Breaking News

BigTv News

ಕೊಯ್ದು ಮೂರು ಎಮ್ಮೆಗಳ ಹತ್ಯೆ ಮಾಡಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು.!

ಆಂಧ್ರಪ್ರದೇಶದ ಎಲೂರು ಜಿಲ್ಲೆ ಲಿಂಗಪಾಲಂ ಮಂಡಲದ ಮಾಥ ಗುಡೆಮ್ ಉಪನಗರದ ಸುಂದರರಾವ್ಪೇಟ್ ಗ್ರಾಮದಲ್ಲಿ ತೋರ್ಲಪತಿ ರವಿ ಎಂಬುವವರಿಗೆ ಸೇರಿದ ಮೂರು ಎಮ್ಮೆಗಳನ್ನು ಕ್ರೂರವಾಗಿ ಶಿರಚ್ಛೇದ ಮಾಡಲಾಗಿದೆ. ಈ ವಿಷಯವನ್ನು ಧರ್ಮಜಿಗುಡೆಮ್ ಪೊಲೀಸರಿಗೆ ವರದಿ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಆರೋಪಿಗಳನ್ನು ಶೀಘ್ರವೇ ಹಿಡಿದು ಶಿಕ್ಷೆ ವಿಧಿಸಬೇಕೆಂದು ಸುತ್ತಮುತ್ತಲಿನ ಹಳ್ಳಿಗಳ ಜನರು ಒತ್ತಾಯಿಸುತ್ತಿದ್ದಾರೆ.

Read More »

ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಗೆ ಮೋಸ; ಬರೋಬ್ಬರಿ 2 ಕೋಟಿ ಹಣ ದೋಚಿ ಕಿಡಿಗೇಡಿಗಳು ಪರಾರಿ!

ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಯೊಬ್ಬರಿಂದ ಎರಡು ಕೋಟಿ ರು. ಹಣ ದೋಚಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಣ ಪರಿವರ್ತನೆ ಸಲುವಾಗಿ ಬೆಂಜಮಿನ್ ಅವರ ಭೇಟಿಗೆ ಪೂರ್ವನಿಗದಿಯಂತೆ ವಿದ್ಯಾರಣ್ಯಪುರದ ಎಂ.ಎಸ್‌.ಪಾಳ್ಯ ಸರ್ಕಲ್ ಬಳಿಗೆ ತೆರಳಿದ್ದೆ. ತದನಂತರ ಬೆಂಜಮಿನ್ ಅವರಿಗೆ ನಾವು ನೀಡಿದ ಹಣವನ್ನು ಎಣಿಕೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಜನರು ನುಗ್ಗಿ ಹಣವನ್ನು ಕೊಡುವಂತೆ ಬೆದರಿಸಿದರು. ಇದಕ್ಕೆ ವಿರೋಧಿಸಿದಾಗ ಚಾಕು ತೋರಿಸಿ …

Read More »

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಸರಣಿ ಸಾವು: ಮತ್ತೋರ್ವ ಬಲಿ!

ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದೆ. ಇಂದು ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ(37) ಮೃತ ವ್ಯಕ್ತಿ.

Read More »

ಸಹೋದರನ ನಿಧನ ಹಿನ್ನೆಲೆ ಊರಿಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಸಾವು!

ಸಹೋದರನ ನಿಧನ ಹಿನ್ನೆಲೆ ಊರಿಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರಿನ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಾರು-ಆಯಕ್ಟಿವಾ ಅಪಘಾತದ ಗಾಯಾಳು ಬಂಗ್ರಕೂಳೂರು ನಿವಾಸಿ ಶ್ರುತಿ(27) ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Read More »

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಲವ್‌, ಸೆಕ್ಸ್‌, ದೋಖಾ ಆರೋಪ!

ಪುತ್ತೂರಿನ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ(21) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದ್ದು, ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್‌ ಸೈನ್ಸ್‌ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಪುತ್ತೂರಿನಲ್ಲಿ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಪ್ರೇಮಾಂಕುರವಾಗಿತ್ತು. ಬಳಿಕ 2024ರ ಅಕ್ಟೋಬರ್‌ 11ರಂದು ಶ್ರೀಕೃಷ್ಣ ಮನೆಗೆ ಕರೆದು ದೈಹಿಕ ಸಂಪರ್ಕ ಬೆಳೆಸಿದ ಆರೋಪ ಮಾಡಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮದುವೆಯಾಗುತ್ತೇನೆ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಅದಾದ ಬಳಿಕ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ …

Read More »

ಈ ಬಾರಿ 11 ದಿನಗಳ ಕಾಲ ದಸರಾ ಹಬ್ಬ ಆಚರಣೆಗೆ ನಿರ್ಧಾರ : CM ಸಿದ್ದರಾಮಯ್ಯ ಹೇಳಿಕೆ!

ಈ ಬಾರಿ ದಸರಾ ಹಬ್ಬವನ್ನು 11 ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಪೂರ್ವಭಾವಿ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ದಸರಾ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ದಸರಾ ವೀಕ್ಷಣೆಗೆ 10 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಹಾಗಾಗಿ ನೂಕು ನುಗ್ಗುಲು ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನಸ್ನೇಹಿಗಳಾಗಿ ಪೊಲೀಸರು ವರ್ಜಿಸಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದೇನೆ. …

Read More »

ರಥಯಾತ್ರೆ ವೇಳೆ ಭಾರೀ ಕಾಲ್ತುಳಿತ: 500ಕ್ಕೂ ಅಧಿಕ ಭಕ್ತರಿಗೆ ಗಾಯ, 40 ಮಂದಿ ಗಂಭೀರ!

ಒಡಿಶಾದ ಪುರಿಯಲ್ಲಿ ವಾರ್ಷಿಕ ರಥಯಾತ್ರೆ ಉತ್ಸವದ ಸಮಯದಲ್ಲಿ ನಗರದಲ್ಲಿ ಮೂರು ರಥಗಳನ್ನು ಎಳೆಯಲು ಭಾರಿ ಜನಸಮೂಹ ಸೇರಿದ್ದರಿಂದ 500 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. 40 ಕ್ಕೂ ಅಧಿಕ ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಡಿಶಾ ರಾಜ್ಯಪಾಲ ಹರಿ ಬಾಬು ಕಂಭಂಪತಿ, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಇತರ ಅನೇಕ ಗಣ್ಯರು ಪುರಿಯಲ್ಲಿ ಜಗನ್ನಾಥ, ದೇವಿ ಸುಭದ್ರ ಮತ್ತು ಬಲಭದ್ರರ ರಥಗಳನ್ನು ಎಳೆದರು.ವಾರ್ಷಿಕ ರಥೋತ್ಸವಕ್ಕಾಗಿ ಸುಮಾರು ಒಂದು …

Read More »

ಶಿವಮೊಗ್ಗ :ವಿದ್ಯುತ್ ಸ್ಪರ್ಶಿಸಿ ಪತ್ನಿ, ಕಾಪಾಡಲು ಹೋದ‌ ಪತಿಯು ಸಾವು!

ಮನೆ ಮುಂದೆ ಬಟ್ಟೆ ಒಣಗಿಸಲು ಹಾಕಿದ್ದ ಕಬ್ಬಿಣದ ತಂತಿಗೆ ಮನೆಯ ವಿದ್ಯುತ್ ಮೋಟಾರ್‌ನ ವೈರ್‌ಗಳು ಸಂಪರ್ಕವಾಗಿದ್ದು, ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ತಂತಿ ತೇವಗೊಂಡಿದೆ. ತಂತಿಯಲ್ಲಿ ಬಟ್ಟೆ ಒಣಗಿಸಲು ಹೋದ ವಿನೋದ ಅವರಿಗೆ ವಿದ್ಯುತ್ ತಗುಲಿದ್ದು, ಅವರನ್ನು ರಕ್ಷಿಸಲು ಧಾವಿಸಿದ ಪತಿ ಕೃಷ್ಣಪ್ಪ ಅವರಿಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಸೊರಬ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ಚಾಮರಾಜನಗರ :ವಿಷ ಪ್ರಾಷನದಿಂದ 5 ಹುಲಿಗಳು ಸಾವು!

ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ತಿಂದು ಹಾಕಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ಹಸುವಿನ ಕಳೇಬರಕ್ಕೆ ವಿಷಹಾಕಿ ಹುಲಿಗಳನ್ನ ಕೊಂದಿರೋ ಶಂಕೆ ಇದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ ರಂಗಮ್ಮ ಎಂಬ ವೃದ್ಧೆಯನ್ನ ಹುಲಿ ಕೊಂದಿತ್ತು. ಇದರಿಂದ ಸ್ಥಳೀಯುರ ಬೆಚ್ಚಿಬಿದ್ದಿದ್ದರು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಇದೇ ಸೇಡಿಗೆ ಜನರು ಹುಲಿಗಳನ್ನ ಬಲಿಪಡೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.ಹಸುವಿನ ಮಾಂಸಕ್ಕೆ …

Read More »

ಕೊಲೆಗೆ ಮೊದಲು ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದ ಮಾವ!

ಫರಿದಾಬಾದ್‌ನಲ್ಲಿ ವರದಕ್ಷಿಣೆಗಾಗಿ ನಡೆದ ತನು ಎಂಬ ಯುವತಿಯ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮಾವ ಕೊಲೆಯ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅರುಣ್ ನಿದ್ರೆ ಮಾತ್ರೆಯನ್ನು ಹಾಕಿ ಕೊಟ್ಟಿದ್ದರಿಂದ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಭೂಪ್ ಸಿಂಗ್ ತನ್ನ ಸೊಸೆಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಆತ ಅತ್ಯಾಚಾರದ ಬಗ್ಗೆ ತನ್ನ ಮಗ ಮತ್ತು ಪತ್ನಿಗೆ …

Read More »