ಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ಬಾಗಲಕೋಟೆಯಲ್ಲಿ ನಡೆದಿದೆ. ಅಂಜಲಿ ಮುಂಡಾಸ (21) ಮೃತ ದುರ್ದೈವಿ. ಈಕೆ ಸಾಯುವ ಮುನ್ನ ತನಗೆ ಕಿರುಕುಳ ನೀಡಿದಿವರ ಹೆಸರು ಬರೆದಿಟ್ಟು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾಳೆ.ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಕಾರಣರಾದವರು ಈ ಮೂವರು ವ್ಯಕ್ತಿಗಳು. ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ. ಅವರುಗಳೆಂದರೆ ವರ್ಷಾ, ಪ್ರದೀಪ ಮತ್ತು ಇನ್ನಿತರ ಸ್ನೇಹಿತರು. ನನ್ನ ಬಗ್ಗೆ …
Read More »ಬೆಂಗಳೂರು-ಪುಣೆ ಕೇವಲ 5 ಗಂಟೆ ಪ್ರಯಾಣ, ಹೊಸ ಎಕ್ಸ್ಪ್ರೆಸ್ ವೇ ಘೋಷಿಸಿದ ನಿತಿನ್ ಗಡ್ಕರಿ
ಭಾರತದಲ್ಲಿ ಎಕ್ಸ್ಪ್ರೆಸ್ವೇ ಮೂಲಕ ಹೊಸ ಕ್ರಾಂತಿ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಿತಿನ್ ಗಡ್ಕರಿ ಹೊಸ ಎಕ್ಸ್ಪ್ರೆಸ್ವೇ ಹೆದ್ದಾರಿ ನಿರ್ಮಾಣದ ಘೋಷಣೆ ಮಾಡಿದ್ದಾರೆ.ಬೆಂಗಳೂರು ಹಾಗೂ ಪುಣೆ ಸಂಪರ್ಕಿಸುವ ಈ ರಸ್ತೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣಗೊಳ್ಳಲಿದೆ. ಇದರಿಂದ ಪ್ರಯಾಣ ಸಮಯ ಎರಡು ಪಟ್ಟು ಇಳಿಕೆ ಮಾಡಲಿದೆ. ಈ ರಸ್ತೆ ಮೂಲಕ ಬೆಂಗಳೂರಿನಿಂದ ಪುಣೆಗೆ ಕೇವಲ 5 ಗಂಟೆಯಲ್ಲಿ ಪ್ರಯಾಣ …
Read More »ಕುಲ್ಗಾಮ್ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಸೈನಿಕರು ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ನೆನ್ನೆ ರಾತ್ರಿ (ಆ.8)ರಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂದು ಸೇನೆ ತಿಳಿಸಿದೆ. ಇದಕ್ಕೂ ಮೊದಲು ನಡೆದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.ವೀರ ಯೋಧರಾದ ಕೆ ಪ್ರೀತ್ಪಾಲ್ ಸಿಂಗ್ ಮತ್ತು ರ್ಮಿಂದರ್ ಸಿಂಗ್ ಅವರ ಈ ತ್ಯಾಗಕ್ಕೆ ಅವರನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಭಾರತೀಯ ಸೇನೆ …
Read More »ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.ಮಠದ ಪ್ರವೇಶದಲ್ಲೇ ಇರುವ ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ಶ್ರೀ ರಾಮಕೃಷ್ಣರು ಗೌರವಯುತವಾಗಿ ಶ್ರೀವಾರಿ ವಸ್ತ್ರವನ್ನು ಶ್ರೀ ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ಶ್ರೀ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿ ಆರತಿ ಬೆಳಗಿದರು.
Read More »ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ಗಳ ಮೇಲೆ ಹಲ್ಲೆ, ಓರ್ವನ ಬಂಧನ; 7 FIR ದಾಖಲು
ಧರ್ಮಸ್ಥಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಬಂಧ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ನಡೆದ ಯೂಟ್ಯೂಬರ್ ಮತ್ತು ಸುದ್ದಿ ವಾಹಿನಿಯ ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ನಾಲ್ಕು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಮೂರು ಸೇರಿದಂತೆ ಒಟ್ಟು ಏಳು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
Read More »ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಹಳೆ ಪಿಂಚಣಿ ಯೋಜನೆ ಜಾರಿಗೆ ಕ್ಷಣಗಣನೆ; ಸರ್ಕಾರದಿಂದ ಆದೇಶ
ಕಳೆದ ಎರಡು ವರ್ಷಗಳಿಂದ ಕಾದು ಕುಳಿತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಹಳೇ ಪಿಂಚಣಿ ಜಾರಿಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಗಳು ಫಲ ನೀಡಿದಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನ ಈಡೇರಿಸುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆಯನ್ನ ನೀಡಿತ್ತು.NPS ರದ್ದುಗೊಳಿಸಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದಾಗಿರುವ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಎಂದು ರಾಜ್ಯ ಸರ್ಕಾರ ಮಾತು ಕೊಟ್ಟಿದೆ. ಈ ವಿಚಾರದಲ್ಲಿ ಈಗಾಗಲೇ ಜಾರಿಗೊಳಿಸುವುದಾಗಿ …
Read More »ಹಾಸನದ ಯುವತಿ ಪ್ರೀತಿಸಿ ಕೈಕೊಟ್ಟ ಬಳ್ಳಾರಿ ಯುವಕ, ಮದುವೆಗೆ ಜಾತಿ ಅಡ್ಡಿ ಹುಡುಗನ ಮನೆಮುಂದೆ ಹೆಣ್ಮಗು ಧರಣಿ!
ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ನಂದೀಶ್, ಯುವತಿಯನ್ನು ಹಾಸನದಿಂದ ಕರೆದುಕೊಂಡು ಬಂದು, ಕಂಪ್ಲಿಯಲ್ಲಿ ಒಂದು ದಿನ ತಿರುಗಾಡಿಸಿದ್ದಾನೆ. ಮನೆಯವರಿಂದ ನಂದೀಶ್ ಪೋನ್ ಬಂದ ಕೂಡಲೇ ಯುವತಿಯನ್ನು ಬಿಟ್ಟು ಹೋಗಿದ್ದಾನೆ. ಮನೆಯವರ ಒತ್ತಡಕ್ಕೆ ತುತ್ತಾಗಿ ಬಿಟ್ಟು ಹೋಗಿದ್ದಾನೆ. ಮನೆಯವರ ವಿರೋಧಕ್ಕೆ ಕಾರಣ ಜಾತಿ ಅಡ್ಡಿ ಬಂದಿದೆ. ಯುವತಿ ಭೋವಿ (ಎಸ್ಸಿ) ಸಮಾಜಕ್ಕೆ ಸೇರಿದ್ದರೆ, ನಂದೀಶ್ ಲಿಂಗಾಯತ ಜಂಗಮ ಸಮಾಜಕ್ಕೆ ಸೇರಿದವನು. ಪ್ರೀತಿ ಮಾಡುವಾಗ ಜಾತಿ ಅಡ್ಡಿಯಾಗದಿದ್ದರೂ, ಮದುವೆಯ ವಿಷಯದಲ್ಲಿ ವಿರೋಧ ವ್ಯಕ್ತವಾಗಿದೆ …
Read More »ಯೂಟ್ಯೂಬ್ ವೀಡಿಯೋ ನೋಡಿ ಗಂಡನ ಕಿವಿಗೆ ಕೀಟನಾಶಕ ಸುರಿದು ಕೊಲೆ!
ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಕೊಲೆ ನಡೆದಿದೆ.ಸಂಪತ್ ಕೊಲೆಯಾದ ಪತಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
Read More »ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲಿಗೆ ಯುವಕ ಬಲಿ, ಮತ್ತೊರ್ವನಿಗೆ ಗಾಯ!
ರಾಜ್ಯದಲ್ಲಿ ಗುಡುಗು-ಸಿಡಿಲು ಸಮೇತ ಶುಕ್ರವಾರ ಭರ್ಜರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಬೆಳಗಾವಿ, ರಾಯಚೂರು, ಯಾದಗಿರಿ, ಗದಗ, ಹಾವೇರಿ ಸೇರಿ ಆರೇಳು ಜಿಲ್ಲೆಗಳಲ್ಲಿ ಧಾರಾಕಾರ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಗುಡುಗು ಸಹಿತ ಮಳೆ ಬರ್ತಿದ್ದಂತೆ ಅಣ್ಣ-ತಮ್ಮಂದಿರು ಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಪರಮಣ್ಣ ಸ್ಥಳದಲ್ಲಯೇ ಮೃತಪಟ್ಟಿದ್ದಾನೆ. ಅಣ್ಣನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »ಬ್ಯೂಟಿಪಾರ್ಲರ್ ಹೆಸರಿನಲ್ಲಿ ಸೆಕ್ಸ್ದಂಧೆ, ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯಿಂದಲೇ ಒತ್ತಾಯ, ಸಂತ್ರಸ್ತೆಯಿಂದ ಪೊಲೀಸರಿಗೆ ದೂರು
ಬ್ಯೂಟಿಪಾರ್ಲರ್ ಹೆಸರಿನಲ್ಲಿ ಮಾಲಕಿ ಸೆಕ್ಸ್ದಂಧೆ ನಡೆಸುತ್ತಿರುವ ವಿಚಾರ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆಗೈದು ಅರೆನಗ್ನ ಫೋಟೊ ತೆಗೆದು ಬೆದರಿಕೆ ಒಡ್ಡಿದ್ದಾರೆಂದು ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.ಸದ್ಯ ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯವರಲ್ಲಿ ವಿಚಾರ ತಿಳಿಸಿದ್ದು, ಅದರಂತೆ ದೂರು ದಾಖಲಾಗಿದೆ. ಸಂಜೆ ವೇಳೆ ಸಂತ್ರಸ್ತೆಯೊಂದಿಗೆ ಮಹಿಳಾ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಸಲೂನ್ನಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





