Breaking News

BigTv News

ಅಕ್ರಮ ಬೆಟ್ಟಿಂಗ್‌ ಆಯಪ್‌ ಪ್ರಚಾರ: ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಇ.ಡಿ. ತನಿಖೆ ಸಂಕಷ್ಟ!

ಅಕ್ರಮ ಬೆಟ್ಟಿಂಗ್‌ ಆಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಜಂಗ್ಲೀ ರಮ್ಮಿ, ಎ23, ಜೀತ್‌ವಿನ್‌, ಪರಿಮ್ಯಾಚ್‌, ಲೋಟಸ್‌365 ರಂತಹ ಜೂಜಿನ ಆಯಪ್‌ಗಳಿಂದ ಹಣ ಪಡೆದು, ಅವುಗಳ ಪರ ನಟ, ನಟಿಯರು, ಜಾಲತಾಣ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದರು. ಆದರೆ …

Read More »

ಅಡ್ವಾಣಿ ಯಾತ್ರೆಗೂ ಮುಂಚಿನ ಕೊಯಮತ್ತೂರು ಬಾಂಬ್‌ ಸ್ಫೋಟ : ವಿಜಯಪುರದಲ್ಲಿ ಉಗ್ರ ಸೆರೆ!

ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ ಭೇಟಿಗೂ ಮುನ್ನ ಸಂಭವಿಸಿದ್ದ, 58 ಮಂದಿ ಸಾವಿಗೆ ಕಾರಣವಾಗಿದ್ದ 1998ರ ಕೊಯಮತ್ತೂರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಉಗ್ರ ಸಾದಿಕ್‌ ಅಲಿಯಾಸ್‌ ಟೈಲರ್‌ ರಾಜಾನನ್ನು ಕರ್ನಾಟಕದ ವಿಜಯಪುರದಲ್ಲಿ ತಮಿಳುನಾಡು ಉಗ್ರ ನಿಗ್ರಹ ಪಡೆ (ಎಟಿಎಸ್‌) ಬಂಧಿಸುವಲ್ಲಿ ಯಶಸ್ವಿಯಾಗಿದೆ.ಕೊಯಮತ್ತೂರು ನಗರ ಪೊಲೀಸರ ಜತೆಗೂಡಿ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಅಬೂಬಕರ್‌ ಸಿದ್ದಿಕಿ ಮತ್ತು ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ಮೊಹಮ್ಮದ್‌ ಅಲಿಯನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಇದೀಗ …

Read More »

ಅಕ್ರಮ ಶೆಡ್ ವರದಿ ಮಾಡಿದ್ದಕ್ಕೆ ಮಹಿಳಾ ಪತ್ರಕರ್ತೆ ಮೇಲೆ ಹಲ್ಲೆ!

ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಅನಧಿಕೃತ ನಿರ್ಮಾಣದ ಬಗ್ಗೆ ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತೆ ಮತ್ತು ಮೂವರು ವ್ಯಕ್ತಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ ಸಂಬಂಧ ಮಂಚರ್ ಪೊಲೀಸ್ ಠಾಣೆಯಲ್ಲಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಲೋಕಮತ್ ವರದಿ ಮಾಡಿದೆ.ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಬಡ್ಗುಜರ್ ಪ್ರಸ್ತುತ ತನಿಖೆಯನ್ನು ಮುನ್ನಡೆಸುತ್ತಿದ್ದಾರೆ

Read More »

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಶುಭಾಂಶು ಶುಕ್ಲಾ ಜುಲೈ 14ರಂದು ವಾಪಸ್!

ಆಯಕ್ಸಿಯಂ-4′ ಯೋಜನೆಯ ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಡ್ರ್ಯಾಗನ್ ಬಾಹ್ಯಾಕಾಶ ಕೋಶವನ್ನು ಐಎಸ್‌ಎಸ್‌ನಿಂದ ಅನ್‌ಡಾಕ್‌ (ಬೇರ್ಪಡಿಸುವುದು) ಮಾಡಬೇಕಿದೆ.ಆ ಪ್ರಕ್ರಿಯೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ್ದೇವೆ’ ಎಂದು ನಾಸಾ ಅಧಿಕಾರಿ ಸ್ಟೀವ್‌ ಸ್ಟಿಚ್ ಗುರುವಾರ ತಿಳಿಸಿದ್ದಾರೆ.’ಆಯಕ್ಸಿಯಂ-4′ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ‘ಡ್ರ್ಯಾಗನ್‌’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌-9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಜೂನ್‌ 25ರಂದು ನಭಕ್ಕೆ ಚಿಮಿತ್ತು.

Read More »

ಪತಿಗೆ ಮದ್ಯ ಕುಡಿಸಿ ಪ್ರಿಯಕರನ ಜೊತೆ ಸೇರಿ ತಲೆ ಕತ್ತರಿಸಿದ ಪತ್ನಿ !

ಇಮ್ರಾನ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಶೀಬಾ ಮತ್ತು ಆಕೆಯ ಪ್ರಿಯಕರ ಫರ್ಮನ್ ಸೇರಿ ಕೊಂದಿದ್ದಾರೆ. ಶೀಬಾ ಮತ್ತು ಫರ್ಮನ್ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ವಿದೇಶದಿಂದ 25 ದಿನಗಳ ಹಿಂದೆ ವಾಪಸ್ಸಾಗಿದ್ದ ಫರ್ಮನ್‌ನ ಸ್ನೇಹಿತ ರಫೀಕ್ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.ಕಂಚನ್‌ಖೇಡಾ ಬಳಿ ನಗರದ ಚರಂಡಿಯಲ್ಲಿ ಇಮ್ರಾನ್‌ನ ತಲೆ ಕತ್ತರಿಸಿದ ದೇಹ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮಂಗಳವಾರ ಈ ಪ್ರಕರಣವನ್ನು ಬೇಧಿಸಿದ …

Read More »

ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ಬದ್ಧ…

ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆಯೋಗವಲ್ಲದೆ ಮತ್ಯಾರು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈಗಾಗಲೇ ಶೇ.60ರಷ್ಟು ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಾವು ಯಾವುದೇ ವ್ಯಕ್ತಿಯ ಅಭಿಪ್ರಾಯ ಆಲಿಸದೆ ಮತದಾರರ ಪಟ್ಟಿಯಿಂದ ಹೊರಗಿಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ. ಆಯೋಗದ ಕಾರ್ಯ ಸಂವಿಧಾನಬದ್ಧವಾಗಿದೆ ಎಂದಿರುವ ಕೋರ್ಟ್, ಈ …

Read More »

ದಾವಣಗೆರೆ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ ಅಂಗವಿಕಲ ಮಗಳು ಆತ್ಮಹತ್ಯೆ!

ಪಡೆದ 2 ಸಾಲಕ್ಕೆ ವಾರಕ್ಕೊಮ್ಮೆ ಮರುಪಾವತಿ ಮಾಡಿದರೆ, ಮತ್ತೊಂದು ಸಾಲಕ್ಕೆ ತಿಂಗಳಿಗೊಮ್ಮೆ ಮರುಪಾವತಿ ಮಾಡಬೇಕು. ಬರುವ ಕೂಲಿ ಹಣದಲ್ಲಿ ಸಾಲ ಕಟ್ಟುವುದರ ಜೊತೆ ಸಂಸಾರ ಕೂಡ ನಡೆಸಬೇಕಿತ್ತು. ಹೀಗಾಗಿ ಕಂತು ಕಟ್ಟಲು ಬಹಳ ಕಷ್ಟ ಪಡುತ್ತಿದ್ದರು.ಕಂತು ಸರಿಯಾಗಿ ಕಟ್ಟದಿದ್ದಾಗ ಮೈಕ್ರೋ ಫೈನಾನ್ಸ್ ಹಾಗೂ ಸ್ವಸಹಾಯ ಸಂಘಗಳ ಸಿಬ್ಬಂದಿಗಳು ಮನೆಯ ಬಳಿ ಬಂದು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇವೆಲ್ಲದರಿಂದ ಬೇಸತ್ತ ಸುವರ್ಣಮ್ಮ ತನ್ನ ಅಂಗವಿಕಲ ಮಗಳನ್ನು ಕರೆದುಕೊಂಡು ತುಂಗಭದ್ರಾ ನದಿಗೆ …

Read More »

ಪಾರ್ಟಿ ವೇಳೆ ಕಿರಿಕ್ – ನಶೆಯಲ್ಲಿ ಸ್ನೇಹಿತನನ್ನೇ ಮುಗಿಸಿದ ದೋಸ್ತ್!!

ಸ್ನೇಹಿತ ಕರೆದ ಎಂದು ಮನೆಯಲ್ಲಿ ಹೇಳಿ ಪವನ್ ರಾತ್ರಿ ಶಿವಕುಮಾರ್ ಮನೆಗೆ ಬಂದಿದ್ದು, ಬಳಿಕ ಇಬ್ಬರೂ ಸೇರಿ ಮನೆಯಲ್ಲೇ ಪಾರ್ಟಿ ಆರಂಭಿಸಿದ್ದಾರೆ. ಎಣ್ಣೆ ಕುಡಿದ ಬಳಿಕ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಕಿರಿಕ್ ಆಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಮೊದಲೇ ಎಣ್ಣೆ ಕುಡಿದ್ದರಿಂದ ಸಿಟ್ಟು ನೆತ್ತಿಗೇರಿ ಶಿವಕುಮಾರ್ ಸ್ನೇಹಿತ ಪವನ್ ನನ್ನೇ ಕೊಲೆ ಮಾಡಿದ್ದಾನೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನೋಬನಗರ ಠಾಣೆ ಪೋಲೀಸ್ ಠಾಣೆಯಲ್ಲಿ …

Read More »

ದೆಹಲಿ: ಭೀಕರ ಡಬಲ್ ಮರ್ಡರ್, ಪ್ರೇಯಸಿಯ ಜೊತೆಗೆ 6 ತಿಂಗಳ ಮಗುವನ್ನು ಹತ್ಯೆಗೈದ ಪಾಪಿ!

ದೆಹಲಿಯ ಜನಪ್ರಿಯ ಮಜ್ನು ಕಾ ಟಿಲ್ಲಾ ಪ್ರದೇಶದಲ್ಲಿ 22 ವರ್ಷದ ಮಹಿಳೆ ಮತ್ತು 6 ತಿಂಗಳ ಮಗುವನ್ನು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾಖಂಡ ಮೂಲದ 24 ವರ್ಷದ ನಿಖಿಲ್ ಎಂಬಾತನನ್ನು ಹಲವು ರಾಜ್ಯಗಳಲ್ಲಿ ನಡೆಸಿದ ಶೋಧದ ನಂತರ ಬುಧವಾರ ಹಲ್ದ್ವಾನಿಯಲ್ಲಿ ಬಂಧಿಸಲಾಗಿದೆ.ಪೊಲೀಸರ ಪ್ರಕಾರ, ಈ ಕೊಲೆಗಳನ್ನು ಸರ್ಜಿಕಲ್ ಬ್ಲೇಡ್ ಬಳಸಿ ನಡೆಸಲಾಗಿದೆ. ನಿಖಿಲ್ ಸ್ಥಳದಿಂದ ಪರಾರಿಯಾಗಿ, ಆತ್ಮಹತ್ಯೆಗೆ ಪ್ರಯತ್ನಿಸಿ, ನಂತರ ಹಲವು ನಗರಗಳಲ್ಲಿ …

Read More »

ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂದಿಸಿದ ಪೊಲೀಸ್.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಬುಧವಾರ ನಡೆದಿದ್ದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಘಟನೆ ನಡೆದ ಎಂಟೇ ತಾಸಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ 25 ವರ್ಷದ ಯಲ್ಲಪ್ಪ ಬಂಧಿತ ಯುವಕ.ಕೃತ್ಯ ಎಸಗಿ ಹೋಗುವಾಗ ಮಾರ್ಗಮಧ್ಯೆ ಪರಿಚಿತ ಯುವಕನೊಬ್ಬ ಆರೋಪಿಯ ಬೈಕ್‌ ಹತ್ತಿದ್ದ. ಅನುಮಾನದ ಮೇರೆಗೆ ಆತನನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಆತನ ಪಾತ್ರವಿಲ್ಲದಿರುವುದು ಗೊತ್ತಾಯಿತು. …

Read More »