Breaking News

BigTv News

ಕಾರಿನ ಮೇಲೆ ಮಗುಚಿ ಬಿದ್ದ ಲಾರಿ: ಟೆಕ್ಕಿ ದುರ್ಮರಣ

ಚಿತ್ತೂರು: ಚಲಿಸುತ್ತಿದ್ದ ಕಾರಿನ ಮೇಲೆ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಟೆಕ್ಕಿಯೋರ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರಿನ ಮೇಲೆ ಲಾರಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಟೆಕ್ಕಿ ಸಾವನ್ನಪ್ಪಿದ್ದಾರೆ. ಚಿತ್ತೂರು-ಬೆಂಗಳೂರು ಹೈವೇಯಲ್ಲಿ ಈ ಘಟನೆ ನಡೆದಿದೆ. ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಡಿ ಅನುದೀಪಕ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ …

Read More »

₹40,000 ಲಂಚಕ್ಕೆ ಬೇಡಿಕೆ; ಕೆಎಎಸ್ ಅಧಿಕಾರಿ ಸೇರಿ ಇಬ್ಬರ ಬಂಧನ

ಶಿವಮೊಗ್ಗ: ಕಚೇರಿಗೆ ಬಾಡಿಗೆ ಬಿಟ್ಡಿದ್ದ ವಾಹನದ ಬಾಡಿಗೆ ಹಣ ನೀಡಲು ₹40,000 ಲಂಚ ಪಡೆಯುವಾಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ -206 ರ ವಿಶೇಷ ಭೂಸ್ವಾಧೀನಾಧಿಕಾರಿಯೂ ಆದ ಹಿರಿಯ ಕೆಎಎಸ್ ಅಧಿಕಾರಿ ಸಿದ್ಧಲಿಂಗ ರೆಡ್ಡಿ ಹಾಗೂ ಮಧ್ಯವರ್ತಿ, ಹೊಳಲೂರು ಗ್ರಾಮ ಪಂಚಾಯ್ತಿ ಗ್ರಾಮ ಸಹಾಯಕ ರಾಜೇಶ್ ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಓತಿಘಟ್ಟ ಗ್ರಾಮದ ಚಾಲಕ ವಿ.ಕೇಶವಮೂರ್ತಿ ತಮ್ಮ ಮಾರುತಿ ಎರ್ಟಿಗಾ ಕಾರನ್ನು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಕಚೇರಿಗೆ …

Read More »

ನೆಲಮಂಗಲ ಬಳಿ ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು

ಬೆಂಗಳೂರು: ನೆಲಮಂಗಲ ಜಿಂದಾಲ್ ಬಳಿ KSRTC ಬಸ್​​ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಹಾಗೂ ಲಲಿತ್​(22) ಮೃತ ದುರ್ದೈವಿಗಳಾಗಿದ್ದಾರೆ. ಸಾವಿಗೀಡಾದವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಹರ್ಷಿತ್​​ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ …

Read More »

ಹನೂರು: KSRTC ಬಸ್‌ಗಳ ಮುಖಾಮುಖಿ ಡಿಕ್ಕಿ

ಹನೂರು: ಎಲ್ಲೆಮಾಳ ಬಳಿ ಶನಿವಾರ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳು ಮುಖಮುಖಿ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಹದೇಶ್ವರ ಬೆಟ್ಟದಲ್ಲಿಯೂ ಈಚೆಗೆ ಬಸ್‌ಗಳ ಮುಖಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದರು. ಶನಿವಾರ ಮೈಸೂರು ಡಿಪೋಗೆ ಸೇರಿದ ಬಸ್ ಮತ್ತು ಕೊಳ್ಳೇಗಾಲ ಡಿಪೋ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್‌ಗಳು ಜಖಂಗೊಂಡಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಕೆಲಕಾಲ ಪರದಾಡಿದರು. ಹನೂರು ಪಟ್ಟಣದ ಹೊರವಲಯದಲ್ಲಿ ಶನಿವಾರ …

Read More »

ಸಿಎಂ ಹೆಸರಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ: ಎಫ್‌ಐಆರ್ ದಾಖಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ ಸೃಷ್ಟಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆ ಪೊಲೀಸರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ(ಆಡಳಿತ) ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಧಿಕೃತ ಸಂಖ್ಯೆ ದಿನಾಂಕವಿಲ್ಲದ ವರ್ಗಾವಣೆಯ ಟಿಪ್ಪಣಿ ಸೃಷ್ಟಿಸಿ ಹರಿಬಿಡಲಾಗಿದೆ. ಮುಖ್ಯಮಂತ್ರಿ ಸಚಿವಾಲಯದ ಇ- ತಂತ್ರಾಂಶದಲ್ಲಿ ಅದು …

Read More »

ಮಾಗಡಿ: ಲಾರಿ ಮೇಲೆ ಉರುಳಿದ ವಿದ್ಯುತ್ ಕಂಬ

ಪಟ್ಟಣದ ಗೌರಮ್ಮನ ಕೆರೆ ಮುಖ್ಯ ರಸ್ತೆಯಲ್ಲಿ ದೊಡ್ಡ ಲಾರಿಯೊಂದು ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಲಾರಿ ಮೇಲೆ ಬಿದ್ದಿದೆ. ಪಟ್ಟಣದ ಕೆಂಪೇಗೌಡ ಮುಖ್ಯ ರಸ್ತೆಯಲ್ಲಿ ಹಲವು ದಿನಗಳಿಂದ ರಸ್ತೆ ಕಾಮಗಾರಿಗಾಗಿ ಅಗೆಯಲಾಗಿತ್ತು. ಈಗ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಗೌರಮ್ಮನ ಕೆರೆ ಚಿಕ್ಕ ರಸ್ತೆಯಲ್ಲಿ ಸಂಚಾರ ಮಾಡಬೇಕಾಗಿತ್ತು. ಶನಿವಾರ ರಾತ್ರಿ ಮೂಟೆ ತುಂಬಿದ್ದ ದೊಡ್ಡ ಲಾರಿಯೊಂದು ಚಿಕ್ಕ ರಸ್ತೆಯಲ್ಲಿ ಸಂಚಾರ ಮಾಡಿದೆ. ಆಗ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ …

Read More »

ವಿದ್ಯುತ್‌ ಸ್ಪರ್ಶಿಸಿ ಕಬ್ಬಿನ ಲಾರಿ ಭಸ್ಮ

ಮಂಡ್ಯ: ಲಾರಿಯಲ್ಲಿ ಕಬ್ಬಿನ ತರಗು ತುಂಬಿಕೊಂಡು ಬರುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿ, ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಸದ್ಯಕ್ಕೆ ಲಾರಿ ಚಾಲಕ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿಯು ಕೆರಗೋಡು ಮುಖ್ಯ ರಸ್ತೆಯಲ್ಲಿ ಮಂಡ್ಯ ಕಡೆಗೆ ಬರುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ತಂತಿ ಸ್ಪರ್ಶವಾಗಿದೆ. ಇದರ ಪರಿಣಾಮ ಲಾರಿ ಹಾಗೂ ಕಬ್ಬಿನ ತರಗು ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುವಷ್ಟರಲ್ಲಿ ಅಗ್ನಿ ಶಾಮಕ ಸಿಬ್ಬಂದಿ …

Read More »

ಮುಂಬೈ ಮೆಟ್ರೊ: ಗರ್ಡರ್‌ನ ಸ್ಲ್ಯಾಬ್‌ ಬಿದ್ದು ವ್ಯಕ್ತಿ ಸಾವು

ಇಲ್ಲಿನ ಮುಲುಂಡ್‌ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೊ ರೈಲು ಮಾರ್ಗದ 4ರ ಗರ್ಡರ್‌ನ ಸ್ಲ್ಯಾಬ್‌ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾಮಧಾನ್‌ ಯಾದವ್‌ ಮೃತರು. ರಾಜ್‌ಕುಮಾರ್‌ ಇಂದ್ರಜಿತ್‌ ಯಾದವ್‌ (45), ಮಹೇಂದ್ರ ಪ್ರತಾಪ್‌ ಯಾದವ್‌ (52) ಹಾಗೂ ದೀಪಾ ರುಹಿಯಾ (40) ಗಾಯಗೊಂಡವರು. ‌ರಾಜ್‌ಕುಮಾರ್‌ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹೇಂದ್ರ ಹಾಗೂ ರುಹಿಯಾ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ …

Read More »

ಶಿವಮೊಗ್ಗದಲ್ಲಿ ಭೀಕರ ಮರ್ಡರ್ : ಅಂಗನವಾಡಿ ಸಹಾಯಕಿಯ ಬರ್ಬರ ಹತ್ಯೆ!

ಶಿರಾಳಕೊಪ್ಪ ಬಳಿ ಬೆಳಗಿಯಲ್ಲಿ ಅಂಗನವಾಡಿ ಸಹಾಯಕಿಯ ಭೀಕರವಾಗಿ ಕೊಲೆ ಮಾಡಲಾಗಿದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ. ನಿನ್ನೆ ರಾತ್ರಿ ಪ್ರೇಮ (52) ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಪ್ರೇಮಾ ನಾಲ್ವರು ಮಕ್ಕಳ ಜೊತೆಗೆ ವಾಸವಿದ್ದರು. ಮೂವರು ಹೆಣ್ಣು ಮಕ್ಕಳ ಹಾಗೂ ಓರ್ವ ಮಗನ ಜೊತೆಗೆ ಪ್ರೇಮ ವಾಸವಿದ್ದರು. ಘಟನೆ ಸಂಭಂದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಗರಕ್ಕೆ ಕಾಲಿಟ್ಟಿದೆ ಲೇಡಿಸ್ ರಾಬರಿ ಗ್ಯಾಂಗ್‌ – ಕಳ್ಳಿಯರ ಟೀಂ ವರ್ಕ್‌ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು: ನಗರದಲ್ಲಿ ಮಹಿಳೆಯರ ದರೋಡೆ ಗ್ಯಾಂಗ್ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟಾಗಿ ಗುಂಪಾಗಿ ಬರುವ ಈ ಮಹಿಳೆಯರು ನಕಲಿ ಕಾರಣ ಹೇಳಿಕೊಂಡು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಯಶವಂತಪುರದ ಗೋಲ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಘಟನೆಯಲ್ಲಿ, ಆರು ಮಹಿಳೆಯರು ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಅವರನ್ನು ಒಳಗೆ ಬಿಡಲು ನಿರಾಕರಿಸಿದಾಗ, ನಾಲ್ವರು ಮಹಿಳೆಯರು ಸೆಕ್ಯುರಿಟಿಯ ಜೊತೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾರೆ. ಅದೇ …

Read More »