Breaking News

ಪರಸ್ತ್ರೀ ಸಂಗ, ವರದಕ್ಷಿಣೆ ಕಿರುಕುಳ: ಇನ್‌ಸ್ಪೆಕ್ಟರ್‌ ವಿರುದ್ಧ ಪತ್ನಿ ಆರೋಪ

ಬೆಂಗಳೂರು: ಸದಾಶಿವನಗರ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಪಿ. ಗಿರೀಶ್‌ ವಿರುದ್ಧ ಅವರ ಪತ್ನಿ, ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಹಾಗೂ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.ಈ ಕುರಿತು ಗಿರೀಶ್‌ ಪತ್ನಿ ಕಾವ್ಯಾ ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಮಹಿಳಾ ಪೊಲೀಸ್‌ ಠಾಣೆ ಪೊಲೀಸರು ಗಿರೀಶ್‌, ಅವರ ತಾಯಿ ಲಲಿತಮ್ಮ, ಸಹೋದರ ಹರೀಶ್‌ ಹಾಗೂ ಸಂಬಂಧಿ ರಾಜೇಶ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.2010ರಲ್ಲಿ ಗಿರೀಶ್‌ ಮತ್ತು ಕಾವ್ಯಾ ಮದುವೆಯಾಗಿದ್ದು, 250 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ಸೇರಿ ಒಟ್ಟು 30 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. 2017 ರಿಂದ ಗಿರೀಶ್‌ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ. ಹೀಗಾಗಿ 2019ರಲ್ಲಿ 10 ಲಕ್ಷ ರೂ. ಅನ್ನು ನೀಡಲಾಗಿತ್ತು. ಆದರೂ, ಮತ್ತಷ್ಟು ಹಣ ತರುವಂತೆ ಪೀಡಿಸುತ್ತಿದ್ದು, ವರದಕ್ಷಿಣೆ ತರದಿದ್ದಲ್ಲಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಾವ್ಯಾ ಗಂಭೀರ ಆರೋಪ ಮಾಡಿದ್ದಾರೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *