Breaking News

BigTv News

ನಾಪತ್ತೆಯಾಗಿದ್ದ ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಪತ್ತೆ.

ವಿದ್ಯಾರ್ಥಿಗಳು ಮಾರ್ಚ್​ 3ರಂದು ವಸತಿ ಶಾಲೆಯಿಂದ‌ ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಯಶ್ವಿತ್, ತರುಣ್ ಉತ್ತಮ ಸ್ನೇಹಿತರಾಗಿದ್ದಾರೆ. ಓದಿನಲ್ಲಿ ಆಸಕ್ತಿ ಇಲ್ಲದೆ ಇದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರ.ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.ಅನುಮಾನಗೊಂಡು ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಪೊಲೀಸರು …

Read More »

ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್​​​ನ್ನು ಅಮಾನತು,ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ.

ಜೀಪ್ ಡಿಕ್ಕಿಯಿಂದ ಗಂಗಾಧರ ಎಂಬುವವರು ಸಾವನ್ನಪ್ಪಿದ್ದರು. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅಪಘಾತ ವೇಳೆ ಪೊಲೀಸ್‌ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದ. ಜೀಪ್‌ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್​​​ನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ ಹೊರಡಿಸಿದ್ದಾರೆ.

Read More »

ತಿಥಿ ಕಾರ್ಯದಿಂದ ವಾಪಸ್ಸಾಗ್ತಿದ್ದ ಓರ್ವನ ತಿಥಿ ಮಾಡುವ ಪರಿಸ್ಥಿತಿ!.

ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ತಿರುವಿನಲ್ಲಿ ರಸ್ತೆಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದೆ.ಘಟನೆಯಲ್ಲಿ ಶೈಲಾ ಸುರೇಶ್ ರಾಣೆ, ಸಂಜೀವ ಸಾವಳು ನಾಯ್ಕ ಹಾಗೂ ಶ್ವೇತಾ ಸಂಜೀವ ನಾಯ್ಕ ಇವರಿಗೆ ಗಾಯಗಳಾಗಿದೆ. ಇವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಕಾರವಾರ ಕೀಮ್ಸ್ …

Read More »

ಬಳ್ಳಾರಿಯ ಬಿಜೆಪಿ ಮುಖಂಡ ದೇವು ನಾಯಕ್ ಅರೆಸ್ಟ್!

7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಠಾಣೆಯ ಪೊಲೀಸರು ಬಿಜೆಪಿ ಮುಖಂಡ ದೇವು ನಾಯಕ್ ನನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಮುಖಂಡ ದೇವು ನಾಯಕ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.

Read More »

ಪ್ರಿಯಕರನ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಹತ್ಯೆ!

ಪ್ರೀತಿ ಎಂಬ ಮೋಹಕ್ಕೆ ಬಲಿಯಾಗಿ ಅದೆಷ್ಟೋ ಕೃತ್ಯಗಳು ನಡೆದಿರೋದನ್ನ ನೋಡಿರುತ್ತೇವೆ. ಅಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸಾಹಿಲ್‌ ಎಂಬಾತನ ಹಿಂದೆ ಬಿದ್ದ ಮುಸ್ಕಾನ್ ರಸ್ತೋಗಿ ಪತಿ ಸೌರಭ್ ರಜಪೂತ್‌ನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ ಬಳಿಕ ಸೌರಭ್ ದೇಹವನ್ನ 15 ಪೀಸ್‌ ಮಾಡಿ ಪ್ಲಾಸ್ಟಿಕ್‌ ಬ್ಯಾರಲ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ತುಂಬಿಸಿ ಪ್ರಕರಣವನ್ನೇ ಕ್ಲೋಸ್ ಮಾಡೋ ಹುನ್ನಾರ ಮಾಡಿದ್ದರು.ಅಳಿಯನ ಕೊಲೆ ಸುದ್ದಿ ಕೇಳಿ ಆರೋಪಿ ಮುಸ್ಕಾನ್‌ ಪೋಷಕರು …

Read More »

ಹಾಸ್ಯನಟ ದರ್ಶನ 20 ವರ್ಷಗಳ ಜೈಲು ಶಿಕ್ಷೆಗೆ ಗುರಿ.

ಆಗ್ರೋಹಾ ಪ್ರದೇಶದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಯೂಟ್ಯೂಬ್‌ನಲ್ಲಿನ ಹಾಸ್ಯ ವೀಡಿಯೊಗಳಿಗೆ ಹೆಸರುವಾಸಿಯಾದ ದರ್ಶನ್, ತನ್ನ ವೀಡಿಯೊಗಳಲ್ಲಿ ಒಂದರಲ್ಲಿ ನಟಿಸುವ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು, ಅಲ್ಲಿ ಹೋಟೆಲ್ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.ಹರಿಯಾಣ ಮೂಲದ ದರ್ಶನ್, ಮಾರ್ಚ್ 11 ರಂದು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅಂದಿನಿಂದ ಪೊಲೀಸ್ ವಶದಲ್ಲಿದ್ದಾರೆ.ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ, ಬಲಿಪಶುವಿಗೆ 2,00,000 ರೂಪಾಯಿ …

Read More »

ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಹೆಂಡತಿ ವಿರುದ್ಧ ದೂರು.

ಇದು ಅತುಲ್ ಸುಭಾಶ್ ಕಥೆಯಲ್ಲಿ, ಕಂಜೂಸ್ ಗಂಡನಿಂದ ಅನುಭವಿಸುತ್ತಿರುವ ವ್ಯಥೆ ಎಂದು ಹೆಂಡತಿ ಅಳಲು ತೋಡಿಕೊಂಡಿದ್ದಾಳೆ. ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಗಂಡ ಶ್ರೀಕಾಂತ್ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪ ಮಾಡಿದ್ದಾರೆ. ನನ್ನ ಹೆಂಡತಿ ತನ್ನ ಸೌಂದರ್ಯ ಹಾಳಾಗುತ್ತದೆ …

Read More »

ಮಂಡ್ಯದಲ್ಲಿ ಹೋಳಿ ಹಬ್ಬದ ಊಟ ಸೆವಿಸಿ ವಿದ್ಯಾರ್ಥಿಗಳ ದುರಂತ ಸಾವು

ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಉದ್ಯಮಿಯೊಬ್ಬರು ಮಾರ್ಚ್ ರಂದು ಹೋಳಿ ಹಬ್ಬಕ್ಕೆ ಭರ್ಜರಿ ಊಟ ಒಂದು ಮಾಡಿಸಿದ್ದರು. ಆದರೆ ಊಟ ಹೆಚ್ಚಾಗಿ ಉಳಿದಿದ್ದರಿಂದ. ಟೀ ಕಾಗೆಪುರದಲ್ಲಿರುವ ಗೋಕುಲ್ ವಿದ್ಯಾಸಂಸ್ಥೆಯ ಹಾಸ್ಟೆಲ್ ಒಂದಕ್ಕೆ ಊಟವನ್ನು ಕೊಟ್ಟಿದ್ದರು. ಈ ಊಟವನ್ನು ಸೇವನೆ ಮಾಡಿದ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ವಸಂತ ಶಾಲೆಯ ಐದು ವಿದ್ಯಾರ್ಥಿಗಳನ್ನು ತೀವ್ರಗಟ್ಟಿನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಫುಡ್ ಪಾಯಿಸನ್ ಯಿಂದ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ.

Read More »

ಐಪಿಎಲ್ 2025 : ಆರ್ ಸಿ ಬಿ ಆರಂಭಿಕ ಜೋಡಿ ಪಿಕ್ಸ್

ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದೆ ಇಂಡಿಯನ್ ಪ್ರೇಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರುಪಿಸುತ್ತಿದೆ. ಈ ಬಾರಿ ಆರ್‌ಸಿಬಿ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಬೇಕೆಂದು ನಿರ್ಧರಿಸಲಾಗಿದೆ. ಅದರಂತೆ ಐಪಿಎಲ್ 2025 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ಮ್ ಸ್ಟಾರ್ ಇನಿಂಗ್ಸ್ ಆರಂಭಿಸುವುದು ಖಚಿತ.

Read More »

ಘಟಪ್ರಭಾ ನದಿಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ .

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮ ಹೊರವಲಯದಲ್ಲಿರುವ ಘಟಪ್ರಭಾ ನದಿಯಲ್ಲಿ ಸುಮಾರು 10 ರಿಂದ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ.ನದಿ ತೀರದಲ್ಲಿರುವ ಜಮೀನುಗಳಿಗೆ ತೆರಳಲು ರೈತರಲ್ಲಿ ಭಯದಿಂದ ಹಿಂದುಮುಂದು ನೋಡುವಂತಾಗಿದ್ದು, ಮೊಸಳೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.

Read More »