ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಲೇಡೀಸ್ ಪಿಜಿಗೆ ನುಗ್ಗಿದ ಕಾಮುಕನೊಬ್ಬ, ಅಲ್ಲಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದ ಬೆಳಕಿಗೆ ಬಂದಿದೆ. ಇತ್ತೀಚೆಗೆ ಇದೇ ಸುದ್ದಗುಂಟೆಪಾಳ್ಯದಲ್ಲಿ ನಡುರಸ್ತೆಯಲ್ಲೇ ಮಧ್ಯರಾತ್ರಿ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಈಗ ಪಿಜಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ.ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
Read More »ಉತ್ತರಕನ್ನಡದಲ್ಲಿ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವು!
ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬಿಣಗಾ ಗ್ರಾಮದಲ್ಲಿ ಅಮಿತ್ ಮಾಳಸೇರ (38) ಎನ್ನುವ ಯುವಕ ಗಂಟಲಲ್ಲಿ ಅನ್ನ ಸಿಲುಕಿ ಸಾವನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ನಿವಾಸಿಯಾಗಿದ್ದು ಅನ್ನ ಗಂಟಲಿನಲ್ಲಿ ಸಿಲುಕಿಕೊಂಡು ಅಮಿತ್ ತೀವ್ರ ನರಳಾಡಿದ್ದ ಮನೆಯವರು ನೀರು ಕುಡಿಸಿದ ತಕ್ಷಣ ಕುಸಿದು ಬಿದ್ದಿದ್ದ. ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನಪ್ಪಿದ್ದಾನೆ. ಘಟನೆ ಕುರಿತು ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸೈಲೆಂಟ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡ ಚಿಕ್ಕಣ್ಣ.
ಮಂಡ್ಯದ ಮೂಲದ ಪಾವನಾ ಎಂಬ ಯುವತಿಯೊಂದಿಗೆ ನಟ ಚಿಕ್ಕಣ್ಣ ಅವರ ನಿಶ್ಚಯ ನಡೆದಿದೆ. ಮಹದೇವಪುರ ಗ್ರಾಮದ ಪಾವನಾ ಮತ್ತು ಚಿಕ್ಕಣ್ಣ ಜೋಡಿಯ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ, ಆದರೆ ಈಗಾಗಲೇ ಶುಭಾಶಯಗಳ ಸರಮಾಲೆಯೇ ಹರಿದು ಬರುತ್ತಿದೆ.2024ರಲ್ಲಿ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಪರದೆ ಮೇಲೆ ಕಾಣಿಸಿಕೊಂಡು ಯಶಸ್ಸು ಕಂಡರು. ಇದರಿಂದ …
Read More »ಪ್ರವಾಹ ಪೀಡಿತ ಪ್ರದೇಶದಲ್ಲಿ ಮನೆ ಕುಸಿತ!!
ಪoಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಮಳೆ ಈ ಬಾರಿ ಭಾರಿ ಅವಾಂತರವನ್ನು ಸೃಷ್ಟಿಸಿದೆ ಹಲವು ಕಡೆಗಳಲ್ಲಿ ಮನೆಗಳು ಕುಸಿದಿದ್ದರೆ, ರಸ್ತೆಗಳೂ ಕೊಚ್ಚಿ ಹೋಗಿದ್ದು, ಸಂಚಾರ ದುಸ್ತರವಾಗಿದೆ.ಪಂಜಾಬ್ನ ಫಿರೋಜ್ಪುರದಲ್ಲೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಮನೆ ಕುಸಿತಗೊಂಡಿದ್ದು ಆದರೆ ಮನೆಯಲ್ಲಿ ಅಳವಡಿಸಿದ್ದ ಸೀಲಿಂಗ್ ಫ್ಯಾನೊಂದು ಕೆಳಗೆ ಬೀಳದೇ ಭದ್ರವಾಗಿ ನಿಂತಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಪ್ರವಾಹ ಪೀಡಿತ …
Read More »2.20 ಕೋಟಿ ರೂ. ಮೌಲ್ಯದ ನಕಲಿ ಪಾನ್ ಮಸಾಲ ಜಪ್ತಿ, 8 ಮಂದಿಯ ಬಂಧನ.
ಗುಟಕ, ಪಾನ್ ಮಸಾಲಾ ಅರೋಗ್ಯಕ್ಕೆ ಹಾನಿಕಾರಕ ಎಂದು ಜಾಗೃತಿ ಮೂಡಿಸುತ್ತಾರೆ. ಅದನ್ನು .ರೆ ಕ್ಯಾನ್ಸರ್ ಬರುತ್ತದೆ ಎಂದೆಲ್ಲ ಎಚ್ಚರಿಸುತ್ತಿದ್ದಾರೆ. ಇದರ ನಡುವೆ ಈ ವಿಷವನ್ನೇ ಪಾಪಿಗಳು ನಕಲಿ ಮಾಡಿ ಮಾರುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಕಡೆ ದಾಳಿ ನಡೆಸಿ 2.20 ಕೋಟಿ ರೂ. ಮೌಲ್ಯದ ಪಾನ್ ಮಸಾಲಾ, ತಂಬಾಕು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ಮೂಟೆಗಟ್ಟಲೇ ಕಲಬೆರಕೆ ಗುಟ್ಕಾ ಸಾಮಗ್ರಿ ಸೀಜ್ ಮಾಡಿದ್ದಾರೆ. ಗಾಂಧಿಗಂಜ್ …
Read More »ಮಿನಿಟ್ರಕ್ ತುಂಬಾ ಅಕ್ರಮ ಗೋಮಾಂಸ ಸಾಗಣೆ; ಬೆಳಗಾವಿಯಲ್ಲಿ ವಾಹನ ಪಲ್ಟಿ, ಚಾಲಕ ಪರಾರಿ.
ಗೋವುಗಳನ್ನು ಕಡಿದು ಅದರ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮಮದಾಪುರ ಕ್ರಾಸ್ ಬಳಿ ಪಲ್ಟಿಯಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವಾಹನದಲ್ಲಿದ್ದ 2,000 ಕೆಜಿಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ. ಘಟನೆಯು, ಗೋವುಗಳ ಮೇಲಿನ ಕ್ರೂರತೆ ಮತ್ತು ಅಕ್ರಮ ಸಾಗಾಟದ ಅಮಾನವೀಯತೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗೋವುಗಳನ್ನು ಹಿಂದುತ್ವದಲ್ಲಿ ‘ಗೋಮಾತೆ’ ಎಂದು ಪೂಜಿಸಲಾಗುತ್ತದೆ. ಈ ರೀತಿಯ ಅಕ್ರಮ ಕೃತ್ಯಗಳು ಕೇವಲ ಕಾನೂನಿನ …
Read More »ಅಕ್ರಮ ಮದ್ಯ ತಯಾರಿಕಾ ಘಟಕಕ್ಕೆ ಪೊಲೀಸ್ ದಾಳಿ- ಇಬ್ಬರ ಬಂಧನ.
ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ರವಿವಾರದಂದು ವರದಿಯಾಗಿದೆ.ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ .(24) ಎಂದು ಗುರುತಿಸಲಾಗಿದೆ.ಸುಮಾರು 1,15,110 ರೂ. ಮೌಲ್ಯ ದ ಮದ್ಯ ತಯಾರಿಕೆಯ ಮೂರು ಮೆಷಿನ್ ಗಳು, ಮಿಕ್ಸರ್ ಮೆಷಿನ್, ಅಕ್ರಮ ಮದ್ಯದ ಬಾಟ್ಲಿಗಳು, ಗೋವಾದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 …
Read More »ಡ್ರೋನ್ ಮೂಲಕ ಪಾಕಿಸ್ತಾನದಿಂದ ಮಾದಕವಸ್ತುಗಳ ಸಾಗಾಟ; ನಾಲ್ವರ ಬಂಧನ.
ಪಾಕಿಸ್ತಾನದಿಂದ ಡ್ರೋನ್ ಮೂಲಕ ಬಂದ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು 80 ಜೀವಂತ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ದೇಶದ ಹಲವು ರಾಜ್ಯಗಳ ಮಾದಕವಸ್ತು ಮಾರಾಟಗಾರರಿಗೆ ಇವುಗಳನ್ನು ಸರಬರಾಜು ಮಾಡಲಾಗುತ್ತಿತ್ತು.ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ, ಪಂಜಾಬ ನಿವಾಸಿಯಾದ ರೂಪಿಂದರ್ ಸಿಂಗ್ ನನ್ನು ಬಂಧಿಸಲಾಯಿತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅವನಿಂದ ಹೆರಾಯಿನ್, ಅಫೀಮು, ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು 80 ಜೀವಂತ ಗುಂಡುಗಳು ಸಿಕ್ಕಿವೆ.ಪೊಲೀಸ್ ಮಹಾನಿರೀಕ್ಷಕ …
Read More »ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ, ಭಯದಿಂದ ಹೃದಯಾಘಾತವಾಗಿ ವ್ಯಕ್ತಿ ಸಾವು.
ರಾಜ್ಯದಲ್ಲಿ ಮತ್ತೆ ಹೃದಯಾಘಾತ ಪ್ರಕರಣಗಳ ಸುದ್ದಿ ಹೆಚ್ಚಾಗುತ್ತಿದೆ. ಒಂದೆಲ್ಲಾ ಒಂದು ಹೃದಯಾಘಾತದಿಂದ ಸಾವು ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೀಗ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ ಕಾರಣ ಭಯಗೊಂಡ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಾಲ ಗ್ರಾಮದಲ್ಲಿ ನಡೆದಿದೆ.ಪೊಲೀಸರು ದಾಳಿ ಮಾಡಿದ ಕಾರಣದಿಂದ ಭಯಗೊಂಡು ಹೃದಯಾಘಾತವಾಗಿದ್ದು, ಕುಳಿತ ಜಾಗದಲ್ಲಿಯೇ ಉಸಿರು ಚೆಲ್ಲಿದ್ದಾರೆ.
Read More »ಹಾಸನದಲ್ಲಿ ಸರಣಿ ಹೃದಯಾಘಾತ!
ಹಾಸನದಲ್ಲಿ ಕೆಲ ತಿಂಗಳ ಹಿಂದೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದವು. ಅನೇಕ ಜನರು ಹೃದಯಾಘಾತಕೆ ಬಲಿ ಆಗಿದ್ದರು. ಈ ವಿಚಾರ ರಾಜ್ಯದಲ್ಲಿ ಸಹ ಆತಂಕವನ್ನ ಹೆಚ್ಚು ಮಾಡಿತ್ತು. ಈ ವಿಚಾರವನ್ನ ತನಿಖೆ ಮಾಡಲು ಸರ್ಕಾರ ಸಮಿತಿ ಸಹ ರಚನೆ ಮಾಡಿತ್ತು. ಅದರ ವರದಿಯಲ್ಲಿ ಹೃದಯಾಘಾತಕ್ಕೆ ಕಾರಣವನ್ನ ತಿಳಿಸಿತ್ತು. ಮಾಹಿತಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸತ್ತಿದ್ದಾರೆ ಎನ್ನಲಾಗಿತ್ತು. ಇನ್ನು 24 ಜನರಲ್ಲಿ 20 ಜನರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





