ಕಲಬುರಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು. ‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ ಸಾಲವಾಗಿ ಪಡೆದಿದ್ದರು. ವರ್ಷದ ಬಳಿಕವೂ ಅದನ್ನು ಮರಳಿಸಿರಲಿಲ್ಲ. ಈ ನಡುವೆ ನಮ್ಮ ತಂದೆ 2021ರ ಮೇ ತಿಂಗಳಲ್ಲಿ ನಮ್ಮ ತಂದೆ ತೀರಿಕೊಂಡರು. ನಂತರವೂ ನನ್ನ ತಂಗಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ನನ್ನ ಹಾಗೂ ತಾಯಿಯಿಂದ ಆಗಾಗ ಹಣ ಪಡೆದಿದ್ದರು. 2020ರಿಂದ 2024ರ ಫೆಬ್ರುವರಿ 15ರ ತನಕ ಹಂತಹಂತವಾಗಿ ₹ 24.25 ಲಕ್ಷ ಪಡೆದಿದ್ದಾರೆ. ಇದರಲ್ಲಿ 2025ರ ಏಪ್ರಿಲ್ 11ರಂದು ₹ 50 ಸಾವಿರ ಕೊಟ್ಟಿದ್ದಾರೆ. ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ’ ಎಂದು ದಾಮು ರಾಠೋಡ ಪುತ್ರಿ ಪ್ರಿಯಾಂಕಾ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

