Breaking News

BigTv News

ತನಗಿಂತ ಸುಂದರವಾಗಿ ಕಾಣ್ತಿದ್ದಾರೆ ಅಂತಾ ಮಗನನ್ನೂ ಬಿಡದೆ 4 ಮಕ್ಕಳನ್ನು ಕೊಂದ ಮಹಿಳೆ!

ಹರಿಯಾಣದ ಪಾಣಿಪತ್‌ನ ಹಳ್ಳಿಯಲ್ಲಿ ಮದುವೆಯ ಸಂಭ್ರಮ ಆದರೆ, ಸಂಭ್ರಮದ ಡೋಲುಗಳು ಕೆಲವೇ ಹೊತ್ತಲ್ಲಿ ನಿಂತಿತು. ಅಲ್ಲಿ ಸೇರಿದ್ದ ಸಂಬಂಧಿಕರಲ್ಲಿ ಭೀತಿ ಆವರಿಸಿತ್ತು. ಮದುವೆಗಾಗಿ ರೆಡಿಯಾಗಿದ್ದ ಆರು ವರ್ಷದ ಬಾಲಕಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು.ಪಾಣಿಪತ್‌ನಲ್ಲಿ ತನ್ನ ಪುಟ್ಟ ಸೊಸೆಯನ್ನು ಕೊಲೆ ಮಾಡಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಕೆಗೆ ಕೊಲೆ ಮಾಡಲು ಇದ್ದ ಏಕೈಕ ಉದ್ದೇಶ ಏನೆಂದರೆ, ಯಾವುದೇ ಕಾರ್ಯಕ್ರಮದಲ್ಲಿ ಯಾರೂ ಕೂಡ ತನಗಿಂತ ಸುಂದರವಾಗಿ ಕಾಣಿಸಬಾರದು ಎಂದು ಬಯಸಿದ್ದಳು. …

Read More »

ಶಾಸಕನ ರಾಸಲೀಲೆ Video ವೈರಲ್; ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

ಜನಪ್ರತಿನಿಧಿಗಳ ಕಾಮಪುರಾಣ ಪ್ರಕರಣಗಳ ಸರಣಿ ಹಸಿರಾಗಿರುವಂತೆಯೇ ಅಂತಹುದೇ ಮತ್ತೋರ್ವ ಜನಪ್ರತಿನಿಧಿಯ ಖಾಸಗಿ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.ಶಾಸಕ ಫಣೀಂದ್ರ ಶಿಕ್ಷಕಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು, ಇಷ್ಟು ದಿನ ಗುಟ್ಟಾಗಿ ಸಾಗುತ್ತಿದ್ದ ಇವರ ವ್ಯವಹಾರ ಇತ್ತೀಚೆಗೆ ವೈರಲ್ ಆದ ವಿಡಿಯೋ ಮೂಲಕ ಬಟಾಬಯಲಾಗಿತ್ತು. ಇನ್ನೂ ಅಚ್ಚರಿ ಎಂದರೆ ಈ ವಿಡಿಯೋವನ್ನು ಬೇರೆ ಯಾರೋ ಹರಿಬಿಟ್ಟಿದ್ದಾರೆ ಎಂದರೆ ಬೇರೆ.. ಆದರೆ ಈ ವಿಡಿಯೋದಲ್ಲಿರುವ ಶಾಸಕನೇ ಈ ವಿಡಿಯೋವನ್ನು ವಾಟ್ಸಪ್ ನಲ್ಲಿ ಶೇರ್ …

Read More »

ಮೊದಲ ಬಾರಿಗೆ ಡಾಲರ್ ಗೆ 90 ರೂ. ಕುಸಿತ ಕಂಡ ರೂಪಾಯಿ

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಸ್ಪಷ್ಟತೆಯ ಬಗ್ಗೆ ಚಿಂತೆಗಳು ಕರೆನ್ಸಿಯನ್ನು ಒತ್ತಡದಲ್ಲಿರಿಸಿದ್ದರಿಂದ ಡಿಸೆಂಬರ್ 3, ಬುಧವಾರದಂದು ಭಾರತೀಯ ರೂಪಾಯಿ ಪ್ರತಿ ಯುಎಸ್ ಡಾಲರ್ಗೆ ಪ್ರಮುಖ 90 ಅನ್ನು ದಾಟಿ ಹೊಸ ದಾಖಲೆಯ ಕೆಳಮಟ್ಟಕ್ಕೆ ಕುಸಿದಿದೆ.ರೂಪಾಯಿ ಮೌಲ್ಯವು ಯುಎಸ್ ಡಾಲರ್ಗೆ 90.13 ರ ಕನಿಷ್ಠ ಮಟ್ಟಕ್ಕೆ ಕುಸಿದಿದೆ, ಇದು ಹಿಂದಿನ ಸಾರ್ವಕಾಲಿಕ ಕನಿಷ್ಠ 89.9475 ಅನ್ನು ಮಂಗಳವಾರ ತಲುಪಿದೆ

Read More »

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆ

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು.ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ, ಮತ್ತೆ 1 ವಾರ ಅವಧಿ ವಿಸ್ತರಿಸಿದರು. ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಶೀದ್‌ ಅಲಿಯ ಹೆಸರಿನಲ್ಲಿತ್ತು.

Read More »

ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿ ಮೃತ್ಯು

ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ತಮ್ಮು ಪೂಜಾರಿ(78) ಎಂದು ಗುರುತಿಸಲಾಗಿದೆ. ಇವರು ನ.20ರಂದು ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್‌ ಅನ್ನು ಮಧ್ಯಪಾನವೆಂದು ಭಾವಿಸಿ ಸೇವಿಸಿದ್ದರು ಎನ್ನಲಾಗಿದೆ.ಇದು ವಿಷಯುಕ್ತವಾಗಿರುವುದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಡಿ.2ರಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ …

Read More »

ಸ್ಕೂಟರ್ ಢಿಕ್ಕಿ ಹೊಡೆದು ಸೈಕಲ್ ಸವಾರನಿಗೆ ಗಾಯ

ಉಡುಪಿ: ಕುಕ್ಕಿಕಟ್ಟೆ-ಬೀಡಿನಗುಡ್ಡೆ ರಸ್ತೆಯಲ್ಲಿ ಸ್ಕೂಟರ್ ಢಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ನಡೆದಿದೆ.ಚಂದನ ಎಂಬವರು ಸ್ಕೂಟರನ್ನು ಕುಕ್ಕಿಕಟ್ಟೆಯಿಂದ ಬೀಡಿನಗುಡ್ಡೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋದ ಪರಿಣಾಮ ಬೀಡಿನಗುಡ್ಡೆ ಕಡೆಗೆ ಹೋಗುತ್ತಿದ್ದ ಶಿವಾನಂದ ಅವರ ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.ಶಿವಾನಂದ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಯಚೂರು : ಲಾರಿ ಹರಿದು ತಂದೆ, ಮಗ ಸ್ಥಳದಲ್ಲೇ ಸಾವು

ರಸ್ತೆ ಬದಿಯಲ್ಲಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ – ಮಗನ ಮೇಲೆ ಲಾರಿ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯರಮರಸ್ ಬೈಪಾಸ್‍ನಲ್ಲಿ ನಡೆದಿದೆ. ಮೃತರು ತಂದೆ ನಾಗಪ್ಪ (64) ಇವರ ಪುತ್ರ ರಮೇಶ್ (45) ಎಂದು ಪೊಲೀಸರು ತಿಳಿಸಿದ್ದಾರೆ.ದ್ವಿಚಕ್ರ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ – ಮಗನ ಮೇಲೆ ಅತಿ ವೇಗವಾಗಿ ಮತ್ತು ಅಜಾಗರೂಕತೆಯ ಚಾಲನೆಯ ಕಾರಣ ಇವರ ಮೇಲೆ ಲಾರಿಯು ಹರಿದಿದೆ. …

Read More »

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ

ಪುತ್ತೂರು: 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬದ್ರುದ್ದೀನ್ ಡಿ.ಕೆ. (27) ಅವರ ಮೃತದೇಹ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆಬದ್ರುದ್ದೀನ್ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಅವರ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.ನ. 29 ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ತೆರಳಿದವರು ಕಾಣೆಯಾಗಿರುವುದಾಗಿ ದೂರು ನೀಡಲಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ …

Read More »

ಕೆರೆಯಲ್ಲಿ ಶವವಾಗಿ ಪತ್ತೆಯಾದ ಹೆಡ್ ಕಾನ್ಸ್ ಟೇಬಲ್

ಹೆಡ್ ಕಾನ್ಸ್ ಟೆಬಲ್ ಓರ್ವರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರದ ನಡೆದಿದೆ.ಲಕ್ಷ್ಮಣ (51 ಮೃತ ಹೆಡ್ ಕಾನ್ಸ್ ಟೇಬಲ್. ಚನ್ನಪಟ್ಟಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್. ನಿನ್ನೆ ಕರ್ತವ್ಯಕ್ಕೆ ಗೈರಾಗಿದ್ದ ಲಕ್ಷ್ಮಣ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.ಇಂದು ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹೆಲ್ಮೆಟ್ ಸಹಿತವಾಗಿ ಅವರ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೆರೆಯ ದಡದಲ್ಲಿ ಅವರ ಬೈಕ್ ಕೂಡ ಇದೆ. ಇದು …

Read More »

ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಪಾದಚಾರಿಗೆ ಗುದ್ದಿದ ವ್ಯಕ್ತಿ..

ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರು ಪಾದಚಾರಿಗೆ ಗುದ್ದಿ ಗಂಭೀರ ಗಾಯಗೊಂಡಿರುವ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಮುಕುಲ್ ಜೋಶಿ ಎಂದು ಗುರುತಿಸಲಾಗಿದೆ.ಘಟನೆಯ ಸಮಯದಲ್ಲಿ, ಕಾರು ಚಲಾಯಿಸುತ್ತಿದ್ದ 18 ವರ್ಷದ ಶಾಹಿದ್ ಮೊಹರಂ ಅನ್ಸಾರಿ ಕುಡಿದಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗೋವಾದ ತಲೈಗಾಂವ್ ಪ್ರದೇಶದ ನಿವಾಸಿ. ಡಿಸೆಂಬರ್ 2 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ …

Read More »