Breaking News

BigTv News

ತಂದೆಯ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: ಸ್ನೇಹಿತನಿಂದಲೇ ಕೃತ್ಯ

ಹಾವೇರಿ: ತಂದೆಯ ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ ನಡೆದಿದೆ.ಹಾವೇರಿ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥ್ ಮುದ್ದಿನವರ(40) ಕೊಲೆ ಮಾಡಲಾಗಿದೆ.ಎಣ್ಣೆ ನಶೆಯಲ್ಲಿ ಸ್ನೇಹಿತನನ್ನೇ ಶಿವಕುಮಾರ್ ಶಿವಪುರ ಕೊಲೆ ಮಾಡಿದ್ದಾನೆ. ಡಿಸೆಂಬರ್ 30ರಂದು ಹೃದಯಾಘಾತದಿಂದ ಮಂಜುನಾಥ ತಂದೆ ರಾಜೇಂದ್ರ ನಿಧನರಾಗಿದ್ದು, ತಂದೆ ಅಂತ್ಯಕ್ರಿಯೆ ಮುಗಿಸಿಸಿಕೊಂಡು ಬರುತ್ತಿದ್ದ ಮಂಜುನಾಥ್ ಸ್ನೇಹಿತ …

Read More »

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ತುಂಡಾದ ಚಾಲಕನ ಕಾಲು; ಹಲವರು ಗಂಭೀರ

ಬಾಗಲಕೋಟೆ : ಬಸ್​ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್​​ ಚಾಲಕನ ಕಾಲು ತುಂಡಾಗಿರುವ ಜೊತೆಗೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲೋಕಾಪುರ ಹೊರವಲಯದಲ್ಲಿ ನಡೆದಿದೆ.ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಗಾಯಗೊಂಡವರನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​​ ಮತ್ತು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಹೊಸ ವರ್ಷಾಚರಣೆ ಬಳಿಕ ಹುಬ್ಬಳ್ಳಿಯಲ್ಲಿ ಯುವಕರ ಮಾರಾಮಾರಿ – ಗೋಕುಲ್ ರಸ್ತೆಯಲ್ಲಿ ಉದ್ವಿಗ್ನತೆ

ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮಾಚರಣೆ ಮುಗಿದ ಕೆಲವೇ ಹೊತ್ತಿನಲ್ಲಿ ಯುವಕರ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ವರದಿಯಾಗಿದೆ. ಖಾಸಗಿ ಹೋಟೆಲ್ ಎದುರು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿದೆ. ಪರಸ್ಪರ ಕೊರಳ ಪಟ್ಟಿ ಹಿಡಿದು ಯುವಕರು ಕೈಕಾಲು ಚಾಚಿಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳ ಜಗಳವನ್ನು ಶಮನಗೊಳಿಸಿದ್ದಾರೆ. ಯಾವುದೇ ಗಂಭೀರ ಗಾಯಗಳ …

Read More »

ಕಾಸರಗೋಡಿಗೆ ಬಂದಿದ್ದ ವೃದ್ಧ ದಂಪತಿ ನಾಪತ್ತೆ

ಕಾಲಡಿಯಿಂದ ಕಾಸರಗೋಡಿಗೆ ಬಂದಿದ್ದ ವೃದ್ಧ ದಂಪತಿಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ.ಮನೆಯಿಂದ ತಂದೆ ಷಣ್ಮುಗಂ, ತಾಯಿ ರಮಣಿ ಅವರನ್ನು ಪುತ್ರ ಹೊರ ಹಾಕಿದ್ದು, ಇದರಿಂದ ಕುಂಬಳೆಯಲ್ಲಿರುವ ಪುತ್ರಿಯ ಮನೆಗೆಂದು ಕಾಲಡಿಯಿಂದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿದಿದ್ದರು.ಅಲ್ಲಿಂದ ಇವರಿಗೆ ಆರ್‌ಪಿಎಫ್‌ ಹಾಗು ಸಮಾಜ ಸೇವಾ ಸಂಘಟನೆಗಳು ಕುಂಬಳೆಗೆ ಹೋಗಲೆಂದು ವ್ಯವಸ್ಥೆ ಮಾಡಿದ್ದರು. ಆದರೆ ಅವರು ಕಂಡು ಬರಲಿಲ್ಲ. ಬಳಿಕ ಹುಡುಕಿದಾಗ ಮಾವುಂಗಾಲಿನ ಆಶ್ರಮಕ್ಕೆ ತಲುಪಿದರು ಎಂಬ ಮಾಹಿತಿ ಲಭಿಸಿತ್ತು. ಅಲ್ಲಿ …

Read More »

ಗಾಂಜಾ ಮಾರಾಟ: ಇಬ್ಬರ ಬಂಧನ

ಹೂವಿನಹಡಗಲಿ: ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆಪಟ್ಟಣ ಹೊರ ವಲಯ ನಂದಿಪುರ ದೊಡ್ಡಬಸವೇಶ್ವರ ಗದ್ದುಗೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ಸುನೀಲ್ ನಾಯ್ಕ ಎಂಬಾತನ ಬಂಧಿಸಿ ₹10 ಸಾವಿರ ಮೌಲ್ಯದ 393.85 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಇಟ್ಟಿಗಿ ಗ್ರಾಮದ ಹೊರ ವಲಯ ಹಾಲಿನ ಡೇರಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ನಿವಾಸಿ, ಮೂಲತಃ ಹಾವೇರಿ …

Read More »

ಚಿಕ್ಕಜಾಜೂರು | ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಈಚೆಗೆ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಮೀಪದ ಸಾಸಲು ರೈಲು ನಿಲ್ದಾಣದ ಬಳಿ 55- 60 ವರ್ಷದ ಅಪರಿಚಿತ ವ್ಯಕ್ತಿಯ ಶವ ದೊರೆತಿದೆ. ಮೃತನು ಕಾವಿ ಬಟ್ಟೆ ಧರಿಸಿದ್ದು, ಮೇಲ್ನೋಟಕ್ಕೆ ಸನ್ಯಾಸಿಯಂತೆ ಕಂಡು ಬರುತ್ತಾನೆ. ದುಂಡು ಮುಖ, ಸಾಧಾರಣ ಮೈಕಟ್ಟು, ಬೋಳು ತಲೆ ಹೊಂದಿದ್ದಾನೆ.ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ಸಂಪರ್ಕಿಸಲು ಚಿಕ್ಕಜಾಜೂರು ರೈಲ್ವೆ ಪೊಲೀಸ್‌ ಉಪ ಠಾಣೆಯ ಪೊಲೀಸರು …

Read More »

ಪರಸ್ತ್ರೀ ಸಂಗ, ವರದಕ್ಷಿಣೆ ಕಿರುಕುಳ: ಇನ್‌ಸ್ಪೆಕ್ಟರ್‌ ವಿರುದ್ಧ ಪತ್ನಿ ಆರೋಪ

ಬೆಂಗಳೂರು: ಸದಾಶಿವನಗರ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಪಿ. ಗಿರೀಶ್‌ ವಿರುದ್ಧ ಅವರ ಪತ್ನಿ, ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಹಾಗೂ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.ಈ ಕುರಿತು ಗಿರೀಶ್‌ ಪತ್ನಿ ಕಾವ್ಯಾ ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಮಹಿಳಾ ಪೊಲೀಸ್‌ ಠಾಣೆ ಪೊಲೀಸರು ಗಿರೀಶ್‌, ಅವರ ತಾಯಿ ಲಲಿತಮ್ಮ, ಸಹೋದರ ಹರೀಶ್‌ ಹಾಗೂ ಸಂಬಂಧಿ ರಾಜೇಶ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.2010ರಲ್ಲಿ ಗಿರೀಶ್‌ ಮತ್ತು …

Read More »

ಹಣಕ್ಕೆ ಬೇಡಿಕೆ: ಪತ್ರಕರ್ತ 7 ದಿನ ಪೊಲೀಸ್‌ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್‌ ಕಾರ್ಖಾನೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ವಾಟ್ಸ್‌ಆಯಪ್‌ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಾಗಲೂರು ಠಾಣೆಯ ಪೊಲೀಸರಿಂದ ಬಂಧನ ಕ್ಕೊಳಗಾಗಿರುವ ಪತ್ರಕರ್ತನನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.ಪತ್ರಕರ್ತ ಶರತ್‌ ಶರ್ಮಾ ಕಲಗಾರು ಬಂಧಿತ. ಆರೋಪಿಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್‌ 7 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಪ್ರಕರಣದ …

Read More »

ಢಿಕ್ಕಿ: ಮೂವರಿಗೆ ಗಾಯ

ಉಡುಪಿ: ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಸ್ಕೃತ ಕಾಲೇಜು ಬಳಿ ನಡೆದಿದೆ.ಎ.ವಿ.ಶಾನುಭಾಗ್‌ ಎಂಬವರು ಕಾರನ್ನು ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರ ಸವಾರ ರಿಚರ್ಡ್ ಡಿ”ಸೋಜಾ ಹಾಗೂ ಸಹಸವಾರ ರಸ್ತೆಗೆ ಬಿದ್ದು ಗಾಯಗೊಂಡರು.ಢಿಕ್ಕಿಯ ರಭಸಕ್ಕೆ ಅಲ್ಲಿಯೇ ಇದ್ದ ಇಮ್ತಿಯಾಜ್ ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಸನಿಹದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಜಖಂಗೊಂಡಿದೆ. …

Read More »

ಮರಳು ಅಕ್ರಮ ದಂಧೆ: ಎಂಟು ಜನರ ವಿರುದ್ಧ ಎಫ್‌ಐಆರ್‌

ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಸೀಮೆ ಹಾಗೂ ಭೂಮಿಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಸ್ಥಳದ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದು, ಎಂಟು ಹಿಟಾಚಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮರಳು ಕಳ್ಳತನ ಮಾಡಿದ ಆರೋಪದ ಮೇಲೆ ಎಂಟು ಜನರ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಗಂಗಾವತಿ ಪೊಲೀಸ್ ಉಪ ವಿಭಾಗಾಧಿಕಾರಿ ಜಾಯಪ್ಪ ನ್ಯಾಮಗೌಡ ಹಾಗೂ ಪೊಲೀಸ್‌ ಇನ್‌ಸ್ಟೆಕ್ಟರ್‌ ಎಂ.ಡಿ.‌ ಫೈಜುಲ್ಲಾ ನೇತೃತ್ವದಲ್ಲಿ ನಸುಕಿನ ಜಾವ ದಾಳಿ …

Read More »