ಕುಂದಾಪುರ: ನೆಲ್ಲಿಕಟ್ಟೆ ಬಲಾಡಿ ಮೇಲ್ ಬೈಲು ಬಸವ (52) ಅವರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ.ಪತ್ನಿಯ ಮನೆ ಸಸಿಹಿತ್ಲು ಬಳ್ಕೂರಿನಿಂದ ಮುಳ್ಳುಗುಡ್ಡೆ ಸೌಪರ್ಣಿಕಾ ಹೆಂಚಿನ ಕಾರ್ಖಾನೆಗೆ ಕೆಲಸಕ್ಕೆಂದು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅವರು ಬಹಿರ್ದೆಸೆಗೆಂದು ಬಳ್ಕೂರು ಗ್ರಾಮದ ವಾರಾಹಿ ನದಿ ಸೇತುವೆ ಬಳಿ ಮರಳು ಧಕ್ಕೆ ಹತ್ತಿರ ಹೋದವರು ಆಯತಪ್ಪಿ ನದಿಗೆ ಬಿದ್ದರು.ಕೂಗಿಕೊಂಡಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಅಪರಿಚಿತರು ಅವರನ್ನು ದಡಕ್ಕೆ ತಂದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ …
Read More »ಉಡುಪಿಯಲ್ಲಿ ಘೋರ ದುರಂತ : ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು.!
ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಈ ಒಂದು ಘಟನೆ ನಡೆದಿದೆ.ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ನಯನಾ ಅವರು ತಮ್ಮ ಮಗುವನ್ನು ಎತ್ತಿಕೊಂಡು ಬಾವಿಯಲ್ಲಿ ನೀರು ಸೇದುವಾಗ ಅವಘಡ ನಡೆದಿದೆ.ಕೂಡಲೇ ತಾಯಿ ಹಗ್ಗದ ನೆರವಿನಲ್ಲಿ ಬಾವಿಗೆ ಇಳಿದು ಮಗುವನ್ನ ಮೇಲಕ್ಕೆತ್ತಿದ್ದಾರೆ. ಕೂಡಲೇ ಮಗುವನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಉಡುಪಿ ನಗರ …
Read More »ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ: ಮನೆ ಗೇಟ್ ಕಿಲಿ ಮುರಿದು ಕಳ್ಳತನ – ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ
ಹುಬ್ಬಳ್ಳಿ ನಗರದಲ್ಲಿ ಮತ್ತೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಹಾವಳಿ ಜನರಲ್ಲಿ ಆತಂಕ ಮೂಡಿಸಿದೆ. ಇಂಡಸ್ಟ್ರಿಯಲ್ ಏರಿಯಾದ ಶ್ರೇಯಾ ನಗರ 6ನೇ ಕ್ರಾಸ್ ಬಳಿ ಇರುವ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಮನೆ ಗೇಟ್ ಕಿಲಿ ಮುರಿದು ಕಳ್ಳನು ಒಳನುಗ್ಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಕ್ಕಿನಂತೆ ಮೌನವಾಗಿ ಬಂದ ಈ ಕಳ್ಳ, ಮನೆ ಸುತ್ತಲು ಓಡಾಡುತ್ತಾ ಒಳಗೆ ನುಗ್ಗಲು ಪ್ರಯತ್ನ ನಡೆಸಿದ್ದಾನೆ. ಬಳಿಕ ಕೈಗೆ ಸಿಕ್ಕ ವಸ್ತುಗಳನ್ನು ಕಳ್ಳತನ ಮಾಡಿಕೊಂಡು …
Read More »ಹೊನ್ನುಡಿಕೆ ಬಳಿ ಬೊಲೆರೊ ಡಿಕ್ಕಿ: ಬೈಕ್ ಸವಾರ ಸಾವು
ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಬಳಿ ಸೋಮವಾರ ಬೈಕ್ಗೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಕಿರಣ್ (20) ಮೃತಪಟ್ಟಿದ್ದಾರೆ.ಕಿರಣ್ ಮಾಗಡಿ ತಾಲ್ಲೂಕು ಕುದೂರು ಬಳಿಯ ಶ್ರೀಗಿರಿಪುರದ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ವಗ್ರಾಮದಿಂದ ಹೊನ್ನುಡಿಕೆ ಮಾರ್ಗವಾಗಿ ನಗರದ ಕಡೆಗೆ ಬರುವಾಗ ನಗರದಿಂದ ತೆರಳುತ್ತಿದ್ದ ಬೊಲೆರೊ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ರಾಜ್ಯದ ಜೈಲುಗಳಲ್ಲಿ ತೀವ್ರಗೊಂಡ ತಪಾಸಣೆ: ಮೊಬೈಲ್, ಗಾಂಜಾ ಪತ್ತೆ
ಬೆಂಗಳೂರು: ರಾಜ್ಯದ ಹಲವು ಜೈಲುಗಳಲ್ಲಿ ತಪಾಸಣೆ ಕಾರ್ಯ ಮುಂದುವರೆದಿದೆ. ಅಧಿಕಾರಿಗಳು ಜೈಲುಗಳಲ್ಲಿ ತೀವ್ರ ತಪಾಸಣೆ ಕೈಗೊಂಡಿದ್ದು, ಜೈಲಿನ ಅಧಿಕಾರಿಗಳ ತಪಾಸಣೆಯ ವೇಳೆ ಮೊಬೈಲ್ ಗಳು, ಯು.ಎಸ್.ಬಿ. ಕೇಬಲ್, ಚಾರ್ಜರ್, ಸಿಮ್ ಕಾರ್ಡ್ ಪತ್ತೆಯಾಗಿವೆ.ರಾಜ್ಯದ ಹಲವು ಜೈಲುಗಳಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ತಪಾಸಣೆ ನಡೆಸಿದ್ದಾರೆ.ಬೆಂಗಳೂರಿನಲ್ಲಿ ಆರು ಮೊಬೈಲ್, ಮೈಸೂರಿನಲ್ಲಿ ಗಾಂಜಾ ಪ್ಯಾಕೆಟ್, ಕಾರವಾರ ಜೈಲಿನಲ್ಲಿ 7 ಮೊಬೈಲ್ ಪತ್ತೆಯಾಗಿವೆ. ಕಾರವಾರ ಜೈಲಿನಲ್ಲಿ ನಾಲ್ವರು ಸಜಾಬಂಧಿಗಳ ಗಲಾಟೆ ಬೆಳಕಿಗೆ ಬಂದಿದ್ದು, ಅವರನ್ನು ಬೇರೆ …
Read More »ಕಾರಿನ ಡ್ಯಾಶ್ ಬೋರ್ಡ್ನಲ್ಲಿದ್ದ ಚಿನ್ನಾಭರಣ ಕಳವು
ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಾರಿನ ಡ್ಯಾಶ್ ಬೋರ್ಡ್ನಲ್ಲಿದ್ದ ₹4.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.ಗ್ರಾಮದ ಮೂರ್ತಿ ಅವರು ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದು, ಡಿ.12ರಂದು ಸಂಬಂಧಿಕರ ಮದುವೆಗೆಂದು ಕುಟುಂಬ ಸಮೇತ ಎಂ.ಕೆ. ಹೊಸೂರು ಗ್ರಾಮಕ್ಕೆ ಬಂದಿದ್ದರು.ಡಿ.13ರಂದು ರಾತ್ರಿ 8 ಗಂಟೆಗೆ ಗ್ರಾಮದ ಬೋರೆಗೌಡರವರ ಮನೆಗೆ ಊಟಕ್ಕೆ ಹೋಗಿದ್ದರು. ಒಂದು ಟೈಟನ್ ವಾಚ್ ಹಾಗೂ ಚಿನ್ನಾಭರಣಗಳನ್ನು ಬಾಕ್ಸ್ನಲ್ಲಿ ಹಾಕಿ, ಕಾರಿನ ಡ್ಯಾಶ್ಬೋರ್ಡನಲ್ಲಿ ಇಟ್ಟಿದ್ದರು. ಕಾರನ್ನು ಲಾಕ್ ಮಾಡದೇ …
Read More »ಸಹಪಾಠಿಯಿಂದ ವಿದ್ಯಾರ್ಥಿಯ ಹತ್ಯೆ
ಖಾಸಗಿ ಕೋಚಿಂಗ್ ಸೆಂಟರ್ ನ ತರಗತಿ ಕೋಣೆಯಲ್ಲಿ 16ರ ಹರೆಯದ ಬಾಲಕನನ್ನು ಆತನ ಸಹಪಾಠಿಯೇ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಸೋಮವಾರ ಬೆಳಿಗ್ಗೆ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ನಡೆದಿದೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದು ಅವರ ನಡುವಿನ ಹಿಂದಿನ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರುಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
Read More »ವೇಶ್ಯಾವಾಟಿಕೆಗೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ; ಇಬ್ಬರ ಬಂಧನ
ಪಡುಬಿದ್ರಿ: ವೇಶ್ಯಾವಾಟಿಕೆ ಆರೋಪದಲ್ಲಿ ಇಲ್ಲಿನ ವಸತಿಗೃಹವೊಂದಕ್ಕೆ ಡಿ. 14ರಂದು ದಾಳಿ ನಡೆಸಿದ ಕಾಪು ಸಿಪಿಐ ಅಜ್ಮತ್ ಅಲಿ, ಪಡುಬಿದ್ರಿ ಪಿಎಸ್ಐ ಶಕ್ತಿವೇಲು ಹಾಗೂ ಸಿಬಂದಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸ್ಥಳದಿಂದ 4 ಮೊಬೈಲ್ ಫೋನ್ಗಳು, 3,600 ರೂ. ನಗದು ಮತ್ತು ಹಲವು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
Read More »ಬೆಳ್ತಂಗಡಿ: ನಿಡ್ಲೆ ಬಳಿ ಕೆಎಸ್ಆರ್ಟಿಸಿ, ಖಾಸಗಿ ಬಸ್ ಡಿಕ್ಕಿ-7 ಜನರಿಗೆ ಗಾಯ
ಧರ್ಮಸ್ಥಳ-ಪೆರಿಯಶಾಂತಿ ಹೆದ್ದಾರಿಯ ನಿಡ್ಲೆಯ ಕುದುರೆಯ ತಲೆಕ್ಕಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಮಿನಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.ಅಪಘಾತದ ಸಮಯದಲ್ಲಿ ಅಯ್ಯಪ್ಪ ಭಕ್ತರು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ನಂತರ, ಕೆಎಸ್ಆರ್ಟಿಸಿ ಬಸ್ನ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು, ಖಾಸಗಿ …
Read More »ಕಾರವಾರ: ಸಿಲಿಂಡರ್ ಸ್ಫೋಟ; 2 ಕಾರು, ಆಟೊ ಭಸ್ಮ
ಕಾರವಾರ: ತಾಲ್ಲೂಕಿನ ಅಮದಳ್ಳಿಯಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಹೊತ್ತಿದ ಬೆಂಕಿಯಿಂದ ಎರಡು ಕಾರು, ಒಂದು ಆಟೊ ಸುಟ್ಟು ಕರಕಲಾದ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.ಸುಫ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬುವವರಿಗೆ ಸೇರಿದ ವಾಹನಗಳು ನಾಶವಾಗಿವೆ.’ಆಟೋದಲ್ಲಿ ಇದ್ದ ಎಲ್ಪಿಜಿ ಕಿಟ್ನಲ್ಲಿ ಸೋರಿಕೆ ಸಂಭವಿಸಿ, ಹೊತ್ತಿಕೊಂಡ ಬೆಂಕಿಯಿಂದ ದುರ್ಘಟನೆ ಸಂಭವಿಸಿರಬಹುದು’ ಎಂದು ಗ್ರಾಮೀಣ ಠಾಣೆ ಪೊಲೀಸರು ಶಂಕಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





