Breaking News

BigTv News

ಜನ ಸಾಮಾನ್ಯರಿಗೆ ಗುಡ್ ನ್ಯೂಸ್ : ಹಾಲಿನ ಬೆಲೆ ಇಳಿಕೆ.

ಕೇಂದ್ರ ಸರ್ಕಾರವು ಹಲವಾರು ವಸ್ತುಗಳ ಮೇಲಿನ ಜಿಎಸ್‌ಟಿಯನ್ನ ಕಡಿಮೆ ಮಾಡಲು ನಿರ್ಧರಿಸಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅಲ್ಟ್ರಾ ಹೈ ಟೆಂಪರೇಚರ್ ಮಿಲ್ಕ್’ನ್ನ ಜಿಎಸ್‌ಟಿ ಮುಕ್ತಗೊಳಿಸಲಾಯಿತು. ಇದರರ್ಥ ದೇಶದಲ್ಲಿ ಮದರ್ ಡೈರಿ ಮತ್ತು ಅಮುಲ್ ಮಿಲ್ಕ್ ಎರಡನ್ನೂ ಜಿಎಸ್‌ಟಿ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗುವುದು. ಬೆಲೆಯಲ್ಲಿ 2 ರಿಂದ 4 ರೂಪಾಯಿಗಳಷ್ಟು ಕಡಿತವಾಗಬಹುದು ಎಂದು ತಜ್ಞರು ನಂಬಿದ್ದಾರೆ. ಇದರಿಂದಾಗಿ, ಮಧ್ಯಮ ವರ್ಗದವರಿಗೆ ದೊಡ್ಡ ಪರಿಹಾರ ಸಿಗುತ್ತದೆ.

Read More »

5.2 ಕೇಜಿ ತೂಕದ ಮಗುಗೆಜನ್ಮ ನೀಡಿದ ಮಹಾತಾಯಿ!

ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಭಾಂಗಿ ಎನ್ನುವವರು .2 ಕೇಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಸಾಮಾನ್ಯವಾಗಿ ನವಜಾತ ಗಂಡು ಶಿಶು 2.8 – 3.2 ಕೇಜಿ ಮತ್ತು, ಹೆಣ್ಣು ಮಗು 2.7- 3.1 ಕೇಜಿ ತೂಕವಿರುತ್ತದೆ, ಆದರೆ ಈ ಮಗು ಹುಟ್ಟುವಾಗಲೇ 5.2 ಕೇಜಿ ತೂಕಹೊಂದಿದ್ದು ವೈದ್ಯರು ಆಶ್ವರ್ಯಚಕಿತರಾದರು.ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Read More »

ಕರ್ನಾಟಕ ಹೈಕೋರ್ಟ್‌ನ ಗೇಮಿಂಗ್‌ ಕೇಸು ಸುಪ್ರೀಂಗೆ ವರ್ಗಕ್ಕೆ ಕೇಂದ್ರ ಮನವಿ.

ಕರ್ನಾಟಕ ಸೇರಿದಂತೆ 3 ರಾಜ್ಯಗಳ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಂದಿರುವ ಆನ್‌ಲೈನ್‌ ಗೇಮಿಂಗ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.ಹಣವನ್ನು ಬಳಸಿ ಆಡುವ ಆನ್‌ಲೈನ್‌ ಆಟಗಳಿಗೆ ಕಡಿವಾಣ ಹಾಕಲು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 ಅನ್ನು ಮೊದಲ ಬಾರಿ ಜಾರಿಗೆ ತರಲಾಗಿತ್ತು. ಇದನ್ನು ಕರ್ನಾಟಕ, ಮಧ್ಯಪ್ರದೇಶ ಮತ್ತು ದೆಹಲಿ ಹೈಕೋರ್ಟ್‌ಗಳನ್ನು ಪ್ರಶ್ನಿಸಲಾಗಿತ್ತು. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಈ ಕುರಿತು …

Read More »

ಖೈರತಾಬಾದ್ ಗಣೇಶೋತ್ಸವದಲ್ಲಿ ಗೂಂಡಾಗಳ ಅಸಭ್ಯ ವರ್ತನೆ : ಬರೋಬ್ಬರಿ 900 ಮಂದಿ ಅರೆಸ್ಟ್.!

ತೆಲಂಗಾಣದಲ್ಲಿ, ವಿನಾಯಕ ಚೌತಿ ಎಂದ ತಕ್ಷಣ ನೆನಪಿಗೆ ಬರುವುದು ಮೊದಲು ಖೈರತಾಬಾದ್ ಮಹಾ ಗಣಪತಿ. ನವರಾತ್ರಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ಈ ಬೃಹತ್ ಗಣೇಶನನ್ನು ನೋಡಲು ಖೈರತಾಬಾದ್ಗೆ ಬರುತ್ತಾರೆ.ಯುವತಿಯರು ಮತ್ತು ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಶಿಸುವ ಗೂಂಡಾಗಳಿಗೆ ಶೀ ಟೀಮ್ ಅನಿರೀಕ್ಷಿತ ಶಾಕ್ ನೀಡಿದೆ.ಖೈರತಾಬಾದ್ ವಿನಾಯಕದಲ್ಲಿ 7 ದಿನಗಳಲ್ಲಿ 900 ಜನರನ್ನು ಬಂಧಿಸಲಾಗಿದೆ ಎಂದು ಘೋಷಿಸಲಾಯಿತು. ಅವರಲ್ಲಿ 55 ಅಪ್ರಾಪ್ತ ವಯಸ್ಕರನ್ನು ಶೀ ಟೀಮ್ಸ್ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ನಾಳೆ …

Read More »

ಬಳ್ಳಾರಿ : ಪೊಲೀಸ್ ಠಾಣೆ ಕೂಗಳತೆಯಲ್ಲೇ ಒಸಿ, ಮಟ್ಕಾ ದಂಧೆ : ಮೊಬೈಲಲ್ಲಿ ಚಿತ್ರೀಕರಿಸಿದ ವ್ಯಕ್ತಿ ಮೇಲೆ ಹಲ್ಲೆ!

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಎಗ್ಗಿಲ್ಲದೆ ಒಸಿ ಮಟ್ಕಾ ದಂಧೆ ನಡೆಯುತ್ತಿದೆ. ಯಾವುದೇ ಪೊಲೀಸರ ಭಯ ಇಲ್ಲದೆ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕಂಪ್ಲಿ ಪಟ್ಟಣ ಒಂದರಲ್ಲಿಯೇ ಐದು ಮಟ್ಕಾ ಪಾಯಿಂಟ್ ಗಳಲ್ಲಿ ಈ ಒಂದು ದಂಧೆ ನಡೆಸಲಾಗುತ್ತಿದೆ.ಅಷ್ಟೆ ಅಲ್ಲದೇ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಮಟ್ಕಾ ದಂಧೆ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ಸಾತ್ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದನ್ನು ಬಯಲು ಮಾಡಲು ಸ್ಥಳೀಯ ನಿವಾಸಿ ನಾರಾಯಣ ಸ್ವಾಮಿ …

Read More »

ಬೆಂಗಳೂರಲ್ಲಿ ‘BMTC’ ಕಂಡಕ್ಟರ್-ಡ್ರೈವರ್ ಮೇಲೆ ನಾಲ್ವರಿಂದ ಹಲ್ಲೆ : ಓರ್ವ ಆರೋಪಿ ಅರೆಸ್ಟ್!

ಬೆಂಗಳೂರಲ್ಲಿ ಬಿಎಂಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಹಲ್ಲೆ ಪ್ರಕರ ಣ ನಡೆದಿದ್ದು, ಬಿಎಂಟಿಸಿ ಸಿಬ್ಬಂದಿ ಮೇಲೆ ಬೈಕ್ ಸವಾರರಿಂದ ಹಲ್ಲೆ ನಡೆದಿರುವ ಘಟನೆ ಬನಶಂಕರಿಯ ಕದಿರಿನ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ರಾಂಗ್ ಸೈಡ್ ನಲ್ಲಿ ಬಂದಿದ್ದನ್ನು ಪ್ರವೇಶಿಸಿದ್ದಕ್ಕೆ, ಎರಡು ಬೈಕ್ಗಳಲ್ಲಿ ಬಂದು ನಾಲ್ವರು ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಬೈಕ್ ಸವಾರರು ಹಲ್ಲೆ ನಡೆಸಿದ್ದಾರೆ. ತಕ್ಷಣ ಚಾಲಕ 112 ಗೆ …

Read More »

ಕರಾವಳಿಯಲ್ಲಿ ಮೀನಿನ ಅಭಾವ..! ಮಾರುಕಟ್ಟೆಗೆ ಲಗ್ಗೆ ಇಟ್ಟ ಓಮನ್ ದೇಶದ ಬೂತಾಯಿ, ಬಂಗುಡೆಗೆ ಬಾರಿ ಬೇಡಿಕೆ.

ಕರಾವಳಿಯಲ್ಲಿ ಮೀನಿನ ಅಭಾವ ಸೃಷ್ಟಿಯಾಗಿದ್ದು,ಕರಾವಳಿಯಲ್ಲಿ ಮೀನು ಬಲು ದುಬಾರಿಯಾದ್ರೆ, ಇನ್ನೊಂದೆಡೆ ಓಮನ್ ದೇಶದ ಬಂಗುಡೆ, ಬೂತಾಯಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಬಾರಿ ನಮ್ಮಲ್ಲಿ ಮೀನಿನ ಉತ್ಪತ್ತಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ದೊಡ್ಡ ದೊಡ್ಡ ಗಾತ್ರದ ಓಮನ್ ಮೀನುಗಳು ಲಗ್ಗೆ ಇಟ್ಟಿದೆ.ಓಮನ್ ದೇಶದಿಂದ ಬರುವ ಬೂತಾಯಿ, ಬಂಗುಡೆ ಮೀನುಗಳು ಗುಜರಾತ್‌ನಿಂದ ಸರಬರಾಜು ಆಗುತ್ತಿದೆ.ಈ ಮೀನುಗಳು ಬಣ್ಣ ಹಾಗೂ ಗಾತ್ರದಲ್ಲಿ ಮಂಗಳೂರು ಮೀನಿಗಿಂತ ಭಿನ್ನವಾಗಿದೆ. ಆದರೆ ರುಚಿಯಲ್ಲಿ ವ್ಯತ್ಯಾಸವಿಲ್ಲ.ಬಂಗುಡೆ ಹಾಗೂ ಬೂತಾಯಿ ಮೀನುಗಳು ಮಾರುಕಟ್ಟೆಯಲ್ಲಿದ್ದು …

Read More »

ರೈತರಿಗೆ ಕೃಷಿ ಇಲಾಖೆಯಿಂದಲೇ ವಂಚನೆ! ಅವಧಿ ಮೀರಿದ ಕ್ರಿಮಿನಾಶಕ, ಗೊಬ್ಬರ ನೀಡುತ್ತಿರುವ ರೈತ ಸಂಪರ್ಕ ಕೇಂದ್ರಗಳು.

ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ರೈತ ಸಂಪರ್ಕ ಕೇಂದ್ರಗಳು ಎರಡು ವರ್ಷದ ಹಿಂದೆಯೇ ಅವಧಿ ಮೀರಿದ್ದ ಕ್ರಿಮಿನಾಶಗಳನ್ನು ರೈತರಿಗೆ ಮಾರಾಟ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ರೈತರಿಗೆ ವಂಚಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳ ವಿರುದ್ದ ಹಾಗೂ ಅಲ್ಲಿನ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಆಗಬೇಕು ಮತ್ತು ಅವಧಿ ಮೀರಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆಯಬೇಕು. ರೈತರಿಗೆ ವಂಚಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು …

Read More »

ಹಾಸ್ಟೆಲ್’ ನಲ್ಲಿ ವಿದ್ಯಾರ್ಥಿ ಮೇಲೆ ಕ್ರೂರವಾಗಿ ಥಳಿಸಿದ ಸಹಪಾಠಿಗಳು.

ಗುಜರಾತ್ನ ಜುನಾಗಢ್ ಅಧಿಕಾರಿಗಳು ಆಲ್ಫಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ಗಂಭೀರ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ವೀಡಿಯೊದಲ್ಲಿ ಐದರಿಂದ ಆರು ಹಾಸ್ಟೆಲ್ ಸಹಪಾಠಿಗಳ ಗುಂಪು ವಿದ್ಯಾರ್ಥಿಯೊಬ್ಬನನ್ನು ಥಳಿಸಿದೆ. ಒಂದೂವರೆ ತಿಂಗಳ ನಂತರ ಹೊರಬಂದ ಈ ವೀಡಿಯೊ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಘಟನೆ ಜುಲೈ 26, 2025 ರಂದು ನಡೆದಿದ್ದು, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಕ್ರೀಡೆಗೆ ಸಂಬಂಧಿಸಿದ ವಿಷಯಕ್ಕಾಗಿ ಜಗಳವಾಡಿದ್ದಾರೆ ಎನ್ನಲಾಗಿದೆ. ಒಬ್ಬ ವಿದ್ಯಾರ್ಥಿಯನ್ನು …

Read More »

ಕೋಲಾರ | ಗಡಿ ಭಾಗದ ಶಿಕ್ಷಕನಿಗೆ ರಾಜ್ಯ ಪ್ರಶಸ್ತಿ ಗರಿ.

ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತಗಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ಮಂಜುನಾಥ್‌ ಅವರಿಗೆ ಈ ಬಾರಿ ರಾಜ್ಯ ಮಟ್ಟದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಲಭಿಸಿದೆ.ಶಾಲೆಯು ಕರ್ನಾಟಕ-ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು, ಸೌಲಭ್ಯಗಳ ಕೊರತೆ ನಡುವೆಯೇ ಮಕ್ಕಳನ್ನು ಆಕರ್ಷಿಸುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಜಿ.ಮಂಜುನಾಥ್‌ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡತಾತಗಡ್ಡಭರವಸೆ ಇಟ್ಟು ಪ್ರಶಸ್ತಿ ಕೊಟ್ಟಿದ್ದು ಅದನ್ನು ಉಳಿಸಿಕೊಳ್ಳಬೇಕು. ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣ ಇಲಾಖೆಯವರು ನನ್ನನ್ನು ಗುರುತಿಸಿರುವುದು ಖುಷಿ ಉಂಟು …

Read More »