Breaking News

BigTv News

ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ : ಚಾಲಕ ಮೃತ್ಯು

ರಾಯಚೂರು : ರಾಯಚೂರು ತಾಲೂಕಿನ ಗಾರಲದಿನ್ನಿ ಸಮೀಪ ಹತ್ತಿ ತುಂಬಿಕೊಂಡು ಮಾರಾಟಕ್ಕೆ ತೆರಳುತ್ತಿದ್ದ ಪಿಕ್‌ಅಪ್ ವಾಹನದ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.ಮೃತ ಚಾಲಕನನ್ನು ನರಸಿಂಹ (33) ಎಂದು ಗುರುತಿಸಲಾಗಿದೆ.ಬೆಳಿಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆ ಕಡೆ ತೆರಳುತ್ತಿದ್ದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿದ ವಾಹನ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ.ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು …

Read More »

ಗೋಂದಿ ಚಟ್ನಳ್ಳಿ ಬಳಿ ಭೀಕರ ಅಪಘಾತ: ದಾವಣಗೆರೆಯ ಓರ್ವ, ಉ.ಪ್ರದೇಶದ ಇಬ್ಬರು ಸಾವು

ಶಿವಮೊಗ್ಗ: ನಗರದ ಹೊರವಲಯದ ಗೋಂದಿ ಚಟ್ನಳ್ಳಿ ಗ್ರಾಮದ ಸಮೀಪ ಗುರುವಾರ (ಅ.30) ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಘಟನೆ ನಡೆದಿದೆ.ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ಸಾಗುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಅಸಾದುಲ್ಲಾ (50 ವ), ಸಾದಿಕ್ (30 ವ), ಮತ್ತು ಫಿರೋಜ್ …

Read More »

ದಾರುಣ ಘಟನೆ: ವಿದ್ಯುತ್ ತಂತಿ ತಗುಲಿ ತಾಯಿ-ಮಗ ಸಾವು!

ಸೂರು:- ಹುಣಸೂರು ತಾಲೂಕು ಎಮ್ಮೆಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.ಮೃತರನ್ನು ನೀಲಮ್ಮ (39), ಹರೀಶ್ (19) ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ.ಜಮೀನಿಗೆ ಕೆಲಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಮೊದಲು ತಾಯಿ ನೀಲಮ್ಮಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ವೇಳೆ ತಾಯಿಯನ್ನು ರಕ್ಷಣೆ ಮಾಡಲು ಹೋದ ಮಗ ಕೂಡ ಬಲಿಯಾಗಿದ್ದಾನೆ.ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ …

Read More »

ಡಿಜಿಟಲ್‌ ಅರೆಸ್ಟ್‌: ₹68.50 ಲಕ್ಷ ವಂಚನೆ

ಹುಬ್ಬಳ್ಳಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಆಧಾರ್‌ ಕಾರ್ಡ್‌ ಬಳಕೆಯಾಗಿದೆ ಎಂದು ನಗರದ ಗೋಕುಲ ರಸ್ತೆಯ ಹಾಲಪ್ಪ ಸಾಬೋಜಿ ದಂಪತಿಗೆ ಮುಂಬೈ ಪೊಲೀಸ್‌ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿ, ಡಿಜಿಟಲ್‌ ಅರೆಸ್ಟ್‌ ಮಾಡುತ್ತೇವೆ ಎಂದು ಬೆದರಿಸಿ ₹68.50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.ಮುಂಬೈನ ಕೊಲಾಬಾ ಪೊಲೀಸ್‌ ಠಾಣೆಯಿಂದ ವಾಟ್ಸ್‌ಆಯಪ್‌ ವಿಡಿಯೊ ಕರೆ ಮಾಡುತ್ತಿರುವುದಾಗಿ, ಹಾಲಪ್ಪ ದಂಪತಿಗೆ ನಂಬಿಸಿದ್ದಾನೆ. ನಂತರ ಅವನು ಆಧಾರ್‌ ಕಾರ್ಡ್‌ಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ನಡೆಸಲಾಗಿದೆ. ಜಾಮೀನಿನ …

Read More »

ಮನೆಗೆ ನುಗ್ಗಿ ಕಳ್ಳತನ ಮಾಡಿ ಬಸ್‌, ರೈಲಿನಲ್ಲಿ ಪರಾರಿ: ಇಬ್ಬರ ಬಂಧನ

ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಬಸ್, ರೈಲು ಹಾಗೂ ಆಟೊದಲ್ಲಿ ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕೋಲಾರ ಜಿಲ್ಲೆಯ ಕೆಜಿಎಫ್‌ನ ಶಾಂತಕುಮಾರ್ ಹಾಗೂ ಜ್ಞಾನಪ್ರಕಾಶ್ ಬಂಧಿತರು.ಬಂಧಿತರಿಂದ ₹72 ಲಕ್ಷ ಮೌಲ್ಯದ 614 ಗ್ರಾಂ ಚಿನ್ನ ಹಾಗೂ 470 ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ವಿಶ್ವಪ್ರಿಯ ಲೇಔಟ್‌ನ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು …

Read More »

ಹಿಮಾಲಯದ ಚಮರಿಮೃಗ ಶಿರಸಿಯಲ್ಲಿ- ಆರೈಕೆ ಕೇಂದ್ರದಲ್ಲಿ ಇದೇ ಎಲ್ಲರ ಆಕರ್ಷಣೆ

ಹಿಮಾಲಯದಂತಹ ಎತ್ತರದ ಪರ್ವತ ಹಾಗೂ ತಂಪಾದ ಪ್ರದೇಶದಲ್ಲಿ ಕಂಡು ಬರುವ ಯಾಕ್‌ ಅಥವಾ ಚಮರಿಮೃಗವನ್ನು ಈಗ ಉತ್ತರಕನ್ನಡದ ಶಿರಸಿಯಲ್ಲಿ ಪೋಷಿಸಲಾಗುತ್ತಿದೆ.ಚಮರಿಮೃಗಗಳೂ ಆರೋಗ್ಯವಾಗಿವೆ. ಶಿರಸಿಯ ವಾತಾವರಣಕ್ಕೂ ಹೊಂದಿಕೊಳ್ಳುತ್ತಿವೆ. ಅವುಗಳು ಇಲ್ಲಿ ಒಗ್ಗಿಕೊಳ್ಳಲು ಸಹಾಯ ಮಾಡುವಂತೆ ಹಿಮಾಚಲದ ವಾತಾವರಣದ ಅನುಭವಕ್ಕಾಗಿ ಶೆಡ್‌ನಲ್ಲಿ ಫ್ಯಾನ್‌ಗಳ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದರು.

Read More »

ಬೆಳೆ ಹಾನಿ-ಸಾಲ; ನೇಣಿಗೆ ಶರಣಾದ ರೈತ

ರೈತ ಶಿವಕುಮಾರ್ ಅವರು ಬೆಳೆ ಹಾನಿ ಉಂಟಾಗಿ ಮಾಡಿದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಶಿವಕುಮಾರ್ ತನ್ನ 4 ಎಕರೆ ಹೊಲದಲ್ಲಿ ಹತ್ತಿ ಬೆಳೆದು ಸುಮಾರು (ಅಂದಾಜು) 5-6 ಲಕ್ಷ ರೂ. ಬೆಳೆಹಾನಿಯಾಗಿರುವ ಕಾರಣ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ತನಿಖೆ ನಡೆಸಿ, ಆರೋಗ್ಯ ವರದಿಗಳು ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ಗುರುಮಠಕಲ್ ತಹಶಿಲ್ದಾರ ಸ್ಪಷ್ಟನೆ ನೀಡಿದ್ದಾರೆ.

Read More »

Raichur: ಹತ್ತಿ ಸಾಗಿಸುತ್ತಿದ್ದ ವಾಹನ ಚಾಲಕ ಹೃದಯಾಘಾತದಿಂದ ಸಾವು!

ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನದ ಚಾಲಕನಿಗೆ ಹೃದಾಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಗಾರಲದಿನ್ನಿ ಸಮೀಪ ಸಂಭವಿಸಿದೆ. ಚಾಲಕ ನರಸಿಂಹ (33) ಮೃತ ವ್ಯಕ್ತಿ. ಬೆಳಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಎದೆನೋವು ಕಾಣಿಸಿಕೊಂಡಿದ್ದು, ವಾಹನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ.

Read More »

BREAKING : ಶಿವಮೊಗ್ಗದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು!

ನಿದ್ದೆ ಮಂಪರಿನಲ್ಲಿ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಬಾಳೆಹೊನ್ನೂರಿನಲ್ಲಿ ಕಾರ್ಪೆಂಟರ್ ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಸ್ ಆಗುವ ವೇಳೆ ಈ ಒಂದು ಭೀಕರವಾದ ಅಪಘಾತ ಸಂಭವಿಸಿದೆ. ಅದೃಷ್ಟ ವಶಾಂತ್ ಚಾಲಕ ಪ್ರಣಾಪಯದಿಂದ ಪಾರಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಮೃತರನ್ನು ಅಸಾದುಲ್ಲ (35) ಸಾಧಿಕ್ (31) ಫೈರೋಜ್ (33) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

Read More »

ಉಡುಪಿಯಲ್ಲಿ ಬಾಗಲಕೋಟೆ ಮೂಲದ 18ರ ಯುವತಿ ನಾಪತ್ತೆ

ಬಾಗಲಕೋಟೆ ಜಿಲ್ಲೆಯವರಾದ ಹಾಗೂ ಪ್ರಸ್ತುತ ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯಲ್ಲಿ ವಾಸವಿದ್ದ ನೀಲಗಂಗಾ ಕುರಿ (18) ಎಂಬ ಯುವತಿ ನಾಪತ್ತೆಯಾಗಿದ್ದಾರೆ. ಈ ಯುವತಿ ಅಕ್ಟೋಬರ್ 25ರಂದು ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಇಲ್ಲಿಯವರೆಗೆ ವಾಪಾಸು ಬಂದಿಲ್ಲ.ಯುವತಿಯು ಸುಮಾರು 5 ಅಡಿ 3 ಇಂಚು ಎತ್ತರ ಇದ್ದು, ಸದೃಢ ಶರೀರ ಮತ್ತು ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ಅವರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಯುವತಿ ಬಗ್ಗೆ …

Read More »