Breaking News

BigTv News

ಹಾವೇರಿಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟು..? : ಹೆರಿಗೆ ವೇಳೆ ಬಿದ್ದು ನವಜಾತ ಶಿಶು ಸಾವು.!

ಹಾವೇರಿಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿಗೆ ನವಜಾತ ಶಿಶು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಕೆಳಗೆ ಬಿದ್ದು ಪೆಟ್ಟಾದ ಹಿನ್ನೆಲೆ ಮಗು ಮೃತಪಟ್ಟಿದೆ ಎನ್ನಲಾಗಿದೆ. ಹೆರಿಗೆ ಬಂದ ಮಹಿಳೆಗೆ ಆರೈಕೆ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಗೆ ಬೆಡ್ ಕೊಡದೇ 1 ಗಂಟೆ ನೆಲದ ಮೇಲೆ ಕೂರಿಸಿದ್ದಾರೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ. ಶೌಚಾಲಯ ಎಲ್ಲಿದೆ ಅಂತ ಅಕ್ಕಪಕ್ಕದವರನ್ನು ಕೇಳಿಕೊಂಡು …

Read More »

ದ್ವೇಷ ಭಾಷಣ ಆರೋಪ… ಹಿಂಜಾವೇ ಮುಖಂಡ ಸೆರೆ

ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಜೆಕಾರಿನ ರತ್ನಾಕರ ಅಮೀನ್‌ (49) ಅವರನ್ನು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ನ. 15ರಂದು ನಗರದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣ ವೇದಿಕೆ ಉಡುಪಿ ತಾಲೂಕು ವತಿಯಿಂದ ಹೊಸದಿಲ್ಲಿ ಬಾಂಬ್‌ ಸ್ಫೋಟದ ಕುರಿತು ಇಸ್ಲಾಮಿಕ್‌ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅವರು ಧರ್ಮಗಳ ನಡುವೆ ದ್ವೇಷ ಉಂಟು ಮಾಡುವ ರೀತಿ ಭಾಷಣ ಮಾಡಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.ಈ ಬಗ್ಗೆ ಉಡುಪಿ ನಗರ ಠಾಣೆಯ …

Read More »

ಮಲಗಿದ್ದಲ್ಲೇ ಜೀವಬಿಟ್ಟ ಮೂವರು ಯುವಕರು; ನಿಗೂಢ ಸಾವಿನಿಂದ ಪೋಷಕರ ಆಕ್ರಂದನ!

ಬೆಳಗಾವಿಯ ಆಜಾದ್ ನಗರದಲ್ಲಿ ಮೂವರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 22 ವರ್ಷದ ಸರ್ಫರಾಜ್ ಹರಪ್ಪನಹಳ್ಳಿ, ರಿಹಾನ್ ಮತ್ತು ಮೋಹಿನ್ ನಲಬಂದ ಸಾವನ್ನಪ್ಪಿದ್ದಾರೆ. 19 ವರ್ಷದ ಶಹಾನವಾಜ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮನೆಯಲ್ಲಿ ಮಲಗಿದ್ದವರು ನಿಗೂಢವಾಗಿ ಮೃತಪಟ್ಟಿದ್ದು ಮಕ್ಕಳನ್ನು ಕಳಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸೊಳ್ಳೆ ಬತ್ತಿ ಹೊಗೆ ಮತ್ತು ಚಳಿ ಕಾಯಿಸಲು ಹಾಕಿದ ಬೆಂಕಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಾಳಮಾರುತಿ ಠಾಣೆ ಪೋಲೀಸರು …

Read More »

ಶಬರಿಮಲೆಗೆ ತೆರಳುತ್ತಿದ್ದ ಮಂಡ್ಯದ ಅಯ್ಯಪ್ಪ ಮಾಲಾಧಾರಿಗಳ ಬಸ್‌ ಪಲ್ಟಿ; ಪವಾಡಸದೃಶ ಪಾರಾದ 33 ಮಂದಿ

ಶಬರಿಮಲೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ 33 ಮಾಲಾಧಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮೇಲಿ ಬಳಿ ಅಪಘಾತ ಸಂಭವಿಸಿದೆ. ಯಾಲದಹಳ್ಳಿ‌ಕೊಪ್ಪಲು ಗ್ರಾಮದ 33 ಮಂದಿ ಅಯ್ಯಪ್ಪನ ಮಾಲೆ ಧರಿಸಿ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳುತ್ತಿದ್ದರು. ಈ ವೇಳೆ ಕೇರಳದ ಏರಿಮಲೈ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. …

Read More »

ಅಪ್ಪನ ಮೇಲೆ ಹಲ್ಲೆ: ವ್ಯಕ್ತಿ ಕೊಂದ ಪುತ್ರ

ಬೆಂಗಳೂರು: ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರ, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‌ನಾರಾಯಣಸ್ವಾಮಿ(55) ಕೊಲೆಯಾದವರು.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜಯ್​ ಎಂಬಾತನನ್ನು ಬಂಧಿಸಿದ್ದಾರೆ.ಅಜಯ್ ತಂದೆ ಮುನಿವೆಂಕಟಪ್ಪ ಮತ್ತು ನಾರಾಯಣಸ್ವಾಮಿ ಅವರು ಮದ್ಯದ ಅಮಲಿನಲ್ಲಿ ನ.11ರಂದು ಗಲಾಟೆ ಮಾಡಿಕೊಂಡಿದ್ದರು. ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೋಪಗೊಂಡಿದ್ದ ಅಜಯ್, ನಾರಾಯಣಸ್ವಾಮಿ ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ …

Read More »

ಆಟೊ, ವಾಲ್ವ್‌, ತಾಳಿ ಕಳ್ಳತನ; ನಾಲ್ವರು ಸೆರೆ

ಕೋಲಾರ: ಆಟೊ, ಕಬ್ಬಿಣದ ವಾಲ್ವ್‌, ಚಿನ್ನದ ತಾಳಿಯ ಕಳ್ಳತನದಲ್ಲಿ ತೊಡಗಿದ್ದ ಆರೋಪದ ಮೇಲೆ ನಾಲ್ವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆಜಿಎಫ್‌ ತಾಲ್ಲೂಕಿನ ಪಾರಾಂಡಹಳ್ಳಿಯ ನಾಗರಾಜ್‌ (50), ಕೋಲಾರದ ಟಮಕದ ಶಿವ (37), ತಾಲ್ಲೂಕಿನ ಶಿಳ್ಳಂಗೆರೆಯ ಜ್ಞಾನದೇವ (36) ಹಾಗೂ ಕೆಜಿಎಫ್‌ ತಾಲ್ಲೂಕಿನ ಬೇತಮಂಗಲದ ವರುಣ್‌ (22) ಬಂಧಿತರು.ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದ ಆರೋಪ ನಾಗರಾಜ್‌ ಮೇಲಿದೆ. ಆತನಿಂದ ₹ 1.27 ಲಕ್ಷ ಮೌಲ್ಯದ ಬಂಗಾರದ ತಾಳಿ, ₹ 2.85 …

Read More »

ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಬಸ್ ಅಪಘಾತ: ಮೂವರು ಸಾವು, ಹಲವರಿಗೆ ಗಾಯ

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಬಿಹಾರ ಕಡೆಗೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಮೂವರು ಪ್ರಾಣ ಕಳೆದುಕೊಂಡಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಘಟನೆಯ ನಂತರ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಕಾನ್ಪುರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಕಾರ್ಯ ತ್ವರಿತವಾಗಿ ನಡೆದಿದೆ. ಬಸ್ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ವೇಳೆ ಈ …

Read More »

ಸಮಸ್ಯೆ ಹೇಳಿಕೊಳ್ಳಲು ಬಂದ ವ್ಯಕ್ತಿ ಮೇಲೆ ಕಾಂಗ್ರೆಸ್‌ ಶಾಸಕನಿಂದ ಹಲ್ಲೆ; ಸತ್ಯ ಬಾಯ್ಬಿಟ್ಟ ವ್ಯಕ್ತಿ

ಮೈಸೂರು: ಜಿಲ್ಲೆಯ ಕೆಆರ್‌ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಿ ರವಿಶಂಕರ್‌ ವೇದಿಕೆ ಮೇಲೆ ಸಾರ್ವಜನಿಕರ ಕುಂದು ಕೊರತೆ ಕೇಳುತ್ತಿದ್ದಾಗ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಆದರೆ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿ ಮಹಾದೇವ್‌ ಪ್ರತಿಕ್ರಿಯಿಸಿದ್ದು, ಶಾಸಕರು ತನ್ನ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ, ಬದಲಾಗಿ ತನ್ನ ಬೆನ್ನು ತಟ್ಟಿ ಪಕ್ಕದಲ್ಲಿ ಕೂರಿಸಿದರು ಎಂದು ಹೇಳಿದ್ದಾರೆ. ವೇದಿಕೆ ಮೇಲೆ ಹಲವರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಆಗ …

Read More »

ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಪತ್ತೆ! ಮೂವರು ವಿದೇಶಿಗರು ಅರೆಸ್ಟ್

ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಕೋಟ್ಯಾಂತರ ಮೌಲ್ಯದ ಮಾದಕವಸ್ತು ಸೀಜ್ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರು ವಿದೇಶಿಗರನ್ನು ಅರೆಸ್ಟ್ ಮಾಡಿದ್ದಾರೆ.ಆರೋಪಿಗಳಿಂದ ಬರೋಬ್ಬರಿ 3.5 ಕೆಜಿ ತೂಕದ ಮೂರುವರೆ ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಹಾಗೂ ಹೈಡ್ರೋ ಗಾಂಜಾ ಸೀಜ್ ಮಾಡಿದ್ದಾರೆ.ಆರೋಪಿಗಳು ಬೇರೆಡೆಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ತರಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Read More »

ಹಗಲಲ್ಲಿ ಬಿರಿಯಾನಿ ಮಾರಾಟ, ರಾತ್ರಿಯಾದ್ರೆ ಬೈಕ್ ಕಳ್ಳತನ | ಖತರ್ನಾಕ್‌ ಕಳ್ಳರ ಬಂಧನ

ಬೆಂಗಳೂರು : ಹಗಲಲ್ಲಿ ತಳ್ಳೋ ಗಾಡಿಯಲ್ಲಿ ಬಿರಿಯಾನಿ ಮಾರಾಟ ಮಾಡಿದರೇ ರಾತ್ರಿಯಾದರೆ ಬೈಕ್‌ ಕಳ್ಳತನ ಮಾಡುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.ಮನುಕುಮಾರ್, ಸಚಿನ್ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಖತರ್ನಾಕ್ ಕಳ್ಳರು ಅಕ್ಕ-ತಂಗಿಯರನ್ನು ಮದುವೆಯಾಗಿದ್ದರು.ಕಳೆದ ಹತ್ತು ವರ್ಷದಿಂದ ಬಿರಿಯಾನಿ ಮಾರಿಕೊಂಡು, ಕತ್ತಲಾದ್ರೆ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್, ಡ್ಯೂಕ್ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.ಹೆಂಡತಿಯರ ಜೊತೆ ಮೋಜು- ಮಸ್ತಿ ಗಾಗಿ ಬೈಕ್ ಕಳ್ಳತನದ ಹಾದಿ ಹಿಡಿದ್ದರು. ಗಂಡಂದಿರು …

Read More »