Breaking News

BigTv News

ರಾಮನಗರ :ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು!

ಭಾರಿ ಮಳೆಗೆ ಬೆಂಗಳೂರಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ್ದಾರೆ.ಜಲಾಶಯ ವೀಕ್ಷಣೆಗೆ ಎಂದು 7 ಯುವತಿಯರು ತೆರಳಿದ್ದಾರೆ. ಓರ್ವ ಯುವತಿ ನೀರಿಗೆ ಬಿದ್ದಿದ್ದ ವೇಳೆ ರಕ್ಷಣೆಗೆ ಉಳಿದ ಸ್ನೇಹಿತೆಯರು ಧಾವಿಸಿದ್ದಾರೆ. ಯುವತಿಯ ರಕ್ಷಣೆಗಾಗಿ 7 ಯುವತಿಯರು ನೀರಿಗೆ ಧುಮುಕಿದ್ದಾರೆ. ಕೂಡಲೇ ಸ್ಥಳೀಯ ಓರ್ವ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ …

Read More »

ಹುಬ್ಬಳ್ಳಿ: “ವಿದೇಶಿ ಪ್ರಜೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿಲ್ಲ”. ಪೊಲೀಸ ಕಮಿಷನರ್ ಎನ್ ಶಶಿಕುಮಾರ್ ಹೇಳಿಕೆ, ಶಾಸಕ ಅರವಿಂದ ಬೆಲ್ಲದ ಪತ್ರದ ಕುರಿತು ಪ್ರತಿಕ್ರಿಯೆ.

ಹುಬ್ಬಳ್ಳಿ ಧಾರವಾಡ ಸ್ಥಳೀಯ ಶಾಸಕರು ಒಂದಿಷ್ಟು ಮಾಹಿತಿ ನೀಡಿದ್ದರು.ಧಾರವಾಡ ಜನ್ನತ್ ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು.ಮಾಹಿತಿ ಬಂದ ತಕ್ಷಣವೇ ನಾವು ಸರ್ಚ್ ಮಾಡಿ ಮಾಹಿತಿ ಕಲೆ‌ ಹಾಕಿದ್ದೇವೆ.ಜನ್ನತ್ ನಗರದ ಬಿಲಾಲ್ ಮಸೀದಿ ಹಾಗು ಆರೋಗ್ಯ ನಗರದ ಯೂಸುಫಿಯಾ ಮಸೀದಿಯಲ್ಲಿ ಹೊರಗಿನವರು ಬಂದಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಸೂರತ್ ಮೂಲದವರು ಅನ್ನೋದ ಪತ್ತೆಯಾಗಿದೆ. ಯಾವುದೇ ವಿದೇಶಿ ಪ್ರಜೆಗಳು ಬಗ್ಗೆ ಮಾಹಿತಿ ಸಿಕ್ಕಿಲ.ಇವರ ಪೂರ್ವಾಪರ ಎಲ್ಲ ಮಾಹಿತಿ ಕಲೆಹಾಕಿದ್ದೇವೆ.ಕೆಲವರು ಮಸೀದಿಯಲ್ಲಿ ತರಬೇತಿ …

Read More »

ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ಫ್ಲೈ ಓವರ್ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು.

ಹುಬ್ಬಳ್ಳಿ: ಇಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ಈಗಾಗಲೇ ಹುಬ್ಬಳ್ಳಿಯ ಹೊಸೂರ, ಹಖೇ ಕೋರ್ಟ್ ಸರ್ಕಲ್, ಐಟಿ ಪಾರ್ಕ್ ಬಳಿ ಫ್ಲೈ ಓವರ್ ಕಾಮಗಾರಿ ಅಲ್ಪಮಟ್ಟಿಗೆ ಮುಗಿದಿದೆ. ಸಧ್ಯ ಅದೇ ಫ್ಲೈ ಓವರ್ ಕಾಮಗಾರಿಗಾಗಿ ಚನ್ನಮ್ಮ ಸರ್ಕಲ್ ಬಂದ್ ಮಾಡಿದ್ದಾರೆ. ಈ ಕಾಮಗಾರಿಯನ್ನು ಮುಗಿಸಲು ನಾಲ್ಕು ತಿಂಗಳುಗಳ ಕಾಲ ಅವದಿ ಕೊಟ್ಟಿದ್ದರು. ಈಗಾಗಲೇ ಒಂದು ತಿಂಗಳು ಕಳೆದಿದೆ. ಇನ್ನೂ ಮೂರು ತಿಂಗಳು ಕಾಲ ಸಮಯವಿದೆ. ಇದರಿಂದ …

Read More »

UP: ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ತಾಯಿ ಗದರಿಸಿದ್ದರಿಂದ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ!!

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ತಾಯಿ ಗದರಿಸಿದ್ದರಿಂದ 17 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ.ವರದಿಯ ಪ್ರಕಾರ, ಮೊಬೈಲ್ ಫೋನ್ ಸದಾ ಬಳಸುತ್ತಿರುವುದಕ್ಕೆ ತಾಯಿ ಆಗಾಗ ಗದರಿಸುತ್ತಿದ್ದರು ಹಾಗಾಗಿ ಬಾಲಕಿ ಅಸಮಾಧಾನಗೊಂಡಿದ್ದಳು. ಅವಳು ತನ್ನ ಮನೆಯಿಂದ ಸ್ವಲ್ಪ ದೂರ ಹೋಗಿ ಕಾಲುವೆಯ ಬಳಿ ವಿಷ ಸೇವಿಸಿದ್ದಳು. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ …

Read More »

ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದವಳ ರಕ್ಷಿಸಲು ಹೋದ ಕಾನ್​ಸ್ಟೆಬಲ್ ಸಾವು, ಮಹಿಳೆ ಬಚಾವ್!

ಗಂಡನ ಕಿರುಕುಳದಿಂದ ನೊಂದು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯರನ್ನು ರಕ್ಷಿಸಲು ಕಾಲುವೆಗೆ ಹಾರಿದ್ದ ಪೊಲೀಸ್​ ಕಾನ್​ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದು, ಮಹಿಳೆ ಸುರಕ್ಷಿತವಾಗಿ ಹೊರಬಂದಿದ್ದಾಳೆ. ಈ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.ನೀರಿಗೆ ಹಾರಿದ ತಕ್ಷಣ ಅಲ್ಲಿ ಓಡಾಡುತ್ತಿದ್ದ ಜನರ ಪೈಕಿ ಕೆಲವರು ಕೂಡ ಕಾಲುವೆಗೆ ಜಿಗಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಕೂಡಲೇ ತೋಮರ್ ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Read More »

ರಾಯಚೂರು : ನಡುರಸ್ತೆಯಲ್ಲೇ ಯುವಕನಿಗೆ ಚಾಕು ಇರಿದು ಕೊಲೆ!

ಬೆಳ್ಳಂಬೆಳಿಗ್ಗೆ ಇಡ್ಲಿ ಬಂಡಿ ವಿಚಾರಕ್ಕೆ ಯುವಕನಿಗೆ ನಡುರಸ್ತೆಯಲ್ಲಿ ಚಾಕು ಚುಚ್ಚಿ ಕೊಲೆ ಮಾಡಿದ ಘಟನೆ ನಗರದ ಡಾ. ಜಾಕೀರ್ ಹುಸೇನ್ ವೃತ್ತದಲ್ಲಿ ನಡೆದಿದೆ.ಜಾಕೀರ್ ಹುಸೇನ್ ವೃತ್ತದಲ್ಲಿ ಬೆಳೆಗಿನ ಜಾವ ಇಡ್ಲಿ ಬಂಡಿ ವಿಚಾರಕ್ಕೆ ಜಗಳ ಆರಂಭವಾಗಿ, ಜಗಳ ತಾರಕಕ್ಕೆ ಏರಿ ಸಾಜಿದ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಜಹೀರಾಬಾದ್‌ ನಿವಾಸಿ ಸಾದಿಕ್ (30) ಕೊಲೆಯಾದ ವ್ಯಕ್ತಿ‌ ಎಂದು ಗುರುತಿಸಲಾಗಿದೆ. ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. …

Read More »

ಪ್ರೀತಿಸಿದ ಹುಡುಗಿ ಜೊತೆ ನಟ ಬ್ರೋ ಗೌಡ ಅದ್ಧೂರಿ ಮದುವೆ.

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಶಮಂತ್ ಬ್ರೋ ಗೌಡ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ. ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಅವರೊಂದಿಗೆ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಇವರ ಆರತಕ್ಷತೆ ಕೂಡ ಅದ್ಧೂರಿಯಾಗಿ ನೆರವೇರಿತ್ತು. ಇಂದು ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯುವ ಮೂಲಕ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.ಮೇಘನಾ ಹಾಗೂ ಬ್ರೋ ಗೌಡ ಇಬ್ಬರೂ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು …

Read More »

ಗದಗ :ತಹಶಿಲ್ದಾರ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ!

ಗದಗ ನಗರದ ತಹಶೀಲ್ದಾರ್ ಕಚೇರಿಯಲ್ಲೊಂದು ಅಧಿಕಾರಿಗಳ ದುರ್ವರ್ತನೆಗೆ ಸಾಕ್ಷೀಕರಿಸುವಂಥ ಘಟನೆ ನಡೆದಿದ್ದು, ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಘಟನೆಯ ವಿಚಾರಣೆಗಾಗಿ ಮತ್ತು ತಪ್ಪಿದವರನ್ನು ಗುರುತಿಸಲು ಅಕ್ಷಯ್ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಅಲ್ಲಿ ಕಾರು ಯಾರದು? ಹೆಸರು ತಿಳಿಸಿ ಎಂದು ಕೇಳಿದ ಅಕ್ಷಯ್‌ನ ಪ್ರಶ್ನೆಗೆ ಕೆರಳಿದ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಹಾಗೂ ಅವರ ತಂಡ, …

Read More »

ಉತ್ತರಪ್ರದೇಶ :ಪಾಕ್ ಗೆ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ!!

ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ ಮೊರಾದಾಬಾದ್‌ನ ರಾಂಪುರ ನಿವಾಸಿ ಶಹಜಾದ್ ಎಂಬಾತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಬಂಧಿಸಿದೆ. ಶಹಜಾದ್ ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, ವ್ಯಾಪಾರದ ಆಡಿಯಲ್ಲಿ ಸೌಂದರ್ಯವರ್ಧಕಗಳು, ಬಟ್ಟೆ, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಭಾರತ-ಪಾಕಿಸ್ತಾನ ಗಡಿಯಾಚೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಐಎಸ್‌ಐ ಏಜೆಂಟ್‌ಗಳಿಗೆ ಆರ್ಥಿಕ ನೆರವು ಸಹ ಒದಗಿಸಿದ್ದಾನೆ ಎಂದು ಆರೋಪಿಸಲಾಗಿದೆ.ಗುಪ್ತಚರ ಮಾಹಿತಿಯ ಆಧಾರದ …

Read More »

ಹೈದರಾಬಾದ: ಬಾಂಬ್ ಸ್ಪೋಟಕ್ಕೆ ಸಂಚು, ಇಬ್ಬರು ಶಂಕಿತ ಉಗ್ರರು ಅರೆಸ್ಟ್.!

ನಗರದಲ್ಲಿ ನಕಲಿ ಸ್ಫೋಟ ನಡೆಸಲು ಸಂಚು ರೂಪಿಸುತ್ತಿದ್ದ ಇಬ್ಬರು ಶಂಕಿತ ಭಯೋತ್ಪಾದಕರಾದ ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಅವರನ್ನು ಬಂಧಿಸಲಾಗಿದೆ.ಶೋಧದ ಸಮಯದಲ್ಲಿ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕಗಳನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. “ತನಿಖೆಯ ಸಂದರ್ಭದಲ್ಲಿ, ರೆಹಮಾನ್ ಹೈದರಾಬಾದ್‌ನ ಸೈಯದ್ ಸಮೀರ್ (28) ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲು ಕಾರಣವಾದ ವಿವರಗಳನ್ನು ಬಹಿರಂಗಪಡಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.ಇಬ್ಬರೂ ಆರೋಪಿಗಳನ್ನು ಬಂಧನದಲ್ಲಿಡಲಾಗಿದ್ದು, …

Read More »