ಗೋಕುಲ ರಸ್ತೆಯ ಹೋಟೆಲ್ಗಳಿಗೆ ಖಾಕಿ ಶಾಕ್..! ವೀಕೆಂಡ್ ಪಾರ್ಟಿ ಹೆಸರಲ್ಲಿ ತಡರಾತ್ರಿ ಆಟ? — ದಿಢೀರ್ ದಾಳಿಗೆ ಕೆಲವರು ಎಸ್ಕೇಪ್,! ನೂತನ ಕಮಿಷನರ್ ಎಫೆಕ್ಟ್..! ಹೋಟೆಲ್ಗಳ ಮೇಲೆ ಪೊಲೀಸರ ಖಡಕ್ ಆಪರೇಷನ್ ಐಸ್ ಕ್ಯೂಬ್, ಬಾಂಬೆ 63 ಮೇಲೆ ದಾಳಿ — ತಡರಾತ್ರಿ ಚಟುವಟಿಕೆಗಳಿಗೆ ಬ್ರೇಕ್? ಹುಬ್ಬಳ್ಳಿ: ನೂತನ ಪೊಲೀಸ್ ಕಮಿಷನರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಹುಬ್ಬಳ್ಳಿ ಪೊಲೀಸರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ನಗರದ ಗೋಕುಲ ರಸ್ತೆಯ ಪ್ರತಿಷ್ಠಿತ ಹೋಟೆಲ್ಗಳ …
Read More »ಬೆಂಗಳೂರಲ್ಲಿ ಭಯಾನಕ ಹಾರರ್ : ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂಗಿಕ ದೌರ್ಜನ್ಯ
ಬೆಂಗಳೂರಿನ ಐಟಿಸಿ ಫ್ಲೈಓವರ್ ಮೇಲೆ ಮುಂಜಾನೆ ದಂಪತಿಯನ್ನು ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ಚಾಕು ತೋರಿಸಿ ಹಲ್ಲೆ ನಡೆಸಿ, ಮೊಬೈಲ್, ಬ್ರಾಸ್ಲೆಟ್ ಹಾಗೂ ಪರ್ಸ್ ದೋಚಿದ್ದಾರೆ. ಸ್ನೇಹಿತರ ಮನೆಗೆ ತೆರಳಿ ಆಟೋದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ದರೋಡೆ ಬಳಿಕ ಮಹಿಳೆಯನ್ನು ಆಟೋದಿಂದ ಹೊರಗೆಳೆದು, ಆಕೆಯ ಪತಿಯ ಎದುರಲ್ಲೇ ಲೈಂಗಿಕ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಮಹಿಳೆ ಕಿರುಚಾಡುತ್ತಿದ್ದಂತೆ ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಆಘಾತಕ್ಕೊಳಗಾದ ದಂಪತಿ ಪುಲಕೇಶಿ ನಗರ ಪೊಲೀಸ್ …
Read More »12 ಲಕ್ಷ ಸಾಲಕ್ಕೆ ಕೋಟಿ ಮೌಲ್ಯದ ಆಸ್ತಿ ಕಬಳಿಸಿದ ಮೀಟರ್ ಬಡ್ಡಿ ದಂಧೆಕೋರರು!- ತಾಯಿ-ಮಗಳ ಕಣ್ಣೀರು
ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರು ₹12 ಲಕ್ಷ ಸಾಲ ನೀಡುವ ನೆಪದಲ್ಲಿ ₹1.5 ಕೋಟಿ ಮೌಲ್ಯದ 12 ಪ್ಲಾಟ್ಗಳನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುರೇಖಾ ಕಬಾಡಿ ಹಾಗೂ ಮಗಳು ಅಂಬಿಕಾ ಕಬಾಡಿ ಅವರು ತಲಾ ₹6 ಲಕ್ಷ ಸಾಲ ಪಡೆದಿದ್ದು, ₹7 ಲಕ್ಷಕ್ಕೂ ಹೆಚ್ಚು ಬಡ್ಡಿ ಪಾವತಿಸಿದ್ದಾರೆ ಎನ್ನಲಾಗಿದೆ. ಹಾಫ್ ರಿಜಿಸ್ಟ್ರೇಷನ್ ನೆಪದಲ್ಲಿ ಆಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದು, ನಕಲಿ ದಾಖಲೆಗಳ ಮೂಲಕ ₹4ರಿಂದ ₹5 ಕೋಟಿ …
Read More »ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ
ಬೆಂಗಳೂರು: ಮ್ಯಾಟ್ರಿಮೋನಿಯಲ್ ಪೋರ್ಟಲ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬೆಂಗಳೂರಿನ ವೈದ್ಯೆಗೆ ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ ₹22.2 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ತಾನು ಜರ್ಮನಿಯ ಬರ್ಲಿನ್ನಲ್ಲಿ ನೆಲೆಸಿರುವ ನೇತ್ರ ತಜ್ಞ ಡಾ. ಗಣೇಶ್ ಬರ್ಮನ್ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಭಾರತಕ್ಕೆ ಮರಳಿ ದೆಹಲಿಯಲ್ಲಿ ಆಸ್ಪತ್ರೆ ಆರಂಭಿಸುವುದಾಗಿ ವೈದ್ಯೆಗೆ ತಿಳಿಸಿದ್ದ. ಬಳಿಕ ತನ್ನ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ, ಆಸ್ಪತ್ರೆ ಯೋಜನೆಗಾಗಿ ವಿವಿಧ ಏಜೆಂಟ್ಗಳ ಖಾತೆಗೆ …
Read More »ಸಾಂಬಾರ್ ವಿಚಾರಕ್ಕೆ ಅಕ್ಕ-ತಂಗಿ ನಡುವೆ ಜಗಳ, ಮನನೊಂದು ವಿದ್ಯಾರ್ಥಿನಿ ನೇಣಿಗೆ ಶರಣು!
ತುಮಕೂರು: ಮನೆಯಲ್ಲಿ ಸಾಂಬಾರು ಮಾಡುವ ವಿಚಾರಕ್ಕೆ ಅಕ್ಕ-ತಂಗಿಯ ನಡುವೆ ನಡೆದ ಸಣ್ಣ ಜಗಳದಿಂದ ಮನನೊಂದ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ತುಮಕೂರು ನಗರದ ಜಯನಗರದಲ್ಲಿ ನಡೆದಿದೆ. ಹುಲಿಗಮ್ಮ (16) ಮೃತ ಬಾಲಕಿ. ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಲಿಗಮ್ಮ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ಮಧ್ಯಾಹ್ನ ಅಡುಗೆ ವಿಚಾರವಾಗಿ ಅಕ್ಕ-ತಂಗಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಮನನೊಂದ …
Read More »ಹೆದ್ದಾರಿ ಬದಿಯ ವಾಹನಗಳಿಂದ ಡೀಸಲ್ ಕದಿಯುತ್ತಿದ್ದ ಇಬ್ಬರ ಬಂಧನ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದ ಸರಕು ವಾಹನಗಳ ಟ್ಯಾಂಕ್ನಿಂದ ಡೀಸೆಲ್ ಕದಿಯುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಜೈಮುತ್ತಾ (23) ಹಾಗೂ ಮುತ್ತು (28) ಬಂಧಿತ ಆರೋಪಿಗಳಾಗಿದ್ದಾರೆ. ಸೆ.3ರಂದು ರಾತ್ರಿ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಟ್ಯಾಂಕರ್ ಬಳಿ ಬೊಲೆರೋ ಪಿಕಪ್ ವಾಹನದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಮೂವರು ಕಂಡುಬಂದಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಬೆನ್ನಟ್ಟಿ ಬಂಧಿಸಿ …
Read More »ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ
ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು ಸಿಡಿಎಸ್ ನಾಲೆಗೆ ಎಸೆದಿರುವ ಘಟನೆ ಡವಪುರ ತಾಲ್ಲೂಕಿನ ಕೊಳಬಾವಿ ಕಟ್ಟೆ ಬಳಿ ನಡೆದಿದೆ. ನವೀನ್ ಕಟ್ಟುಕೊಟ್ಟೇರಿ ಗ್ರಾಮದ ನಿವಾಸಿಯಾಗಿದ್ದು, ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಅದೇ ಗ್ರಾಮದ ಕಾಂತರಾಜು ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ತಡರಾತ್ರಿ ಜಮೀನಿನ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ …
Read More »ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪೋಕ್ಸೊ ಪ್ರಕರಣ ದಾಖಲು..!
ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, 2021ರಿಂದ 2026ರ ಜುಲೈ ಅಂತ್ಯದವರೆಗೆ ಒಟ್ಟು 15,578 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 2,271 ಪ್ರಕರಣಗಳು ದಾಖಲಾಗಿದ್ದು, ಪರಿಚಯಸ್ಥರು, ಕುಟುಂಬಸ್ಥರು ಹಾಗೂ ಸಂಬಂಧಿಕರಿಂದಲೇ ಹೆಚ್ಚಿನ ದೌರ್ಜನ್ಯ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2025ರಲ್ಲಿ 3,099 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕಾನೂನು ಅರಿವು ಹೆಚ್ಚಿರುವುದರಿಂದ ದೂರುಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು …
Read More »ದೂರು ದಾಖಲಿಸಲು ವಿಳಂಬ ಆರೋಪ : ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ
ಕಲಬುರಗಿ: ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯೊಬ್ಬರು ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೆಲೋಗಿ ಪೊಲೀಸ್ ಠಾಣೆ ಎದುರು ನಡೆದಿದೆ. ಯಾತನೂರ ಗ್ರಾಮದ ರೇವುಬಾಯಿ ಭೀಮರಾಯ ತಳವಾರ (40) ಅಸ್ವಸ್ಥಗೊಂಡಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ದೂರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ರೇವುಬಾಯಿ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಬೇರೆಯವರ ಪ್ರಭಾವಕ್ಕೆ ಒಳಗಾಗಿ ಬಡವರಿಗೆ ನ್ಯಾಯ ನೀಡುತ್ತಿಲ್ಲ ಎಂದು …
Read More »ಪತ್ನಿಯ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕೊಂದು ಸಂಪಲ್ಲಿ ಬಚ್ಚಿಟ್ಟ ಪತಿರಾಯ!
ಕೋಲಾರ: ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಬಳಿ ಪತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು ಹತ್ಯೆ ಮಾಡಿ, ಮೃತದೇಹವನ್ನು ನೀರಿನ ಸಂಪ್ಗೆ ಎಸೆದಿರುವ ಘಟನೆ ನಡೆದಿದೆ. ಸೊಣ್ಣೇನಹಳ್ಳಿ ಮೂಲದ ವೆಂಕಟೇಶ್ (36) ಕೊಲೆಯಾದ ವ್ಯಕ್ತಿ. ವೆಂಕಟೇಶ್ ಹಾಗೂ ಸುರೇಶ್ ಎಂಬಾತನ ಪತ್ನಿ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸುರೇಶ್, ಸ್ನೇಹಿತ ಸಂತೋಷ್ ಜೊತೆ ಸೇರಿ ವೆಂಕಟೇಶ್ನನ್ನು ಎಣ್ಣೆ ಪಾರ್ಟಿಗೆ ಕರೆಸಿ, ಮದ್ಯ ಸೇವನೆಯ ಬಳಿಕ ಕತ್ತು ಹಿಸುಕಿ ಕೊಲೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





