ಟಿಪ್ಪರ್ ಹಾಗೂ ಇನೋವಾ ಕಾರಿನ ನಡುವೆ ಡಿಕ್ಕಿಯಾಗಿ ಕಾರು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ.ತಕ್ಷಣ ಕಾರು ಹೊತ್ತಿ ಉರಿದಿತ್ತು. ಕಾರಿನಿಂದ ಹೊರಬರಲಾರದೆ ಚಾಲಕ ಸಾವನ್ನಪ್ಪಿದೆ.ಚಂದ್ರಶೇಖರ್ ಮೃತದೇಹವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
Read More »ಶಿವಮೊಗ್ಗದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು!
ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿ ಮೂವರು ಸಾವನಪ್ಪಿದ್ದಾರೆ. ಶಿವಮೊಗ್ಗದ ಗೊಂದಿ ಚಟ್ನಿಹಳ್ಳಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮೃತರನ್ನು ಅಸಾದುಲ್ಲ (35) ಸಾಧಿಕ್ (31) ಫೈರೋಜ್ (33) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.ನಿದ್ದೆ ಮಂಪರಿನಲ್ಲಿ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಬಾಳೆಹೊನ್ನೂರಿನಲ್ಲಿ ಕಾರ್ಪೆಂಟರ್ ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಸ್ ಆಗುವ ವೇಳೆ ಈ ಒಂದು ಭೀಕರವಾದ …
Read More »ಪರ್ಸ್ ಕಳವಾಯಿತೆಂದು ರೈಲಿನ ಕಿಟಕಿ ಗಾಜನ್ನು ಒಡೆದ ಮಹಿಳೆ
ಇಂದೋರ್ ನ ರೈಲಿನಲ್ಲಿ ಪರ್ಸ್ ಕಳ್ಳತನವಾದರೂ ಸರಿಯಾದ ಸಮಯಕ್ಕೆ ಆರ್ಪಿಎಫ್ ಸಹಾಯಕ್ಕೆ ಬರಲಿಲ್ಲವೆಂದು ಮಹಿಳೆಯೊಬ್ಬಳು ರೈಲಿನ ಕಿಟಕಿ ಗಾಜನ್ನು ಒಡೆದಿರುವ ಘಟನೆ ಇಂದೋರ್ನಿಂದ ದೆಹಲಿ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ ನಡೆದಿದೆ.ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಸೀಟಿನಲ್ಲಿ ಕುಳಿತಿದ್ದು, ಟ್ರೇಯಲ್ಲಿ ಕಿಟಕಿ ಗಾಜನ್ನು ಒಡೆಯುತ್ತಿರುವುದು ಕಂಡುಬರುತ್ತದೆ. ಜೊತೆಗೆ ಸೀಟ್ ಮತ್ತು ನೆಲೆದ ಮೇಲೆ ಕಿಟಕಿ ಗಾಜು ಬಿದ್ದಿರುವುದನ್ನು ಕೂಡ ಕಾಣಬಹುದು.
Read More »ಮಂಡ್ಯದಲ್ಲಿ ಘೋರ ದುರಂತ : ಟಿಪ್ಪರ್ ಡಿಕ್ಕಿಯಾಗಿ ಕಾರು ಹೊತ್ತಿ ಉರಿದು ಚಾಲಕ ಸಜೀವ ದಹನ.!
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಕಾರೊಂದು ಹೊತ್ತಿ ಉರಿದಿದ್ದು, ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ.ಟಿಪ್ಪರ್ ಗೆ ಇನೋವಾ ಕಾರು ಡಿಕ್ಕಿಯಾಗಿ ಕಾರಿಗೆ ಬೆಂಕಿ ತಗುಲಿದೆ. ನಂತರ ಕಾರಿನಿಂದ ಹೊರಬರಲಾರದೇ ಚಂದ್ರಶೇಖರ್ ಎಂಬುವವರು ಸಜೀವವಾಗಿ ದಹನವಾಗಿದ್ದಾರೆ.ಮೃತರನ್ನು ಹುಣಸೂರು ಮೂಲದ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಬೆಂಕಿ ತಗುಲಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಆದರೆ ಅಷ್ಟರಲ್ಲೇ ಚಂದ್ರಶೇಖರ್ ಸುಟ್ಟು ಕರಕಲಾಗಿದ್ದರು. ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Read More »ಪಾಕಿಸ್ತಾನದಲ್ಲಿ ‘ಟಿಟಿಪಿ’ ಭೀಕರ ದಾಳಿ : ಪಾಕ್ ಸೇನಾ ಕ್ಯಾಪ್ಟನ್ ಸೇರಿದಂತೆ 7 ಸೈನಿಕರು ಬಲಿ.!
ದೇಶದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಮಿಲಿಟರಿಯೊಂದಿಗೆ ನಡೆದ ಮಾರಕ ಘರ್ಷಣೆಯ ಪರಿಣಾಮವಾಗಿ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ನಡೆಸಿದ ದಾಳಿಯಲ್ಲಿ ಕನಿಷ್ಠ 17 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕುರ್ರಮ್ ಜಿಲ್ಲೆಯ ಸುಲ್ತಾನ್ ಕಲಾಯ್ ಪ್ರದೇಶದಲ್ಲಿ ಟಿಟಿಪಿ ಉಗ್ರರು ಸೈನಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಅವರು ಭದ್ರತಾ ಪಡೆಗಳ ಮೇಲೆ ಬಾಂಬ್ ದಾಳಿ ಮತ್ತು ತೀವ್ರವಾದ ಗುಂಡಿನ ದಾಳಿ ನಡೆಸಿದ್ದಾರೆ, ಇದು ಬಹುಶಃ ಗುಂಪಿನ ಮಾರಕ …
Read More »ಬಂಟ್ವಾಳದ ಪಾಣೆಮಂಗಳೂರು ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ನಾಪತ್ತೆ; ನೇತ್ರಾವತಿ ನದಿಯಲ್ಲಿ ಶೋಧ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ತಮ್ಮ ಇಲೆಕ್ಟ್ರಿಕ್ ರಿಕ್ಷಾವನ್ನು ನಿಲ್ಲಿಸಿ ಚಾಲಕರೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಘಟನೆ ನಡೆದ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿದ ಸ್ಥಳೀಯರು, ಅವರು ನೇತ್ರಾವತಿ ನದಿಗೆ ಹಾರಿರುವ ಸಾಧ್ಯತೆಯ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ.ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಶಂಕೆಯ ಹಿನ್ನೆಲೆಯಲ್ಲಿ, …
Read More »ಚಿಕ್ಕಮಗಳೂರು: ನೀರಿಗೆ ಬಿದ್ದಿದ್ದ ಚಿನ್ನಾಭರಣ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ..
ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು.ಅದರಲ್ಲಿದ್ದ ಜುವೆಲರಿ ಅಂಗಡಿಯ ಮಾಲಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿತ್ತು. ಕೂಡಲೇ ಈಶ್ವರ್ ಮಲ್ಪೆಗೆ ಕರೆ ತಿಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ ಈಶ್ವರ್ ಮಲ್ಪೆ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿದರು.ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ …
Read More »ಜಗಳ ಮಾಡುತ್ತಿದ್ದ ಪತ್ನಿಯನ್ನು ಕಬ್ಬಿಣದ ಪೈಪಿನಿಂದ ಹೊಡೆದು ಕೊಲೆ ಮಾಡಿದ ಪತಿ!
ಪತಿ-ಪತ್ನಿ ಮಧ್ಯೆ ನಿತ್ಯ ಜಗಳವಾಗುತ್ತಿದ್ದು, ಇದರಿಂದ ಕೋಪಗೊಂಡಿದ್ದ ಪತಿ, ಪತ್ನಿಗೆ ಕಬ್ಬಿಣದ ಪೈಪಿನಿಂದ ಹೊಡೆದು ಕೊಲೆ ಮಾಡಿದ್ದಾನೆ.ರಕ್ತಸ್ರಾವದಿಂದ ಬಳಲುತ್ತಿದ್ದ ಮಂಜುಳಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಕಾಫಿತೋಟವೊಂದರ ಲೈನ್ ಮನೆಯಲ್ಲಿ ಮಂಜುಳಾ ವಾಸವಿದ್ದರು. ದಂಪತಿ ನಿತ್ಯ ಜಗಳ ಆಡುವುದನ್ನು ನೋಡಿದ್ದ ತೋಟದ ರೈಟರ್ ಕೆಲಸಕ್ಕೆ ಬರಬೇಡಿ ಎಂದಿದ್ದರು. ಇದರಿಂದಾಗಿ ನೊಂದಿದ್ದ ಪತಿ ಮಗುವಿನ ಎದುರೇ ತಾಯಿಯನ್ನು ಕೊಂದಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬೆಂಗಳೂರು | ಮನೆಗೆ ನುಗ್ಗಿ ಕಳ್ಳತನ ಮಾಡಿ ಬಸ್, ರೈಲಿನಲ್ಲಿ ಪರಾರಿ: ಇಬ್ಬರ ಬಂಧನ.
ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಬಸ್, ರೈಲು ಹಾಗೂ ಆಟೊದಲ್ಲಿ ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ₹72 ಲಕ್ಷ ಮೌಲ್ಯದ 614 ಗ್ರಾಂ ಚಿನ್ನ ಹಾಗೂ 470 ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ವಿಶ್ವಪ್ರಿಯ ಲೇಔಟ್ನ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
Read More »ನಕಲಿ ಚಿನ್ನವನ್ನು ಅಡವಿರಿಸಿ ಸಹಕಾರಿ ಸಂಘಕ್ಕೆ ವಂಚನೆ!
ಸಹಕಾರಿ ಸಂಘವೊಂದರಲ್ಲಿ ನಕಲಿ ಚಿನ್ನಾಭರಣ ಇರಿಸಿ ವಂಚಿಸಿದ ಪ್ರಕರಣದ ವಿರುದ್ಧ ದೂರು ದಾಖಲಾಗಿದೆ.ಸಂಸ್ಥೆಯ ಚಿನ್ನಪರೀಕ್ಷಕ ಚಿನ್ನವೆಂದು ದೃಢಪಡಿಸಿದ ಅನಂತರ 2 ಲಕ್ಷ ರೂ.ಸಾಲ ನೀಡಲಾಗಿತ್ತು. ಅನಂತರ ವಿನೋದ್ ಆ. 6ರಂದು ಬಂದು ನೆಕ್ಲೇಸ್ ಇರಿಸಿ 1.10 ಲಕ್ಷ ರೂ., ಆ. 26ರಂದು ಪುನಃ ಬಂದು ಸರ ಹಾಗೂ ಬ್ರೇಸ್ಲೆಟ್ ಇರಿಸಿ 1.10 ಲಕ್ಷ ರೂ. ಸಾಲ ಪಡೆದಿದ್ದ.5ರಂದು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಪುನಃ 2.10 ಲಕ್ಷ ರೂ. ಸಾಲ ಪಡೆದಿದ್ದ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





