ಝಾನ್ಸಿಯ ಪೋಂಚ್ ಪ್ರದೇಶದಲ್ಲಿ ಶಾಲಾ ಬಸ್ ಒಂದು ಪಾಲ್ಟಿಯಾಗಿ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಅವರಲ್ಲಿ ಮೂವರು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು. ಗಾಯಗೊಂಡವರನ್ನು ಪೋಂಚ್ ನಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಾಯಗೊಂಡ ಮಕ್ಕಳು 10 ರಿಂದ 15 ವರ್ಷದೊಳಗಿನವರು ಎಂದು ವೈದ್ಯರು ತಿಳಿಸಿದ್ದಾರೆ.
Read More »ರಬಕವಿ ಬನಹಟ್ಟಿ :ಪೊಲೀಸ್ ವಸತಿ ಗೃಹದಲ್ಲಿ ಸಿಲಿಂಡರ್ ಸ್ಪೋಟ.
ಬನಹಟ್ಟಿ ಪೊಲೀಸ್ ಠಾಣೆಯ ಕ್ವಾಟರ್ಸ್ ನ ಎರಡನೇಯ ಮಹಡಿಯ ಮನೆ ನಂ.9 ರಲ್ಲಿ ಬಿಸಿ ನೀರಿಗಾಗಿ ಒಲೆ ಉರಿಸುವ ಸಂದರ್ಭ ಕೊಂಚ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಕಾಲಕ್ಕೆ ಅಗ್ನಿಶಾಮಕ ದಳ ಆಗಮಿಸಿದ ಕಾರಣ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ. ನಿವಾಸಿ ಹವಾಲ್ದಾರ ಆರ್.ಎಂ. ದಳವಾಯಿಯವರಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು, ಬೆಂಕಿ ಹತ್ತುತ್ತಿದ್ದಂತೆ ತಕ್ಷಣ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
Read More »ನಂಜನಗೂಡು: ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಜಗಿದು ಹಸುವಿನ ಬಾಯಿ ಛಿದ್ರ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರ ಹಸು ಇದಾಗಿದ್ದು, ಅದರ ಮೂಕ ರೋದನೆ ಮನಕಲಕುವಂತಿತ್ತು. ಗ್ರಾಮದ ವಾಟರ್ ಟ್ಯಾಂಕ್ ನ ಬಳಿ ಬಳಿ ಜಾನುವಾರುಗಳು ಮೇವು ಮೇಯಲು ತೆರಳುತ್ತಿದ್ದ ವೇಳೆ ಕಾಡುಹಂದಿ ಬೇಟೆಗೆ ಅಡಗಿಸಿಟ್ಟಿದ್ದ ಸಿಡಿಮದ್ದು ಜಗಿದು ಸ್ಫೋಟಗೊಂಡಿದೆ.ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದೆ ಎಂದು ರೈತ ನೋವು ತೋಡಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಬೇಟೆಗೆ ಸಿಡಿಮದ್ದು ಇಟ್ಟು ಜಾನುವಾರುಗಳ ಸಾವಿಗೆ ಕಾರಣರಾಗಿದ್ದ ವ್ಯಕ್ತಿಗಳನ್ನು …
Read More »ನಾಟಿಕೋಳಿ ಫಾರಂ ಮೇಲೆ ಚಿರತೆ ದಾಳಿ; 900ಕ್ಕೂ ಹೆಚ್ಚು ಕೋಳಿ ಸಾವು.!
ತೋಟದಲ್ಲಿ ಸುಮಾರು 3,500 ಕೋಳಿಗಳನ್ನು ಸಾಕುತ್ತಿದ್ದೇನೆ. ಚಿರತೆ ದಾಳಿಯಿಂದಾಗಿ ಹೆಚ್ಚಿನ ನಷ್ಟವಾಗಿದೆ. ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು. ಅವ್ವೇರಹಳ್ಳಿ ಗ್ರಾಮದ ನಾಟಿಕೋಳಿ ಫಾರಂಗೆ ನುಗ್ಗಿದ ಚಿರತೆಯೊಂದು 900ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ರೇವಣ್ಣ ಎಂಬುವರು ತಮ್ಮ ತೋಟದಲ್ಲಿ ಮಾಡಿರುವ ಕೋಳಿಫಾರಂ ಗ್ಯಾಲರಿ ಮುರಿದು ಒಳ ನುಗ್ಗಿರುವ ಚಿರತೆ ಹಲವು ಕೋಳಿಗಳನ್ನು ಕೊಂದು ತಿಂದಿದೆ.ಬೆಳಿಗ್ಗೆ ರೇವಣ್ಣ ಅವರು ಕೋಳಿಫಾರಂಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದೆ.
Read More »ನೇಣು ಬಿಗಿದುಕೊಂಡು ಅಪ್ರಾಪ್ತ ಪ್ರೇಮಿಗಳು ಸೂಸೈಡ್.!
ಮದುವೆಗೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಅಪ್ರಾಪ್ತ ಪ್ರೇಮಿಗಳು ಉತ್ತರ ಪ್ರದೇಶದಿಂದ ಬಂದು ಜಬಲ್ಪುರದ ಪನಗರ ಬ್ಲಾಕ್ ಬರೋಡಾ ಗ್ರಾಮದಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಜಬಲ್ಪುರದಿಂದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ಪ್ರೇಮಿಗಳು ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ತನ್ನ ಸಹೋದರನಿಗೆ ಕರೆ ಮಾಡಿ ಸಹಾಯ ಕೇಳಿದ್ದಳು ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುವಲ್ಲಿ ನಿರತರಾಗಿದ್ದಾರೆ.
Read More »ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹನಿಟ್ರ್ಯಾಪ್ ಕೇಸ್!ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು.
ಕರ್ನಾಟಕದ ಹನಿ ಟ್ರ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರು ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.ಕರ್ನಾಟಕ ವಿಧಾನಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿರುವ ಹನಿಟ್ರ್ಯಾಪ್ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪ್ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ನಲ್ಲಿ ತಮ್ಮನ್ನು …
Read More »ದೇವಿ ಜಾತ್ರೆಯಲ್ಲಿ ಎರಡು ತೇರುಗಳು ನೆಲಕ್ಕೆ ಉರುಳಿಬಿದ್ದು ಗಂಭೀರವಾಗಿ ಗಾಯ ಇಬ್ಬರ ಸಾವು.!
ಜಾತ್ರೆಯ ದುರಂತದಿಂದ 6ನೇ ತರಗತಿಯ ಮೃತ ಜ್ಯೋತಿ ಎಂಬ ಬಾಲಕಿಯ ತಾಯಿ ಗಂಗಮ್ಮ ತಮ್ಮ ನೋವನ್ನು ತೋಡಿಕೊಂಡಿದ್ದು, ಜಾತ್ರೆಗಳಲ್ಲಿ ಗೊಂಬೆಗಳ ವ್ಯಾಪಾರ ಮಾಡುತ್ತೇವೆ. ಕೆಂಗೇರಿಯಿಂದ ಗೊಂಬೆಗಳ ಮಾರಾಟ ಮಾಡಲು ಜಾತ್ರೆಗೆ ಬಂದಾಗ ಈ ಅನಾಹುತ ನಡೆದಿದೆ. ಶಾಲೆ ರಜೆ ಇರುವ ಕಾರಣ ಮನೆಯಲ್ಲಿ ಮಗಳು ಒಬ್ಬಳೇ ಇರುತ್ತಾಳೆಂದು ಜಾತ್ರೆಗೆ ಕರೆದುಕೊಂಡು ಬಂದಿದ್ದೆ. ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಆಗ ಮಗಳ ಮೇಲೆ ತೇರುಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು …
Read More »ಅಮಾನವೀಯ ಘಟನೆ: ರಸ್ತೆಯಲ್ಲೇ ಅಂತ್ಯಕ್ರಿಯೆ ಮಾಡಿದ ಮೃತನ ಕುಟುಂಬ
ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ …
Read More »ಕಸ ಹಾಕಲು ಹೋದವರು ವಿದ್ಯುತ್ ತಂತಿ ತಗಲಿ ಸಾವು!
ಒಂದೇ ದಿನ ಇಬ್ಬರು ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ, ನಾಗನಾಯಕನಹಳ್ಳಿ ಗ್ರಾಮದ ನಾಗರಾಜು ಮತ್ತೊಬ್ಬ ರೈತ ಮುನಿವೆಂಟಪ್ಪ ಮೃತಪಟ್ಟ ದುರ್ದೈವಿಗಳು… ನೆನ್ನೆ ಕೆಎಸ್ಆರ್ಟಿಸಿ ಇಲಾಖೆಯ ಲ್ಲಿ ಕೆಲಸ ಮಾಡುತ್ತಿದ್ದ ಡ್ರೈವರ್ ನಾಗರಾಜು ಎಂಬಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದಾಪುರದಲ್ಲಿ ಮೃತಪಟ್ಟಿದ್ದರು, ಮೃತ ನಾಗರಾಜನನ್ನು ಅಂತ್ಯಸಂಸ್ಕಾರಕ್ಕಾಗಿ ಚಂದಾಪುರದಿಂದ ನಾಗನಾಯಕನಹಳ್ಳಿಗೆ ಕರೆ ತರಲಾಗಿತ್ತು.. ರಾತ್ರಿ ಮೃತ ನಾಗರಾಜ್ ಮನೆಯಲ್ಲಿ ಭಜನೆ ಸಹ ಮಾಡಲಾಗಿತ್ತು ಆ ಮನೆಯಲ್ಲಿ ಮೃತ …
Read More »ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹಾರಿದ ಯುವತಿ
ಕೆಲಸ ಮುಗಿಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಹೋಗಿ, ಮೆಡ್ಚಲ್ಗೆ ಸಾಮಾನ್ಯ ಟಿಕೆಟ್ ಖರೀದಿಸಿ, ಸಂಜೆ 7.15 ಕ್ಕೆ ಎಂಎಂಟಿಎಸ್ ರೈಲಿನ ಮಹಿಳಾ ಕೋಚ್ನಲ್ಲಿ ಹತ್ತಿದ್ದರು.ಅಪರಿಚಿತ ವ್ಯಕ್ತಿ ತನ್ನ ಬಳಿಗೆ ಕೆಟ್ಟದಾಗಿ ವರ್ತಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆಕೆಯ ನಿರಾಕರಣೆಯ ಹೊರತಾಗಿಯೂ, ಅವನು ತನ್ನ ಮೇಲೆ ಬಲವಂತವಾಗಿ ದಾಳಿ ಮಾಡಲು ಪ್ರಯತ್ನಿಸಿದ್ದ. ತಪ್ಪಿಸಿಕೊಳ್ಳಲು, ಆಕೆ ಚಲಿಸುವ ರೈಲಿನಿಂದ ಹಾರಿದ ಪರಿಣಾಮ , ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಪೆಟ್ಟುಬಿದ್ದು ತೀವ್ರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





