಾ ಆರ್.ಕೆ ಮೇಲೆ ಲಾಂಗ್ ಮತ್ತು ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಭಾನುವಾರ ಸಂಜೆ ಸುಮಾರು 7:30ರ ವೇಳೆಗೆ ದಿವ್ಯಾ ಅವರು ತಮ್ಮ ಮಗನ ಸ್ನೇಹಿತರನ್ನು ಮನೆಗೆ ಬಿಡಲು ತಲಕಾವೇರಿ ಬಡಾವಣೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ …
Read More »ಬಿಲ್ ಕಲೆಕ್ಟರ್ ಬಸವರಾಜ, ಎಸ್ಡಿಎ ಅನ್ನಪೂರ್ಣ ಅಮಾನತು
ಧಾರವಾಡ: ಚುನಾವಣೆ (ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ) ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ಧಾರೆ ಎಂದು ಹು-ಧಾ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಬಸವರಾಜ ನಿಗದಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಎಸ್ಡಿಎ ಅನ್ನಪೂರ್ಣ ಎಸ್.ಸವದಿ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೂಚನೆ ನೀಡಿದರೂ ಮತಗಟ್ಟೆ ಅಧಿಕಾರಿಗಳಾದ ಬಸವರಾಜ ನಿಗದಿ (ಭಾಗ ಸಂಖ್ಯೆ 137) ಮತ್ತು ಅನ್ನಪೂರ್ಣ ಎಸ್. ಸವದಿ (ಭಾಗ ಸಂಖ್ಯೆ 160) ಅವರು …
Read More »ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ಯುವಕ : ಸಾಲ ತೀರಿಸಲು ವೃದ್ದೆಯ ಬರ್ಬರ ಹತ್ಯೆ, ಆರೋಪಿ ಅರೆಸ್ಟ್!
ದಾವಣಗೆರೆ : ಎಂಕಾಂ ಪದವಿ ವ್ಯಾಸಂಗ ಮಾಡಿ ಸುಂದರ ಬದುಕು ಕಟ್ಟಿಕೊಳ್ಳಬೇಕಿದ್ದ ಯುವಕನೋರ್ವ ಬೆಟ್ಟಿಂಗ್ನಲ್ಲಿ ಹಣವನ್ನು ಕಳೆದುಕೊಂಡು, ನಂತರ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಲ್ಲದೇ, ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಬಂಧನಕ್ಕೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ನಿವಾಸಿ ಅಭಿಷೇಕ್(23) ಕೊಲೆ ಆರೋಪಿ. ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಆರುಂಡಿ ಗ್ರಾಮದಲ್ಲಿ ಫೆ. 2 ರಂದು ಒಂಟಿ ಮನೆಯಲ್ಲಿದ್ದ 64 ವರ್ಷದ ಕಮಲಮ್ಮ …
Read More »ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!
ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ. ಕೆಂಗೇರಿಯ ನಾಗದೇವನಹಳ್ಳಿಯ ವಿನಾಯಕ ಲೇಔಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.ಕಾರು ಚಾಲಕ ನವೀನ್ ಎಂಬಾತನಿಂದ ನಂಜುಂಡಪ್ಪ (65) ಎನ್ನುವ ವೃದ್ಧನ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಕಾರಿನಲ್ಲಿ ಬಂದು ಚಾಲಕ ನವೀನ್ ಹಾರ್ನ್ ಮಾಡಿದ್ದಾನೆ. ಪಕ್ಕದಲ್ಲಿ ಅಷ್ಟು ದೊಡ್ಡ ರಸ್ತೆ ಇದೆ ಹೋಗಿ ಅಂತ ನಂಜುಂಡಪ್ಪ ಹೇಳಿದ್ದಾರೆ. ರೊಚ್ಚಿಗೆದ್ದು ಅವಾಚ್ಯ ಶಬ್ದದಿಂದ ಬೈದು ನಂಜುಂಡಪ್ಪ ಮೇಲೆ …
Read More »ಕಲ್ಸಂಕ ಸರ್ಕಲ್ನಲ್ಲಿ ಹೈಡ್ರಾಮಾ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!
ಉಡುಪಿ ನಗರದ ಜನನಿಬಿಡ ಪ್ರದೇಶವಾದ ಕಲ್ಸಂಕ ಸರ್ಕಲ್ನಲ್ಲಿ ಭಾನುವಾರ ಸಂಜೆ ಅಪರಿಚಿತ ವ್ಯಕ್ತಿಯೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಗದಗ ಮೂಲದ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಟಲಿ ಹಿಡಿದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕೂಗಾಡಿ ಆತಂಕ ಸೃಷ್ಟಿಸಿದ್ದನು. ಒಮ್ಮೆ ಆತನಿಂದ ಪೆಟ್ರೋಲ್ ಕಸಿದುಕೊಂಡರೂ, ಮತ್ತೆ ಬಾಟಲಿ ಹಿಡಿದು ಬಂದಿದ್ದನು. ತಕ್ಷಣ …
Read More »ಸರ್ಕಾರಿ ನೌಕರಿ ಆಮಿಷವೊಡ್ಡಿ ₹ 23.75 ಲಕ್ಷ ವಂಚನೆ
ಕಲಬುರಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು. ‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





