Breaking News

BigTv News

ಇಬ್ಬರು ಕುಖ್ಯಾತ ಮನೆಗಳ್ಳರ ಸೆರೆ : ಒಬ್ಬನ ಮೇಲೆ 60, ಮತ್ತೊಬ್ಬನ ಮೇಲೆ 33 ಕೇಸ್

ಬೆಂಗಳೂರು: ಬಾಣಸವಾಡಿ ಠಾಣೆ ಪೊಲೀಸರು ಸುಮಾರು 300 ಕಿ.ಮೀ. ಚೇಸ್ ಮಾಡಿ ಕುಖ್ಯಾತ ಮನೆಗಳ್ಳರಾದ ದೊಡ್ಡಬಳ್ಳಾಪುರದ ಗಂಗಾಧರ್‌ (40) ಹಾಗೂ ಕೊರಟಗೆರೆಯ ಬಸವರಾಜು (35) ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹77.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು, ₹3 ಲಕ್ಷ ನಗದು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಬಿಆರ್‌ ಲೇಔಟ್‌ನ ನಿವಾಸಿಯೊಬ್ಬರು ಕುಟುಂಬದೊಂದಿಗೆ ಹೊರಗೆ ಹೋಗಿದ್ದ ವೇಳೆ ಮನೆಯ ಬಾಗಿಲು ಮುರಿದು ₹14 ಲಕ್ಷ ಹಣವಿದ್ದ …

Read More »

ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ, KSRTC ಚಾಲಕ ಸ್ಥಳದಲ್ಲೇ ಮೃತ್ಯು!

ಮಂಡ್ಯ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲ ತಾಲೂಕಿನ ದೇವಿರಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಕಬ್ಬಿಣದ ಕಂಬಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ ಅನ್ನು ಬಸ್ ಓವರ್‌ಟೇಕ್ ಮಾಡಲು ಯತ್ನಿಸಿದಾಗ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಕಂಬಗಳು ಬಸ್ಸಿನೊಳಗೆ ನುಗ್ಗಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಲವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ …

Read More »

ಬೆಂಗಳೂರು : ಪತ್ನಿಕೊಂದು ಆತ್ಮಹತ್ಯಗೆ ಶರಣಾದ ಆಟೋ ಚಾಲಕ

ಬೆಂಗಳೂರು, ಸೆ. 9: ಪತ್ನಿಯನ್ನು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ನಡೆದಿದೆ. ಶ್ರುತಿ (35) ಅವರನ್ನು ಕೊಲೆ ಮಾಡಿದ ಪತಿ ರಾಘವೇಂದ್ರ (38) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾವಣಗೆರೆ ಮೂಲದ ಶ್ರುತಿ ಹಾಗೂ ರಾಘವೇಂದ್ರ ಅವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ದಾವಣಗೆರೆಯಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದು, ದಂಪತಿ ಇಬ್ಬರೇ ವಿಭೂತಿಪುರದ ಬಾಡಿಗೆ ಮನೆಯಲ್ಲಿ …

Read More »

ವೈದ್ಯಕೀಯ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಬ್ಲಾಕ್‌ಮೇಲ್: ರಾಯಚೂರಿನಲ್ಲಿ ಮೂವರು ಖತರ್ನಾಕ್ ಸುಲಿಗೆಕೋರರ ಬಂಧನ!

ರಾಯಚೂರು: ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು ಫೋಟೋ, ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರ ಗ್ಯಾಂಗ್‌ ಅನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ. ಡಾಬಾಗೆ ಸ್ನೇಹಿತೆಯೊಂದಿಗೆ ತೆರಳಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಹಿಂಬಾಲಿಸಿದ್ದ ಆರೋಪಿಗಳು, ಫೋಟೋ-ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ₹30 ಸಾವಿರ ನಗದು ಪಡೆದಿದ್ದರು. ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದರು. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳು ಕೇವಲ …

Read More »

ಹುಲಿ, ಚಿರತೆ ಉಗುರು, ಕಾಡೆಮ್ಮೆ ಕೊಂಬು ಸೇರಿ ವನ್ಯಜೀವಿ ಉತ್ಪನ್ನ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ವನ್ಯಜೀವಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಶಂಕರ ಸಿದ್ದಿ ಹಾಗೂ ನರಸಿಂಹ ಸಿದ್ದಿ ಬಂಧಿತ ಆರೋಪಿಗಳು. ಆರೋಪಿಗಳಿಂದ 15.748 ಕೆಜಿ ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಕಾಡೆಮ್ಮೆ ಕೊಂಬುಗಳು, ಎಂಟು ಹುಲಿ ಉಗುರುಗಳು, 12 ಚಿರತೆ ಉಗುರುಗಳು, ಎರಡು ಹುಲಿ ಹಲ್ಲುಗಳು, ಮೂರು ಚಿರತೆ ಹಲ್ಲುಗಳು, ಆರು ಕಾಡುಹಂದಿ ಹಲ್ಲುಗಳು ಸೇರಿದಂತೆ ಒಂದು ಬೈಕ್ ಮತ್ತು ಒಂದು …

Read More »

ಚಾಮರಾಜನಗರ: ಹನೂರು ಸಮೀಪ ಕತ್ತರಿಸಿದ ಸ್ಥಿತಿಯಲ್ಲಿ ಜಿಂಕೆಯ ಶವ ಪತ್ತೆ

ಚಾಮರಾಜನಗರದ ಹನೂರು ವನ್ಯಜೀವಿ ಉಪವಿಭಾಗದ ಬಫರ್ ವಲಯದಲ್ಲಿ ಜಿಂಕೆಯೊಂದನ್ನು ಕಳ್ಳಬೇಟೆಗಾರರು ಬೇಟೆಯಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ ಪಚ್ಚೆದೊಡ್ಡಿ ಶಾಖೆಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಗುಂಡಿನ ಶಬ್ಧ ಕೇಳಿಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗಂಡು ಜಿಂಕೆಯ ಎದೆಯ ಭಾಗ ಹಾಗೂ ಮುಂಗಾಲುಗಳನ್ನು ಕತ್ತರಿಸಿ ಬಿಸಾಡಿರುವುದು ಪತ್ತೆಯಾಗಿದೆ. ಕಳ್ಳಬೇಟೆಗಾರರು ಜಿಂಕೆಯನ್ನು ಬೇಟೆಯಾಡಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ …

Read More »

ಭ್ರಷ್ಟಾಚಾರ ಆರೋಪ: ಪಿಡಿಒ ಅಮಾನತು

ಮೈಸೂರು: ದಿಶಾ ಸಮಿತಿ ಸಭೆಯಲ್ಲಿ ಸಾಲಿಗ್ರಾಮ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಅಂಗವಿಕಲರ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ, ಎಲೆಕ್ಟ್ರಿಕಲ್ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ವ್ಯವಹಾರ ನಡೆದಿದೆ ಎಂದು ನಿರ್ದೇಶಕ ಹಂಪಾಪುರ ಕುಮಾರ್ ದಾಖಲೆ ಸಹಿತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಅವರಿಗೆ ಸೂಚಿಸಿದ್ದರು. ತನಿಖೆ …

Read More »

ಗೃಹಪ್ರವೇಶಕ್ಕೆ ತೆರಳುತ್ತಿದ್ದ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ!

ಹಾಸನದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಯುವಕನನ್ನು ದುಷ್ಕರ್ಮಿಯೊಬ್ಬ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಚನ್ನಪಟ್ಟಣ ವೃತ್ತದ ಸಮೀಪದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಘಟನೆ ನಡೆದಿದ್ದು, ಹರಳಹಳ್ಳಿ ಗ್ರಾಮದ ಮಣಿ ಅಲಿಯಾಸ್ ಮಣಿಕಂಠ (35) ಮೃತ ಯುವಕ. ಮಣಿಕಂಠ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಹೆದ್ದಾರಿ ಪಕ್ಕದಲ್ಲಿ ದುಷ್ಕರ್ಮಿ ದಿಢೀರ್ ದಾಳಿ ನಡೆಸಿದ್ದಾನೆ. ಭಾರೀ ಗಾತ್ರದ ಕಲ್ಲನ್ನು ತಲೆ ಮೇಲೆ ಎತ್ತಿಹಾಕಿ …

Read More »

ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವ ಎಸೆದಿದ್ದ ಪ್ರಿಯಕರ*

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದ ಬಳಿ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಅನ್ನಪೂರ್ಣಾ ಸಿದ್ದಪ್ಪ ಒಡಚನ್ನವರ (34) ಎಂಬ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮ್ಲಾಪೂರ ಗ್ರಾಮದ ದಿಲೀಪ್ ಗಡ್ಕರಿ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣಾ ಹಾಗೂ ದಿಲೀಪ್ ನಡುವೆ ಸಂಬಂಧವಿತ್ತು ಎನ್ನಲಾಗಿದ್ದು, ತನಿಖೆ ವೇಳೆ ದಿಲೀಪ್‌ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ವಿಚಾರಣೆ ವೇಳೆ ಅನ್ನಪೂರ್ಣಾಳನ್ನು ಕೊಲೆ …

Read More »

ಯುವತಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ವೈದ್ಯ ವಿರುದ್ಧ ಕೇಸ್‌

ಬೆಂಗಳೂರು: ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವತಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವೈದ್ಯ ಹಾಗೂ ಸೆಂಟರ್ ಮಾಲೀಕ ಯುವರಾಜ್ ಮನೋಹರ್ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ, ಬೆದರಿಕೆ ಹಾಗೂ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 2025ರ ಡಿಸೆಂಬರ್‌ನಲ್ಲಿ ಫೈಲ್ ಹುಡುಕುವ ನೆಪದಲ್ಲಿ ಕೋಣೆಗೆ ಕರೆದೊಯ್ದು ಪೆಪ್ಪರ್ ಸ್ಪ್ರೇ ಬಳಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದು, ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬೆದರಿಸಿದ್ದಾರೆ …

Read More »