Breaking News

BigTv News

ರಾಯಚೂರು: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಯುವಕನ ಬಂಧನ!

ರಾಯಚೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 4 ವರ್ಷದ ಬಾಲಕಿಯ ಮೇಲೆ ಸಂಬಂಧಿಕ ಯುವಕನೇ ಅತ್ಯಾಚಾರ ಎಸಗಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ, ಆರೋಪಿಯ ಮನೆಯೊಳಗೆ ಹೋಗಿದ್ದಾಳೆ. ಇದನ್ನೇ ದುರುಪಯೋಗಪಡಿಸಿಕೊಂಡ ದುರುಳ ಯುವಕ, ಬಾಲಕಿಗೆ 5 ರೂಪಾಯಿ ಹಣ ನೀಡಿ, ಪುಸಲಾಯಿಸಿ ಅತ್ಯಾಚಾರವೆಸಗಿದ್ದಾನೆ.ಮರುದಿನ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಘಟನೆಯ ಬಗ್ಗೆ …

Read More »

ಬಾಗಲಕೋಟ : ಆಸ್ತಿಗಾಗಿ ಅವಳಿ ಕೊಲೆ, ತಾಯಿ- ಮಗನ ಹತ್ಯೆ!

ಆಸ್ತಿಗಾಗಿ ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ನಂದವಾಡಗಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ವ್ಯಕ್ತಿಯೊಬ್ಬ ತಾಯಿ, ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ತಾಯಿ ಸಂಗಮ್ಮ ಗೋನಾಳ (45), ಮಗ ಸೋಮಪ್ಪ (26) ಎಂಬವರನ್ನು ಕೊಡಲಿಯಿಂದ ಕೊಚ್ಚಿ ಸಣ್ಣ ಸೋಮಪ್ಪ ಗೋನಾಳ ಎಂಬಾತ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಇಳಕಲ್ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More »

ಹಾವೇರಿ: ಸಿಡಿಲು ಬಡಿದು ರೈತ ಸಾವು!

ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೇಕೆರೂರ ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಸೋಮವಾರ ಜರುಗಿದೆ . ಡಮ್ಮಳ್ಳಿ ಗ್ರಾಮದ ನಾಗಪ್ಪ ಕಣಸೋಗಿ ಮೃತಪಟ್ಟವರು. ಎತ್ತು ಮೇಯಿಸಲೆಂದು ಹೊಲದ ಕಡೆಗೆ ಹೋಗಿ ಮರಳಿ ಮನೆಗೆ ಬರುವಾಗ ಸಿಡಿಲು ಬಡಿದು ರೈತ ನಾಗಪ್ಪ ಕಣಸೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ತಹಸೀಲ್ದಾರ್ ಪ್ರಭಾಕರ್ ಮತ್ತು ಹಿರೇಕೆರೂರು ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಈ …

Read More »

ಬ್ರೇಕ್ ಫೇಲ್ ಆಗಿ ಸಿಗ್ನಲ್ ನಲ್ಲಿ ನಿಂತ ವಾಹನಗಳಿಗೆ ಢಿಕ್ಕಿ ಹೊಡೆದ ಶಾಲಾ ವಾಹನ!

ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ಸಿಗ್ನಲ್ ನಲ್ಲಿ ನಿಂತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಓರ್ವ ಯುವ ವೈದ್ಯೆ ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಭೋಪಾಲ್ ನಲ್ಲಿ ಸಂಭವಿಸಿದೆ.ಸಾವನ್ನಪ್ಪಿದ ಮಹಿಳೆಯನ್ನು ಬಿಎಎಂಎಸ್ ವೈದ್ಯೆ ಆಯೇಷಾ ಖಾನ್ ಎಂದು ಗುರುತಿಸಲಾಗಿದೆ. ಮುಲ್ಲಾ ಕಾಲೋನಿಯ ನಿವಾಸಿ ಆಯೇಷಾ ಜೆಪಿ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಅಲ್ಲಿಂದ ಮನೆಗೆ ಹಿಂತಿರುಗುವಾಗ ಅಪಘಾತಕ್ಕೀಡಾಗಿದ್ದಾರೆ. ಇನ್ನು ಅಪಘಾತ ನಡೆಯುತ್ತಿದ್ದಂತೆ ಶಾಲಾ ಬಸ್ಸಿನ ಚಾಲಕ …

Read More »

ವೇದಿಕೆಯಲ್ಲೇ ಕುಸಿದು ಬಿದ್ದ ನಟ ವಿಶಾಲ್ : ಆಸ್ಪತ್ರೆಗೆ ದಾಖಲು!

ಜನಪ್ರಿಯ ತಮಿಳು ನಾಯಕ ವಿಶಾಲ್ ಅವರ ಆರೋಗ್ಯದ ಬಗ್ಗೆ ಈಗಾಗಲೇ ಅನೇಕ ಊಹಾಪೋಹಗಳು ಹರಿದಾಡುತ್ತಿರುವುದು ತಿಳಿದಿದೆ. ಕಳೆದ ಕೆಲವು ವರ್ಷಗಳಿಂದ ಅವರು ಚಿತ್ರೀಕರಣದಿಂದ ದೂರವಿದ್ದರು. ಯಾವಾಗಲೂ ಫಿಟ್ ಆಗಿದ್ದ ವಿಶಾಲ್ ಇತ್ತೀಚೆಗೆ ತೆಳ್ಳಗಾಗುತ್ತಿದ್ದಾರೆ ಮತ್ತು ನಡುಗುತ್ತಿದ್ದಾರೆ. ಇದು ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಲು ಕಾರಣವಾಯಿತು. ಆದರೆ, ವಿಶಾಲ್ ಇತ್ತೀಚೆಗೆ ಮತ್ತೊಮ್ಮೆ ತೀವ್ರ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ ವಿಶಾಲ್ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ …

Read More »

ಜಮ್ಮು- ಕಾಶ್ಮೀರದಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ‘BSF’ ಯೋಧ ಹುತಾತ್ಮ!

ಮಧ್ಯರಾತ್ರಿ ಜಮ್ಮು ವಿಭಾಗದ ಆರ್‌ಎಸ್ ಪುರದಲ್ಲಿ ಪಾಕಿಸ್ತಾನ ರೇಂಜರ್‌ಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಗಡಿ ಭದ್ರತಾ ಪಡೆಗಳ ಕಾನ್‌ಸ್ಟೆಬಲ್ ದೀಪಕ್ ಚಿಂಗಖಮ್ ಮೃತಪಟ್ಟಿದ್ದಾರೆ.ಕಾರ್ಯನಿರ್ವಹಣೆಯಲ್ಲಿ ಕಾನ್‌ಸ್ಟೆಬಲ್ ದೀಪಕ್ ಚಿಂಗಖಮ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಬಿಎಸ್‌ಎಫ್ ಡಿಜಿ ಮತ್ತು ಎಲ್ಲಾ ಶ್ರೇಣಿಗಳು ನಮಿಸುತ್ತವೆ. ಜಮ್ಮುವಿನ ಆರ್‌ಎಸ್ ಪುರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಅವರು ಗಾಯಗೊಂಡರು. ಇಂದು, ಮೇ 11, 2025 ರಂದು ಅವರು …

Read More »

ಬೇರೆ ಯುವತಿಯೊಂದಿಗೆ ಮದುವೆಯಾಗದಂತೆ ಪ್ರಿಯಕರನ ಬೆರಳನ್ನೇ ಕತ್ತರಿಸಿದ ಪ್ರೇಯಸಿ!

ಬ್ರೇಕಪ್​ ಆಗಿದ್ದಕ್ಕೆ ಬೇಸರಗೊಂಡ ಪ್ರೇಯಸಿ ತನ್ನ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್​ನೊಳಗೆ ಇರಿಸಿದ್ದ ಘಟನೆ ಜಪಾನ್​ನಲ್ಲಿ ನಡೆದಿದೆ. ಈ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು. ತಾನು ಉಂಗುರು ಹಾಕಬೇಕಿದ್ದ ಬೆರಳಿಗೆ ಮತ್ಯಾರೋ ಹಾಕಬಹುದು ಎನ್ನುವ ಕೋಪದಲ್ಲಿ ಆಕೆ ತನ್ನ ಹುಡುಗನ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದಳು ಎಂದು ಹೇಳಲಾಗಿದೆ.ಜಪಾನ್‌ನ ಒಸಾಕಾದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಆದ ಈ ಭಯಾನಕ …

Read More »

ಬೆಳಗಾವಿ: ಮಸೀದಿಯಲ್ಲಿದ್ದ ‘ಕುರಾನ್’ ಪುಸ್ತಕ ಕದ್ದೊಯ್ದು ಸುಟ್ಟ ಕಿಡಿಗೇಡಿಗಳು!

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶ ಮಾಡಿದೆ. ಅಲ್ಲದೆ ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದೆ. ಇದರ ಮಧ್ಯ ಮಸೀದಿಯಲ್ಲಿದ್ದ ಕುರಾನ್ ಪುಸ್ತಕ ಕದ್ದೊಯ್ದು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇಂದು ಪ್ರಾರ್ಥನೆಗೆಂದು ಬಂದಾಗ ಕುರಾನ್, ಹದೀಸ್ ಇಲ್ಲದಿರುವುದು …

Read More »

ಮಡಿಕೇರಿ :ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು!!

ದೋಣಿ ಮಗುಚಿದ ಪರಿಣಾಮ ಇಬ್ಬರು ಯುವಕರು ನೀರುಪಾಲಾದ ಘಟನೆ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡವು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.ದುರ್ಘಟನೆಯಲ್ಲಿ ಭಾಗಮಂಡಲ ಸಮೀಪದ ಚೇರಂಬಾಣೆಯ ಪಾಕ ಗ್ರಾಮದ ಮುಕ್ಕಾಟಿ ವಿಠಲ ಎಂಬುವವರ ಪುತ್ರ ಅಯ್ಯಪ್ಪ (18)ಹಾಗೂ ಐವತ್ತೋಕ್ಲು ಗ್ರಾಮದ ಪರಮೇಶ್ ಎಂಬುವವರ ಪುತ್ರ ಗಿರೀಶ್ (16) ಸಾವನ್ನಪ್ಪಿರುವ ದುರ್ದೈವಿಗಳು.ಹೊಳೆಯಲ್ಲಿ ಮುಳುಗಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ ಸಂದರ್ಭ ಗಿರೀಶ್ ನ ಮೃತದೇಹ ಪತ್ತೆಯಾಗಿ ಹೊರತೆಗೆಯಲಾಗಿದೆ. …

Read More »

ಮುಳಬಾಗಿಲು : ಜಮೀನು ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ!

ಜಮೀನು ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಇಟ್ಟಿಗೆ ಕಲ್ಲುಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.ನಗರದ ಮುತ್ಯಾಲ ಪೇಟೆಯ ಎಸ್.ಎನ್. ಮನು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು , ಜಮೀನು ವಿಚಾರವಾಗಿ ತನ್ನ ಸ್ವಂತ ಅಕ್ಕ ಹಾಗೂ ಭಾವನೇ ಹಲ್ಲೆಕೋರರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗಾಯಾಳು ಮನು ತಿಳಿಸಿದರು.ವ್ಯಕ್ತಿಗಳು ದಾಳಿ ನಡೆಸಿ ಮುಖ ಹಾಗೂ ಮೂಗನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದು, ಹಲ್ಲೆ ಕೋರರ …

Read More »