Breaking News

BigTv News

ಚಲಿಸುತ್ತಿದ್ದಾಗಲೇ ಟೈರ್ ಸ್ಪೋಟಗೊಂಡು ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: ಮಹಿಳೆ ಸಾವು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಕಾರ್ ನ ಟೈಯರ್ ಸ್ಪೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ರಾಜರಾಜೇಶ್ವರಿ ನಗರದ ಪ್ರೇಮಲತಾ ಶ್ರೀಧರ್(70) ಮೃತಪಟ್ಟವರು ಎಂದು ಹೇಳಲಾಗಿದೆ. ತೀರ್ಥಹಳ್ಳಿಯಿಂದ ಸಿಗಂದೂರು ದೇವಸ್ಥಾನಕ್ಕೆ ತೆರಳಿದ್ದ ಅವರು ಸಿಗಂದೂರಿನಿಂದ ತೀರ್ಥಹಳ್ಳಿಗೆ ವಾಪಸ್ ಹೋಗುವಾಗ ಗೊರಗೋಡು ಗ್ರಾಮದ ಬಳಿ ಕಾರ್ ಅಪಘಾತಕ್ಕೀಡಾಗಿದೆ. …

Read More »

ಧಾರವಾಡ: ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರರ ಮೇಲೆ ಹರಿದ ಲಾರಿ, ಇಬ್ಬರ ದುರ್ಮರಣ

ಧಾರವಾಡ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 35 ವರ್ಷದ ಕಿಶನ್ ಖಾನಾವಾಲೆ ಹಾಗೂ 34 ವರ್ಷದ ಕಿರಣ್ ಮೃತ ದುರ್ದೈವಿಗಳು. ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರರ ಮೇಲೆ ಹಿಂದೆ ಬರುತ್ತಿದ್ದ ಲಾರಿ ಹರಿದು ಇಬ್ಬರೂ ಸಾವನ್ನಪ್ಪಿದ್ದಾರೆ.ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಡ್ರಾಪ್ ನೆಪದಲ್ಲಿ 3 ಲಕ್ಷ ರೂ. ಚಿನ್ನದ ಸರ ದೋಚಿ ಪರಾರಿ

ಮಹಿಳೆಗೆ ಊರಿಗೆ ಬಿಡುವುದಾಗಿ ಹೇಳಿ ಬೈಕ್ ಮೇಲೆ ಹತ್ತಿಸಿಕೊಂಡ ಅಪರಿಚಿತ ವ್ಯಕ್ತಿ ನಡುರಸ್ತೆಯಲ್ಲೇ ನಿಲ್ಲಿಸಿ ಕೊರಳಲ್ಲಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ದೋಚಿ ಪರಾರಿಯಾದ ಘಟನೆ ಕಾಗಿನೆಲೆ ಠಾಣೆ ವ್ಯಾಪ್ತಿಯ ತಾಲೂಕಿನ ಕಳಗೊಂಡ-ನಾಗಲಾಪುರ ರಸ್ತೆ ಮಧ್ಯದಲ್ಲಿ ನಡೆದಿದೆ.ಪಟ್ಟಣದ ಬಿಇಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಗುಮ್ಮನಹಳ್ಳಿ ಗ್ರಾಮದ ಶಿಕ್ಷಕಿ ರತ್ನಮ್ಮ ಮಹದೇವಪ್ಪ ಬಣಕಾರ ಇತ್ತೀಚೆಗೆ ಬಡ್ತಿ ಮೇರೆಗೆ ತಾಲೂಕಿನ ಕುಮ್ಮೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. …

Read More »

ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿ ಅರೆಸ್ಟ್

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸ್ ಹೆಸರು ಆರೋಪಿ ಮುತ್ತು ಅಭಿಮನ್ಯುವನ್ನು ಅರೆಸ್ಟ್ ಮಾಡಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ಗೀತಾ ಮತ್ತು ಆಕೆಯ ಪುತ್ರಿ ಜೊತೆಗೆ ಆರೋಪಿ ಮುತ್ತು ವಾಸವಿದ್ದ. ಪುತ್ರಿ ಮದುವೆ ಮಾಡಿ ಕೊಡುವಂತೆ ಗೀತಾಗೆ ಮುತ್ತು ಒತ್ತಾಯಿಸಿದ್ದಾನೆ. ಮದುವೆಗೆ ಒಪ್ಪದಿದ್ದಕ್ಕೆ ಗೀತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ …

Read More »

ರೈಲಿನಲ್ಲಿ 45 ಲ.ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳು ಕಳವಾದ ಘಟನೆ ನಡೆದಿದೆ.ಮುಂಬಯಿ ಮೂಲದ ಹೆಲ್ಮೀನಾ ಸಾಲಿನ್ಸ್‌ ಅವರು ತಮ್ಮ ಮಗಳು, ಗಂಡ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ 3.10ಕ್ಕೆ ಮತ್ಸ್ಯಗಂಧ ರೈಲು ಸಂಖ್ಯೆ 12619 ಕೋಚ್ ನಲ್ಲಿ ತಮ್ಮ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್‌ ಬಟ್ಟೆಗಳಿದ್ದ ಹ್ಯಾಂಡ್‌ ಬ್ಯಾಗ್‌ ಮತ್ತು ಸೂಟ್‌ ಕೇಸ್‌ಗಳೊಂದಿಗೆ ಉಡುಪಿಗೆ ಪ್ರಯಾಣಿಸುತ್ತಿದ್ದರು.ಒಡವೆಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ತನ್ನ ತಲೆಯ ಬಳಿ ಇರಿಸಿ ರಾತ್ರಿ ರೈಲಿನಲ್ಲಿ …

Read More »

ಕಿವಿಯೋಲೆ ಎಳೆದ ರಭಸಕ್ಕೆ ಮಹಿಳೆಯ ಕಿವಿ ಕಟ್​​​ ಕೇಸ್, ಸರಗಳ್ಳರು ಅರೆಸ್ಟ್!

ಮಹಿಳೆಯ ಕಿವಿ ಹರಿದು ಬರುವಂತೆ ಓಲೆ ಕಿತ್ತು ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆವಿಜಯಪುರ ಅಂಗಡಿಗೆ ತೆರಳಿದ್ದ ಮಹಿಳೆಯ ಮೇಲ್ ಹಲ್ಲೆ ಮಾಡಿ ಓಲೆ ಕಿತ್ತು ಆಕೆಯ ಕಿವಿಯನ್ನು ಕತ್ತರಿಸಿದ್ದರು.ಆ ಬಳಿಕ ಆಕೆಯ ಕಿವಿಯಲ್ಲಿದ್ದ ಓಲೆ ಮತ್ತು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.ಈ ಘಟನೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಹೀಗಾಗಿ ಆರೋಪಿಗಳ …

Read More »

ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಹೋಟೆಲ್ : ಸಿಬ್ಬಂದಿಗಳ ರಕ್ಷಣೆ, ಲಕ್ಷಾಂತರ ರೂ.ಹಾನಿ!

ವಿಜಯಪುರದಲ್ಲಿ ಹೋಟೆಲ್ ಒಂದು ಧಗಧಗನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಹೋಟೆಲ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ ಕೆಲವೇ ನಿಮಿಷದಲ್ಲಿ ವಸ್ತುಗಳು ಸುಟ್ಟು ಭಸ್ಮವಾಗಿವೆ.ವಿಜಯಪುರ ನಗರದ BLDE ರಸ್ತೆಯಲ್ಲಿರುವ ಕೃಷ್ಣ ಹೋಟೆಲ್ನಲ್ಲಿ ಈ ಒಂದು ಘಟನೆ ಸಂಭವಿಸಿದೆ.ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಹೋಟೆಲಲ್ಲಿ ಇದ್ದಂತಹ ಸಿಲಿಂಡರ್ ಗಳು ಬೆಂಕಿ ಇಂದ ಸ್ಪೋಟಗೊಂಡಿದ್ದು ಇಬ್ಬರು. ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಓವರ್‌ಟೇಕ್ ಮಾಡಲು ಹೋಗಿ KKRTC ಬಸ್ ಪಲ್ಟಿ: ಚಾಲಕನ ಕಾಲು ಮುರಿತ, ಹಲವರಿಗೆ ಗಾಯ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗಕ್ಕೆ ಸೇರಿದ ಬಸ್ಸೊಂದು ಮಹಾರಾಷ್ಟ್ರದ ರಾವೂ ಘಾಟ್ ಬಳಿ ಭಾನುವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಯಾದಗಿರಿಯಿಂದ ಸಾತಾರಕ್ಕೆ ತೆರಳುತ್ತಿದ್ದ ಈ ಬಸ್, ಎದುರಿಗೆ ಬಂದ ಟ್ಯಾಂಕರ್ ಒಂದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಪಕ್ಕಕ್ಕೆ ಉರುಳಿದೆ ಎಂದು ತಿಳಿದುಬಂದಿದೆ.ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಬಸ್ ಚಾಲಕನ ಎರಡೂ ಕಾಲುಗಳು ಮುರಿದಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಸ್ಸಿನಲ್ಲಿದ್ದ …

Read More »

ಜನನ ಕ್ಷಣದಲ್ಲೇ ಜೀವಾಪಾಯ: ಹೊಟ್ಟೆ ಹೊರಗೇ ಕರಳುಗಳೊಂದಿಗೆ ಜನಿಸಿದ ಮಗು – ಜೀರೋ ಟ್ರಾಫಿಕ್ ಮೂಲಕ ಕಿಮ್ಸ್‌ಗೆ ರಕ್ಷಣೆ

ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಪಾಲಕ್ಷಪ್ಪ ಎಂಬುವವರ ಕುಟುಂಬದಲ್ಲಿ ಜನಿಸಿದ ಶಿಶು. ಹೆರಿಗೆ ನಂತರ ಮಗುವಿನ ಹೊಟ್ಟೆಯ ಒಳಭಾಗದ ಕರಳುಗಳು ಸಂಪೂರ್ಣವಾಗಿ ಹೊರಗೆ ಬಂದ ಸ್ಥಿತಿಯಲ್ಲಿ ಮಗು ಜನಿಸಿದ್ದು, ಇದು ಅಪರೂಪದ ಹಾಗೂ ಅತಿ ಗಂಭೀರ ಜನನ ದೋಷವಾಗಿದೆ. ಕುಕುನೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ತಜ್ಞ ಚಿಕಿತ್ಸೆ ಇಲ್ಲಿ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿ, ಮೊದಲು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಲ್ಲಿ …

Read More »

ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ: ಚಾಮರಾಜನಗರದಲ್ಲಿ 30ಕ್ಕೂ ಹೆಚ್ಚು ಮರಗಳನ್ನು ಕಡಿದಿರುವ ದುಷ್ಕರ್ಮಿಗಳು

ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆಇಲ್ಲಿನ ಹಲವು ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಕೆಂಪಯ್ಯನಹಟ್ಟಿ, ರಾಮಾಪುರ, ದೊಮ್ಮನಗದ್ದೆ, ಪಳನಿಮೇಡು ಗ್ರಾಮದಳಲ್ಲಿ ಲೈಸನ್ಸ್ ಪಡೆಯದೇ ಅಕ್ರಮವಾಗಿ ಇಟ್ಟಿಗೆ ಫ್ಯಾಕ್ಟರಿಗಳು ತಲೆ ಎತ್ತಿದ್ದು, ಇಟ್ಟಿಗೆ ಬೇಯಿಸಲು ಮರಗಳನ್ನು ಕಡಿಯಲಾಗುತ್ತಿದೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ಮಲೆಮಹದೇಶ್ವರ ವನ್ಯಜೀವಿಧಾಮ ಭಾಗದ …

Read More »