ಉತ್ತರ ಕನ್ನಡದಲ್ಲಿ ಭಾರಿ ಅಪಘಾತವನ್ನು ಸಂಭವಿಸಿದ್ದು, ಚಲಿಸುತ್ತಿದ್ದ ಸರ್ಕಾರಿ ಬಸ್ ವೀಲ್ ಬೋಲೆಂಡ್ ತುಂಡಾಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿ ಇದ್ದಂತಹ 49 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಸ್ಥಿತಿಯಲ್ಲಿ ಇಲ್ಲದಂತಹ ಬಸ್ ಇರುವುದರ ಕಾರಣ ಅಪಘಾತಕ್ಕೆ ಈಡಾಗಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
Read More »RCB’ಯ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ತಪಸ್ಸು ಇಡೇರಿತು…
“ಜೈ RCB” ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್ಸಿಬಿಯ ಹುಡುಗರು ನನಸಾಗಿಸಿದ್ದಾರೆ’ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ …
Read More »ಹರಪ್ಪನಹಳ್ಳಿ : ಪಂಪಸೆಟ್ ಕಳವು, ನಾಲ್ವರ ಬಂಧನ!
ಮೋಟಾರು ಪಂಪಸೆಟ್ ಕಳವು ಮಾಡಿದ್ದ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಹಿರೆಮೇಗಳಗೆರೆ ಗ್ರಾಮದ ಗಾಯಪ್ಪರ ಹನುಮಂತ, ಕರಳೇರ ಅಣ್ಣಪ್ಪ, ಪೂಜಾರ ಪರಶುರಾಮ ಹಾಗೂ ನಾಗಪ್ಳರ ಅರುಣ ಬಂಧಿತ ಆರೋಪಿಗಳು. ಅವರಿಂದ 10 ಎಚ್.ಪಿ ಮತ್ತು 7 ಎಚ್.ಪಿ. ಸಾಮರ್ಥ್ಯದ ಪಂಪಸೆಟ್ ಮೋಟಾರು, ಎರಡು ಬೈಕ್ ಜಪ್ತಿ ಮಾಡಲಾಗಿದೆ
Read More »ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ಕಿರುತೆರೆ ನಟ ವಿಭು ರಾಘವೆ ನಿಧನ!
ವಿಭು ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ನಗುಮುಖದಲ್ಲೇ ಎಲ್ಲರೊಂದಿಗೆ ಮಾತನಾಡುತಿದ್ದರು ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿದ್ದು, ಗಂಭೀರ ಕಾಯಿಲೆಯ ಕುರಿತು ಜನರಿಗೆ ಸದಾ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದರು, ಆದರೆ ಇಂದು ವಿಭು ಇಹಲೋಕ ತ್ಯಜಿಸಿದ್ದಾರೆ ಆದರೆ ಅವರ ಆದರ್ಶ ಇತರರಿಗೆ ಮಾರ್ಗದರ್ಶನವಾಗಿದೆ. 2022 ರಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು ಅದರಂತೆ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.ವಿಭು ಅವರ ಅಗಲಿಕೆಗೆ ಕಿರುತೆರೆ …
Read More »ಆರೋಪಿ ಮೊಬೈಲ್ ಬಳಸಿ ಆನ್ಲೈನ್ ಬೆಟ್ಟಿಂಗ್, ಪಿಎಸ್ಐ ಅಮಾನತು!
ಪ್ರಕರಣವೊಂದರ ಆರೋಪಿಯೊಬ್ಬನನ್ನು ಜೈಲಿಗೆ ಬಿಡಬೇಕಾದ ಸಂದರ್ಭದಲ್ಲಿ ಆತನಿಂದ ಮೊಬೈಲ್ ಮತ್ತು ಫೊನ್ ಪೇ ಪಾಸ್ವರ್ಡ್ ಪಡೆದ ಸಂಗಮೇಶ್ ಮೇಟಿ ಆನ್ಲೈನ್ ಬೆಟ್ಟಿಂಗ್ ಆಡಿದ್ದರು ಎಂಬ ಆರೋಪ ಕೇಳಿಬಂದಿತ್ತು.ಆರೋಪಿ ದೂರಿನ ತನಿಖೆ ಮಾಡಿದಾಗ, ಆರೋಪಿಯ ಮೊಬೈಲ್ನಿಂದ ಸಬ್ ಇನ್ಸ್ಪೆಕ್ಟರ್ ಆನ್ಲೈನ್ ಬೆಟ್ಟಿಂಗ್ಗಾಗಿ ಆತನ ₹95 ಸಾವಿರ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದೆ
Read More »ಮಂಗಳೂರು :ಆಟೋ ಚಾಲನೆ ವೇಳೆಯೇ ಚಾಲಕ ಹೃದಯಾಘಾತದಿಂದ ಸಾವು!
ಶರತ್ ಎಂದಿನಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮನೆಗೆ ವಾಪಸ್ ತೆರಳುತ್ತಿದ್ದರು. ಈ ವೇಳೆಯೇ ಅವರಿಗೆ ಹೃದಯಾಘಾತವಾಗಿದೆ.ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಶರತ್ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದ್ದಾರೆ. ಆದರೆ ಶರತ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Read More »ಧಾರವಾಡ: ವಿದ್ಯುತ್ ಪ್ರವಹಿಸಿ ರೈತ ಸಾವು!!
ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ರೈತರೊಬ್ಬರು ಬೋರ್ವೆಲ್ ತಂತಿಯನ್ನು ಕಂಬಕ್ಕೆ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸೊರಬ: ಲಾರಿ ಅಪಘಾತ,ಮಗು ಸಾವು!
ಅಜ್ಜಿ ನಸೀಮಾ ಬಾನು ಮಗುವನ್ನು ಅಂಗನವಾಡಿಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಅಜ್ಜಿಯನ್ನು ಕಂಡ ಮಗು ದಿಢೀರ್ ರಸ್ತೆ ಬದಿ ಓಡಿ ಬಂದಿದೆ. ಈ ವೇಳೆ ಬರುತ್ತಿದ್ದ ಲಾರಿಗೆ ಸಿಲುಕಿ ಮೃತಪಟ್ಟಿದೆ.ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬೆಂಗಳೂರು :ಕೆಲಸ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ.!
ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ.ಮೃತನನ್ನು ಬಿಹಾರ ಮೂಲದ ರಾಹುಲ್ ಕುಮಾರ್ ಯಾದವ್ (22) ಎಂದು ಗುರುತಿಸಲಾಗಿದೆ.ಪೋಷಕರು ಊರಿಗೆ ಬರಲು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ಬಾಡಿಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸಂತೆಮರಳ್ಳಿ :ಬೈಕ್ ಕಳವು, ಆರೋಪಿಗಳ ಬಂಧನ!
ಚಾಮರಾಜನಗರ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹೊನ್ನೂರು ಗ್ರಾಮದ ಕುಮಾರ್ ಎಂಬುವರು ಬೈಕ್ ನಿಲ್ಲಿಸಿ ಹೋಗಿದ್ದರು.ಈ ವೇಳೆಯಲ್ಲಿ ಬೈಕ್ ಕಳವಾಗಿತ್ತು. ಈ ಸಂಬಂಧವಾಗಿ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೈಕ್ನಲ್ಲಿ ಟಿ.ನರಸೀಪುರದಿಂದ ಕುಂತೂರು ಮೋಳೆ ಗ್ರಾಮಕ್ಕೆ ಟಗರಪುರ ಮುಖ್ಯ ರಸ್ತೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ಬೈಕ್ ವಶಕ್ಕೆ ಪಡೆಯಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





