ತಮಿಳುನಾಡಿನ ಕರೂರಿನ 8 ವರ್ಷದ ಹುಡುಗನೊಬ್ಬ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ನಿರ್ಧರಿಸಿದ್ದಾನೆ. ಅವನ ಈ ನಿಸ್ವಾರ್ಥ ಭಾವನೆ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ಹುಡುಗ ಕಳೆದ 10 ತಿಂಗಳುಗಳಿಂದ ತನ್ನ ಮನೆಯವರು ಕೊಟ್ಟ ಪಾಕೆಟ್ ಮನಿಯನ್ನು ಖರ್ಚು ಮಾಡದೇ ಹಾಗೇ ಕೂಡಿಟ್ಟಿದ್ದಾನಂತೆ. ಅವನ ಬಳಿ ಇರುವ ಹಣದ ಮೊತ್ತವು ಸಣ್ಣದಾಗಿದ್ದರೂ ಅದನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು …
Read More »ಸಿದ್ದಾಪುರ: ಕಾಡಾನೆ ಕಾಡಿಗಟ್ಟಲು ಕಾರ್ಯಾಚರಣೆ!
ಕಣ್ಣಂಗಾಲ ಗ್ರಾಮದಲ್ಲಿ 27 ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಬುಧವಾರ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು.ಈ ವೇಳೆ ಮರಿಗಳು ಸೇರಿದಂತೆ ಒಟ್ಟು 27 ಕಾಡಾನೆಗಳು ಕಂಡುಬಂದವು. ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿದ್ದು, ಅರಣ್ಯ ಇಲಾಖೆ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿತು.ಆನೆಗಳು ತೋಟದಲ್ಲೇ ಇದ್ದು, ಗುರುವಾರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಆರ್ಎಫ್ಒ ಶಿವರಾಮ್, ಡಿಆರ್ಎಫ್ಒ ಸಂಜೀತ್, ಸಿಬ್ಬಂದಿ, ಆರ್.ಆರ್.ಟಿ ಸಿಬ್ಬಂದಿ ಹಾಜರಿದ್ದರು.
Read More »ವಿಜಯಪುರ: ‘ಲೋಕಾ’ ದಾಳಿ; ರೇಣುಕಾ ಮನೆಯಲ್ಲಿ ಅಪಾರ ನಗದು, ಬೆಳ್ಳಿ, ಬಂಗಾರ ಪತ್ತೆ!
ರೇಣುಕಾ ಸಾತರ್ಲೆ ಅವರ ವಿಜಯಪುರ ಮತ್ತು ಸೋಲಾಪುರ ನಗರದಲ್ಲಿರುವ ಮನೆಗಳ ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ₹2 ಕೋಟಿ ಮೊತ್ತದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.ವಿಜಯಪುರದ ಚಾಣಕ್ಯ ನಗರದಲ್ಲಿರುವ ಮನೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದರು.ದಾಳಿಯ ವೇಳೆ ₹ 10 ಲಕ್ಷ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ …
Read More »ಕಲಬುರಗಿ: ಕೇಂದ್ರ ಕಾರಾಗೃಹದ ಕೈದಿಗಳಿಬ್ಬರ ನಡುವೆ ಗಲಾಟೆ, ಪ್ರಕರಣ ದಾಖಲು!
ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೈದಿಯೋರ್ವನ ಮೇಲೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.ಅಲ್ಲದೇ, ಕಾರಾಗೃಹದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ತುಳಸಿರಾಮ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಕೈದಿ ತುಳಸಿರಾಮ್ ಇನ್ನೋರ್ವ ವಿಚಾರಣಾ ಕೈದಿಯಾಗಿರುವ ಕಿರಣ್ ರಮೇಶ್ ಶೆಟ್ಟಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾನೆ. ತುಳಸಿರಾಮ್ ಮತ್ತು ಕಿರಣ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು …
Read More »ಬೆಂಗಳೂರು :ಒಣ ಹಾಕಿದ್ದ ಬ್ರ್ಯಾಂಡೆಡ್ ಬಟ್ಟೆಗಳನ್ನು ಕದ್ದ ಬೈಕ್ ಸವಾರ!
ಮನೆ ಮುಂಭಾಗ ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಬ್ರ್ಯಾಂಡೆಡ್ ಬಟ್ಟೆಗಳನ್ನೇ ಕಳ್ಳನೊಬ್ಬ ಹಾಡಹಗಲೇ ಕದ್ದು ಪರಾರಿಯಾಗಿರುವ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದೋಷ ಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದ ದ್ವಿಚಕ್ರ ವಾಹನದಲ್ಲಿ ಬಂದಿರುವ ಕಳ್ಳ, ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿ ಸುತ್ತಮುತ್ತ ಯಾರಾದರೂ ಇದ್ದಾರೆಯೇ ಎಂದು ಗಮನಿಸಿದ್ದಾನೆ. ಬಳಿಕ ಗೇಟ್ ತೆಗೆದುಕೊಂಡು ಒಳಗೆ ಬಂದು ಮನೆ ಎದುರು ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಕೇವಲ ಬ್ರ್ಯಾಂಡೆಡ್ ಬಟ್ಟೆಗಳನ್ನು …
Read More »ಬಾಗಲಕೋಟ :ಭೀಕರ ಅಪಘಾತಕ್ಕೆ ಇಬ್ಬರು ಬಲಿ!
ಎರಡು ಕಾರುಗಳು ಮುಖಾಮುಖಿಯಾದ ಪರಿಣಾಮ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಕ್ಕಸಗಿ ಗ್ರಾಮದ ಬಳಿಯ ರಾಯಚೂರು-ಬೆಳಗಾವಿ ಹೆದ್ದಾರಿಯಲ್ಲಿ ನಡೆದಿದೆ.ಇನ್ನು ಗಾಯಾಗೊಂಡಿರುವ ವಿರೇಶ ಅಂಗಡಿ(55) ಹಾಗೂ ಸತೀಶ ಅಂಗಡಿ (28) ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಹಾರಾಷ್ಟ್ರ ಮೂಲದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಗಂಗಮ್ಮ ವಿರೇಶ ಅಂಗಡಿ (50), ಸಂದೇಶ ಅಂಗಡಿ (20) ಮೃತ …
Read More »ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; 12 ಜನರ ಗ್ಯಾಂಗ್ ಬಂಧನ!
ಮನೆಯಿಂದ ಕೆಲಸ ಮಾಡುವ ಅವಕಾಶಗಳ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಗ್ಯಾಂಗ್ನ ಭಾಗವಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ದೂರಿನಲ್ಲಿ, ಮನೆಯಿಂದ ಕೆಲಸ ಮಾಡುವ ಅವಕಾಶದ ಆಮಿಷ ಒಡ್ಡಿ ತನ್ನ ‘ಕಡಿಮೆ ಕ್ರೆಡಿಟ್ ಸ್ಕೋರ್ ಸರಿಪಡಿಸಲು’ ಹಣವನ್ನು ವರ್ಗಾಯಿಸಲು ಕೇಳಲಾಗಿದೆ. ಅವರನ್ನು ನಂಬಿ, ಹಣವನ್ನು ಹಲವು ಬಾರಿ ಖಾತೆಯೊಂದಕ್ಕೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ 10 ಸಹಚರರು ಮುಖ್ಯವಾಗಿ …
Read More »ಕುಂದಾಪುರ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ; ರಕ್ಷಿಸಲು ಜಿಗಿದ ಮಗನೂ ಸಾವು!!
ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗನೂ ಮೃತಪಟ್ಟಿದ್ದಾರೆ.ಮಾಧವ ದೇವಾಡಿಗ ಅವರ ಪತ್ನಿಯೂ ಬಾವಿಗೆ ಹಾರಿದ್ದು, ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.ಕುಂದಾಪುರದವರಾದ ಮಾಧವ ದೇವಾಡಿಗ ಅವರ ಕುಟುಂಬವು ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಮೂಲಗಳು ತಿಳಿಸಿವೆ.ಮಾಧವ ದೇವಾಡಿಗ (55), ಪುತ್ರ ಪ್ರಸಾದ್ ದೇವಾಡಿಗ (22) ಮೃತಪಟ್ಟವರು.
Read More »ವಿಜಯನಗರ :ಜೆಸಿಬಿ ವಾಹನ ಹಾಗೂ ಬಸ್ ನಡುವೆ ಭೀಕರ ಅಪಘಾತ, 8 ಜನರಿಗೆ ಗಂಭೀರ ಗಾಯ!
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಬೆಳಗಿನ ಜಾವ ಚಲಿಸುತ್ತಿದ್ದ ಜೆಸಿಬಿ ವಾಹನಕ್ಕೆ ಹಿಂದಿನಿಂದ ವಿ ಆರ್ ಎಲ್ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಒಟ್ಟು ಎಂಟು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.ಜೆಸಿಬಿ ವಾಹನದ ಚಾಲಕ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿಯ ಶರಣಪ್ಪ,ಬಸ್ ಚಾಲಕ ಮಲ್ಲಿಕಾರ್ಜುನ ಸೇರಿದಂತೆ ಬಸ್ ನಲ್ಲಿದ್ದ ಇತರೆ ಆರು ಜನ ಪ್ರಯಾಣಿಕರು ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುಮಾರು 32 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಯಾದಗಿರಿಗೆ …
Read More »ಬಳ್ಳಾರಿ :ಅಂತರಾಜ್ಯ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್!
13 ಎಟಿಎಂ ಕಳ್ಳತನ ಪ್ರಕರಣದಲ್ಲಿ ಹಾಗೂ ಎರಡು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ಡಕಾಯಿತ ಅಮರೇಶ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.ಗುಂಡೇಟು ತಗುಲಿ ಗಾಯಗೊಂಡಿರುವ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆ.ಆರೋಪಿ ಅಮರೇಶ್ ವಿರುದ್ಧ ಒಟ್ಟು 30 ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಕರ್ನಾಟಕ ಹಾಗೂ ಆಂಧ್ರ ಎರಡೂ ರಾಜ್ಯಗಳಲ್ಲಿಯೂ ದರೋಡೆ, ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಲ್ಲದೇ 13 ಎಟಿಎಂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಪ್ರಕರಣವೊಂದರಲ್ಲಿ ಬಂಧಿಸಿ ಸ್ಥಳ ಮಹಜರಿಗೆ ಕರೆತಂದಿದ್ದ ವೇಳೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





