ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ ಪಡೆದ ಆರೋಪ ಡಾ. ಅಂಕಿತಾ ಯರಗಲ್ ವಿರುದ್ಧ ಕೇಳಿಬಂದಿದೆ. 2026ರ ಮಾರ್ಚ್ನಲ್ಲಿ MD ಪ್ಯಾಥಾಲಜಿ ಕೋರ್ಸ್ಗೆ ಪ್ರವೇಶ ಪಡೆದ ಬಳಿಕ ಕ್ಲಿನಿಕ್ಗೆ ಸರಿಯಾಗಿ ಹಾಜರಾಗಿಲ್ಲ ಎನ್ನಲಾಗಿದ್ದು, ಇದರಿಂದ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ ಬಹುತೇಕ ಬಂದ್ ಸ್ಥಿತಿಯಲ್ಲಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಡಿಹೆಚ್ಓ ಡಾ. ರಾಜಕುಮಾರ ಯರಗಲ್ …
Read More »ದನ ವಧೆ ಮಾಡಿ ಮಾಂಸ ಮಾರಾಟ ಯತ್ನ: ಇಬ್ಬರ ಬಂಧನ
ಮಂಗಳೂರು: ಕಸಬಾ ಬೆಂಗ್ರೆ ಗ್ರಾಮದ ಮನೆಯ ಹಿಂಭಾಗದಲ್ಲಿ ದನವನ್ನು ವಧೆ ಮಾಡಿ ಮಾಂಸ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಪಣಂಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಫಹಾದ್ ಹಾಗೂ ಮೊಹಮ್ಮದ್ ನೌಫಲ್ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸೆ.10ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳು ದನದ ಮಾಂಸವನ್ನು ಪ್ಯಾಕ್ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಸ್ಥಳದಿಂದ ಸುಮಾರು 143 ಕೆ.ಜಿ. 800 ಗ್ರಾಂ ಮಾಂಸ, ದನದ ಚರ್ಮ, ತಲೆ, ಕಾಲುಗಳು, …
Read More »ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಯುವಕನ ಶವ ಪತ್ತೆ
ಕಲಬುರಗಿ: ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದ ಗುಡ್ಡದಲ್ಲಿ ಯುವಕ ಮತ್ತು ಮಹಿಳೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಶರಣಮ್ಮ (32) ಮತ್ತು ಬಸವರಾಜ (21) ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read More »ಪತಿಯಿಂದ ದೂರವಿದ್ದ ಮಹಿಳೆ ಹತ್ಯೆ ಶಂಕೆ: ಪ್ರಿಯಕರ ಶಬ್ಬೀರ್ ಫೋನ್ನೊಂದಿಗೆ ಪರಾರಿ!
ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ 28 ವರ್ಷದ ವಿವಾಹಿತೆ ಚೈತ್ರಾ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪತಿಯಿಂದ 8 ವರ್ಷಗಳಿಂದ ದೂರವಿದ್ದ ಆಕೆ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಚೈತ್ರಾ ಶಬ್ಬೀರ್ ಎಂಬಾತನೊಂದಿಗೆ ಲಿವ್ಇನ್ ಸಂಬಂಧದಲ್ಲಿದ್ದು, ಇತ್ತೀಚೆಗೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆಯ ದಿನ ಶಬ್ಬೀರ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಚೈತ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ನಂದಿಗಿರಿಧಾಮ …
Read More »ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್
ಬೆಂಗಳೂರು: ಮಿನರ್ವ್ ಸರ್ಕಲ್ನ ಕೃಪಾ ಹೆಲ್ತ್ಕೇರ್ ಮೇಲೆ ಎಸ್ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ ಔಷಧಿಗಳ ಭಾರಿ ಸಂಗ್ರಹ ಪತ್ತೆಹಚ್ಚಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ವೀರೇಶ್ಕುಮಾರ್ನನ್ನು ಬಂಧಿಸಲಾಗಿದೆ. ಕ್ಯಾನ್ಸರ್ ಮಾತ್ರೆಗಳು, ಜೀವ ರಕ್ಷಕ ಔಷಧಿಗಳು ಹಾಗೂ ಐಸಿಯು ಇಂಜೆಕ್ಷನ್ಗಳನ್ನು ನಕಲಿ ಮಾಡಿ ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆ, ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ಗಳಿಗೆ ಪೂರೈಸಲಾಗುತ್ತಿತ್ತು ಎನ್ನಲಾಗಿದೆ. ಅವಧಿ ಮುಗಿದ ಔಷಧಿಗಳನ್ನು ಮರುಪ್ಯಾಕ್ ಮಾಡಿ …
Read More »ಮಂಗಳೂರು | ಮಾದಕ ವಸ್ತು ಸೇವನೆ ಮಾಡಿದ ಆರೋಪ: 9 ಮಂದಿ ಸೆರೆ
ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಪಾಂಡೇಶ್ವರ, ಕದ್ರಿ, ಕೊಣಾಜೆ ಹಾಗೂ ಉಳ್ಳಾಲ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಈ ಬಂಧನ ನಡೆಸಿದ್ದಾರೆ. ಸೆ.9ರಂದು ಅಬ್ದುಲ್ ತೌಫಿಕ್ ಹಾಗೂ ಸೆ.10ರಂದು ರಿತುಲ್ ಎಸ್. ಚಂದ್ರನ್, ಅಬ್ದುಲ್ಲಾ, ಅಭಯ್ ಕೃಷ್ಣ, ಧೀರಾಜ್ ಶೆಟ್ಟಿ ಮತ್ತು ನಂದಿತ್ ಎಸ್. ಬೆಳ್ಚಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ …
Read More »ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು
ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹5.73 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಪುಷ್ಪರಾಜ್ ಶೆಟ್ಟಿ ಅವರಿಗೆ ಯು.ಕೆ.ಯಲ್ಲಿ ಹೌಸ್ಕೀಪಿಂಗ್ ಸೂಪರ್ವೈಸರ್ ಉದ್ಯೋಗ ಕೊಡಿಸುವುದಾಗಿ ಆಶ್ಲೆ ಕರ್ನೇಲಿಯೋ ಎಂಬಾತ ಭರವಸೆ ನೀಡಿದ್ದ. ವೀಸಾ ಪ್ರಕ್ರಿಯೆ, ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರೊಸೆಸಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ₹5.73 ಲಕ್ಷ ಹಣ ಪಡೆದಿದ್ದಾರೆ. ಈ ಪೈಕಿ …
Read More »ವಿಜಯಪುರ ಎಟಿಎಂ ಕಳವು ಕೇಸಲ್ಲಿ ಮೂವರ ಬಂಧನ, ನಗದು ಜಪ್ತಿ!
ವಿಜಯಪುರ ತಾಲೂಕಿನ ಗೋಳಸಂಗಿ ಗ್ರಾಮದಲ್ಲಿ ನಡೆದಿದ್ದ ಎಸ್ಬಿಐ ಎಟಿಎಂ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹19 ಲಕ್ಷಕ್ಕೂ ಅಧಿಕ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಮುಸುಕುಧಾರಿ ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನೇ ಕತ್ತರಿಸಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ …
Read More »2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ
ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರ ಶಿವರಾಜು ಅವರಿಂದ ಲಂಚ ಪಡೆಯುವಂತೆ ಹೊರಗುತ್ತಿಗೆ ನೌಕರ ಶೌಕತ್ಗೆ ಸೂಚಿಸಿದ್ದರು ಎನ್ನಲಾಗಿದೆ. ಅರಣ್ಯ ಇಲಾಖೆಯ ಕಾಮಗಾರಿಗೆ ಮಂಜೂರಾದ ಮೊತ್ತದ ಶೇ.30ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸತೀಶ್ ಚಂದ್ರ, ಈಗಾಗಲೇ ₹50 ಸಾವಿರ ಪಡೆದಿದ್ದರು. ಉಳಿದ ₹2.50 ಲಕ್ಷಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಲೋಕಾಯುಕ್ತರಿಗೆ …
Read More »ಹಾರ್ನ್ ಹೊಡೆದಿದ್ದಕ್ಕೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ; ಯುವಕರ ಮಾರಾಮಾರಿ ವಿಡಿಯೋ ವೈರಲ್!
ಬೆಂಗಳೂರು : ಸಿಗ್ನಲ್ನಲ್ಲಿ ಹಾರ್ನ್ ಹೊಡೆದ ವಿಚಾರಕ್ಕೆ ಇಬ್ಬರು ಬೈಕ್ ಸವಾರರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೂಡ್ಲು ಗೇಟ್ ಬಳಿ ನಡೆದಿದೆ. ನಿನ್ನೆ ಸಂಜೆ ಸುಮಾರು 7 ಗಂಟೆ ವೇಳೆಗೆ ಘಟನೆ ನಡೆದಿದ್ದು, ಇಬ್ಬರು ಯುವಕರು ಕ್ಯಾಬ್ ಚಾಲಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಸಿಗ್ನಲ್ನಲ್ಲಿ ಹಾರ್ನ್ ಹೊಡೆದಿದ್ದಕ್ಕೆ ಕ್ಯಾಬ್ ಚಾಲಕ ಹಾಗೂ ಬೈಕ್ ಸವಾರರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಇಬ್ಬರು ಯುವಕರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





