Breaking News

BigTv News

ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ 11 ಮಂದಿಯ ಬಂಧನ : ಎಸ್‌ಪಿ ಡಾ.ಸುಮನ್ ಡಿ.ಪೆನ್ನೇಕರ್

ಬಳ್ಳಾರಿ: ಬಡ ಕುಟುಂಬಗಳ ಯುವತಿಯರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಸಂಘಟಿತ ಜಾಲವನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಒಟ್ಟು 16 ಆರೋಪಿಗಳನ್ನು ಗುರುತಿಸಿದ್ದು, ಈ ಪೈಕಿ 11 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಯುವತಿಯರ ಫೋಟೊ ಹಾಗೂ ವೈಯಕ್ತಿಕ ವಿವರಗಳನ್ನು ಪಡೆದು ಮೂರು ಹಂತಗಳಲ್ಲಿ ಆಯ್ಕೆ ಮಾಡುತ್ತಿದ್ದರು. ಬಳಿಕ ‘ಲಕ್ಷ್ಮಿ ಪೂಜೆ’ ಹೆಸರಿನಲ್ಲಿ ಹಣದ ಆಮಿಷವೊಡ್ಡಿ ಜಾಲಕ್ಕೆ ಸೆಳೆಯುತ್ತಿದ್ದರು. ಅಪ್ರಾಪ್ತ ಬಾಲಕಿಯರ ಫೋಟೊಗಳೂ ಪತ್ತೆಯಾಗಿವೆ. ಅಕ್ಕಪಡೆಯ …

Read More »

ದೀಪಾವಳಿ ಬಾಡೂಟಕ್ಕೆ ಕಡವೆ-ಕಾಡುಕುರಿ ಬೇಟೆ; ಓರ್ವನ ಬಂಧನ, ಮೂವರು ಪರಾರಿ!

ಚಿಕ್ಕಮಗಳೂರು: ದೀಪಾವಳಿ ಹಬ್ಬದ ಬಾಡೂಟಕ್ಕಾಗಿ ಕಡವೆ ಹಾಗೂ ಕಾಡುಕುರಿಯನ್ನು ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿನ್ನಡಿ ಗ್ರಾಮದ ರಮೇಶ್ ಬಂಧಿತ ಆರೋಪಿ. ರಮೇಶ್ ಮನೆಯಲ್ಲಿ ನಾಲ್ವರು ಕುಳಿತು ಬೇಟೆಯಾಡಿದ ಪ್ರಾಣಿಗಳ ಮಾಂಸ ಕತ್ತರಿಸುತ್ತಿದ್ದಾಗ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಮಹೇಂದ್ರ, ಪ್ರಕಾಶ್ ಹಾಗೂ ಮಲ್ಲಯ್ಯ ಪರಾರಿಯಾಗಿದ್ದಾರೆ. ದಾಳಿಯ ವೇಳೆ …

Read More »

ಪೂಜೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಅಕ್ಕ ಪಡೆಯಿಂದ ರಹಸ್ಯ ಕಾರ್ಯಾಚರಣೆ: 11 ಆರೋಪಿಗಳು ಅರೆಸ್ಟ್

ಬಳ್ಳಾರಿಯಲ್ಲಿ ಲಕ್ಷ್ಮೀ ಪೂಜೆ ಹೆಸರಿನಲ್ಲಿ ಬಡ ಹಾಗೂ ಮೂಢನಂಬಿಕೆ ನಂಬುವ ಯುವತಿಯರನ್ನು ವಂಚಿಸಿ, ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಗ್ಯಾಂಗ್‌ ಅನ್ನು ಅಕ್ಕ ಪಡೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ 11 ಆರೋಪಿಗಳನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಮಳೆ ಸುರಿಯುತ್ತದೆ ಎಂದು ನಂಬಿಸಿ ಯುವತಿಯರನ್ನು ಪೂಜೆಗೆ ಕರೆಸಿಕೊಳ್ಳುತ್ತಿದ್ದ ಆರೋಪಿಗಳು, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಬಳಿಕ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದರು. ಬಳ್ಳಾರಿ, ಮೈಸೂರು, ಚಿಕ್ಕಮಗಳೂರು …

Read More »

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಬೇಟೆ – 6.30 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 34 ಮಂದಿ ಅರೆಸ್ಟ್!

ಬೆಂಗಳೂರು: ನಗರದಲ್ಲಿ ಪೊಲೀಸರು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ₹6.30 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 34 ಆರೋಪಿಗಳನ್ನು ಬಂಧಿಸಿದ್ದಾರೆ. 5.519 ಕೆಜಿ ಎಂಡಿಎಂಎ, 46.486 ಕೆಜಿ ಗಾಂಜಾ, 72.82 ಗ್ರಾಂ ಕೊಕೇನ್ ಹಾಗೂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಇಬ್ಬರು ವಿದೇಶಿಯರು, 9 ಮಂದಿ ಹೊರರಾಜ್ಯದವರು ಹಾಗೂ 23 ಸ್ಥಳೀಯರು ಸೇರಿದ್ದಾರೆ. ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ …

Read More »

ಪಿಸ್ತೂಲ್ ತೋರಿಸಿ ಪತ್ನಿ ಮೇಲೆ ಹಲ್ಲೆ: ತನ್ನ ವೈರಿಗಳ ವಿರುದ್ಧ ಅತ್ಯಾಚಾರದ ದೂರು ನೀಡುವಂತೆ ಪತಿ ಒತ್ತಡ

ಬೆಂಗಳೂರು: ಮೂರನೇ ಮದುವೆಯಾಗಲು ವಿಚ್ಛೇದನ ನೀಡುವಂತೆ ಪತ್ನಿಗೆ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಆರೋಪ ಪತಿಯ ವಿರುದ್ಧ ಕೇಳಿಬಂದಿದೆ. ಈ ಘಟನೆ ಸುದ್ದುಗುಂಟೆಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ನಡೆದಿದೆ. 2017ರಲ್ಲಿ ಝಾರ ಅಮೀನಾ ಮತ್ತು ಮುಹೀಜ್ ಅಹ್ಮದ್ ವಿವಾಹವಾಗಿದ್ದು, ದಂಪತಿಗೆ ಮಕ್ಕಳಿದ್ದಾರೆ. ಕಳೆದ ಒಂದು ವರ್ಷದಿಂದ ಪತಿ ಅನುಮಾನಪಟ್ಟು ಹಲ್ಲೆ ನಡೆಸುತ್ತಿದ್ದು, ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡುವಂತೆ ಒತ್ತಡ ಹಾಕಿದ್ದಾನೆ. ಮಕ್ಕಳನ್ನು ಕೊಲ್ಲುವುದಾಗಿಯೂ ಬೆದರಿಕೆ …

Read More »

ಅಪ್ರಾಪ್ತ ವಯಸ್ಕ ಬಾಲಕಿಗೆ ನ್ಯಾಯಕ್ಕೆ ಆಗ್ರಹ: ಮುಂಡಗೋಡ ಸಂಪೂರ್ಣ ಬಂದ್

ಮುಂಡಗೋಡ: 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ಮುಂಡಗೋಡ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅಂಗಡಿ-ಮುಂಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಸಾರ್ವಜನಿಕರು ಬೆಂಬಲ ಸೂಚಿಸಿದರು. ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು, ವಿದ್ಯಾರ್ಥಿನಿಯರು, ವಕೀಲರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ …

Read More »

ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ದಿಢೀರ್ ಪ್ರತ್ಯಕ್ಷ; ಮಾಡದ ತಪ್ಪಿಗೆ 2.5 ವರ್ಷ ಜೈಲಿನಲ್ಲಿದ್ದ ವ್ಯಕ್ತಿ!

ಮಂಡ್ಯ: 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಎಂಬ ಮಹಿಳೆಯ ಕೊಲೆ ಆರೋಪದ ಮೇಲೆ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಯಾವುದೇ ಕೊಲೆ ಮಾಡದ ರಾಜೇಶ್ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದು, 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪೊಲೀಸರು ಚಿತ್ರಹಿಂಸೆ ನೀಡಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ನಾಗಮಂಗಲದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದಾರೆ. ಇಷ್ಟವಿಲ್ಲದ ಮದುವೆಯಿಂದ ಮನೆ ಬಿಟ್ಟು ಹೋಗಿ ಮತ್ತೊಬ್ಬರನ್ನು ಮದುವೆಯಾಗಿದ್ದೇನೆ. ರಾಜೇಶ್ …

Read More »

ಮಕ್ಕಳಾಗಿಲ್ಲ ಅಂತ ಚೇಡಿಸುತ್ತಿದ್ದ ಗಂಡನನ್ನೇ ಚುಚ್ಚಿ ಕೊಂದ ಪತ್ನಿ!

ಬೆಂಗಳೂರು: ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಪತಿ ಮದ್ಯದ ನಶೆಯಲ್ಲಿ ಪ್ರತಿದಿನ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಪತ್ನಿಯೊಬ್ಬಳು, ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಲಕ್ಷ್ಮೀಪುರದಲ್ಲಿ ನಡೆದಿದೆ. ರಾಜಶೇಖರ್ (44) ಕೊಲೆಯಾದ ವ್ಯಕ್ತಿ. ಪತ್ನಿ ಮಾಲಾಶ್ರೀ (35) ಆರೋಪಿ. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತಿ ಮದ್ಯ ಸೇವಿಸಿ ಬಂದು ಜಗಳವಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ದಂಪತಿ ನಡುವೆ …

Read More »

ದೀಪಾವಳಿ ಆಕಾಶಬುಟ್ಟಿ ಬಿದ್ದು 5 ಎಕರೆ ಕಬ್ಬು ಬೆಂಕಿಗಾಹುತಿ: ರೈತನ ಬದುಕಿಗೆ ಕತ್ತಲು ತಂದ ಹಬ್ಬದ ಸಂಭ್ರಮ

ಹುಬ್ಬಳ್ಳಿ: ದೀಪಾವಳಿ ಸಂಭ್ರಮದ ವೇಳೆ ಹಾರಿಬಿಟ್ಟ ಆಕಾಶ ಬುಟ್ಟಿಯಿಂದ ರೈತರೊಬ್ಬರ 7 ಎಕರೆ ಕಬ್ಬಿನ ಬೆಳೆ ಸುಟ್ಟುಹೋಗಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ನಡೆದಿದೆ. ಶಂಕರಲಿಂಗ ಎಂಬ ರೈತ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕಾಶ ಬುಟ್ಟಿಯಲ್ಲಿದ್ದ ದೀಪ ರೈತರ ಕಬ್ಬಿನ ಗದ್ದೆಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ರೈತರು, ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರೂ ಕಬ್ಬಿನ ಬೆಳೆ ಸುಟ್ಟುಹೋಗಿದೆ. ಕಟಾವಿಗೆ …

Read More »

ಖಾಸಗಿ ಫೋಟೋ ವೈರಲ್ ಬೆದರಿಕೆ; ಬೆಂಗಳೂರಲ್ಲಿ ಮಾಜಿ ಪ್ರಿಯಕರನ ವಿರುದ್ಧ ಜೂನಿಯರ್ ಆರ್ಟಿಸ್ಟ್ ದೂರು!

ಬೆಂಗಳೂರು: ತಾನು ನೀಡಿದ್ದ ₹2 ಲಕ್ಷ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಮಾಜಿ ಪ್ರಿಯಕರ ಹಲ್ಲೆ ನಡೆಸಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಜೂನಿಯರ್ ಆರ್ಟಿಸ್ಟ್ ಆಗಿರುವ ಯುವತಿ ಕಿರುಕುಳಕ್ಕೆ ಒಳಗಾಗಿದ್ದಾರೆ. ನ.4ರಂದು ಯುವತಿ ಆರೋಪಿ ಶರತ್ ಕುಮಾರ್‌ನನ್ನು ಭೇಟಿಯಾಗಿ ಸಾಲದ ಹಣ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಆರೋಪಿ ಅಶ್ಲೀಲವಾಗಿ ನಿಂದಿಸಿ, ಕಾರಿನ ಗಾಜು ಒಡೆದು ಹಲ್ಲೆ …

Read More »