Breaking News

BigTv News

ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕ್ಕೆ ಸಹೋದರನ ಆಗ್ರಹ

ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಅವರು ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 14 ವರ್ಷಗಳಿಂದ ಶಾರ್ಜಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಜುಲೈ 20ರಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಉಡುಪಿ ಎಸ್ಪಿಗೆ ಮನವಿ ಸಲ್ಲಿಸಿದ್ದು, ತನಿಖೆ ವೇಳೆ ಒಮನ್‌ಗೆ ತೆರಳುವ ಮಾರ್ಗದ ಬದಿಯಲ್ಲಿ ಕಾರಿನಲ್ಲಿ ಎರಡು ಬ್ಯಾಗ್‌ಗಳಲ್ಲಿ 9 ತುಂಡುಗಳಾಗಿ ತುಂಬಿಸಿಟ್ಟಿದ್ದ ಮೃತದೇಹ ಪತ್ತೆಯಾಗಿದೆ. …

Read More »

ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಮತ್ತೊಂದು ತಿರುವು: ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗೆ 13 ಬಾರಿ ಕರೆ ಮಾಡಿದ್ದ ಶಾಂತ ಹೊಸಮನಿ!

ಬೆಂಗಳೂರು: ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಹಾಗೂ KASಗೆ ಆಯ್ಕೆಯಾದ ಅಭ್ಯರ್ಥಿ ನಡುವೆ ಮೇ 8ರ ಸಂದರ್ಶನಕ್ಕೂ ಮುನ್ನ 13 ಬಾರಿ ದೂರವಾಣಿ ಕರೆ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಭ್ಯರ್ಥಿಯಿಂದ 8 ಹಾಗೂ ಹೊಸಮನಿ ಅವರಿಂದ 5 ಕರೆಗಳು ನಡೆದಿವೆ. ಅಭ್ಯರ್ಥಿ, ವೈದ್ಯೆಯಾಗಿರುವ ಹೊಸಮನಿ ಅವರಿಂದ ಸಲಹೆ ಪಡೆಯಲು ಸಂಪರ್ಕಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಕರೆಗಳಲ್ಲಿ ಏನು ಚರ್ಚಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. CDR, ವಾಟ್ಸಾಪ್ ಹಾಗೂ …

Read More »

ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರೋಬ್ಬರಿ 28 ಕೋಟಿ ರೂ. ಹೈಡ್ರೋ ಗಾಂಜಾ ಹಾಗೂ 1.75 ಕೋಟಿ ರೂ ಚಿನ್ನ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ₹28 ಕೋಟಿ ಮೌಲ್ಯದ 80.11 ಕೆಜಿ ಹೈಡ್ರೋಪೋನಿಕ್ ಗಾಂಜಾ ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್ ಹಾಗೂ ವಿಯೆಟ್ನಾಂನಿಂದ ಬಂದ ಪ್ರಯಾಣಿಕರ ಲಗೇಜ್ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಐವರನ್ನು ಬಂಧಿಸಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಇದೇ ವೇಳೆ ಅಬುದಾಬಿ ಹಾಗೂ ಕೌಲಾಲಂಪುರದಿಂದ ಬಂದ ಪ್ರಯಾಣಿಕರಿಂದ ₹1.75 ಕೋಟಿ ಮೌಲ್ಯದ 1.2 …

Read More »

ಲಂಚ ಪ್ರಕರಣ: ಬಜ್ಪೆ ಠಾಣೆಯ Police Inspector ಬಾಲಕೃಷ್ಣ ಲೋಕಾಯುಕ್ತ ಬಲೆಗೆ

ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯ ವಂಚನೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಾಲಕೃಷ್ಣ ಅವರು ಈಗಾಗಲೇ ₹15 ಸಾವಿರ ಮುಂಗಡ ಪಡೆದಿದ್ದು, ಉಳಿದ ₹10 ಸಾವಿರ ನೀಡುವಂತೆ ಸಂತ್ರಸ್ತರಿಗೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಸೋಮವಾರ ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣ ಸಹಿತ ಅವರನ್ನು ವಶಕ್ಕೆ …

Read More »

ಬೆಂಗಳೂರಿಗೂ ಕಾಲಿಡ್ತು ಕಟ್ಟಾ ದಂಧೆ – ಕಂಟ್ರಿ ಪಿಸ್ತೂಲ್‌ ಮಾರಾಟ ಜಾಲ ಬಯಲು!

ಆನೇಕಲ್‌ನಲ್ಲಿ ನಡೆಯುತ್ತಿದ್ದ ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಮಧ್ಯಪ್ರದೇಶ ಮೂಲದ ಪ್ರಮುಖ ಆರೋಪಿ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 5 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದಿಂದ ರೈಲಿನ ಮೂಲಕ ಪಿಸ್ತೂಲ್‌ಗಳನ್ನು ಆನೇಕಲ್‌ಗೆ ತಂದು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಾಲ್ದೇನಹಳ್ಳಿ ರೈಲ್ವೇ ಗೇಟ್ ಬಳಿ ಅನುಮಾನಾಸ್ಪದವಾಗಿ ಸಿಕ್ಕಿಬಿದ್ದ ಪ್ರದೀಪ್ ರಮೇಶ್‌ನ ವಿಚಾರಣೆಯಿಂದ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ. …

Read More »

ಮಂಡ್ಯ ಲೋಕಾಯುಕ್ತ ದಾಳಿ: ಹಾಸ್ಟೆಲ್ ವಾರ್ಡನ್ ಮನೆಯಲ್ಲೇ ಮಿನಿಬಾರ್, ಕೈ ಇಟ್ಟಲ್ಲೆಲ್ಲಾ ಕಾಸು, ಕದ್ದ ಮಾಲು!

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಿವೃತ್ತ ಬಿಸಿಎಂ ಹಾಸ್ಟೆಲ್ ಸೂಪರಿಡೆಂಟ್ ಶಿವರಾಜು ಅವರ ಮನೆ ಹಾಗೂ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ಬಟ್ಟೆ, ಸೀರೆ, ಕೈಗಡಿಯಾರ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮನೆಯಲ್ಲೇ ನೂರಾರು ಮದ್ಯದ ಬಾಟಲಿಗಳು ಹಾಗೂ ಚಿನ್ನಾಭರಣ ಸೇರಿದಂತೆ ಅಕ್ರಮ ಆಸ್ತಿ ಪತ್ತೆಯಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಬೇಕಿದ್ದ ಸವಲತ್ತುಗಳನ್ನು ಮನೆಗೆ ಸಾಗಿಸಿ ದಾಸ್ತಾನು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಲೋಕಾಯುಕ್ತ …

Read More »

ನಿಲ್ಲಿಸಿದ್ದ ಕಿಯಾ ಕಾರನ್ನು ರಾಡ್‌ನಿಂದ ಜಜ್ಜಿ ಪುಡಿಪುಡಿ ಮಾಡಿದ ಕಿಡಿಗೇಡಿ, ಶಾಕಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನೆಲಮಂಗಲ: ಅರಿಶಿನಕುಂಟೆ ಸಮೀಪದ ಅಕ್ಷರ ಕೌಂಟಿ ಲೇಔಟ್‌ನಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಬದಿ ನಿಲ್ಲಿಸಿದ್ದ ಕಿಯಾ ಕಾರಿನ ಮೇಲೆ ಸಿಆರ್‌ಆರ್ ರಾಡ್‌ನಿಂದ ದಾಳಿ ನಡೆಸಿ ಹಾನಿಗೊಳಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ದುಷ್ಕರ್ಮಿ ಕಾರಿನ ಮುಂಭಾಗ, ಹಿಂಭಾಗ, ಕಿಟಕಿ ಗ್ಲಾಸ್ ಹಾಗೂ ಬಾಡಿ ಭಾಗಕ್ಕೆ ರಾಡ್‌ನಿಂದ ಹೊಡೆದು ಹಾನಿ ಮಾಡಿ ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿದೆ. ಕಾರು ಸ್ಥಳೀಯ ನಿವಾಸಿ ಭರತ್ ಅವರಿಗೆ ಸೇರಿದ್ದಾಗಿದೆ. ಘಟನೆ ಕುರಿತು ಭರತ್ ನೀಡಿದ …

Read More »

ಹುಬ್ಬಳ್ಳಿಯಲ್ಲಿ 10 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಆರೋಪ: ಆರೋಪಿ ಮಜೀದ್ ನದಾಫ್ ಬಂಧನ!

ಹುಬ್ಬಳ್ಳಿ: 10 ವರ್ಷದ ಬಾಲಕಿಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅನುಚಿತವಾಗಿ ವರ್ತಿಸಲು ಯತ್ನಿಸಿದ ಆರೋಪದ ಮೇಲೆ 38 ವರ್ಷದ ಮಜೀದ್ ನದಾಫ್ ಎಂಬಾತನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ, ಸಣ್ಣಪುಟ್ಟ ವಸ್ತುಗಳನ್ನು ತರಲು ಹೇಳಿ ಹಣ ನೀಡುವ ಮೂಲಕ ಆಕೆಯ ನಂಬಿಕೆ ಗಳಿಸಲು ಯತ್ನಿಸಿದ್ದ ಎನ್ನಲಾಗಿದೆ. ಇತ್ತೀಚೆಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾನೆ ಎಂದು …

Read More »

ಬೆಂಗಳೂರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ಆತಂಕ ಸೃಷ್ಟಿಸಿದ ಪುಂಡರು

ಬೆಂಗಳೂರು: ಉತ್ತರಹಳ್ಳಿ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ಪುಂಡರ ಗುಂಪೊಂದು ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ 8.30ರ ಸುಮಾರಿಗೆ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಾಲ್ಕೈದು ಸ್ನೇಹಿತರು ಮಾತನಾಡುತ್ತಿದ್ದಾಗ, ನಾಲ್ಕೈದು ಬೈಕ್‌ಗಳಲ್ಲಿ ಬಂದ ಆರೇಳು ಮಂದಿ “ಸೇಂದಿಲ್ ಎಲ್ಲಿ?” ಎಂದು ವಿಚಾರಿಸಿ ಮಚ್ಚು, ಲಾಂಗ್‌ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಸ್ನೇಹಿತರು ಓಡಿ ತಪ್ಪಿಸಿಕೊಂಡಿದ್ದು, ಕಿರಣ್ ಎಂಬಾತ ಸಿಕ್ಕಿಬಿದ್ದು ಮಚ್ಚಿನ ದಾಳಿಗೆ ಗಾಯಗೊಂಡಿದ್ದಾರೆ. …

Read More »

ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!

ತುಮಕೂರು: ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ಗಿಡ ಬೆಳೆದಿರುವ ಘಟನೆ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಹಿತೇಂದ್ರ (28) ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಚೇಳೂರು ಪೊಲೀಸರು ದಾಳಿ ನಡೆಸಿದಾಗ, ತೋಟದಲ್ಲಿ ಗೊಬ್ಬರ ಹಾಕಿ ಬೆಳೆಸಲಾಗಿದ್ದ 8.2 ಅಡಿ ಎತ್ತರದ ಗಾಂಜಾ ಗಿಡ ಪತ್ತೆಯಾಗಿದೆ. ಸುಮಾರು 950 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು …

Read More »