ಬೆಂಗಳೂರು: ನಾಗರಬಾವಿ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಗಲಾಟೆ ಭೀಕರ ಅಂತ್ಯ ಕಂಡಿದ್ದು, ಬಿಕಾಂ ವಿದ್ಯಾರ್ಥಿ ಯೋಗೇಶ್ ಮೃತಪಟ್ಟಿದ್ದಾರೆ. ಖಾಸಗಿ ಕಾಲೇಜು ಸಮೀಪ ನಡೆದ ವಾಗ್ವಾದ ಮಾರಾಮಾರಿಗೆ ತಿರುಗಿದ್ದು, ಯೋಗೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಯೋಗೇಶ್ ಅವರನ್ನು ಸ್ನೇಹಿತರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ …
Read More »ಸುರತ್ಕಲ್ ಎಂಆರ್ಪಿಎಲ್ ಪ್ರದೇಶದಲ್ಲಿ ಭಾರಿ ಸ್ಫೋಟ: ಕಾರ್ಮಿಕನ ಮೃತದೇಹ ಪತ್ತೆ
ಮಂಗಳೂರು: ಸುರತ್ಕಲ್ ಬಳಿಯ ಎಂಆರ್ಪಿಎಲ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟದ ಬಳಿಕ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಮೂಲ್ಕಿಯ ಮನೀಶ್ ಕರ್ಕೇರಾ (30) ಎಂದು ಗುರುತಿಸಲಾಗಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ರಾಜೇಶ್ ಬ್ಯಾಪ್ಟಿಸ್ಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಪಕ್ಕದ ಕಚೇರಿಯಲ್ಲಿದ್ದ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ …
Read More »ಸಾಲದ ವಿಚಾರಕ್ಕೆ ಪತಿ-ಪತ್ನಿ ಕಲಹ : ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಕಲಬುರಗಿ: ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ಕಲಹ ದುರಂತಕ್ಕೆ ಕಾರಣವಾಗಿದ್ದು, ತಾಯಿ ತನ್ನ ಇಬ್ಬರು ಪುತ್ರಿಯರೊಂದಿಗೆ ಬಾವಿಗೆ ಹಾರಿದ ಘಟನೆ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗೌರಮ್ಮ (52) ಹಾಗೂ ಪುತ್ರಿ ಭಾಗ್ಯಶ್ರೀ (25) ಮೃತಪಟ್ಟಿದ್ದಾರೆ. ಮತ್ತೊಬ್ಬ ಪುತ್ರಿ ಅಂಬಿಕಾ (21) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲದ ವಿಚಾರವಾಗಿ ಗೌರಮ್ಮ ಹಾಗೂ ಪತಿ ಪೀರಪ್ಪ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದು …
Read More »ಶಿಡ್ಲಘಟ್ಟ: ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಶಾಲೆಯ ಪ್ರಾಂಶುಪಾಲ ಈಶ್ವರ್ ರೆಡ್ಡಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಓದು ಬರಹ ಕಲಿಸುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕೊಠಡಿಗೆ ಕರೆಸಿಕೊಳ್ಳುತ್ತಿದ್ದ ಪ್ರಾಂಶುಪಾಲರು, ಆಕೆಯ ವಿರೋಧದ ನಡುವೆಯೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ದಿಬ್ಬೂರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಗೆ ಬಾಲಕಿಯರ ಬಾಲಮಂದಿರದಲ್ಲಿ …
Read More »4 ತಿಂಗಳಲ್ಲಿ ₹161 ಕೋಟಿ ಡ್ರಗ್ಸ್ ಜಪ್ತಿ,29 ಮಂದಿ ಬಂಧನ
ಬೆಂಗಳೂರು: ನಗರ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ ₹161 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 29 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 10 ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 19 ಪೆಡ್ಲರ್ಗಳು ಸೇರಿದ್ದಾರೆ. ಏಪ್ರಿಲ್ನಲ್ಲಿ ವಿದೇಶದಿಂದ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯನ್ನು ಬಂಧಿಸಿ 3.2 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಬಳಿಕ ತನಿಖೆ ಮುಂದುವರಿಸಿದ ಪೊಲೀಸರು ನೋಯ್ಡಾದಿಂದ ಹೆಬ್ಬಾಳ, ಗಿರಿನಗರ ಹಾಗೂ ಬೆಳ್ಳಂದೂರಿಗೆ ಪೂರೈಕೆಯಾಗುತ್ತಿದ್ದ 26.3 ಕೆ.ಜಿ ಎಂಡಿಎಂಎ ಪತ್ತೆಹಚ್ಚಿದ್ದರು. ಜೂನ್ನಲ್ಲಿ 22.5 …
Read More »ಪತ್ನಿಗೆ ವಿಷ ನೀಡಿ ಕೊಲೆಗೆ ಯತ್ನ ಪ್ರಕರಣ: ಪತಿ, ಸ್ನೇಹಿತೆ ಆತ್ಮಹತ್ಯೆ
ಉಡುಪಿ: ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ ಪತ್ನಿಗೆ ಇಂಜೆಕ್ಷನ್ ಮೂಲಕ ವಿಷ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಾಗಿದ್ದ ಪತಿ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿಹೊಳೆ ಗ್ರಾಮದ ಸೌಪರ್ಣಿಕಾ ನದಿ ಸಮೀಪ ನಡೆದಿದೆ. ವಿಠ್ಠಲ ನಾಯ್ಕ (35) ಹಾಗೂ ಭವ್ಯಾ ನಾಯ್ಕ ಅಲಿಯಾಸ್ ನಿಶ್ಮಿತಾ (33) ಮೃತರು. ವಿಠ್ಠಲ ನಾಯ್ಕ ತನ್ನ ಪತ್ನಿ ಶ್ಯಾಮಲಾ ಅವರಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ …
Read More »ಪೆಟ್ರೋಲ್ ಬಂಕ್ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು: ಹೆಲ್ಮೆಟ್ ಧರಿಸಿ ಬಂದು ಎಕ್ಸ್ಪ್ರೆಸ್ ಬಸ್ ಎಗರಿಸಿದ ಖತರ್ನಾಕ್ ಕಳ್ಳರು
ಉಡುಪಿ: ಪೆಟ್ರೋಲ್ ಬಂಕ್ನಲ್ಲಿ ನಿಲ್ಲಿಸಿದ್ದ ಮಂಗಳೂರು-ಕುಂದಾಪುರ ಖಾಸಗಿ ಎಕ್ಸ್ಪ್ರೆಸ್ ಬಸ್ನ್ನು ಇಬ್ಬರು ಕಳ್ಳರು ಕದ್ದೊಯ್ದ ಘಟನೆ ಚಿಟ್ಪಾಡಿಯಲ್ಲಿ ನಡೆದಿದೆ. ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ, ಹೆಲ್ಮೆಟ್ ಹಾಕಿಕೊಂಡಿದ್ದ ಕಳ್ಳನೊಬ್ಬ ಬಸ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನೊಬ್ಬ ಕಳ್ಳ ಸ್ಕೂಟಿಯಲ್ಲಿ ಬಸ್ನ್ನು ಹಿಂಬಾಲಿಸಿದ್ದು, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್ ಕಳವಾದ ಬಗ್ಗೆ ದೂರು ಬಂದ ಬಳಿಕ ಉಡುಪಿ ನಗರ ಪೊಲೀಸರು ಜಿಪಿಎಸ್ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಕಾಪು ತಾಲೂಕಿನ ಮುದರಂಗಡಿ ಸಮೀಪದ ಮುದ್ದಾಡಿಯಲ್ಲಿ …
Read More »ಆಟೋ ಚಾಲಕನ ಬಂಧಿಸಿದ್ರಿ, ಚಾಲಕನ ಮೇಲೆ ಹಲ್ಲೆ ನಡೆಸಿದ ಯುವತಿಯರ ಬಂಧನ ಯಾವಾಗ?: HSR ಲೇಔಟ್ ಪೊಲೀಸರ ನಡೆಗೆ ನೆಟ್ಟಿಗರ ಆಕ್ರೋಶ
ಬೆಂಗಳೂರು: ಎಚ್ಎಸ್ಆರ್ ಲೇಔಟ್ನ 3ನೇ ಸೆಕ್ಟರ್ನಲ್ಲಿ ಇಬ್ಬರು ಯುವತಿಯರು ಹಾಗೂ ಆಟೋ ಚಾಲಕನ ನಡುವೆ ರಸ್ತೆಯಲ್ಲೇ ನಡೆದ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದರ ವಿಚಾರವಾಗಿ ಜಗಳ ಆರಂಭವಾಗಿದ್ದು, ಯುವತಿಯರು ಮದ್ಯದ ಅಮಲಿನಲ್ಲಿ ತಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು ಎಂದು ಆಟೋ ಚಾಲಕ ಆರೋಪಿಸಿದ್ದಾನೆ. ಇತ್ತ ಯುವತಿಯರು ಪೊಲೀಸರಿಗೆ ದೂರು ನೀಡಲು ಒಂದೆರಡು ದಿನಗಳ …
Read More »ಏಯ್, ನಾನು PSI ಕಣೋ; ಚಿನ್ನ, ಹಣ ದೋಚಿ ಲವರ್ಗೆ ನೀಡ್ತಿದ್ದ ನಿವೇದಿತಾ ಗೌಡ ಅರೆಸ್ಟ್
ಚಿಕ್ಕಮಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್ಐ ನಿವೇದಿತಾ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಕೆಫೆ ನಡೆಸುತ್ತಿದ್ದ ಆಕೆ, ಗ್ರಾಹಕರಿಗೆ ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದಳು ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಂತೆ ಕಾಣಲು ವಿಶೇಷವಾಗಿ ವೇಷ ಧರಿಸುತ್ತಿದ್ದ ನಿವೇದಿತಾ, ಪರಿಚಯವಾದವರ ಐಷಾರಾಮಿ ಕಾರುಗಳನ್ನು ಪಡೆದು ಮತ್ತೊಬ್ಬರಿಗೆ ಮಾರಾಟ ಮಾಡುವುದು …
Read More »ಮೈಸೂರಲ್ಲಿ ಪ್ರೇಮ ನಿವೇದನೆ ನಿರಾಕರಿಸಿದ್ದಕ್ಕೆ ಪೆಟ್ರೋಲ್ನಿಂದ ಬೆಂಕಿ ಹಚ್ಚಿಕೊಂಡು ಯುವತಿ ತಬ್ಬಿಕೊಂಡ ಪಾಗಲ್ ಪ್ರೇಮಿ!
ಮೈಸೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು, ಬಳಿಕ ಆಕೆಯನ್ನು ತಬ್ಬಿಕೊಳ್ಳಲು ಯತ್ನಿಸಿದ ಘಟನೆ ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ಮಂಗಳವಾರ ನಡೆದಿದೆ. ಚಂದನ್ (27) ಎಂಬಾತ ಕೃತ್ಯ ಎಸಗಿದ್ದಾನೆ. ಮಂಡ್ಯದ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್, ಅದೇ ಗ್ರಾಮದ ಯುವತಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯುವತಿ ಪ್ರೀತಿಯನ್ನು ನಿರಾಕರಿಸಿದ್ದರೂ ಪದೇಪದೇ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಪೊಲೀಸರಿಗೆ ದೂರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





