Breaking News

BigTv News

ಅಂಬರೀಶ್ ಮೊಮ್ಮಗನ ನಾಮಕರಣ ಸಂಭ್ರಮದಲ್ಲಿ ಭಾಗಿಯಾದ ದರ್ಶನ್ ಸರ್.

ನಟ ಅಂಬರೀಶ್ ಹಾಗೂ ಸಮಲತಾ ಅಂಬರೀಶ್ ಅವರ ಮೊಮ್ಮಗನ ನಾಮಕರಣ ನಡೆಯಲಿದ್ದು ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಭಾಗವಹಿಸಿದ್ದಾರೆ ಅಭಿಷೇಕ್ ಪುತ್ರನ ನಾಮಕರಣ ಸಂಭ್ರಮದಲ್ಲಿ ನಟ ಸುದೀಪ್ ಅವರ ಪತ್ನಿ ಜೊತೆ ಆಗಮಿಸಿದ್ದಾರೆ. ಜೊತೆಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಅಂಬರೀಶ್ ಮೊಮ್ಮಗನಿಗೆ ರಾಣಾ ಎಂದು ಹೆಸರು ಇಡಲಾಗಿದೆ ಇನ್ನು ನಟ ದರ್ಶನ್ ಈ ಕಾರ್ಯಕ್ರಮಕ್ಕೆ ಗೈರು ಆಗಿರುವುದು …

Read More »

ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾದ ನವವಿವಾಹಿತ , ನೆನು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

ಮಂಡ್ಯ ಜಿಲ್ಲೆಯ ಪಾಂಡಾಪುರ ತಾಲೂಕಿನ ಶಿಂಡ ಬೋಗಂಡಿ ಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ರಾಧಿಕಾ ಎಂದು ಗುರುತಿಸಲಾಗಿದ್ದು. ಪತಿಯ ಚಿಕ್ಕಪ್ಪನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಕುಟುಂಬ ಕಲಹವೆ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲೆಯಾಗಿದೆ.

Read More »

ಭದ್ರಾ ನದಿಯಲ್ಲಿ ಈಜಲು ತೆರಳಿದ ಇಬ್ಬರು ಪ್ರವಾಸಿಗರು ಜಲ ಸಮಾದಿ

ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲೂಕಿನ ಕಂಚಿನ ಕೆರೆ ಬಳಿ ಬದ್ರಾ ನದಿಯ ಈಜಲು ತೆರಳಿದ ಇಬ್ಬರು ನಿರುಪಾಲಾಗಿ ಸಾವನಪ್ಪಿರುವ ಘಟನೆ ಇಂದು ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಜಗದೀಶ್ ಹಾಗೂ ಚೋಟಾ ಎಂದು ಗುರ್ತಿಸಲಾಗಿದೆ. ಏಳು ಜನ ಸ್ನೇಹಿತರು ಚಿಕ್ಕಮಂಗಳೂರು ಪ್ರವಾಸಕ್ಕೆ ಬಂದಿದ್ದಾಗ ಇಬ್ಬರು ನಿರುಪಾಲಾಗಿದ್ದಾರೆ. ಘಟನೆ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ

Read More »

ಹುಬ್ಬಳ್ಳಿ:ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸಂಭ್ರಮಾಚರಣೆ.

ಹುಬ್ಬಳ್ಳಿ ನಗರದ ಚೆನ್ನಮ್ಮ ವೃತ್ತದ ಹಳೆ ಬಸ್ಟ್ಯಾಂಡ್ ನಲ್ಲಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಆಚರಣೆಯನ್ನು ಅಭಿಮಾನಿಗಳು ವಿಜೃಂಭಣೆಯಿಂದ ಸಂಭ್ರಮಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಟೌಟ್ ಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಕರುನಾಡ ರತ್ನ,ನಟಸಾರ್ವಭೌಮ ಪುನೀತ್ ರಾಜಕುಮಾರ್ ಎಂದೆಂದಿಗೂ ಅಮರ.

Read More »

ಅಮೇರಿಕಕ್ಕೆ ವಿನಾಶಕಾಲ! ಆವರಿಸಿವೆ ಚಂದಮಾರುತಗಳು.

ಅಮೇರಿಕಾದಲ್ಲೇ ಮತ್ತೆ ಚಂದಮಾರುತಗಳ ಅಟ್ಟಹಾಸ ಶುರುವಾಗಿದೆ. ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಭೂಕಂಪ, ಭಾರಿ ಗಾತ್ರದ ಸುಂಟರಗಾಳಿ ಕಾಣಿಸಿಕೊಂಡಿದ್ದು, 29 ಸಾವು ಅಮೇರಿಕ ಕಂಡಿದೆ. ತೀವ್ರತರ ಸುಂಟರಗಾಳಿಯಿಂದಾಗಿ ಮನೆಗಳ ಛಾವಣಿಗಳು ಹರಿದುಹೋಗಿವೆ. ದೊಡ್ಡ ಟ್ರಕ್‌ಗಳು ಉರುಳಿಬಿದ್ದಿವೆ.ಮರಗಳು ಮತ್ತು ವಿದ್ಯುತ್ ಮಾರ್ಗಗಳು ಉರುಳಿಬಿದ್ದಿವೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಪೊಲೀಸರು ವರದಿ ಮಾಡಿದ್ದಾರೆ. ಕೆಲವು ಪ್ರದೇಶಗಳು ಸುಂಟರಗಾಳಿ, ಗುಡುಗು ಮತ್ತು ದೊಡ್ಡ ಆಲಿಕಲ್ಲು ಗಳಿಂದ ತೀವ್ರವಾಗಿ ಪರಿಣಾಮ ಬೀರಿವೆ. ಇದು ನಾನು …

Read More »

ಯಾದಗಿರಿ :ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ ಮಾಡಿದ ಕೊಲೆಘಾತುಕರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಮಾಪಣ್ಣ ಕೊಲೆಯಾದ ದುರ್ದೈವಿಯಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬೈಕ್ ಮೇಲೆ ಶಹಾಪುರಕ್ಕೆ ಬಂದಿದ್ದ ಮಾಪ್ಪಣ್ಣ, ಈ ವೇಳೆ ಶಹಾಪುರದಿಂದ ಸ್ವಗ್ರಾಮಕೆ ತೆರಳುವಾಗ ಮಾರ್ಗ ಮಧ್ಯೆ ಸಾದ್ಯಾಪುರ ಬಳಿ ಬೈಕ್ ಅಡ್ಡಗಟ್ಟಿರುವ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಭೀಮರಾಯನಗುಡಿ ಪೋಲಿಸ್ ಠಾಣಾ …

Read More »

ಸರ್ಕಾರಿ ಜಾಗದಲ್ಲಿ ರಾತ್ರೋರಾತ್ರಿ ಗುಡಿಸಲು ಕಟ್ಟಿಕೊಂಡ ಪರಿಶಿಷ್ಟ ಕುಟುಂಬಗಳು.

ಗೌರಿಬಿದನೂರು ತಾಲ್ಲೂಕಿನ ಹುದುಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಕಸಂದ್ರ ಗ್ರಾಮದಲ್ಲಿ ವಸತಿ, ನಿವೇಶನರಹಿತ ‍ಪರಿಶಿಷ್ಟರಿಗೆ ನಿವೇಶನ ಮಂಜೂರು ಮಾಡಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲವೆಂದು ಬೇಸತ್ತ ಪರಿಶಿಷ್ಟ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿವೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ಸರ್ಕಾರದ ಗಮನಕ್ಕೆ ತಂದು ಒಂದು ತಿಂಗಳೊಳಗೆ ನಿಮ್ಮ ಬೇಡಿಕೆಗಳನ್ನುಈಡೇರಿಸುವ ಭರವಸೆ ನೀಡಿದರು.

Read More »

ಬೆಂಗಳೂರು ಲಾಲ್‌ಬಾಗ್‌ನಲ್ಲಿ ನೇಪಾಳಿ ಗುಂಪುಗಳ ಘರ್ಷಣೆ!

ಬೆಂಗಳೂರಿನಾದ್ಯಂತ ಹೋಳಿ ಆಚರಿಸಲಾಯಿತು. ಈ ವೇಳೆ ಲಾಲ್‌ಬಾಗ್‌ನಲ್ಲಿ ನೇಪಾಳಿ ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ಉಂಟಾಗಿದೆ.ಲಾಲ್‌ಬಾಗ್ ಉದ್ಯಾನದಲ್ಲಿ ಶುಕ್ರವಾರ ಸಂಜೆ ಹೋಳಿ ಆಚರಣೆ ನಡೆದಿತ್ತು. ಈ ವೇಳೆ ನೇಪಾಳಿ ಮೂಲದವರು ಎರಡು ಗುಂಪುಗಳು ಹಿಂಸಾತ್ಮಕವಾಗಿ ಘರ್ಷಣೆ ನಡೆದರು.ಇದು ಉದ್ಯಾನಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರಲ್ಲಿ ಭಯ ಉಂಟಾಗಲು ಕಾರಣವಾಯಿತು.ಕೂಡಲೇ ಪೊಲೀಸರು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಹತೋಟಿಗೆ ತಂದರು ಎಂದು ಟೈಮ್ಸ್ ಆಫ್ …

Read More »

ಚಿಕ್ಕಬಳ್ಳಾಪುರ:ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿ ನೇಣಿಗೆ ಶರಣು

ಜಾಲಹಳ್ಳಿ ಗ್ರಾಮದಲ್ಲಿ ತಳ್ಳುವ ಗಾಡಿಯಲ್ಲಿ ಎಗ್‌ ರೈಸ್‌ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್‌ ವಿವಿಧ ಖಾಸಗಿ ಫೈನಾನ್ಸ್‌ಗಳಲ್ಲಿ ಸುಮಾರು 6.25 ಲಕ್ಷ ರೂ.ಸಾಲ ಮಾಡಿದ್ದ ಎನ್ನಲಾಗಿದೆ. ಹಣ ವಾಪಸ್‌ಗೆ ಫೈನಾನ್ಸ್‌ ಸಿಬಂದಿ ಒತ್ತಡ ಹೆಚ್ಚಾದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತಿ ಸವಿತಾ ತಿಳಿಸಿದ್ದಾರೆ.ಜಾಲಹಳ್ಳಿ ನಿವಾಸಿ ಮಂಜುನಾಥ್‌ ನೇಣಿಗೆ ಶರಣಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.

Read More »

ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು. ಅಣ್ಣನಿಂದ 3 ಕೊಲೆ

ಬಿಹಾರ ಮೂಲದ ಅನ್ಸು, ರಾಧೆಶ್ಯಾಮ್, ದಿಪುಎನ್ನುವವರನ್ನು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್​ನಲ್ಲಿ ಮೂವರ ಕೊಲೆಮಾಡಲಾಗಿದೆ.ನಶೆ ನೆತ್ತಿಗೇರುತ್ತಿದ್ದಂತೆ ಎಣ್ಣೆಪಾರ್ಟಿ ಆಯೋಜಿಸಿದ್ದವನ ತಂಗಿಗೆ ಕರೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ.ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.ಸದ್ಯ ಘಟನೆಯಲ್ಲಿ ಹಲ್ಲೆಗೊಳಗಾದ ಬೀರಬಲ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »