Breaking News

BigTv News

ರಾಯಚೂರು:ಕೃಷಿಯಲ್ಲಿ ತೊಡಗಿದ್ದಾಗಲೇ ಸಿಡಿಲು ಬಡಿದು ರೈತ ಸಾವು! ತಾಯಿ ಸ್ಥಿತಿ ಗಂಭೀರ!

ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವಾಗಲೇ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಇಂದು ನಡೆದಿದೆ.ಘಟನೆಯಲ್ಲಿ ಮೃತ ಸಾಯಣ್ಣ ಪತ್ನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಗಾಯಾಳು ಲಕ್ಷ್ಮಮ್ಮ ಅವರನ್ನು ಕೂಡಲೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಶಿರವಾರ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.ಸಾಯಣ್ಣ (55) ಎಂಬ ರೈತ ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟರೆ, ತಾಯಿ …

Read More »

ಗುಡದಿನ್ನಿ: ಸಿಡಿಲು ಬಡಿದು ವ್ಯಕ್ತಿ ಸಾವು!!

ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಸಮಯದಲ್ಲಿ ಸಿಡಿಲು ಬಡಿದಿದ್ದು, ದೇವಸ್ಥಾನದಲ್ಲಿಯೇ ಮೃತಪಟ್ಟಿದ್ದಾನೆ. ಜೊತೆಗಿದ್ದ ತಾಯಿ ಲಚಮವ್ವ ಕುಸಿದು ಬಿದ್ದಿದ್ದು, ಸಮೀಪದಲ್ಲಿದ್ದ ಕೆಲವರು ಸ್ಥಳಕ್ಕೆ ಬಂದು ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯವಾಗಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತಹಶೀಲ್ದಾರ್ ಭೇಟಿ : ಘಟನೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್.ಅಂಗಡಿ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.

Read More »

ಚಾಮರಾಜನಗರ :ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನ ಗಾಯ!

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.ರಾಜ್ಯದ ನಾನಾ ಕಡೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಾಪಸ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ತಾಳುಬೆಟ್ಟ ಮಹದೆಶ್ವರಬೆಟ್ಟ ಮಾರ್ಗ ಸಮೀಪ ಪಲ್ಟಿಯಾಗಿದೆ. ತಕ್ಷಣ ದಾರಿ ಹೋಕರು ತುರ್ತು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ …

Read More »

ಲಿಂಗಸೂರು : ಮಗಳನ್ನು ಕೊಲೆ ಮಾಡಿ ನದಿಗೆ ಎಸೆದಿದ್ದ ತಂದೆ!!

ಹಂಚಿನಾಳ ಗ್ರಾಮದಲ್ಲಿನ ತೋಟಕ್ಕೆ ಮಗಳನ್ನು ಕರೆದುಕೊಂಡು ಹೋದ ಲಕ್ಕಪ್ಪ ಹನುಮಂತನೊಂದಿಗೆ ಓಡಾಡದಂತೆ ಬುದ್ಧಿ ಹೇಳಿದ್ದ. ಆದರೆ ಮಗಳು ಆತನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಳು. ಇದರಿಂದ ರೊಚ್ಚಿಗೆದ್ದ ಲಕ್ಕಪ್ಪ ಕೊಲೆ ಮಾಡಿ ಶವವನ್ನು ಶೀಲಹಳ್ಳಿ ಸೇತುವೆ ಹತ್ತಿರದ ಕೃಷ್ಣಾ ನದಿಯಲ್ಲಿ ಎಸೆದಿದ್ದ.ತಾಲ್ಲೂಕಿನ ಹಂಚಿನಾಳ ಗ್ರಾಮದ ರೇಣುಕಾ (17) ಕೊಲೆಯಾದವಳು. ಆಕೆಯ ತಂದೆ ಲಕ್ಕಪ್ಪ ಕಂಬಳಿ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.ಲಕ್ಕಪ್ಪ ಎರಡು ಮೂರು ಬಾರಿ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಪೊಲೀಸರು …

Read More »

ಯಾದಗಿರಿ : ಜಮೀನು ವಿಚಾರಕ್ಕಾಗಿ ಹೊಡೆದಾಡಿ‌ ಮೃತಪಟ್ಟ ವ್ಯಕ್ತಿ ಶವವಿಟ್ಟು ಪ್ರತಿಭಟನೆ!

ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ಎದುರು ಗೌಡಪ್ಪ ಚವನಭಾವಿ (35) ಎಂಬ ವ್ಯಕ್ತಿಯ ಮೃತದೇಹವಿಟ್ಟು ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗೌಡಪ್ಪನ ಮೇಲೆ ನಡೆದ ದಾಳಿಯಿಂದ ಅವರು ಮೃತಪಟ್ಟಿದ್ದು, ನಾರಾಯಣಪುರ ಪಿಎಸ್‌ಐ ರಾಜಶೇಖರ ರಾಥೋಡ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈ ಪ್ರತಿಭಟನೆ ನಡೆದಿದೆ.ಪಿಎಸ್‌ಐ ರಾಜಶೇಖರ ರಾಥೋಡ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಮೃತನ ಶವವನ್ನು ನಾರಾಯಣಪುರ ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ …

Read More »

ಭುವನೇಶ್ವರ:4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ!!

ಶುಕ್ರವಾರ ಸಂಜೆ ಮಗು ಕಾಣೆಯಾಗಿದ್ದ ಬಗೆ ಮಗುವಿನ ಪೋಷಕರು ದೂರು ನೀಡಿದ್ದರು. ಶನಿವಾರ ನಿರ್ಮಾಣ ಹಂತದ ಮನೆಯಲ್ಲಿ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿತ್ತು ಸದ್‌ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿಯು ಬಾಲಕಿಗೆ ಚಾಕೊಲೇಟ್ ಆಮಿಷ ಒಡ್ಡಿ, ತಮ್ಮ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಕರೆದೊಯ್ದಿದ್ದಾನೆ. ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆಯ ಕುತ್ತಿಗೆ ಹಿಸುಕಿ ಕೊಂದು, ನಂತರ ಶವವನ್ನು ಎಸೆದಿದ್ದ. ಈ …

Read More »

ವಿಜಯಪುರ : ಕ್ಷುಲ್ಲಕ ಕಾರಣಕ್ಕೆ :ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ!!

ಮೊಬೈಲ್‌ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪತಿ ಅಜಿತ್‌ ಪತ್ನಿ ತೇಜುಗೆ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ತೇಜು, ಪತಿ ಅಜಿತ್ ಗಾಢ ನಿದ್ರೆಯಲ್ಲಿದ್ದಾಗ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ. ಘಟನೆಯಿಂದ ಅಜಿತ್ ಜೋರಾಗಿ ಕಿರುಚಿಕೊಂಡಿದ್ದು, ಮನೆಯವರು ಆತಂಕಗೊಂಡು ಓಡಿ ಬಂದಿದ್ದಾರೆ. ಈ ವೇಳೆ ಅಜಿತ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಆತನನ್ನು ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅಜಿತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಸದ್ಯ ತೇಜು …

Read More »

ಟೋಕಿಯೋ :ಅಂತ್ಯ ಸಂಸ್ಕಾರದ ಖರ್ಚು ಉಳಿಸಲು ಎರಡು ವರ್ಷ ಅಪ್ಪನ ಹೆಣ ಬಚ್ಚಿಟ್ಟ ಮಗ!!

ಅಂತ್ಯ ಸಂಸ್ಕಾರದ ವೆಚ್ಚವನ್ನು ಉಳಿಸಲು ಮಗನೊಬ್ಬ ಎರಡು ವರ್ಷ ಅಪ್ಪನ ಪಾರ್ಥಿವ ಶರೀರರವನ್ನು ಅಡಗಿಸಿಟ್ಟಿರುವ ಘಟನೆ ಜಪಾನ್‌ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಜಪಾನ್ ನಿವಾಸಿಯಾಗಿರುವ ಈತ ತನ್ನ ಅಪ್ಪನ ಪಾರ್ಥಿವ ಶರೀರವನವನು ಮನೆಯ ವಾರ್ಡ್‌ರೋಬ್‌ ನ ಒಳಗೆ ಅಡಗಿಸಿ ಇಟ್ಟಿದ್ದ. ಅಪ್ಪನ ಪಿಂಚಣಿ ಹಣವನ್ನು ಅನಧಿಕೃತವಾಗಿ ಪಡೆಯುತ್ತಿರುವ ಬಗ್ಗೆ ತನಿಖೆ ನಡೆಸಲು ಪೊಲೀಸರು ಈತನ ಮನೆಯನ್ನು ತಲಾಶ್‌ ಮಾಡಿದಾಗ ವಾರ್ಡ್‌ರೋಬ್‌ ಒಳಗೆ ಅಸ್ಥಿ ಪಂಜರ …

Read More »

ಕಲಬುರಗಿ:ಭೀಕರ ರಸ್ತೆ ಅಪಘಾತ,ಮೂವರು ಸಾವು!!

ರಸ್ತೆ ಬದಿ ನಿಂತ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಸಹೋದರನ ಮದುವೆ ಕಾರ್ಡ್ ಕೊಡಲು ಹೊರಟವರು ಮಸಣಕ್ಕೆ ಸೇರಿದ್ದಾರೆ.‌ಘಟನೆ ಕಲಬುರಗಿ- ಸೇಡಂ ರಸ್ತೆಯ ಮಳಖೇಡ ಬಳಿ ಎ.27ರ ರವಿವಾರ ಸಂಭವಿಸಿದೆ.ಮಹೇಶ (32), ಪ್ರೇಮಕುಮಾರ ಮುಧೋಳ (27), ಅನ್ನದಾನಯ್ಯ ಬಟಗೇರಾ ಕೆ. (25) ಮೃತಪಟ್ಟ ದುರ್ದೈವಿಗಳು.

Read More »

ಬೆಂಗಳೂರು :ಕಾರು ನಿಂತಿದ್ದ ಲಾರಿಗೆ ಡಿಕ್ಕಿ, ಮೂವರ ಸಾವು!!

ಮದುವೆ ಆಮಂತ್ರಣ ನೀಡಲು ಹೋಗುತ್ತಿದ್ದವರ ಕಾರು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್‌‍ ಠಾಣೆ ಸಮೀಪ ಕಳೆದ ರಾತ್ರಿ ಸಂಭವಿಸಿದೆ.ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಮಳಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಬಗ್ಗೆ ಮುಂದಿನ …

Read More »