Breaking News

BigTv News

ಬಂಗಾರಪೇಟೆ: ನಾಲ್ವರು ಅಂತರರಾಜ್ಯ ಕಳ್ಳರ ಬಂಧನ!!

ದೊಡ್ಡಪನ್ನಾಂಡಹಳ್ಳಿಯಲ್ಲಿ ನಡೆದಿದ್ದ ಎರಡು ಸೀಮೆ ಹಸು ಮತ್ತು ನಾಲ್ಕು ಕುರಿ ಕಳವು ಪಕರಣವನ್ನು ಡಿವೈಎಸ್‌ಪಿ ಎಸ್.ಪಾಂಡುರಂಗ ಮತ್ತು ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ಸುರೇಶ್ (34), ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸತೀಶ್ (34), ರೂಪೇಶ್ (28), ವೆಂಕಟರಮಣಪ್ಪ(34)ಎಂಬುವವರನ್ನು ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಮೂರು ಸೀಮೆ ಹಸು, ನಾಲ್ಕು ಕುರಿ, 23 ಹಂದಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶ‍ಪಡಿಸಿಕೊಳ್ಳಲಾಗಿದೆ.

Read More »

ಸಾಲಗಾರರ ಕಿರುಕುಳ, ಆತ್ಮಹತ್ಯೆಗೆ ಶರಣಾದ ಯುವ ಕೃಷಿಕ!

ಅರುಣ್ ತನ್ನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೈಸಾಲ ಸೇರಿ ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಿಂದ ಅರುಣ್ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ತೀವ್ರ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿದ್ದರು ಎಂದು ಗೊತ್ತಾಗಿದೆ.ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ

Read More »

ಪಡುಬಿದ್ರಿ: ಲಾರಿ ಢಿಕ್ಕಿ ಹೊಡೆದು ಪರಾರಿ, ಸವಾರರಿಗೆ ಗಂಭೀರ ಗಾಯ!!

ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯರಾತ್ರಿ ಬಂಟರ ಭವನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಹಾಸನ ಮೂಲದ ಅರುಣ್‌ ಕುಮಾರ್‌ ಮತ್ತು ಸ್ಥಳೀಯರಾದ ಸುನಿಲ್‌ ಕುಮಾರ್‌ ಗಾಯಗೊಂಡವರು.ಬಳಿಕ ಲಾರಿಯನ್ನು ಪತ್ತೆಹಚ್ಚಲಾಗಿದ್ದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಲಸೂರು : ಮಗನಿಂದ ಹಲ್ಲೆ! ದೂರು ನೀಡಿದ ತಂದೆ..

ನನ್ನ ಎರಡನೇ ಮಗನಾದ ಕೃಷ್ಣ ಪ್ರಸಿದ್ಧ ಕೀರ್ತನಕಾರ ಆಗಿದ್ದು, ಕುಟುಂಬದಲ್ಲಿ ನಡೆದ ಸಣ್ಣ ಘಟನೆಗೆ ಆಕ್ರೋಶಗೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ’ ಎಂದು ವಿಶ್ವನಾಥ ಹೇಳಿದ್ದಾರೆ.ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದ ವಿಶ್ವನಾಥ ಮೇತ್ರೆ ಅವರು ಮಗ ಹಾಗೂ ಕೀರ್ತನಕಾರ ಕೃಷ್ಣ ಮಹಾರಾಜ ರಾಮಯಣಿ ವಿರುದ್ಧ ಧನ್ನೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More »

ಮಂಡ್ಯ :ಬಾಲಕಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ!!

ಬಾಲಕಿಯ ಕಾಲು ಮುರಿತವಾಗಿತ್ತು. ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಪೋಷಕರು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಮೂಳೆ ಸರಿಯಾಗಬೇಕು ಎಂದರೆ ಆಪರೇಷನ್ ಮಾಡಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸಾನ್ವಿಗೆ 29ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಬಾಲಕಿ ಚೇತರಿಸಿಕೊಂಡಿದ್ದು, ಪೋಷಕರ ಜೊತೆಯೂ ಮಾತನಾಡಿದ್ದಳು. ತಾನು‌ ಬೇಗ ಚೇತರಿಸಿಕೊಳ್ಳುವುದಾಗಿ ಪೋಷಕರಿಗೂ ಧೈರ್ಯ ಹೇಳಿದ್ದಾಳೆ.‌ ಆದರೆ‌, ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಪೋಷಕರ …

Read More »

ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಹಿಳೆ ಪೊಲೀಸ್​ ವಶಕ್ಕೆ!

ಟ್ರಾಫಿಕ್​ನಲ್ಲಿ ಸ್ಕೂಟಿಗೆ ಹಿಂಬದಿಯಿಂದ ಆಟೋ ಟಚ್ ಆಗುತ್ತಿದ್ದಂತೆ ಚಾಲಕ ಮತ್ತು ಮಹಿಳೆ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳ ಅತಿರೇಕಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.ಮಹಿಳೆ ವಿರುದ್ಧ FIR ದಾಖಲಾಗಿದೆ. ಈಗ ಮಹಿಳೆಯನ್ನ ಪೊಲೀಸರು ಠಾಣೆಗೆ ಕರೆದುಕೊಂಡು‌ ಬಂದು ವಿಚಾರಣೆ ನಡೆಸುತ್ತಿದ್ದಾರೆ.

Read More »

ಕೋಟ :ಆಸ್ಪತ್ರೆಯ ವಾರ್ಡ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ!

ಮದ್ಯ ಸೇವನೆ ಚಟದಿಂದ ಕೋಟ ಪರಿವರ್ತನಾ ಪುನರ್ ವಸತಿ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೋಟೇಶ್ವರದ ಕುಮಾರ(48) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ರಾತ್ರಿ ಆಸ್ಪತ್ರೆಯ ವಾರ್ಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಶಿರ್ವ: ಮಟ್ಕಾ ದಂಧೆ ಆರೋಪಿಗಳ ಬಂಧನ!!

ಶಿರ್ವ ಪೊಲೀಸ್‌ ಠಾಣೆ ವ್ಯಾಪ್ತಿಯ ಕುರ್ಕಾಲು ಗ್ರಾಮದ ಶಂಕರಪುರ ಅಶ್ವತ್ಥಕಟ್ಟೆಯ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ವಿಟಲ ದೇವಾಡಿಗನನ್ನು ಪೊಲೀಸರು ಮೇ 31ರಂದು ಬಂಧಿಸಿ ಆತನ ವಶದಲ್ಲಿದ್ದ ಚೀಟಿ ಮತ್ತು ನಗದು 1,200 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

Read More »

ಯುವತಿ ಮೇಲೆ ಬಸ್‌ ಹತ್ತಿಸಲು ಹೋದ ಬಿಎಂಟಿಸಿ ಚಾಲಕ ಅಮಾನತು!!

ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ. ಚಂದ್ರಾ ಲೇಔಟ್ ಡಿಪೋ ನಂಬರ್ 17 ಡಿಪೋಗೆ ಸೇರಿದ ಬಸ್ (ಕೆಎ 57 ಎಫ್‌2046) ಚಾಲಕ ಪ್ರಶಾಂತ್‌ ಅಮಾನತುಗೊಂಡಿದ್ದಾರೆ.

Read More »

ಬೆಳಗಾವಿ : ಟ್ಯಾಂಕರ್ ಢಿಕ್ಕಿ, ಮೂವರು ಕಾರ್ಮಿಕರು ಮೃತ್ಯು!

ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದುರಸ್ತಿ ಮಾಡುತ್ತಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ನಡೆದಿದೆ.ಕಲಬುರಗಿ ಜಿಲ್ಲಯ ಚಿಂಚೋಳಿ ತಾಲೂಕಿನ ಶಿರೋಳಿ ಗ್ರಾಮದ ರಾಮಚಂದ್ರ ಜಾಧವ್ (45), ಅವರ ಪುತ್ರ ಮಹೇಶ್ (18) ಹಾಗೂ ರಾಮಣ್ಣ (38) ಎಂಬವರು ಮೃತಪಟ್ಟವರು. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಎಂಬವರು ಗಾಯಗೊಂಡಿದ್ದಾರೆ. ಟ್ಯಾಂಕರ್ …

Read More »