Breaking News

BigTv News

ಬೆಂಗಳೂರು : ಕಾರು ಚಾಲಕನಿಗೆ ವಂಚಿಸಿದ ನಕಲಿ ನಾಗಸಾಧು, 10 ಗ್ರಾಂ ಚಿನ್ನದ ಉಂಗುರ ಕದ್ದು ಪರಾರಿ!

ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು.ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಚಾಲಕನಿಗೆ 5 ರುದ್ರಾಕ್ಷಿ ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್‌ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಓಪನ್ ಮಾಡಿದ್ದ.ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು …

Read More »

ರಬಕವಿ-ಬನಹಟ್ಟಿ: ರುದ್ರಭೂಮಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!

ವ್ಯಕ್ತಿಯೊಬ್ಬ ಸಮೀಪದ ಕುಲಹಳ್ಳಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ಮಾನಸಿಕ ಸ್ಥಿತಿ ಸರಿಯಿಲ್ಲದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ ವರದಿಯಿಂದ ತಿಳಿದು ಬಂದಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಕೈಗೊಂಡಿದ್ದಾರೆ.ಕುಲಹಳ್ಳಿ ಗ್ರಾಮದ ಶ್ರೀಶೈಲ ಮಳಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

Read More »

ಉಡುಪಿ: ಯುವ ಹುಲಿವೇಷಧಾರಿ ಅನಿಲ್ ಕುಮಾರ್ ನಿಧನ!

ಕಾಡಬೆಟ್ಟು ಅಶೋಕ್ ರಾಜ್ ಅವರ ತಂಡದ ಹುಲಿ ಕುಣಿತದಲ್ಲಿ ಅನಿಲ್ ಕುಮಾರ್ ಅವರು ಹುಲಿವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಹುಲಿ ಕುಣಿತಕ್ಕೆ ಅವರದ್ದೇ ಆದ ಅಭಿಮಾನಿಗಳನ್ನು ಕೂಡಾ ಸಂಪಾದಿಸಿದ್ದರು. ಇದರ ಜೊತೆಗೆ ವೃತ್ತಿಯಾಗಿ ಇವರು ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಉಡುಪಿ ಖ್ಯಾತ ಹುಲಿವೇಷಧಾರಿ ಯುವಕ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರನ್ನು ಉಡುಪಿಯ ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಅಪಾರ ಬಂಧು-ಬಳಗ, ಸ್ನೇಹಿತರನ್ನು ಇವರು ಅಗಲಿದ್ದಾರೆ.

Read More »

ಉತ್ತರ ಪ್ರದೇಶ :ರೈಲ್ವೆ ನಿಲ್ದಾಣದಲ್ಲಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ; ಕಾಮುಕ ಬಂಧನ!

ತಂದೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲೆಂದು ಯುವತಿಯೊಬ್ಬಳು ಇಲ್ಲಿನ ಗೋಪಾಲ್‌ಗಂಜ್​​ಗೆ ಬಂದಿದ್ದಳು.ಆದರೆ, ತಮ್ಮ ಊರಿಗೆ ಹೋಗುವ ರೈಲನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ರಾತ್ರಿಯಿಡೀ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿ ನೀರು ತರಲು ಹೋದಾಗ, ಮೂವರು ಯುವಕರು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಹಲ್ಲೆಯ ನಂತರ ದಾಳಿಕೋರರು ಪರಾರಿಯಾಗಿದ್ದು, ಯುವತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ ಒಬ್ಬ ಆರೋಪಿಯನ್ನು …

Read More »

ಹುಬ್ಬಳ್ಳಿ :ಬಾಲಕಿ ಕೊಲೆ ಪ್ರಕರಣ, ಪತ್ತೆಯಾಗದ ಆರೋಪಿಯ ವಾರಸ್ದುದಾರರು, ಶವ ಸಂಸ್ಕಾರಕ್ಕೆ ಕೋರ್ಟ್ ಆದೇಶ!

ಅಪ್ರಾಪ್ತ ಬಾಲಕಿ ಕೊಲೆ ಮಾಡಿ ಪೊಲೀಸ್ ಎನ್​ಕೌಂಟರ್​ಗೆ ಬಲಿಯಾದ ಬಿಹಾರ ಮೂಲದ ರಿತೇಶಕುಮಾರ ಅಂತ್ಯ ಸಂಸ್ಕಾರಕ್ಕೆ ಕೋರ್ಟ್ ಆದೇಶಿಸಿದ್ದು, ಕೆಎಂಸಿಆರ್‌ಐ, ಸಿಐಡಿ ಪೊಲೀಸರು ನಿರಾಳ ಆಗಿದ್ದಾರೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.ಈತನ ಶವದ ಅಂತ್ಯಸಂಸ್ಕಾರ ಮಾಡಬಾರದು. ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಬೆಂಗಳೂರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈತನ ಮರಣೋತ್ತರ ಪರೀಕ್ಷೆ ನಡೆಸಿ ಕೋರ್ಟ್ ಆದೇಶಕ್ಕಾಗಿ ಕೆಎಂಸಿಆರ್‌ಐ …

Read More »

ಬೆಂಗಳೂರು: ಭೀಕರ ಮರ್ಡರ್, ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ.!

ಬೆಂಗಳೂರಿನ ಸೀಗೆಹಳ್ಳಿಯಲ್ಲಿ ಜಾರ್ಖಂಡ್ ನ ಪವನ್ (40) ಹತ್ಯೆ ಮಾಡಲಾಗಿದೆ. ಮದ್ಯ ಸೇವನೆ ವೇಳೆ ಮಾತಿಗೆ ಮಾತುಬೆಳೆದು ಗಣೇಶ್ ಎಂಬಾತ ಪವನ್ ನನ್ನು ಹತ್ಯೆ ಮಾಡಿದ್ದಾನೆ. ಜಾರ್ಖಂಡ್ ಮೂಲದ ಪವನ್, ಗಣೇಶ್ ಕೂಲಿ ಮಾಡುತ್ತಿದ್ದರು. ಪವನ್ ಎದೆಗೆ ಚಾಕುವಿನಿಂದ ಇರಿದು ಗಣೇಶ್ ಕೊಲೆ ಮಾಡಿದ್ದಾನೆ. ಸದ್ಯ ಗಣೇಶ್ ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.ಕ್ಷುಲ್ಲಕ ಕಾರಣಕ್ಕೆ ಹೊಡೆದಡಿ ಕೊಂಡಿದ್ದು ಮಿತಿ ಮೀರಿದ ಜಾಗಳ ಕೊಲೆಗೆ ಕಾರಣವಾಗಿದೆ.

Read More »

ಮಂಗಳೂರು :ಗುಂಪು ಹಲ್ಲೆಯಿಂದಲೇ ಯುವಕ ಸಾವು ದೃಢ; 15 ಮಂದಿ ಬಂಧನ!!

ಕ್ರಿಕೆಟ್ ಪಂದ್ಯದ ವೇಳೆ ನಡೆದ ಬೆಳವಣಿಗೆಗಳ ಮಾಹಿತಿ ಕಲೆಹಾಕಿದೆ. ಅದರ ಪ್ರಕಾರ ಇದು ಗುಂಪು ಹಲ್ಲೆಯಿಂದ ಆಗಿರುವ ಸಾವು ಎಂದು ಖಚಿತ ಪಟ್ಟಿದೆ. ಭಾನುವಾರ ಮಧ್ಯಾಹ್ನ3 ಗಂಟೆಗೆ ಸುಮಾರಿಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಆ ಸಮಯದಲ್ಲಿ ಯುವಕ ಅಲ್ಲಿಗೆ ಹೋಗಿದ್ದ. ಅಲ್ಲಿ ಕ್ರಿಕೆಟ್ ಆಡುತ್ತಿದ್ದವರಿಗೂ ಆತನಿಗೂ ಜಗಳ ನಡೆದಿತ್ತು. ಆರೋಪಿ ಸಚಿನ್‌ ಆತನಿಗೆ ಹಲ್ಲೆ ನಡೆಸಿದ್ದ. ನಂತಹ ಅಲ್ಲಿದ್ದ 30ಕ್ಕೂ ಹೆಚ್ಚು …

Read More »

ಬೆಂಗಳೂರು :ಟಿಪ್ಪರ್‌ ಲಾರಿ ಡಿಕ್ಕಿಯಾಗಿ ಮಹಿಳಾ ಕಾರ್ಮಿಕರೊಬ್ಬರು ಸಾವು!!

ಕಂಠೀರವ ಸ್ಟುಡಿಯೋ ಬಳಿ ಇರುವ ಆಶ್ರಯನಗರದಲ್ಲಿ ವಾಸವಾಗಿದ್ದ ಸರೋಜಮ (50) ಮೃತಪಟ್ಟ ಬಿಬಿಎಂಪಿಯ ಪೌರ ಕಾರ್ಮಿಕರು.ಇಂದು ಮುಂಜಾನೆ ಕರ್ತವ್ಯಕ್ಕೆ ಹಾಜರಾಗಿದ್ದ ಸರೋಜಮ ಅವರು ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಡೋಬಿ ಘಾಟ್‌ ಬಳಿ ಬೆಳಿಗ್ಗೆ 6.30ರ ಸಮಯದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್‌ ಲಾರಿ ಅವರಿಗೆ ಡಿಕ್ಕಿ ಹೊಡೆದು ಮೇಲೆ ಹರಿದಿದೆ.ಅಪಘಾತ ನಂತರ ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು …

Read More »

ಹಾವೇರಿ:ಆರೋಪ, ಇಂಜೆಕ್ಷನ್ ನೀಡಿದ ಕೆಲ ಹೊತ್ತಲ್ಲೇ ಯುವತಿ ಸಾವು!

ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಗರದ ಆಸ್ಪತ್ರೆಯೊಂದರಲ್ಲಿ ನಡೆದಿದೆ.ಕೈಯಲ್ಲಿ ಗುಳ್ಳೆ ಆಗಿವೆ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ವಂದನಾ ಬಂದಿದ್ದರು.ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆಯೇ ಆಸ್ಪತ್ರೆಗೆ ದಾಖಲಾಗಿದ್ದ ವಂದನಾ ಅವರಿಗೆ ಆಪರೇಷನ್​​​​​​ಗೂ ಮೊದಲು ವೈದ್ಯರು ಎರಡು ಇಂಜೆಕ್ಷನ್ ನೀಡಿದ್ದಾರೆ. ಬಳಿಕ ವಂದನಾ ಆರೋಗ್ಯ ಸ್ಥಿತಿ ಏರುಪೇರಾಗಿದೆ. ಆಗ ವಂದನಾ ಕುಟುಂಬವು ತಕ್ಷಣ ಬೇರೆ ಆಸ್ಪತ್ರೆಗೆ ರವಾನಿಸುವಾಗ ವಂದನಾ ಅಸುನೀಗಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ತಮ್ಮ ಮಗಳು …

Read More »

ರಾಯಚೂರು : ರೇಬೀಸ್​​ನಿಂದ ಐದು ವರ್ಷದ ಬಾಲಕಿ ಸಾವು!!

ಮನೆಯೊಳಗಿನ ಅಂಗಡಿಯಿಂದ ಕ್ಯಾಂಡಿ ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಮಾರ್ಚ್ 29 ರಂದು ನಾಯಿ ಮಗುವಿಗೆ ಕಚ್ಚಿತು. ಮಗುವಿನ ತಲೆ ಮತ್ತು ಕಾಲಿಗೆ ಗಾಯಗಳಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಐಡಿಆರ್‌ಬಿ ಲಸಿಕೆ ನೀಡಲಾಯಿತು, ಆದರೆ ರೇಬೀಸ್ ದೃಢಪಟ್ಟಿತು. ಕುತ್ತಿಗೆಯ ಮೇಲಿನ ಗಾಯ ಆಳವಾಗಿತ್ತು. ಇದರಿಂದಾಗಿಯೇ ಲಸಿಕೆ ಪರಿಣಾಮಕಾರಿಯಾಗಿಲ್ಲ . ಶುಕ್ರವಾರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಚ್ಚಿದ ಎರಡು ಗಂಟೆಗಳಲ್ಲಿ ಲಸಿಕೆಯನ್ನು ನೀಡಲಾಯಿತು. ಎಲ್ಲಾ ಡೋಸ್‌ಗಳು ಪೂರ್ಣಗೊಂಡಿವೆ. ತಲೆಯ ಗಾಯಕ್ಕೆ …

Read More »