Breaking News

BigTv News

ಬೆಂಗಳೂರಲ್ಲಿ ಆಟೋ ಪಲ್ಟಿಯಾಗಿ ವ್ಯಕ್ತಿ ಒದ್ದಾಡಿ ಒದ್ದಾಡಿ ಸಾವು.

ಸರಕು ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕನ ಎಡಭಾಗದಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಆಟೋ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವೇಳೆ ಸ್ಥಳೀಯರ ನೆರವಿನಿಂದ ಆಟೋ ವನ್ನ ಮೇಲಕ್ಕೆ ಎತ್ತಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನ ಫುಟ್ ಬಾತ್ ನಲ್ಲಿ ಕೂರಿಸಲಾಗಿದೆ. ನಂತರ ಸ್ಥಳೀಯರು ಕೂಡ ಸ್ಥಳದಿಂದ ತೆರಳಿದ್ದಾರೆ. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ವ್ಯಕ್ತಿಯನ್ನ ಅಲ್ಲಿಯೇ ಬಿಟ್ಟು ಚಾಲಕ ಕೂಡ ಆಟೋ ಸಮೇತ …

Read More »

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್.

ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.ಭಾನುವಾರ ರಾತ್ರಿ ಟ್ವೀಟ್ ಮಾಡಿರುವ ಅವರು, “ಈ ವ್ಯಕ್ತಿಗಳು ಹೆಚ್ಚಿನ ಭದ್ರತಾ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ, “ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್​ಎಸ್​ಎಸ್ ಪಾಠ ಸಂಚಾಲನೆ ನಡೆಸಿದಾಗ ಸರ್ಕಾರ …

Read More »

ಹಿರೇಗೌಜ‌ ಗ್ರಾಮದ ಬಳಿ ಎರಡು ಕಾರುಗಳಿ ಮುಖಾಮುಖಿ ಡಿಕ್ಕಿ, ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು!!

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ‌ ಗ್ರಾಮದ ಬಳಿ ಎರಡು ಕಾರುಗಳಿ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚನ್ನಗಿರಿ ಮೂಲದ ಕುಮಾರಪ್ಪ (60) ಮತ್ತು ಸತೀಶ್ (35) ಮೃತಪಟ್ಟವರು. ಇನ್ನೂ ಮತ್ತೊಂದು ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಹೀಗೆ ಎರಡು ಪ್ರತ್ಯಕ ಅಪಘಾತದಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.

Read More »

ಭದ್ರಾ ಕಾಲುವೆಗೆ ಕಾರು ಪಲ್ಟಿ: ಇಬ್ಬರು ಸಾವು.

ಚಾಲಕನ ನಿಯಂತ್ರಣ ತಪ್ಪಿ ಕಾರು ಭದ್ರಾ ಕಾಲುವೆಗೆ ಪಲ್ಟಿಯಾಗಿ, ಇಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿಯ ಹೊಸೂರಿನಲ್ಲಿ ನಡೆದಿದೆ.ಮೃತರನ್ನು ದಾವಣಗೆರೆಯ ಮೂಲದ ಸಿದ್ದೇಶ್ (38), ಮಲ್ಲಿಕಾರ್ಜುನ್ (27) ಎಂದು ಗುರುತಿಸಲಾಗಿದೆ. ಕಾರಿನಲ್ಲಿ 6 ಜನ ಮಂಗಳೂರು ಬಳಿಯ ಕೊರಗಜ್ಜನ ದೇವಸ್ಥಾನಕ್ಕೆ ಹೋಗಿ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ. ಚಾಲಕ ನಿದ್ರೆ ಮಂಪರಿನಲ್ಲಿ ಕಾರು ಚಲಾಯಿಸಿದ್ದೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

Read More »

ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಅಪಘಾತ: ಬೈಕ್ ರೈಡ್‌ಗೆ ತೆರಳಿದ್ದ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ.

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಬೈಕ್‌ನಲ್ಲಿ ರೈಡ್‌ಗೆಂದು ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬೆಂಗಳೂರು ನಗರದ ನಿವಾಸಿಗಳಾದ ಕೇಶವ ಪ್ರಸಾದ್ (21) ಮತ್ತು ಮಯೂರ್ (20) ಮೃತ ಯುವಕರು ಎಂದು ಗುರುತಿಸಲಾಗಿದೆ. ಸ್ನೇಹಿತರಾದ ಇವರಿಬ್ಬರು, ಭಾನುವಾರದ ರಜಾ ದಿನದಂದು ತಮ್ಮ ಬೈಕ್‌ನಲ್ಲಿ ಬೆಂಗಳೂರಿನಿಂದ ಹಾಸನದ ಕಡೆಗೆ ರೈಡ್‌ ಹೊರಟಿದ್ದರು ಎನ್ನಲಾಗಿದೆ. ಮುಂಜಾನೆಯ ಸಮಯದಲ್ಲಿ, ಅತೀ ವೇಗವಾಗಿ ಚಲಿಸುತ್ತಿದ್ದ ಬೈಕ್, ಚಾಲಕನ ನಿಯಂತ್ರಣ ತಪ್ಪಿ …

Read More »

ಕೆರೆಗೆ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು. 2 ದಿನದ ಬಳಿಕ ಪ್ರಕರಣ ಬಯಲಿಗೆ.

ಕೆರೆಯಲ್ಲಿ ಈಜಾಡಲು ಹೋಗಿದ್ದ ಇಬ್ಬರೂ ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ರೆಹಮದ್ ಬಾಬಾ (11) ಹಾಗೂ ಅನಿಕೇತ್ ಕುಮಾರ್ (12) ಇಬ್ಬರು ಮೃತ ಬಾಲಕರು. ರೆಹಮದ್ ಆಂಧ್ರಪ್ರದೇಶದ ಮೂಲದಿಂದ ಬಂದಿದ್ದ ದಂಪತಿಯ ಮಗನಾಗಿದ್ದಾನೆ.ಎರಡು ದಿನದಿಂದ ಇಬ್ಬರು ಮಕ್ಕಳು ಮನೆಗೆ ಬಂದಿರಲಿಲ್ಲ. ಪೋಷಕರು ಎಲ್ಲ ಕಡೆ ಹುಡುಕಾಡಿದ್ದರು. ಆದರೆ, ಭಾನುವಾರ ಬೆಳಗ್ಗೆ ಕೆರೆಯಲ್ಲಿ ಎರಡು ಶವಗಳು ಕಂಡು ಪೊಲೀಸರಿಗೆ ಮಾಹಿತಿ …

Read More »

ಅಯ್ಯೋ ದುರ್ವಿಧಿಯೇ.. ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ

ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನ ,ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ. ನಾರಾಯಣ ಪರಶು ಮರಾಠಿ (51), ಮಗನಿಂದ ದಾರುಣವಾಗಿ ಕೊಲೆಯಾದ ವ್ಯಕ್ತಿ.ಕೊಲೆ ಆರೋಪಿ ಮಗ ಹರೀಶ ಮರಾಠಿ (29), ಕೃತ್ಯದ ಬಳಿಕ ಕೊಡಲಿ ಸಹಿತ ಪರಾರಿಯಾಗಿದ್ದಾನೆ. ಮೃತ ನಾರಾಯಣ ಮರಾಠಿ, ತನ್ನ ಪುತ್ರ ಹರೀಶ ಮರಾಠಿ ಮತ್ತು ಪುತ್ರಿ ತಾರಾ ಮರಾಠಿ ಜೊತೆ ವಾಸಿಸುತ್ತಿದ್ದರು. …

Read More »

ಬೇರೆ ಮದುವೆ ಆದ್ರೂ ಪ್ರೇಯಸಿಯ ಹಿಂದೆ ಬಿದ್ದ ಪ್ರಿಯಕರ.. ಹಿಗ್ಗಾಮುಗ್ಗಾ ಥಳಿಸಿದ ಕುಟುಂಬಸ್ಥರು

ಚಿಕ್ಕಬಳ್ಳಾಪುರ:ಚಿಂತಾಮಣಿಯ ಕಟಮಾಚನಹಳ್ಳಿ ಗ್ರಾಮದಲ್ಲಿ ಯುವತಿಗೆ ಪೀಡಿಸುತ್ತಿದ್ದಾನೆಂದು ಕುಟುಂಬಸ್ಥರು ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ನಲ್ಲಗುಟ್ಟಹಳ್ಳಿ ಗ್ರಾಮದ ಆನಂದ್ ಎಂಬುವವನಿಗೆ ಕುಟುಂಬಸ್ಥರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಇತನು ಶ್ರಾವಣಿ ಎಂಬುವಳೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದನು.ಬಳಿಕ ಇಕೆ ಆನಂದ್ ಜೊತೆ ಬ್ರೇಕಪ್ ಮಾಡಿಕೊಂಡು ಬೇರೆ ವಿವಾಹವಾಗಿದ್ದಳು. ಇದರಿಂದ ಕೋಪಗೊಂಡ ಆನಂದ್‌ ವಿವಾಹದ ಬಳಿಕವೂ ಶ್ರಾವಣಿ ಹಿಂದೆ ಬಿದ್ದು ಆನಂದ್‌ ಪೀಡಿಸುತ್ತಿದ್ದ.ಅಲ್ಲದೇ, ಶ್ರಾವಣಿ ಜೊತೆ ತೆಗೆದ ಫೋಟೋ ಊರೆಲ್ಲಾ ಹರಿದಾಡುವಂತೆ ಮಾಡಿದ್ದನು. ಕಟಮಾಚನಹಳ್ಳಿ ಗ್ರಾಮದ ಬಳಿ ಸಿಕ್ಕಿಬಿದ್ದ ಆನಂದ್‌ಗೆ ಕುಟುಂಬಸ್ಥರು …

Read More »

ಕಟ್ಟಡದ ಮೆಟ್ಟಿಲಿನಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೆಟ್ಟಿಲು ಇಳಿಯುತ್ತಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನ.7ರಂದು ಆಸೋಡು ಗ್ರಾಮದ ಹೂವಿನಕೆರೆ ಮಠ ಎಂಬಲ್ಲಿ ನಡೆದಿದೆ.ಮೃತರನ್ನು ಜಾರ್ಖಂಡ್ ಮೂಲದ ಜಯಂತ(19) ಎಂದು ಗುರುತಿಸಲಾಗಿದೆ.ಇವರು ಕಟ್ಟಡದ ಪಿಲ್ಲರ್‌ನ ಕಾಂಕ್ರೀಟ್ ಕಾಮಗಾರಿಯ ಕೆಲಸ ಮಾಡುತ್ತಿದ್ದು ಕಟ್ಟಡದ ಕಾಂಕ್ರಿಟ್ ಕೆಲಸ ನಿರ್ವಹಿಸಿದ ಕಾರಣ ಮೆಟ್ಟಿಲಿನಲ್ಲಿ ನೀರು ಬಿದ್ದಿತ್ತೆನ್ನಲಾಗಿದೆ. ಇವರು ಊಟಕ್ಕಾಗಿ ಕಟ್ಟಡದ ಮೇಲಿನಿಂದ ಮೆಟ್ಟಿಲಿನಲ್ಲಿ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ …

Read More »

ಹಾಸನದಲ್ಲಿ ಘೋರ ದುರಂತ : ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರು ಪಾಲು

ಹಾಸನದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನಿರುಪಾಲಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹುಂಡಿಗನಾಳ ಎಂಬ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವಿಜಯಕುಮಾರ್ (12) ಹಾಗು ಸುಜನ್ (13) ಎಂದು ತಿಳಿದುಬಂದಿದೆ.ಗ್ರಾಮದ ಕೆರೆಯಲ್ಲಿ ವಿಜಯಕುಮಾರ್ ಸುಜನ್ ಸೇರಿದಂತೆ ಐವರು ಈಜಲು ತೆರಳಿದರು ಈ ವೇಳೆ ವಿಜಯಕುಮಾರ್ ಮತ್ತು ಸುಜನ್ ಕೆರೆಯಲ್ಲಿ ನಿರುಪಾಲಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಜಾವಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ …

Read More »