ಭಾಸೆಲ್ ಮಿಷನ್ ಟ್ರಸ್ಟಿ ಬಲವಂತಕುಮಾರ ಗುಂಡಮಿ ಅವರಿಗೆ, ಅವರ ಸಂಬಂಧಿ ಉಜ್ವಲ ಗುಂಡಮಿ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಜ್ವಲ್, ಕುಡಿದ ಅಮಲಿನಲ್ಲಿ ಬಲವಂತಕುಮಾರ ಅವರ ಮನೆಗೆ ಬಂದು ಟ್ರಸ್ಟ್ನ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಶೂಟ್ ಮಾಡುವುದಾಗಿ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »ಗೆ ಟಚ್ ಆಗಿದ್ದಕ್ಕೆ ಸಾರಿಗೆ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಪೊಲೀಸ್.!
ಟೇಕ್ ಮಾಡುವಾಗ ಬೈಕ್ ಗೆ ಟಚ್ ಆಗಿದೆ ಎಂದು ಆರೋಪಿಸಿ ಪೋಲಿಸ್ ಹೆಡ್ ಕಾನ್ಸ್ ಸ್ಟೇಬಲ್ ಓರ್ವ ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕನ ಮೇಲೆ ಚಪ್ಪಲಿ, ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಕೂಡ್ಲಿಗಿಯಲ್ಲಿ ನಡೆದಿದೆ.ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೂಡ ಹಲ್ಲೆ ನಡೆಸಿರುವುದು ಖಂಡನೀಯ, ಈ ಕೂಡಲೇ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕೆಲಸದಿಂದ ವಜಾ ಮಾಡಬೇಕು …
Read More »ಕೂಡ್ಲಿಗಿ | ಚಾಲಕನ ಮೇಲೆ ಹಲ್ಲೆ: ಪೊಲೀಸ್ ಅಮಾನತು
ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಮಂಜುನಾಥ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಆದೇಶ ಹೊರಡಿಸಿದ್ದಾರೆ.ಆಗಸ್ಟ್ 7ರಂದು ಹರಿಹರದಿಂದ ಬಳ್ಳಾರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಕೊಟ್ಟೂರು ತಾಲ್ಲೂಕಿನ ಗಜಾಪುರ ಬಳಿ ತಮ್ಮ ಬೈಕಿಗೆ ತಾಗಿದೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಂಜುನಾಥ, ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು.
Read More »BJP, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ದಾಳಿ:200 ವರ್ಷದ ಹಳೆಯ ಸಮಾಧಿಗೆ ಹಾನಿ!
ಫತೇಹ್ಪುರ ಜಿಲ್ಲೆಯಲ್ಲಿರುವ 200 ವರ್ಷದ ಹಳೆಯ ‘ಮಕ್ಬಾರ’ (ಸಮಾಧಿ) ಹಾಗೂ ಎರಡು ‘ಮಜಾರ್’ (ದೇಗುಲ)ಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಹಾನಿಗೊಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಪೊಲೀಸ್ ಮೂಲಗಳ ಪ್ರಕಾರ, ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ಸಮಾಧಿ ಮುಂದೆ ಸೇರಿದ್ದರು. ಈ ವೇಳೆ ಅಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು, ‘ನವಾಬ್ ಅಬ್ದೂಸ್ ಸಮಾಧಿ’ಗೆ ತೆರಳಿ ಆರತಿ ಹಾಗೂ ಪೂಜೆ ಸಲ್ಲಿಸಿದರು.ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಮಕ್ಲಾಲ್ …
Read More »ಹುಬ್ಬಳ್ಳಿ | ಮಧ್ಯಾರಾಧನೆ: ಗುರುರಾಯರ ಸ್ಮರಣೆ
ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ದಿನವಾದ ಸೋಮವಾರ ನಗರದ ವಿವಿಧ ಮಠಗಳಲ್ಲಿ ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಭಕ್ತರು ರಾಯರ ನಾಮ ಸ್ಮರಣೆ ಮಾಡಿ ಪುನೀತರಾದರು. ವಿವಿಧ ಮಠಗಳಲ್ಲಿ ವಿದ್ಯುದ್ದೀಪಾಲಂಕಾರ ಭಕ್ತರ ಸೆಳೆಯಿತು.ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ರಾಯರ ಅಲಂಕೃತ ಬೃಂದಾವನದ ದರ್ಶನ ಪಡೆದರು. ಪ್ರಹ್ಲಾದ ರಾಜರಿಗೆ ಕನಕಾಭಿಷೇಕ ಸೇವೆ ಸಲ್ಲಿಸಿದರು.ಹುಬ್ಬಳ್ಳಿಯ ಶಕ್ತಿ …
Read More »ನಂಜನಗೂಡು | ಯುವಕರ ಮೇಲೆ ಮಾರಾಣಾಂತಿಕ ಹಲ್ಲೆ!
ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದ ಆವರಣದಲ್ಲಿ ಶುಕ್ರವಾರ ಯುವಕರ ತಂಡವೊಂದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಅಭಿಷೇಕ್ ಹಾಗೂ ರವಿ ಎಂಬುವರ ಮೇಲೆ ದಾಳಿ ನಡೆಸಿದ ನಾಲ್ವರ ಗುಂಪು ಕಬ್ಬಿಣದ ರಾಡು, ಚಾಕು ಹಾಗೂ ಮರದ ಪಟ್ಟಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಶನಿವಾರ ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.
Read More »ರಾಮದುರ್ಗ: ಮರಕ್ಕೆ ಕಟ್ಟಿ ಪರಿಶಿಷ್ಟ ಯುವಕರಿಗೆ ಗುಂಪು ಥಳಿತ
ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದು, ಒಬ್ಬನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಈರಣ್ಣ ವಿಠ್ಠಲ ನಾಯ್ಕರ (18) ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ (19) ಹಲ್ಲೆಗೆ ಒಳಗಾದವರು. ಆಗಸ್ಟ್ 5ರಂದು ಹಲ್ಲೆ ನಡೆದಿದ್ದು, ಆ.11ರಂದು ದೂರು ದಾಖಲಿಸಲಾಗಿದೆ. ಲಿಂಗಾಯತ ಸಮಾಜದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್ ದಾನಪ್ಪ ಪಾಕನಟ್ಟಿ, …
Read More »ನನ್ನ ‘ಬಾಷಾ’ ಚಿತ್ರಕ್ಕಿಂತ ‘ಓಂ’ 10 ಪಟ್ಟು ದೊಡ್ಡದು: ಭಾರತದ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ದೊಡ್ಡ ಸ್ಪೂರ್ತಿ!
ಉಪೇಂದ್ರ ಅವರ ನಿರ್ದೇಶನಕ್ಕೆ ಫಿದಾ ಆಗದವರೇ ಇಲ್ಲ. ಅಂತಹ ಸಿನಿಮಾಗಳನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ನೀಡಿದ್ದಾರೆ. ಅವರ ಸ್ಟೈಲ್ ಅನೇಕ ನಿರ್ದೇಶಕರಿಗೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆಗೆ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾದ ಆಡಿಯೋ ಈಚೆಗೆ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ರಜನಿಕಾಂತ್ ಅವರು ಉಪೇಂದ್ರ ಅವರನ್ನ ಮನಸಾರೆ ಹೊಗಳಿದ್ದಾರೆ. ಜೊತೆಗೆ ‘ಓಂ’ ಚಿತ್ರವನ್ನು ಕೂಡ ನೆನಪು …
Read More »10 ವರ್ಷದ ಮದುವೆ, ಹೆಂಡತಿ ಬಾಲ್ಯ ಸ್ನೇಹಿತನಿಂದಲೇ ಗಂಡ ಫಿನಿಶ್!
ಪತ್ನಿಯೊಂದಿಗೆ ಬಾಲ್ಯಸ್ನೇಹಿತ ಜಯ ಅನೈತಿಕ ಸಂಬಂಧ ವಿಜಯ್ಗೆ ಗೊತ್ತಾಗಿದೆ. ಅಲ್ಲದೇ ಇಬ್ಬರೂ ಒಟ್ಟಿಗಿರುವ ಫೋಟೋಗಳು ಸಿಕ್ಕಿಬಿದ್ದಿದ್ದರಿಂದ ಈ ವಿಷಯದ ಬಗ್ಗೆ ವಿಜಯ್ ಗಲಾಟೆಯನ್ನೂ ಮಾಡಿದ್ದ. ಈ ಕಾರಣಕ್ಕಾಗಿ ಕಾಮಾಕ್ಷಿಪಾಳ್ಯ ಬಿಟ್ಟು ಕಡಬಗೆರೆಯ ಮಾಚೋಹಳ್ಳಿಯಲ್ಲಿ ಬಾಡಿಗೆ ಮನೆಗೆ ತೆರಳಿದ್ದ ವಿಜಯ್. ಆದರೂ ಆಶಾ ಮತ್ತು ಧನಂಜಯನ ಸಂಬಂಧಕ್ಕೆ ಕಡಿವಾಣ ಬಿದ್ದಿರಲಿಲ್ಲ. ಸಂಜೆ ವೇಳೆ ಮನೆಯಿಂದ ಹೋಗಿದ್ದ ವಿಜಯ್, ಡಿಗ್ರೂಪ್ ಲೇಔಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಆಶಾಳನ್ನು …
Read More »ಬಾಂಬ್ ಇಟ್ಟು ಉಡಾಯಿಸ್ತೀವಿ: ಅಮೆರಿಕದಲ್ಲಿ ನಿಂತು ಮುನೀರ್ ಕೊಟ್ಟ ಧಮ್ಕಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನ ಪರಮಾಣು ಬೆದರಿಕೆಗೆ ಭಾರತ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ಮುಂದಿಟ್ಟು ಬೆದರಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸ. ಆದರೆ ಭಾರತ ಪರಮಾಣು ಬ್ಲ್ಯಾಕ್ಮೇಲ್ಗೆ ಮಣಿಯುವುದಿಲ್ಲ.ಭಾರತ ಅಣೆಕಟ್ಟು ನಿರ್ಮಿಸುವವರೆಗೆ ಕಾಯಿರಿ, ನಂತರ 10 ಕ್ಷಿಪಣಿಗಳಿಂದ ಅದನ್ನು ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅಲ್ಹಮ್ದುಲಿಲ್ಲಾಹ್ ಎಂದು ಉಲ್ಲೇಖಿಸಿದ್ದು ನಮ್ಮಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ ಎಂದು ಬೆದರಿಕೆ ಹಾಕಿದ್ದರು.ಭಾರತ-ಪಾಕ್ ಸೇರಿದಂತೆ ಸಂಘರ್ಷಕ್ಕೆ ಒಳಗಾಗಿರುವ ಜಗತ್ತಿನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





