Breaking News

BigTv News

ಬೆಂಗಳೂರು: ಎದೆನೋವು ಎನ್ನುತ್ತಲೇ ಆಸ್ಪತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಬ್ರೈನ್ ಡೆಡ್!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 52 ವರ್ಷದ ಕೋನಪ್ಪ ಎಂಬವರು ಎದೆ ನೋವಿನಿಂದ ಬಳಲುತ್ತಾ ಸ್ವತಃ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯ ಭದ್ರತಾ ಕ್ಯಾಮೆರಾದ ದೃಶ್ಯಗಳ ಪ್ರಕಾರ, ಅವರು ಒಳಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ (ಹೃದಯ ನಿಲ್ಲುವಿಕೆ) ಉಂಟಾಗಿ, ಅವರು ಕುಸಿದು ಬಿದ್ದರು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಲು ಮುಂದಾದರೂ, ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ರವಾನಿಸಲು …

Read More »

ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ18 ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ!

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆಯಾಗಿದೆ.ಕೋತಿಗಳಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ಖಚಿತ ಎಂದು ವೈದ್ಯ ಡಾ. ಮಹದೇಶ್ ಹೇಳಿದ್ದಾರೆ. ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ಒಟ್ಟು 18 ಕೋತಿಗಳು ಸಾವನ್ನಪ್ಪಿವೆ. ಎರಡು ಕೋತಿಗಳು ಜೀವಂತವಾಗಿದ್ದವು. ನಿತ್ರಾಣಗೊಂಡ ಅವುಗಳನ್ನು ಈಗಾಗಲೇ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವ ಕೋತಿಗಳು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿವೆ. ಇನ್ನು ಮೂರು ಕೋತಿಗಳಿಗೆ ಪ್ರಜ್ಞೆಯಿದ್ದು ಪರಾರಿಯಾಗಿವೆ ಎಂದು …

Read More »

ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ಚಿತ್ರೀಕರಣ, ಆರೋಪಿ ಅರೆಸ್ಟ್!

ನಾಗೇಶ್ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡಿದ್ದ. ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂಬ ಮೂಡಿದೆ. ಕೂಡಲೇ ಹೊರ ಬಂದು ನೋಡಿದಾಗ ಯಾರೂ ಇರಲಿಲ್ಲ. ಮತ್ತೆ ಶೌಚಾಲಯದ ಒಳ ಹೋಗಿ ಆಕೆ ಪರಿಶೀಲನೆ ಮಾಡಿದ್ದಾರೆ. ಆಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್‌ಆರ್ ಸಿಬ್ಬಂದಿ …

Read More »

ಪ್ರೀತಿಸಿದ ಹುಡುಗಿ ಕೈ ಕೊಟ್ಟಳೆಂದು ವಿಡಿಯೋ ಹರಿಬಿಟ್ಟು ಯುವಕ ನೇಣಿಗೆ ಶರಣು!

ಯುವತಿ ಬೇರೊಬ್ಬ ಹುಡುಗನಿಗೆ ಮೆಸೇಜ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕೆ ಲವ್ ಬ್ರೇಕ್ ಆಪ್ ಎಂದಿದ್ದಾಳೆ. ಇದರಿಂದ ಮನನೊಂದು ವೀಡಿಯೋ ಮಾಡಿ, ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತನ್ನ ಸಾವಿಗೆ ಯುವತಿಯೇ ಕಾರಣ, ಅವಳನ್ನು ಬಿಟ್ಟು ಇನ್ಯಾರು ಕಾರಣರಲ್ಲ ಎಂದು ಯುವಕ ಸಂತೋಷ್ ವಿಡಿಯೋ ಮಾಡಿದ್ದಾನೆ. ತೆರಕಾಂಬಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು …

Read More »

ದೊಡ್ಡಬಳ್ಳಾಪುರ: ಕಾರು ಪಲ್ಟಿ; ಭೀಮೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಐವರು ಸ್ಥಳದಲ್ಲೇ ಸಾವು!

ಕಾರಿನಲ್ಲಿ ಎಂಟು ಜನರು ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು.ಕಾರಿನಲ್ಲಿದ್ದ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲಾರಿಯೊಂದನ್ನು ಓವರ್ ಟೇಕ್ ಮಾಡುವ ವೇಳೆ‌ ಎದುರಿನಿಂದ ಕೆಎಸ್​ಆರ್​ಟಿಸಿ ಬಸ್ ಬಂದಿದೆ. ಬಸ್ ಹಾಗೂ ಲಾರಿಯನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಪಲ್ಟಿಯಾಗಿದ್ದೇ …

Read More »

50ರ ಆಂಟಿ ಜೊತೆ 22ರ ಯುವಕನ ಮದುವೆ!

50 ವರ್ಷದ ಮಹಿಳೆಯೊಬ್ಬರು,ತಮ್ಮ ಮಗನ ವಯಸ್ಸಿನ, 22ರ ಯುವಕನ ಕೊರಳಿಗೆ ಹಾರ ಹಾಕಿ, ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.ಮಹಿಳೆಯ ತಲೆಯಲ್ಲಿ ಕುಂಕುಮ, ಮುಖದಲ್ಲಿ ಮದುವೆಯಾದ ಸಂಭ್ರಮ.’ನಿಮ್ಮಿಬ್ಬರ ವಯಸ್ಸೆಷ್ಟು?” ಎಂದು ಕೇಳಿದಾಗ,ಆ ಮಹಿಳೆ ಯಾವುದೇ ಅಂಜಿಕೆ ಇಲ್ಲದೆ,ನನಗೆ 50, ಇವನಿಗೆ 22 ಎಂದು ಉತ್ತರಿಸುತ್ತಾರೆ.’ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು.ಪ್ರೀತಿಗೆ ವಯಸ್ಸಿನ ಹಂಗಿಲ್ಲ,ಅದಕ್ಕೆ ಯಾವುದೇ ಗಡಿಗಳಿಲ್ಲ.ಹಾಗಾಗಿ ಮದುವೆಯಾದೆವು’ಎಂದು ಆ ಮಹಿಳೆ ಹೇಳಿದ್ದಾಳೆ.

Read More »

ಯೂಟ್ಯೂಬ್​ ನೋಡಿ ಕಳ್ಳತನ ಮಾಡ್ತಿದ್ದವ ಸಿಕ್ಕಿಬಿದ್ದ!!

ಕೀ ಬಳಸಿ ಕಳ್ಳತನ ಮಾಡುತ್ತಿದ್ದವನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಪ್ರಕಾಶ್​ ಅಲಿಯಾಸ್​ ಬಾಲಾಜಿ (43) ಬಂಧಿತ ಆರೋಪಿ. ಆರೋಪಿ ​ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿವೆ. ಆರೋಪಿ ಪ್ರಕಾಶ್ ಉತ್ತರಹಳ್ಳಿಯಲ್ಲಿ ತನ್ನ ಪತ್ನಿ ಜೊತೆಗೆ ವಾಸವಾಗಿದ್ದನು. ಯೂಟ್ಯೂಬ್​ನಲ್ಲಿ ಕಳ್ಳತನದ ವಿಡಿಯೋ ನೋಡಿ ಹೊಸ ಹೊಸ ಮಾದರಿಯಲ್ಲಿ ಕಳ್ಳತನ ಮಾಡುತ್ತಿದ್ದನು. ಕದ್ದ ಚಿನ್ನಾಭರಣವನ್ನು ರಾಜೀವ್ ಎಂಬಾತನಿಂದ ಮಾರಾಟ ಮಾಡಿಸುತ್ತಿದ್ದನು.ಪೊಲೀಸರಿಗೆ ಆರೋಪಿ ಪ್ರಕಾಶ್​ ಅತ್ತಿಬೆಲೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವುದು …

Read More »

ಸದಾಶಿವನಗರದಲ್ಲಿ ಡಬಲ್ ಬ್ಯಾರೆಲ್ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿಯಿಂದ ರಂಪಾಟ!

ಸದಾಶಿವನಗರದಲ್ಲಿ ನಡೆದ ಬೆಳಗಿನ ಜಾವದಲ್ಲಿ ನಡೆದ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಡಬಲ್ ಬ್ಯಾರೆಲ್ ಗನ್ ಹಿಡಿದು ಕಾರ್ಮಿಕರಿಗೆ ಬೆದರಿಕೆ ಹಾಕಿ ರಂಪಾಟ ಮಾಡಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಜಯಪ್ರಕಾಶ್ ಎಂಬವರು ಏಕಾಏಕಿ ಡಬಲ್ ಬ್ಯಾರೆಲ್ ಗನ್ ಹಿಡಿದು ಹೊರಬಂದರು. ಲಾರಿ ಚಾಲಕನಿಗೆ ಗನ್ ತೋರಿಸಿ, ‘ಇಲ್ಲಿ ಏಕೆ ಬಂದೆ ಮಗನೇ? ಫುಲ್ ಅವಾಜ್ ಹಾಕುತ್ತಾ ಏನು ಈ ಕಡೆ?’ ಎಂದು ಧಮ್ಕಿ ಹಾಕಿದರು.ಭೀತಿಯಿಂದ ಜನ …

Read More »

ಆಟೋದಲ್ಲೇ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ!!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಗಳಾದ ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, 15 ದಿನದ ಹಿಂದೆಯಷ್ಟೇ ಮೃತ ರಂಜೀತಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಿತಾರ್ಥವಾಗಿತ್ತು. ಇದರಿಂದ ರಾಘವೇಂದ್ರ ಹಾಗೂ ರಂಜೀತಾ ಇಂದು ಆಟೋದಲ್ಲಿ ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.ಆಟೋದ ಹಿಂದಿನ ಸೀಟಿನ ಮೇಲಿನ ಕಬ್ಬಿಣದ ರಾಡ್​ ಗೆ ಅಗ್ಗ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ …

Read More »

ನೆಲದಲ್ಲಿ ಡ್ರಗ್ಸ್ ಹೂತಿಟ್ಟು ಲೊಕೇಶನ್ ಕಳಿಸುವ ಪೆಡ್ಲರ್ – ತಗ್ಲಾಕ್ಕೊಂಡ ವ್ಯಸನಿ!

ಸೋಲದೇವನಹಳ್ಳಿ ಹಾಗೂ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದರ ನಡುವೆಯೇ ರಸ್ತೆ ಬದಿ ಡ್ರಗ್ಸ್ ಗಾಗಿ ಹುಡುಕಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲನೆ ನಡೆಸಿದಾಗ, ನೈಜೀರಿಯಾ ಮೂಲದ ಪ್ರಜೆಯೋರ್ವ 1500 ರೂಪಾಯಿಗೆ ಡ್ರಗ್ಸ್ ಅನ್ನು ಬಚ್ಚಿಟ್ಟು ಈತನಿಗೆ ತೆಗೆದುಕೊಳ್ಳುವಂತೆ ಹೇಳಿದ್ದ ಎಂದು ಗೊತ್ತಾಗಿದೆ.ಡ್ರಗ್ಸ್ ಇರುವ ಸ್ಥಳದ ಫೋಟೋ ಹಾಗೂ ಲೊಕೇಶನ್ ಆಧರಿಸಿ ವ್ಯಕ್ತಿ …

Read More »