Breaking News

BigTv News

ರಾಯಚೂರು : ಊರಿಗೆ ಬಂದಿದ್ದ ಯೋಧನ ಮೇಲೆ ಮಚ್ಚಿನಿಂದ ಹಲ್ಲೆ!

ಜಮೀನು ವ್ಯಾಜ್ಯ ಅತಿರೇಕಕ್ಕೆ ಹೋದ ಪರಿಣಾಮ CRPF ಯೋಧನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಉದ್ಧಟತನ ಮೆರೆದಿದ್ದಾರೆ. ರಾಯಚೂರಿನ ಲಿಂಗಸುಗೂರಿನ ಕಸಬಾದಲ್ಲಿ ನಡೆದಿದೆ.ಹಲ್ಲೆಗೊಳಗಾಗ ಯೋಧನನ್ನು ಕಸಬಾ ಲಿಂಗಸುಗೂರು ಗ್ರಾಮದ ಸಿಆರ್‌ಪಿಎಫ್ ಎಎಸ್‌ಐ ಚನ್ನಬಸಪ್ಪ ಎಂದು ಗುರುತಿಸಲಾಗಿದೆ.ಸದ್ಯ ಗಾಯಾಳು ಯೋಧನನ್ನ ಲಿಂಗಸುಗೂರಿನ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಬೆಳಗಾವಿ : ಮದವೇರಿದ ಆನೆ ಓಡಾಟ ನಡೆಸಿದ್ದು, ಕಾರು ಉಡೀಸ್!!

ಮದವೇರಿದ ಆನೆಯೊಂದು ಮನೆಯೊಂದರ ಸಮೀಪ ಓಡಾಟ ನಡೆಸಿದ್ದು, ಈ ವೇಳೆ ಮನೆ ಆವರಣದಲ್ಲಿದ್ದ ಕಾರನ್ನು ಹಾನಿಗೊಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಆನೆ ದಾಳಿಗೆ ಸಿಕ್ಕ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ.ಇನ್ನು ಇಷಕ್ಕೆ ಸುಮ್ಮನಾಗದ ಗಜರಾಜ ಎರಡು‌ ನೀರಿನ ಟ್ಯಾಂಕುಗಳನ್ನು ಕೂಡ ಒಡೆದು ಹಾಕಿದೆ. ತಡರಾತ್ರಿ 1:30 ರ ಸುಮಾರಿಗೆ ಈ ಘಟನೆ ನಡೆದಿದ್ದು ಆನೆಯ ಹಾವಳಿ ಕಂಡು ಗ್ರಾಮದ ಜನ ಭಯಭೀತರಾಗಿದ್ದಾರೆ.ಹೀಗಾಗಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳುನ್ನು ಅಗತ್ಯ ಕ್ರಮ …

Read More »

7 ತಿಂಗಳಲ್ಲಿ 25 ಪುರುಷರನ್ನು ಮದುವೆಯಾದ ಯುವತಿ ಅರೆಸ್ಟ್!

ಗಂಡನಿಂದ ದೂರವಾದ ಮಹಿಳೆ ವಂಚಕರ ಗ್ಯಾಂಗ್ ಸೇರಿಕೊಂಡು ಕೇವಲ 7 ತಿಂಗಳಲ್ಲಿ ಬರೋಬ್ಬರಿ 25 ಪುರುಷರನ್ನು ಮದುವೆ ಮಾಡಿಕೊಂಡಿದ್ದಾಳೆ. ಜೊತೆಗೆ, ಸೊಸೆಯಾದ ಹೋದ ಮನೆಯಲ್ಲಿರುವ ಎಲ್ಲ ಚಿನ್ನಾಭರಣ, ನಗದು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾಳೆ.25ನೇ ಮದುವೆಯ ವರ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದನು. ಕಾನ‌ಸ್ಟೇಬಲ್‌ನನ್ನು ಮದುವೆ ಮಾಡಿಕೊಂಡು ವಂಚನೆ ಮಾಡಬೇಕು ಎನ್ನುವಷ್ಟರಲ್ಲಿ ಲೂಟಿ ಮಾಡಿದ್ದ ಹಣದ ಸಮೇತ ರಾಜಸ್ಥಾನ ಪೊಲೀಸರಿಗೆ ಲಾಕ್ ಆಗಿದ್ದಾಳೆ.ಮದುವೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಮಹಿಳೆಯನ್ನು …

Read More »

ಅಪಘಾತ : ಐವರು ಸ್ಥಳದಲ್ಲೇ ಸಾವು, ಹಲವರಿಗೆ ಗಂಭೀರ ಗಾಯ.!

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಅಪಘಾತ ಸಂಭವಿಸಿದೆ.ವಿಕಾರಾಬಾದ್ ಜಿಲ್ಲೆಯ ಪರಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಮೆಂಟ್ ತುಂಬಿದ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಸಾವನ್ನಪ್ಪಿ, 17 ಮಂದಿ ಗಾಯಗೊಂಡಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ (ಪಿಎಂಇ) ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Read More »

ಕಿಕ್ಕೇರಿ: ಸಿಡಿಲು ಬಡಿದು ಎರಡು ಕೋಣ ಸಾವು!

ರೈತ ಮಹದೇವು ಅವರಿಗೆ ಸೇರಿದ ಈ ಕೋಣಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಸೋಮವಾರ ರಾತ್ರಿ ಕೋಣಗಳಿಗೆ ಸಿಡಿಲು ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಕೋಣಗಳು ಸಾವಿಗೀಡಾಗಿವೆ.ಮನೆಯಲ್ಲಿದ್ದ ಕುಟುಂಬದವರು ಸಿಡಿಲಿನಿಂದ ಪಾರಾಗಿದ್ದಾರೆ.’₹2.50 ಲಕ್ಷ ಬೆಲೆಬಾಳುವ ಈ ಕೋಣಗಳನ್ನು ಖರೀದಿಗೆ ಬಂದರೂ ನಾನು ಕೊಡಲಿಲ್ಲ. ಖುಷಿಗಾಗಿ ನಾನೇ ಸಾಕಿಕೊಂಡಿದ್ದೇ’ಎಂದು ಮಹದೇವು ತಿಳಿಸಿದರು.ಸ್ಥಳಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಭೇಟಿ ನೀಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

Read More »

ಬೆಳಗಾವಿ : ಬಾಲಕಿಯನ್ನು ರೆಸಾರ್ಟ್’ಗೆ ಕರೆದೊಯ್ದು ಗ್ಯಾಂಗ್ ರೇಪ್.!

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಹೊರವಲಯದ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ. ಸಾಕೀಬ್ ಎಂಬ ಆರೋಪಿ ಸೇರಿ ಇಬ್ಬರು ಅಪ್ತಾಪ್ತರು ಸೇರಿ ಮೂವರು ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಎನ್ನಲಾಗಿದೆ.ಬಾಲಕಿಯ ಸ್ನೇಹಿತ ಹೇಗೋ ಬಾಲಕಿಯನ್ನು ಪುಸಲಾಯಿಸಿ ರೆಸಾರ್ಟ್ ಗೆ ಕರೆ ತಂದಿದ್ದಾನೆ. ಸಾಕೀಬ್ ಮೊದಲೇ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಿದ್ದ. ನಂತರ ಬಾಲಕಿಯನ್ನು ರೆಸಾರ್ಟ್ ಗೆ ಕರೆತಂದು …

Read More »

ಬೆಳಗಾವಿ :ಮಕ್ಕಳಾಗಿಲ್ಲ ಎಂದು ಸೊಸೆಯನ್ನು ಹತ್ಯೆಗೈದ ಅತ್ತೆ!

ಬೆಳಗಾವಿಯಲ್ಲಿ ಭೀಕರವಾದ ಕೊಲೆಯಾಗಿದ್ದು, ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್​ ಗ್ರಾಮದಲ್ಲಿ ನಡೆದಿದೆ.ಆರೋಪದ ಹಿನ್ನೆಲೆ ಪತಿ ಸಂತೋಷ , ಮಾವ ಕಾಮಣ್ಣ , ಅತ್ತೆ ಜಯಶ್ರೀ ಎನ್ನು ಅರೆಸ್ಟ್ ಮಾಡಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವಿದೇಶದಲ್ಲಿ ಉದ್ಯೊಗ ಕೊಡಿಸುವುದಾಗಿ ನಂಬಿಸಿ ವಂಚನೆ: ಪ್ರಮುಖ ಆರೋಪಿ CCB ವಶಕ್ಕೆ!

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಯುವಕರಿಂದ ಸುಮಾರು ₹1. 82 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿದ ಪ್ರಕರಣದ ಅರೋಪಿಯನ್ನು ಇಲ್ಲಿನ‌ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮುಂಬೈ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್ ಬಂಧಿತ ಆರೋಪಿ.ಹೆಚ್ಚಿನ ತನಿಖೆ ಸಲುವಾಗಿ ಅರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ತವಾಲ್ ತಿಳಿಸಿದ್ದಾರೆ.

Read More »

ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನದ 64 ಸೈನಿಕರು ಹಾಗೂ ಅಧಿಕಾರಿಗಳ ಸಾವು!

ಭಾರತೀಯ ಸೇನೆಯಿಂದ ನಡೆಸಲಾದ “ಆಪರೇಷನ್ ಸಿಂದೂರ” ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ 64 ಸೈನಿಕರು ಮತ್ತು ಅಧಿಕಾರಿಗಳು ಕೊಲ್ಲಲ್ಪಟ್ಟಿದ್ದಾರೆ.ಗಡಿಯುದ್ದಕ್ಕೂ ಒಳನುಗ್ಗುವಿಕೆಯ ಪ್ರಯತ್ನಗಳನ್ನು ತಡೆಗಟ್ಟಲು ಭಾರತೀಯ ಸೇನೆಯು ತೀವ್ರ ಕಾರ್ಯಾಚರಣೆ ನಡೆಸಿತು, ಇದರಲ್ಲಿ ಗಮನಾರ್ಹ ಯಶಸ್ಸು ಸಾಧಿಸಲಾಗಿದೆ. ಕೆಲವು ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ರಾಷ್ಟ್ರದ ಭದ್ರತೆಯನ್ನು ಖಾತ್ರಿಪಡಿಸಲು ನಡೆಸಲಾಯಿತು. ಈ ಘಟನೆಯು ಭಾರತ-ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.ಈ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೇನೆಯ ಶಕ್ತಿ …

Read More »

ಪ್ರವಾಸ ಹೋಗಿ ಅಪಘಾತಕ್ಕೆ ಕೆಂಕೆರೆಯ ಮೂವರು ಸಾವು!

ತುಮಕೂರು ಜಿಲ್ಲೆಯ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕರ್ನೂಲ್ ಬಳಿ ನಡೆದಿದೆ.ಕರ್ನೂಲ್ ಬಳಿ ನಿಯಂತ್ರಣ ತಪ್ಪಿದ ಪ್ರವಾಸಿಗರಿದ್ದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮೂವರು ಮೃತಪಟ್ಟರೇ, ಉಳಿದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆಯ ನವೀನ್, ಸಂತೋಷ್, ಲೋಕೇಶ್ ಎಂದು ಗುರುತಿಸಲಾಗಿದೆ.

Read More »