Breaking News

BigTv News

ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಅವರ 3 ಕಟ್ಟೆಚ್ಚರಿಕೆ!

ಇಂದು ನರೇಂದ್ರ ಮೋದಿಯವರು ಫಲ್ಹಗಾಂ ದಾಳಿಯ ಬಗ್ಗೆ ಹಾಗೂ ನಡೆದ ಯುದ್ಧದ ಬಗ್ಗೆ ಮಾತನಾಡಿದ್ದು,ಭಾರತ ಈ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಭಾರತದ ಮೇಲೆ ದಾಳಿಯಾದರೆ ಇನ್ನು ಮುಂದೆ ಸಹಿಸಲ್ಲ. ಭಾರತದ ಶಕ್ತಿ ಏನು ಎಂಬದರ ಉತ್ತರ ಭಯೋತ್ಪಾದಕರಿಗೂ ಅರ್ಥವಾಗಿದೆ. ಹೆಣ್ಣು ಮಕ್ಕಳ ಸಿಂಧೂರ ಅಳಿಸಿದರೆ ಪರಿಣಾಮ ಏನಾಗುತ್ತದೆ ಎಂದು ಈಗಲೇ ನಾವು ತೋರಿಸಿಕೊಟ್ಟಿದ್ದೇವೆ. ನ್ಯೂಕ್ಲಿಯರ್ ಅನ್ವವಸ್ತ್ರದ ಬೆದರಿಕೆಗೆ ಭಾರತ ಹೆದರುವುದಿಲ. ಟಾಕ್ ಉಗ್ರರ ನೆಲೆಗಳ ಮೇಲೆ ಭಾರತದ ಮಿಸೈಲ್ …

Read More »

ಗದಗ : ಚಲಿಸುವ ರೈಲಿನಿಂದ ಬಿದ್ದು ಶಿಕ್ಷಕ ಸಾವು!!

ಮಂಗಳೂರು-ವಿಜಯಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕ ರಾಮಚಂದ್ರ ಢಗೆ (40) ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.’ಬಾಗಲಕೋಟೆ ನವನಗರ ನಿವಾಸಿಯಾದ ರಾಮಚಂದ್ರ ಅವರು ಮೈಸೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷರಾಗಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ’ ಎಂದು ಗದಗ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Read More »

ರಾಜಸ್ಥಾನ :ಇಬ್ಬರು ಮೊಮ್ಮಕ್ಕಳನ್ನು ಕೊಂದ ಅಜ್ಜ!

ಒಬ್ಬ ಅಜ್ಜ ತನ್ನ ಇಬ್ಬರು ಮೊಮ್ಮಕ್ಕಳನ್ನು ಬಾವಿಗೆ ಎಸೆದು ಕೊಂದು, ನಂತರ ಹೊಲದಲ್ಲಿನ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ ಹೈ ವೋಲ್ಟೇಜ್ ಲೈನ್ ಅನ್ನು ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರು ಮೂರು ಶವಗಳನ್ನು ಬಿಡಿಕೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ವೈದ್ಯಕೀಯ ಮಂಡಳಿಯೊಂದಿಗೆ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ಈ ಕೊಲೆ ಮತ್ತು ಆತ್ಮಹತ್ಯೆ ಘಟನೆಯ ಹಿಂದಿನ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ, ಕೌಟುಂಬಿಕ ಉದ್ವಿಗ್ನತೆ, ಪರಸ್ಪರ ದ್ವೇಷ ಅಥವಾ ಮಾನಸಿಕ ತೊಂದರೆಗಳು ಕಾರಣಗಳಾಗಿರಬಹುದು …

Read More »

ಉಡುಪಿ: ರಸ್ತೆ ಅಪಘಾತ, ಕಾಂಗ್ರೆಸ್ ಹಿರಿಯ ನಾಯಕಿ ಲೀನಾ ಮಥಾಯಸ್ ಮೃತ್ಯು

ಬೆಳ್ಮಣ್ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕಾರು ಅತೀವೇಗ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು, ಅಲ್ಲೇ ನಿಂತಿದ್ದ ಲೀನಾ ಮಥಾಯಸ್ ರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ.ಶಿರ್ವ ಗ್ರಾಮದ ಇರ್ಮಿಜಿ ಚರ್ಚ್ ಬಳಿ ಇರುವ ರೇಚಲ್ ರೆಸ್ಟೊರೆಂಟ್ ಬಳಿ ಮೇ 11ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಮೃತಪಟ್ಟ ಬಗ್ಗೆ ವರದಿಯಾಗಿದೆ.ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಆಕಸ್ಮಿಕವಾಗಿ ಫೈರಿಂಗ್: ಯುವಕನ‌ ತೊಡೆ ಸೀಳಿದ ಗುಂಡು!!

ಆಕಸ್ಮಿಕವಾಗಿ ಫೈರಿಂಗ್​ ಹಿನ್ನಲೆ ಗುಂಡು ಯುವಕನ‌ ತೊಡೆ ಸೀಳಿರುವಂತಹ ಘಟನೆ ರಾಯಚೂರು ನಗರದ ಹೆಚ್‌ಆರ್‌ಬಿ ಬಡವಾಣೆಯಲ್ಲಿ ನಡೆದಿದೆ. ಮೊಹಮ್ಮದ್ ಸೊಹೈಲ್(16) ಗಾಯಗೊಂಡಿರುವ ವಿದ್ಯಾರ್ಥಿ. ಪಿಸ್ತೂಲ್ ಹೊಂದಿದ್ದ ಜಿಯಾ ಸೌದಾಗರ ವಿರುದ್ಧ ಸದರಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಜಾಕೀರ್ ಹುಸೇನ್ ಸರ್ಕಲ್‌ನಲ್ಲಿ ಮೊಹಮ್ಮದ್​ ಸೊಹೈಲ್​​​ ತಿಂಡಿ ಮಾಡುತ್ತಿದ್ದ. ಈ ವೇಳೆ ಸ್ನೇಹಿತ ಜಿಯಾ ಸೌದಾಗರ್ ಭೇಟಿ ಆಗಿದ್ದಾನೆ. ಆಗ ಜಿಯಾ ಸೌದಾಗರ್ ಜೊತೆ ಆತನ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಪಿಸ್ತೂಲ್ ತೆಗೆದುಕೊಂಡ …

Read More »

ಟೆಂಪೋ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ!!

ಟೆಂಪೋ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಗ್ರಾಮದ ಬಳಿ ನಡೆದಿದೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ!!

ಬೈಯೇಶ್ ಇತ್ತೀಚೆಗಷ್ಟೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ.ನಿನ್ನೆ ಮನೆಯ ಕುಟುಂಬಸ್ಥರು ಎಲ್ಲಾ ತಿರುಪತಿಗೆ ಹೋಗಿದ್ದಾರೆ. ಬೈಯೇಶ್​​ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಏಕಾಏಕಿ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಕುಟುಂಬಸ್ಥರು ವಾಪಸ್ ಬಂದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.ತಂದೆಯ ಸಿಂಗಲ್ ಬ್ಯಾರಲ್​ ಗನ್​ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಫಾರ್ಮ್​ಹೌಸ್​ನಲ್ಲಿ ಬೈಯೇಶ್(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More »

ತಿಪಟೂರು | ಕೆರೆಗೆ ಬಿದ್ದು ಬಾಲಕಿ ಸಾವು!!

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮದಲ್ಲಿರುವ ಕೆರೆಗೆ ಭಾನುವಾರ ಬಾಲಕಿ ಬಿದ್ದು ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಹೇಮಾಶ್ರೀ (11) ಎಂದು ಗುರುತಿಸಲಾಗಿದೆ.ಮೂಲತಃ ಅರಸಿಕೆರೆ ತಾಲ್ಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಬಾಲಕಿ ಹೇಮಶ್ರೀ ಬೇಸಿಗೆ ರಜಾ ದಿನಗಳನ್ನು ಕಳೆಯಲು ತನ್ನ ಅಜ್ಜಿಯ ಮನೆ ಸಾರ್ಥವಳ್ಳಿ ಗ್ರಾಮಕ್ಕೆ ಬಂದಿದ್ದಳು.ಸ್ಥಳಕ್ಕೆ ವೃತ್ತ ನಿರೀಕ್ಷಕ ಚಂದ್ರಶೇಖರ್.ಟಿ.ಕೆ, ಸಬ್ ಇನ್‌ಸ್ಪೆಕ್ಟರ್ ರಾಜೇಶ್ ಭೇಟಿ ನೀಡಿದ್ದರು. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚನ್ನಪಟ್ಟಣ: ಮರಕ್ಕೆ ಕಾರು ಡಿಕ್ಕಿ, ಬೆಂಗಳೂರು ಯುವಕ ಸಾವು!!

ದೇವಸ್ಥಾನಕ್ಕೆ ಹೋಗಿ ವಾಪಸ್ ಬೆಂಗಳೂರಿಗೆ ತೆರಳುವ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಯಿತು.ಜೊತೆಯಲ್ಲಿದ್ದ ನಾಲ್ವರು ಸ್ನೇಹಿತರಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಅಕ್ಕೂರು ಪೊಲೀಸರು ಆಗಮಿಸಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಭೀಕರ ಟ್ರಕ್‌ ಅಪಘಾತ – 13 ಮಂದಿ ಸಾವು, 11 ಜನರಿಗೆ ತೀವ್ರ ಗಾಯ!

ಎರಡು ಟ್ರಕ್‌ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಛತ್ತೀಸ್‌ ಘರ್‌ ರಾಜ್ಯದ ರಾಯಪುರ -ಬಲೋಡಾಬಜಾರ್‌ ರಸ್ತೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.ಚೌತಿಯಾ ಚಟ್ಟಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುವ ವೇಳೆ ಅವಘಡ ನಡೆದಿದೆ. ಅತಿಯಾದ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ …

Read More »