Breaking News

BigTv News

ವೆನ್ಲಾಕ್ ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ

ಮಂಗಳೂರು: ಚಿಕಿತ್ಸೆಗೆಂದು ನಗರದ ವೆಕ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿಯ ಹರೀಶ (39) ಎಂಬವರು ನಾಪತ್ತೆಯಾಗಿದ್ದಾರೆ. ಅನಾರೋಗ್ಯವಿದ್ದ ಕಾರಣ ಬೆಳ್ತಂಗಡಿಯಿಂದ ಫೆ.7ರಂದು ಆಂಬುಲೆನ್ಸ್ ಮೂಲಕ ಕರೆದುಕೊಂಡು ಬಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮೂರನೇ ವಾರ್ಡ್ ನಲ್ಲಿದ್ದ ಅವರು ಅದೇ ದಿನ ರಾತ್ರಿ 7 ಗಂಟೆಯ ವೇಳೆಗೆ ನಾಪತ್ತೆಯಾಗಿದ್ದಾರೆ. ಅವರ ಬಳಿ ಮೊಬೈಲ್ ಇಲ್ಲ. ಎಲ್ಲ ಕಡೆ ವಿಚಾರಿಸಿದರೂ, ಪತ್ತೆಯಾಗಿಲ್ಲ. ತಾಯಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಮನೆ ಮುಂದೆ ಕೆಮ್ಮಿದ್ದಕ್ಕೇ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು!

ರಾಮನಗರ: ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಎಂದು ಗುರುತಿಸಲಾಗಿದೆ. ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ಅಲ್ಲಿಯೇ ವಾಸವಾಗಿದ್ದ. ಮೂರು ದಿನಗಳ ಹಿಂದೆ ಮನೆ ಪಕ್ಕದಲ್ಲಿದ್ದ ಸಂಜಯ್ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿದ್ದು, ಕೆಮ್ಮಿದ ವಿಚಾರಕ್ಕೆ ಜಗಳ ತೀವ್ರಗೊಂಡಿದೆ ಎನ್ನಲಾಗಿದೆ. ಈ ವೇಳೆ ಸಂಜಯ್, ಹೊಂಬಯ್ಯ (ಹೊಂಬೆಗೌಡ), ವಿಜಯ್ ಸೇರಿದಂತೆ ಇತರರು ಸೇರಿ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ …

Read More »

Sorry ಮಮ್ಮಿ, ಡ್ಯಾಡಿ… ಡೆತ್ ನೊಟ್ ಬರೆದಿಟ್ಟು ನೇಣಿಗೆ ಶರಣಾದ SSLC ವಿದ್ಯಾರ್ಥಿ

ಬೀದರ್: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಡೆತ್ ನೊಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ನವೋದಯ ವಿದ್ಯಾಲಯದ‌ ವಸತಿ ನಿಲಯದಲ್ಲಿ ನಡೆದಿದೆ.ಶರತ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶರತ್ ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎನ್ನಲಾಗಿದ್ದು, ಅದರಲ್ಲಿ ಸಾರಿ ಮಮ್ಮಿ- ಡ್ಯಾಡಿ, ಕಿಪ್ ಸ್ಮೈಲಿಂಗ್ ಫಾರೆವರ್ ಎಂದು ಬರೆದಿದ್ದಾನೆ. ಸ್ಥಳಕ್ಕೆ ಬಸವಕಲ್ಯಾಣ ನಗರ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.‌ ಮಗನ ಸಾವಿನ ಸುದ್ದಿ ಕೇಳಿ …

Read More »

₹16 ಕೋಟಿ ಗಾಂಜಾ ವಶ, ಮೂವರ ಬಂಧನ

ದೇವನಹಳ್ಳಿ: ಬ್ಯಾಂಕಾಕ್‌ ಮತ್ತು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹16.21 ಕೋಟಿ ಮೌಲ್ಯದ ಹೈಡ್ರೊಫೋನಿಕ್‌ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳಲ್ಲಿ ಸಾಗಿಸುತ್ತಿದ್ದ ₹8.31 ಕೋಟಿ ಮೌಲ್ಯದ 23.76 ಕೆ.ಜಿ ಹೈಡ್ರೊಫೋನಿಕ್‌ ಗಾಂಜಾ ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಥಾಯ್ಲೆಂಡ್‌ನಿಂದ ಬಂದಿಳಿದ ಮತ್ತೊಬ್ಬ ಪ್ರಯಾಣಿಕ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ₹3.70 …

Read More »

ಪಂಚಾಯಿತಿ ಅಕ್ರಮ ಪ್ರಶ್ನಿಸಿ ಆರ್‌ಟಿಐ ದಾಖಲೆ ಕೇಳಿದ ರೈತನ ಮೇಲೆ ಹಲ್ಲೆ!

ಹಾಸನ : ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಅಕ್ರಮವನ್ನು ಪ್ರಶ್ನಿಸಿದ ರೈತನ ಮೇಲೆ ಗ್ರಾಮ ಪಂಚಾಯತ್ ಸದಸ್ಯರು ಹಲ್ಲೆ ನಡೆಸಿದ ಘಟನೆ ನಡೆದಿದೆ. ರವಿ ಎಂಬ ರೈತನೇ ಹಲ್ಲೆಗೆ ಒಳಗಾದವರು. 15ನೇ ಹಣಕಾಸು ಯೋಜನೆಯಲ್ಲಿ ನಡೆದ ಕಾರ್ಯಗಳ ಬಗ್ಗೆ ಮಾಹಿತಿ ತಿಳಿಯಲು ರವಿ ಆರ್‌ಟಿಐ ಮೂಲಕ ದಾಖಲೆಗಳನ್ನು ಕೇಳಿದ್ದರು. ದಾಖಲೆಗಳನ್ನು ಪಡೆಯಲು ತಮ್ಮ ಬಳಿ ಇದ್ದ ಹಸುವನ್ನು ಮಾರಾಟ ಮಾಡಿ ಹಣ ಕಟ್ಟಿದರೆಂದು ತಿಳಿದುಬಂದಿದೆ. ಕಾಳೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ …

Read More »

ಒಣಗಿಸಲು ಹಾಕಿದ್ದ ಕೊಬ್ಬರಿ ಕಳ್ಳತನ

ಸುಳ್ಯ: ಗೋಡೌನ್ ಎದುರು ಒಣಗಿಸಲು ಹಾಕಿದ್ದ ಹಸಿ ಮತ್ತು ಒಣ ಕೊಬ್ಬರಿಯನ್ನು ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ರವಿವಾರ ರಾತ್ರಿ ನಡೆದಿದೆಬೊಳುಬೈಲಿನ ಅಬೂಬಕ್ಕರ್ ಅವರು ಒಣ ತೆಂಗಿನ ಕಾಯಿ ವ್ಯಾಪಾರ ನಡೆಸುತ್ತಿದ್ದು ಇದನ್ನು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೋಡೌನ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಹಸಿ ಕೊಬ್ಬರಿಯನ್ನು ಗೋಡೌನ್‌ನ ಎದುರಿನ ಜಾಗದಲ್ಲಿಒಣಗಲು ಹಾಕಿದ್ದರು. ರವಿವಾರ ಮಧ್ಯರಾತ್ರಿ ಶಬ್ದ ಕೇಳಿದ ಬಳಿಕ ಬಂದು ನೋಡಿದಾಗ ಅಪರಿಚಿತ ವ್ಯಕ್ತಿ ಚೀಲದಲ್ಲಿಒಣ ತೆಂಗಿನ ಕಾಯಿಯನ್ನುತುಂಬಿಸಿ ಇಟ್ಟಿದ್ದ. …

Read More »

ಅಂದರ್ ಬಾಹರ್: 11 ಮಂದಿ ಆರೋಪಿಗಳ ಬಂಧನ

ಕಾರ್ಕಳ: ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಮನೆಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕಾರ್ಕಳ ಪೊಲೀಸರು ಫೆ.7ರಂದು ರಾತ್ರಿ ವೇಳೆ ಬಂಧಿಸಿದ್ದಾರೆ. ಬೆಳ್ತಂಗಡಿ ಗುರುವಾಯನಕೆರೆಯ ಉಮ್ಮರ ಫಾರೂಕ್(62), ಬಂಟ್ವಾಳ ತಾಲೂಕಿನ ಸಜಿಪಪಡುವಿನ ಅಬ್ದುಲ್ ಅಝೀಝ್ (40), ಕಾರ್ಕಳ ಗುಡ್ಡೆಯಂಗಡಿಯ ಸತೀಶ ಎಸ್.ಪ್ರಭು(49), ಮಂಗಳೂರು ಬೊಳಿಯಾರಿನ ಅಬ್ದುಲ್ ರಹಿಮಾನ್‌ (49), ಬಂಟ್ವಾಳ ತಾಲೂಕಿನ ಮೂಡಾದ ಸಮೀರ್ (46), ಮಂಗಳೂರು ಬೇಂಗ್ರೆಯ ಸುಲೈಮಾನ್ (45), ಬಂಟ್ವಾಳ …

Read More »

ಅವಿವಾಹಿತರೇ ಇವನ ಟಾರ್ಗೆಟ್ – ಮದುವೆಯ ಆಮಿಷ ತೋರಿ 9 ಯುವತಿಯರಿಗೆ ವಂಚನೆ!

ಮಂಗಳೂರು : ಮಂಗಳೂರಲ್ಲಿ ಆನ್ಲೈನ್ ಮ್ಯಾಟ್ರಿಮೋನಿ ಹೆಸರಲ್ಲಿ ವಂಚನೆ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ. ಮದುವೆಯ ಹೆಸರಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಸುಶಾಂತ್ ವಂಚಿಸಿದ್ದಾನೆ. ಈ ಪೈಕಿ ಇಬ್ಬರು …

Read More »

ಅಕ್ರಮವಾಗಿ ನೆಲೆಸಿದ್ದ ಮಹಿಳೆ ಸೇರಿ 8 ವಿದೇಶಿಗರು ವಶಕ್ಕೆ

ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ ಒಬ್ಬ ಮಹಿಳೆ ಸೇರಿದಂತೆ 8 ಮಂದಿ ವಿದೇಶಿ ಪ್ರಜೆಗಳನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕ್ಯಾಮರೂನ್‌ ದೇಶದ ಐವರು ಹಾಗೂ ಸೂಡಾನ್‌ ದೇಶದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 4 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆಗಳು, ವೀಸಾ ಅವಧಿ ಮುಕ್ತಾಯಗೊಂಡಿದ್ದರು. ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿಂದೆ ನಗರದ ಗಡಿಭಾಗದಲ್ಲಿವಾಸವಾಗಿದ್ದ ಆರೋಪಿಗಳು, ಇತ್ತೀಚೆಗೆ ಸಂಜಯನಗರದ …

Read More »

ಬ್ರಾಹ್ಮಣ ಯುವತಿ ಮತಾಂತರ: ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ; ನನಗೆ ನ್ಯಾಯ ಕೊಡಿಸಿ ಮಹಿಳೆ ಅಳಲು!

ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ, ಮುಸ್ಲಿಂ ಯುವಕ ಸೈಯದ್ ಇಮ್ತಿಯಾಜ್ ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿ ಮಗುವನ್ನೂ ಕೈಗೆ ಕೊಟ್ಟು ಈಗ ಎಸ್ಕೇಪ್ ಆಗಿದ್ದಾನೆ. ಕೋಲ್ಕತ್ತಾ ಮೂಲದ ಬ್ರಾಹ್ಮಣ ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಸೈಯದ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ, ಜೈನಬ್ ಎಂದು ಹೆಸರನ್ನು ಬದಲಿಸಿದ್ದನು. 2025ರ …

Read More »