Breaking News

BigTv News

ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ರೈಲಿನಲ್ಲಿ ಯುವಕನ ಮೇಲೆ ಹಲ್ಲೆ!

ಬೆಂಗಳೂರು:- ಹಾಸನ ಮಾರ್ಗದ ರೈಲಿನಲ್ಲಿ ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಅಮಾನವೀಯ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಗೊಮ್ಮಟೇಶ್ವರ ರೈಲು ನಿಲ್ದಾಣದ ಬಳಿ ನಡೆದ ಈ ಘಟನೆಯಲ್ಲಿ, ಬಾಟಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ರೈಲಿನ ಗುತ್ತಿಗೆ ಫುಡ್ ಡೆಲಿವರಿ ಸಿಬ್ಬಂದಿ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಈ ವೇಳೆ ಯುವಕನ ಬಳಿ ಇದ್ದ ಎಲ್ಲಾ ನೀರಿನ ಬಾಟಲಿಗಳನ್ನು ಹೊರಗೆ …

Read More »

25 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಲಂಚದ ಹಣಕ್ಕೆ ಕೈಯೊಡ್ಡಿದಾಗಲೇ ಅಬಕಾರಿ ಡಿಸಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಜಗದೀಶ್ ನಾಯಕ್ ಲೋಕಾಯುಕ್ತ ಬಲೆಗೆ ಬಿದ್ದು ಬಂಧಿತರಾಗಿರುವ ಅಬಕಾರಿ ಡಿಸಿ. 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಬಕಾರಿ ಡಿಸಿ ಜಗದೀಶ್ ಅವರನ್ನು ಬಂಧಿಸಿದ್ದಾರೆಮೈಕ್ರೋ ಬ್ರಿವೇರಿ, ಸಿಎಲ್ 7 ಲೈಸನ್ಸ್ ಗೆ 75 ಲಕ್ಷ ರೂಪಾಯಿ ಲಂಚದ ಬೇಡಿಕೆ …

Read More »

ರಸ್ತೆ ಅಪಘಾತ; ಮಾಜಿ ಸಚಿವ ರಾಜೂ ಗೌಡ ಪಾರು

ಯಾದಗಿರಿ: ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಗರದ ಗಂಜ್ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿಶಾಖಪಟ್ಟಣ ದಿಂದ ಸೆಲೆಬ್ರಟಿ ಕ್ರಿಕೆಟ್ ಲೀಗ್ ಪಂದ್ಯ ಮುಗಿಸಿ ಹಿಂತಿರುವಾಗ ಅಪಘಾತ ಸಂಭವಿಸಿದೆ.ಟ್ರಕ್ಕೊಂದು ರಾಜು ಗೌಡರ ಕಾರಿಗೆ ಹಿಂದಿನಿಂದ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ರಾಜೂ ಗೌಡ ಅವರಿಗೆ ಸ್ವಲ್ಪ ತರಚಿದ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ಪಡೆದು …

Read More »

ಅಕ್ರಮವಾಗಿ ಸಂಗ್ರಹಿಸಿದ್ದ 101 ಚೀಲ ಪಡಿತರ ರಾಗಿ ವಶ

ಮಧುಗಿರಿ: ಪಟ್ಟಣದ ಬೆಂಕಿಪುರದ 8ನೇ ವಾರ್ಡ್‌ನ ಆಂಜನೇಯ ದೇವಸ್ಥಾನದ ಪಕ್ಕದಲ್ಲಿನ ಕಟ್ಟಡದ ಮೇಲೆ ಬುಧವಾರ ದಾಳಿ ನಡೆಸಿದ ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 101 ಚೀಲ ಪಡಿತರ ರಾಗಿ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.ಪಡಿತರ ರಾಗಿ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಸ್ಥಳದಲ್ಲಿದ್ದ ಟೆಂಪೊ ಚಾಲಕನಿಂದ ಮಾಹಿತಿ ಪಡೆದ ತಹಶೀಲ್ದಾರ್ ಶ್ರೀನಿವಾಸ್, ಆಹಾರ ಶಿರಸ್ತೇದಾರ್ ಶೈಲಜಾ ಮತ್ತು ಆಹಾರ ನಿರೀಕ್ಷಕ ನಸ್ರುದ್ದೀನ್ ಅವರು ರಾಕೇಶ್ ಹಾಗೂ …

Read More »

ಪೊಲೀಸರ ವಿಶೇಷ ಕಾರ್ಯಾಚರಣೆ: 22,500 ರೂ. ದಂಡ ಸಂಗ್ರಹ

ಉಡುಪಿ: ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು, ಜಲ್ಲಿ ಮತ್ತು ಮರಳು ಸಾಗಿಸುವ ವಾಹನ ಗಳ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.ಜ. 14ರಂದು ಮಧ್ಯಾಹ್ನ 2ರಿಂದ ಸಂಜೆ 7 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ 832 ವಾಹನ ಗಳನ್ನು ಪರಿಶೀಲಿಸಿ, 182 ಕ್ಕೆ ನೋಟಿಸ್‌ ನೀಡಲಾಗಿದೆ. ಓವರ್‌ಲೋಡ್‌ ಹಾಗೂ ಇತರ ಅಪರಾಧಗಳಿಗೆ 66 ವಾಹನಗಳಿಂದ 22,500 ರೂ. ದಂಡ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ …

Read More »

ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ‌ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.ಮುಖದಲ್ಲಿ ಗಾಯಗಳು ಕಂಡುಬಂದಿವೆ. ಅವರು ದಿ.ವೆಂಕಪ್ಪ ಶೆಟ್ಟಿ ಎಂಬುವರ ಪತ್ನಿ. ಮನೆಯಲ್ಲಿ ಒಬ್ಬರೇ ಇದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿ ಎಂದು ತನಿಖೆ ನಡೆಸುತ್ತಿರುವ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.ಶ್ವಾನದಳ ತಪಾಸಣೆ ನಡೆಸಿದೆ. ಮನೆಯ ಹಿಂಬಾಗಿಲು ತೆರೆದುಕೊಂಡಿತ್ತು. ಪುಷ್ಪಲತಾ ಅವರ ಕೊರಳಲ್ಲಿದ್ದ ಕರಿಮಣಿ ನಾಪತ್ತೆಯಾಗಿದ್ದು, ಕಪಾಟಿನಲ್ಲಿಸಿದ್ದ ಚಿನ್ನಾಭರಣಗಳು ಹಾಗೆಯೇ …

Read More »

ಬೆಂಗಳೂರಲ್ಲಿ ಹಿಟ್ & ರನ್ ಗೆ ಮೂವರು ಬೈಕ್ ಸವಾರರು ಬಲಿ : ಟಿಪ್ಪರ್ ಹರಿದು ತಲೆಗಳು ಛಿದ್ರ ಛಿದ್ರ!

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು ಮೂವರು ಸವಾರರು ಹಿಟ್ ಅಂಡ್ ನನಗೆ ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.ಬೈಕ್ ಸವಾರ ತೌಸಿಫ್ ಸೇರಿದಂತೆ ಮೂವರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಬೈಕಿಗೆ ಡಿಕ್ಕಿ ಹೊಡಿಸಿ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿಯಿಂದ ಬೂದಿಗೆರೆ ರಸ್ತೆಯಲ್ಲಿ ಸವರರು ತೆರಳುತ್ತಿದ್ದರು. ಅದು ವೇಗವಾಗಿ ಬಂದು ಟಿಪ್ಪರ್ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. …

Read More »

ಬಸ್‌ನಿಂದ ಇಳಿಯುವಾಗ ಬಿದ್ದ ಪ್ರಯಾಣಿಕ; ಚಾಲಕ, ನಿರ್ವಾಹಕನ ಮೇಲೆ ಪ್ರಕರಣ ದಾಖಲು

ಕಾರ್ಕಳ: ಬಸ್‌ನಿಂದ ಇಳಿಯುತ್ತಿದ್ದಾಗ ಚಾಲಕ ಏಕಾಏಕಿ ಬಸ್ ಚಲಾಯಿಸಿದ ಪರಿಣಾಮ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡ ಘಟನೆ ಸಾಣೂರು ಗ್ರಾಮದ ಮುರತ್ತಂಗಡಿಯಲ್ಲಿ ಸಂಭವಿಸಿದೆ. ಪಡುಕೊಣಾಜೆ ನಿವಾಸಿ ನಿರಂಜನ ಆಳ್ವ (51) ಗಾಯಗೊಂಡವರು. ಇವರು ಜ. 14ರಂದು ಸಂಜೆ ಮೂಡುಬಿದ್ರೆಯಿಂದ ಮುರತ್ತಂಗಡಿಗೆ ಬಸ್‌ನಲ್ಲಿ ಬರುತ್ತಿದ್ದರು.ಮುರತ್ತಂಗಡಿ ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದಾಗ, ನಿರ್ವಾಹಕ ಸುಧಾಕರ ನೀಡಿದ ಸೂಚನೆಯಂತೆ ಚಾಲಕ ರವಿ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದಾನೆ ಎಂದು ದೂರಲಾಗಿದೆ. ಇದರಿಂದ ಕೆಳಗೆ ಬಿದ್ದ ನಿರಂಜನ ಅವರ ಎಡಗೈ …

Read More »

ಹುಡುಗರಂತೆ ಡ್ರೆಸ್‌ ಮಾಡಿಕೊಂಡು ಕಳವು ಮಾಡುತ್ತಿದ್ದ ಕಳ್ಳಿಯರ ಸೆರೆ

ಬೆಂಗಳೂರು ನಗರದಲ್ಲಿ ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗರೆಂದು ಭಾವಿಸಿ ಬಂಧಿಸಿ ಕರೆದೊಯ್ಯುವಾಗ ಇವರು ಖತರ್‌ನಾಕ್‌ ಕಳ್ಳಿಯರು ಎಂದು ಗೊತ್ತಾಗಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.ಜ.13 ರಂದು ಸಂಪಿಗೇಹಳ್ಳಿಯ ಸಂಗಮೇಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು. ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, …

Read More »

ಯಾದಗಿರಿ: ಕಾರಿನಲ್ಲಿದ್ದ ₹14.50 ಲಕ್ಷ ನಗದು, 35 ಗ್ರಾಂ ಚಿನ್ನಾಭರಣ ಕಳವು

ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ರಸ್ತೆ ‌ಬದಿ ನಿಲ್ಲಿಸಿದ್ದ ಕಾರಿನಲ್ಲಿ ಇರಿಸಿದ್ದ ₹ 14.50 ಲಕ್ಷ ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ.ಬಳಿಚಕ್ರ ಗ್ರಾಮದ ಶರಣಪ್ಪ ಕೊನೆಮನಿ ಎಂಬುವವರು ನಗದು ಮತ್ತು ಚಿನ್ನಾಭರಣ ಕಳೆದುಕೊಂಡವರು.ದೂರು ಆಧರಿಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಶರಣಪ್ಪ ಅವರು ವ್ಯವಹಾರ ಸಂಬಂಧಿಸಿದ ಕಾರ್ಯಕ್ಕಾಗಿ ₹ 5 ನಗದ ಹಣದೊಂದಿಗೆ ಕುಟುಂಬ ಸಮೇತ ಬಂದಿದ್ದರು. ಬ್ಯಾಂಕ್‌ನಿಂದ ₹9.50 ಲಕ್ಷ ಡ್ರಾ …

Read More »