Breaking News

BigTv News

ವಿಜಯನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆ – ರುಬ್ಬುಗುಂಡಿನ ಕಲ್ಲಿನಿಂದ ಹೊಡೆದು ಯುವಕನ ಭೀಕರ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿಯ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕಿರಣ್ ಕುಮಾರ್ (25) ಎಂಬ ಯುವಕನನ್ನು ರುಬ್ಬುಗಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಕರಿಯಪ್ಪ (30) ಎಂಬಾತ ಕಿರಣ್ ಜೊತೆ ಮಾತಿನ ಚಕಮಕಿ ನಡೆಸಿ, ಬಳಿಕ ರುಬ್ಬುಗಲ್ಲಿನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕರಿಯಪ್ಪ ಹಾಗೂ ಕಿರಣ್ ಇಬ್ಬರೂ ಪೊಲೀಸರ ಎಂಒಬಿ …

Read More »

1.15 ಕೋಟಿ ಹವಾಲಾ ಹಣ ದರೋಡೆ ಪ್ರಕರಣ: ಕಾನ್ಸ್‌ಟೇಬಲ್‌ ಅರೆಸ್ಟ್‌

ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಹವಾಲಾ ಹಣ ದೋಚಲು ಸತ್ಯನಾರಾಯಣ ಎಂಬವರನ್ನು ಅಪಹರಿಸಿ ಹಣ ದರೋಡೆ ಮಾಡಲಾಗಿತ್ತು. ತನಿಖೆ ವೇಳೆ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯ ಯುವಕರ ನೆರವಿನಿಂದ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. …

Read More »

ವಿಜಯಪುರದಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ವಿಜಯಪುರ: ನಗರದ ನಾಲಬಂದ್ ಚೌಕ್‌ನಲ್ಲಿರುವ ಅಂಗಡಿಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಸೋಮವಾರ ನಸುಕಿನ ಜಾವ ಸಂಭವಿಸಿದ ಬೆಂಕಿಯಿಂದ ಹಾರ್ಡ್‌ವೇರ್, ಸೆಂಟ್ರಿಂಗ್ ಸಾಮಗ್ರಿಗಳು, ಹಗ್ಗ ಹಾಗೂ ಪ್ಲಾಸ್ಟಿಕ್ ವಸ್ತುಗಳು ನಾಶವಾಗಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಮೂರು ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಅಗ್ನಿಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದ್ದರಿಂದ ಹೆಚ್ಚಿನ ನಷ್ಟವಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. …

Read More »

ವಿಜಯನಗರ: ರುಬ್ಬುಗಲ್ಲಿನಿಂದ ಯುವಕನ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿ ನಾಲ್ಕನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಮಂಗಳವಾರ ನಸುಕಿನಲ್ಲಿ ಕಿರಣ್ ಕುಮಾರ್ ಅಲಿಯಾಸ್ ಚುಮ್ಮಿ (25) ಎಂಬ ಯುವಕನನ್ನು ರುಬ್ಬುಗಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಜಗಳ ಆರಂಭವಾಗಿದ್ದು, ಈ ವೇಳೆ ಕಿರಣ್‌ನ ತಲೆಯ ಹಿಂಭಾಗಕ್ಕೆ ರುಬ್ಬುಗಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅದೇ ಓಣಿಯ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಎಸ್. ಜಾಹ್ನವಿ ತಿಳಿಸಿದ್ದಾರೆ. …

Read More »

ದೀಪಾವಳಿ ಹೆಸರಲ್ಲಿ ಹೈಟೆಕ್​​ ಪೂಲ್ ​​ಪಾರ್ಟಿ: ಬೆಂಗಳೂರಲ್ಲಿ ಸಿಸಿಬಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಬೆಂಗಳೂರು: ದೀಪಾವಳಿ ಹೆಸರಿನಲ್ಲಿ ಮಾರತಹಳ್ಳಿಯ ಯಮಲೂರು ಕರಿಯಮ್ಮನ ಅಗ್ರಹಾರ ರಸ್ತೆಯ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಬಂಧಿತರು. ಪೊಲೀಸರಿಗೆ ಮಾಹಿತಿ ಸಿಗದಂತೆ ಪ್ರತಿ ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಪಾರ್ಟಿ ಆಯೋಜಿಸಿ, ನಿಖರ ಸ್ಥಳವನ್ನು ಗೌಪ್ಯವಾಗಿಡಲಾಗುತ್ತಿತ್ತು. ದಾಳಿ ವೇಳೆ ಅನುಮತಿಯಿಲ್ಲದೆ ಪಾರ್ಟಿ ನಡೆಸುತ್ತಿರುವುದು ಹಾಗೂ ಹುಕ್ಕಾ, ಮದ್ಯ, ಡ್ರಗ್ಸ್ …

Read More »

ಹೊಸಪೇಟೆ : ಯುವಕನ ಭೀಕರ ಹತ್ಯೆ; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಹೊಸಪೇಟೆ: ಕೈ ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಆಟೋ ಚಾಲಕನೊಬ್ಬನನ್ನು ರುಬ್ಬುಗುಂಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸಪೇಟೆಯ ಎಸ್.ಎಲ್. ಚೌಕಿ 4ನೇ ಕ್ರಾಸ್‌ನಲ್ಲಿ ನಡೆದಿದೆ. ಕಿರಣ್ ಅಲಿಯಾಸ್ ಚುಮ್ಮಿ (25) ಕೊಲೆಯಾದ ಯುವಕ. ಕಿರಣ್ ಸಾಲದ ಹಣ ವಾಪಸ್ ಕೇಳಲು ತೆರಳಿದ್ದಾಗ ಆರೋಪಿತನು ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಜಗಳವಾಡಿ, ರುಬ್ಬುಗುಂಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ …

Read More »

ಬೆಂಗಳೂರು | ಏಳು ಮಂದಿ ಹತ್ಯೆ ಪ್ರಕರಣ: ಚಾಮುಂಡಿ ತಪ್ಪಲಲ್ಲಿ ದಂಪತಿ ಶವ ಪತ್ತೆ

ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳನ್ನು ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳೆಂದು ಗುರುತಿಸಲಾಗಿದೆ. ಇದರೊಂದಿಗೆ ಐದು ಮೃತದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಶವಕ್ಕಾಗಿ ಶಿರಾಡಿ ಘಾಟ್‌ನಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಹಗ್ಗದಿಂದ ಬಿಗಿದು ಗೋಣಿಚೀಲದಲ್ಲಿ ಎಸೆಯಲಾಗಿತ್ತು. ಈಗಾಗಲೇ ನಂದಿ ಬೆಟ್ಟದಲ್ಲಿ ಬಾಲಕ ಪುನೀತ್ ಹಾಗೂ ಏರ್ಕಾಡ್ ಅರಣ್ಯ ಪ್ರದೇಶದಲ್ಲಿ …

Read More »

ಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣವೇ ತೆಗೆದ ತಂದೆ: ಖಾರದ ಪುಡಿ ಎರಚಿ ಮಾಡಿದ್ದೇನು?

ಚಿಕ್ಕೋಡಿ: ತನ್ನ ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಲು ಸಹಾಯ ಮಾಡಿದ್ದಾನೆ ಎಂಬ ಆಕ್ರೋಶದಿಂದ ತಂದೆಯೊಬ್ಬ ಜ್ಯೋತಿಷಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮಂದಾರ್ ರಾಂಡೆ (35) ಕೊಲೆಯಾದ ಜ್ಯೋತಿಷಿ. ಆರೋಪಿ ದೀಪಕ್ ಮುಕ್ಕಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮಗಳು ಅನುಜಾ, ಓಂಕಾರ್ ಖೋತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೇಮ ವಿವಾಹಕ್ಕೆ ಜ್ಯೋತಿಷಿ ಮಂದಾರ್ ಮಧ್ಯಸ್ಥಿಕೆ ವಹಿಸಿ …

Read More »

ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ: ಮಂಗಳೂರಿನ ಧರ್ಮಗುರು ವಿರುದ್ಧ ಮತ್ತೊಂದು ಕೇಸ್

ಮಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚರ್ಚ್‌ನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ (65) ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ. 13 ವರ್ಷದ ಬಾಲಕನಿಗೆ 2026ರ ಮೇ 13ರಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್ ಹಾಗೂ ಪೋಕ್ಸೊ ಕಾಯ್ದೆಯಡಿ ತನಿಖೆ ಆರಂಭಿಸಲಾಗಿದೆ. ಇದಕ್ಕೂ ಮೊದಲು 14 ವರ್ಷದ ಬಾಲಕನಿಗೆ ಕಿರುಕುಳ ನೀಡಿದ ಆರೋಪದ ಮೇಲೆ …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. ಮಾಹಿತಿ ತಿಳಿದ ತಕ್ಷಣ ಬಾಂಬ್ ಪತ್ತೆ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಚೇರಿ ಆವರಣದಲ್ಲಿ ತಪಾಸಣೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »