Breaking News

BigTv News

ಸ್ನಾನ ಮಾಡಿ ಬಿಸಿನೀರಿನ ಹೀಟರ್ ಸ್ವಿಚ್ ಆಫ್ ಮಾಡುವಾಗ ದುರಂತ: 15ರ ಮಗಳು ಇನ್ನಿಲ್ಲ!

ಸ್ನಾನಕ್ಕೆ ನೀರು ಕಾಯಿಸಲು ಹಾಕಿದ್ದ ವಿದ್ಯುತ್ ಹೀಟರ್ ಸ್ಪರ್ಶಿಸಿ 9ನೇ ತರಗತಿ ವಿದ್ಯಾರ್ಥಿನಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಡೆದಿದೆ.ಕೆ.ಎಚ್. ಭಾಗ್ಯಶ್ರೀ (15) ಮೃತಪಟ್ಟ ಬಾಲಕಿ.ಶಾಕ್ ಹೊಡೆದ ರಭಸಕ್ಕೆ ಭಾಗ್ಯಶ್ರೀ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣವೇ ಕುಟುಂಬ ಸದಸ್ಯರು ಆಕೆಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದರೂ, ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು

Read More »

ತೆಂಗಿನಕಾಯಿಗಾಗಿ ತಮ್ಮನ ಹೆಂಡ್ತಿಯನ್ನೇ ಹತ್ಯೆಗೈದ.

ಹಿರಿಯರ ಕಾಲದ ದೇವರ ತೆಂಗಿನಕಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಮತ್ತು ಅವನ ತಮ್ಮನ ನಡುವೆ ಹಿರಿಯರ ಕಾಲದ ದೇವರ ತೆಂಗಿನಕಾಯಿ ಸಲುವಾಗಿ ಜಗಳವಾಗಿತ್ತು.ತಮ್ಮನ ಹೆಂಡತಿ ಭಾಗ್ಯಶ್ರಿಯನ್ನು ಕಬ್ಬಿಣದ ಪಿಕಾಸಿಯಿಂದ ಹೊಡೆದು ಕೊಂದು ಪರಾರಿಯಾಗಿದ್ದು, ಮೂರು ದಿನಗಳ ನಂತರ ಆರೋಪಿ ದೊಂಡು ವರಕ ಪತ್ನಿ ಮನೆಗೆ ಹೋಗಿ ಊಟ ಮಾಡುತ್ತಿದ್ದ …

Read More »

ವಿಜಯನಗರ | ʼಗೃಹಲಕ್ಷ್ಮಿʼ ಹಣದಲ್ಲಿ ನಿರ್ಮಿಸಿದ ಮನೆ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿಸಿದ ದಂಪತಿ

ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ.ಎಂ.ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕೃತಜ್ಞತೆ ಮತ್ತು ಪ್ರೀತಿಯನ್ನು ತಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ಅವರ ಹೆಸರು ಹಾಗೂ ಭಾವಚಿತ್ರ ಕೆತ್ತಿಸುವ ಮೂಲಕ ವ್ಯಕ್ತಪಡಿಸಿದ್ದಾರೆ.ಪಾರ್ವತಮ್ಮ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದು, ಯೋಜನೆ ಆರಂಭದಿಂದಲೇ 15 ತಿಂಗಳುಗಳ ಕಾಲ ಬ್ಯಾಂಕ್ ಖಾತೆಗೆ ಬಂದ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಹಳೆಯ ಮನೆಯ ಬಾಗಿಲು ಸರಿಯಾಗಿರಲಿಲ್ಲ. ಹೀಗಾಗಿ ಇದುವರೆಗೆ …

Read More »

ಸಾವಿನಲ್ಲೂ ಸಾರ್ಥಕತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ KSRTC ಚಾಲಕ: ಕಂಬನಿ ಮಿಡಿದ ಸಚಿವ ರಾಮಲಿಂಗಾರೆಡ್ಡಿ.

ಕೆ ಎಸ್ ಆರ್ ಟಿ ಸಿ ಚಾಲಕ ರಾಜೀವ್ ಬೀರಸಾಲ ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇಂತಹ ಚಾಲಕನ ಸಾವಿಗೆ ಕಂಬನಿ ಮಿಡಿದಿರುವಂತ ರಾಮಲಿಂಗಾರೆಡ್ಡಿ, ಅವಲಂಬಿತರಿಗೆ ನೌಕರಿ, ಆರ್ಥಿಕ ನೆರವಿಗೆ ಸೂಚಿಸಿದ್ದಾರೆ.ವಾಹನ ಚಾಲನೆ ಮಾಡುತ್ತಿದ್ದಾಗ ಹೃದಯಾಘಾತವಾಗಿರುತ್ತದೆ. ಆದರೂ ಬಸ್ಸಿನಲ್ಲಿರುವ ಪ್ರಯಾಣಿಕರನ್ನು ರಕ್ಷಿಸಿ, ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಪಕ್ಕಕ್ಕೆ ನಿಲ್ಲಿಸಿ, ಭಾರಿ ಅನಾಹುತ ತಪ್ಪಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿ ನೆಲಮಂಗಲ …

Read More »

ಇಳಿ ವಯಸ್ಸಿನಲ್ಲಿ ಮದುವೆ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದ ಮಹಿಳೆಯ ಬರ್ಬರ ಹತ್ಯೆ.

ಜೀವನ ಮುಗಿಯುವ ಹೊತ್ತಲ್ಲಿ ಸಂಗಾತಿಯನ್ನು ಅರಸಿ ಮದುವೆಯ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಾರತ ಮೂಲದ ಯುಕೆ ಪ್ರಜೆಯ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಅಮೆರಿಕದಿಂದ ಆತನನ್ನು ಮದುವೆಯಾಗಲು ಭಾರತದ ಪಂಜಾಬ್​​ಗೆ ಬಂದಿದ್ದ 72 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಯುಕೆ ಮೂಲದ 75 ವರ್ಷದ ವ್ಯಕ್ತಿಯನ್ನು ಈ ಮಹಿಳೆ ಪ್ರೀತಿಸುತ್ತಿದ್ದರು. ಮೃತ ಮಹಿಳೆಯನ್ನು ರೂಪಿಂದರ್ ಕೌರ್ ಪಂಧೇರ್ ಎಂದು …

Read More »

ಧಾರವಾಡ | ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ, ದಂಡ.

ಪತ್ನಿಗೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣದಲ್ಲಿ ಕುಂದಗೋಳ ತಾಲ್ಲೂಕಿನ ಭೂಕೊಪ್ಪದ ಈಶ್ವರಪ್ಪ ಅರಳಿಕಟ್ಟಿ ಎಂಬಾತಗೆ ಜೀವಾವಧಿ ಶಿಕ್ಷೆ ಹಾಗೂ ₹55,400 ದಂಡವನ್ನು ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ವಿಧಿಸಿದೆ.ಗುಡಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಬಸವರಾಜ ಕಲ್ಲಮ್ಮನವರ, ಪಿಎಸ್‌ಐ ನವೀನ ಜಕ್ಕಲಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಸರ್ಕಾರಿ ವಕೀಲ ಬಿ.ವಿ.ಪಾಟೀಲ ವಾದ ಮಂಡಿಸಿದ್ದರು.

Read More »

ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ; ಮೇಲ್ಛಾವಣಿ ಬೀಳುವ ಆತಂಕ. ಕಾಂಪೌಂಡ್‌ನಲ್ಲಿ ಕೂತು ಪಾಠ ಕಲಿಯುತ್ತಿರುವ ಮಕ್ಕಳು..!

ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹೊಸ, ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ರಾಜ್ಯದಲ್ಲಿ ಹಲವಾರು ಶಾಲೆಗಳು ಶಿಥಿಲಾ ವ್ಯವಸ್ಥೆಯಲ್ಲಿವೆ. ಒಳ್ಳಾರಿಯಲ್ಲಿ ಸರ್ಕಾರಿ ಶಾಲೆಯೊಂದು ಶಿಥಿಲಾ ವ್ಯವಸ್ಥೆಯಲ್ಲಿದ್ದು, ಕಟ್ಟಡದ ಮೇಲ್ಛಾವಣಿ ಕುಸಿಯುವ ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವಂತಹ ಸ್ಥಿತಿ ಎದುರಾಗಿದೆ.ಹೀಗಾಗಿ, ಯಾವಾಗ ಕಟ್ಟಡ ಬೀಳುತ್ತದೋ ಎಂಬ ಭಯದಲ್ಲಿಯೇ ಶಿಕ್ಷಕರು ಶಾಲಾ ಕಾಂಪೌಂಡ್‌ನಲ್ಲಿ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ.

Read More »

ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬ: ಬುರ್ಜ್ ಖಲೀಫಾ ಲೈಟ್ ಶೋ ಮೂಲಕ ಶುಭ ಕೋರಿದ ದುಬೈ.

ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಹುಟ್ಟುಹಬ್ಬದ ಅಂಗವಾಗಿ ಬುಧವಾರ ರಾತ್ರಿ ದುಬೈನ ಐತಿಹಾಸಿಕ ಬುರ್ಜ್ ಖಲೀಫಾದಲ್ಲಿ ಮೋದಿ ಚಿತ್ರಗಳೊಂದಿಗೆ ಬೆಳಗಿತು.ನರೇಂದ್ರ ಮೋದಿಯವರಿಗೆ ನಿಮ್ಮ ಹುಟ್ಟುಹಬ್ಬದ ಹೃತ್ಪೂರ್ವಕ ಅಭಿನಂದನೆಗಳು. ನೀವು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಮುಂದುವರಿಸಲಿ ಮತ್ತು ಭಾರತದ ಪ್ರಗತಿ ಮತ್ತು ಅದರ ಜನರ ಸಮೃದ್ಧಿಯನ್ನು ಮುನ್ನಡೆಸುವಲ್ಲಿ ನಿರಂತರ ಯಶಸ್ಸನ್ನು ನಾನು ಬಯಸುತ್ತೇನೆ” ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More »

ಪರೀಕ್ಷೆ ವೇಳೆ ಶೌಚಾಲಯಕ್ಕೆ ಹೋಗಿದ್ದ ಬಾಲಕನಿಗೆ ಥಳಿತ.

ಪಟ್ಟಣದ ಎಸ್‌ಡಿವಿಎಸ್‌ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಗುರು ಪ್ರಸಾದ್‌ ಎಂಬಾತನ ಮೇಲೆ ಶಿಕ್ಷಕಿ ಭಾನುಮತಿ ಹಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಶಿಕ್ಷಕಿ ಈತನಿಗೆ ಅನುಮತಿ ಕೊಟ್ಟಿಲ್ಲ. ಆದರೂ, ಈತ ಶೌಚಾಲಯಕ್ಕೆ ತೆರಳಿದ್ದರಿಂದ ಕುಪಿತಗೊಂಡ ಶಿಕ್ಷಕಿ ಜಾಮಿಟ್ರಿ ಬಾಕ್ಸ್, ಕಡ್ಡಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ‌ಈ ವೇಳೆ ವಿದ್ಯಾರ್ಥಿ ತೀವ್ರ ಗಾಯಗೊಂಡು, ಕುಸಿದು ಬಿದ್ದಿದ್ದಾನೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!

ತಾಯಿಯ ಪ್ರೀತಿಯಿಂದ ವಂಚಿತಳಾದ ಪುಟ್ಟ ಬಾಲಕಿ, ತನ್ನ ಮಲತಾಯಿಯ ಕ್ರೂರ ಕೃತ್ಯಕ್ಕೆ ಬಲಿಯಾದ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದು ವಾರದಲ್ಲಿ ಸಿಸಿಟಿವಿ ದೃಶ್ಯಾವಳಿಯಿಂದ ಈ ಘೋರ ಅಪರಾಧದ ಸತ್ಯ ಬಯಲಾಗಿದೆ.ಮೃತ ಬಾಲಕಿ ಶಾನವಿ, ಕೇವಲ ಒಂದು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆಕೆಯ ತಂದೆ, ಅಜ್ಜ ಮತ್ತು ಅಜ್ಜಿಯ ಪೋಷಣೆಯಲ್ಲಿ ಬೆಳೆಯುತ್ತಿದ್ದಳು. ಪೊಲೀಸ್ ತನಿಖೆಯ ಸಮಯದಲ್ಲಿ, ರಾಧಾ ಅವರ ಕ್ರೂರತೆಗೆ ಕಾರಣ ಆಸ್ತಿ ಆಸೆ ಎಂಬುದು ತಿಳಿದುಬಂದಿದೆ. …

Read More »